ಕನ್ನಡ ಸುದ್ದಿ  /  Karnataka  /  Sri Sri Awards 2023: Sri Sri Awards For Education 2023 Presented For Furthering The Cause Of Holistic And High Quality Education And Academic Excellence

Sri Sri Awards 2023: ಭಾರತೀಯ ಸಂಸ್ಕೃತಿಯನ್ನು ಉನ್ನತಿಗೇರಿಸುವುದು ಶಿಕ್ಷಣದ ಗುರಿ- ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪ್ರತಿಪಾದನೆ

Sri Sri Awards 2023: ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಏರ್ಪಡಿಸಿದ ಶಿಕ್ಷಣ ಕ್ಷೇತ್ರದ ಚೊಚ್ಚಲ ಶ್ರೀ ಶ್ರೀ ಪ್ರಶಸ್ತಿ-2023 ಸಮಾರಂಭದಲ್ಲಿ ಶನಿವಾರ ನಡೆಯಿತು. ಇದೇ ಮೊದಲ ಸಲ ರಾಷ್ಟ್ರೀಯ ಮಟ್ಟದಲ್ಲಿ- ಶೈಕ್ಷಣಿಕ ಉನ್ನತಿಗಾಗಿ, ವಿದ್ಯಾಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಿದೆ.

ಶಿಕ್ಷಣ ಕ್ಷೇತ್ರದ ಶ್ರೀ ಶ್ರೀ ಅವಾರ್ಡ್ಸ್‌ 2023 ಪ್ರಶಸ್ತಿ ಪ್ರದಾನ ಸಮಾರಂಭ
ಶಿಕ್ಷಣ ಕ್ಷೇತ್ರದ ಶ್ರೀ ಶ್ರೀ ಅವಾರ್ಡ್ಸ್‌ 2023 ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉನ್ನತಿಗೇರಿಸುವುದೇ ಶಿಕ್ಷಣದ ಉದ್ದೇಶ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಅವರು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಏರ್ಪಡಿಸಿದ ಶಿಕ್ಷಣ ಕ್ಷೇತ್ರದ ಚೊಚ್ಚಲ ಶ್ರೀ ಶ್ರೀ ಪ್ರಶಸ್ತಿ-2023 ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.

ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಶಿಕ್ಷಕ ವರ್ಗ ತಂದಿದೆ. ಅಂತಹ ಶಿಕ್ಷಕ ವೃಂದವನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹರ್ಷಯದಾಯಕ ವಿಚಾರ. ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಈ ಹೊಸ ಶೈಕ್ಷಣಿಕ ಪದ್ಧತಿಯನ್ನು ಜಾರಿಗೊಳಿಸುವ ಹಂತದಲ್ಲಿದೆ. ಆಗಲೇ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಇದನ್ನು ಶಾಲೆಗಳಲ್ಲಿ ಅಳವಡಿಸಿಕೊಂಡಿದೆ. ಸ್ವಾಮಿ ವಿವೇಕಾನಂದರ ನುಡಿಗಳಂತೆ- ವಿದ್ಯಾಭ್ಯಾಸದ ಉದ್ದೇಶವು ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಏರಿಸಿ ಬೆಳೆಸುವುದಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಈಗಾಗಲೇ ಶಾಲೆಗಳ ನಿರ್ಮಾಣವನ್ನು ಮಾಡಿ ಸ್ವಾಮಿ ವಿವೇಕಾನಂದರ ನುಡಿಗಳಂತೆ ವಿದ್ಯಾಭ್ಯಾಸ ಕ್ರಮವನ್ನು ಅಳವಡಿಸುವಲ್ಲಿ ಶ್ರೀಸಂಸ್ಥೆಯ ಮುಂದಡಿ ಪ್ರಶಂಸಾರ್ಹ ಎಂದು ಹೇಳಿದರು.

ಸಮಾಜದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ತಾವು ಸಲ್ಲಿಸಿದ ಸೇವೆಯ ಅನನ್ಯ ಕೊಡುಗೆಯನ್ನು ಗುರುತಿಸಿದುದಕ್ಕಾಗಿ ಪ್ರಶಸ್ತಿ ವಿಜೇತರು ತಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇದೇ ಮೊದಲ ಸಲ ರಾಷ್ಟ್ರೀಯ ಮಟ್ಟದಲ್ಲಿ- ಶೈಕ್ಷಣಿಕ ಉನ್ನತಿಗಾಗಿ, ವಿದ್ಯಾಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಿದೆ.

ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಉಪಸ್ಥಿತಿ ಮತ್ತು ಆಶೀರ್ವಚನದೊಂದಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭವು ನೆರವೇರಿತು. ಕೇಂದ್ರ ಸರ್ಕಾರದ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ರಾಜಕುಮಾರ್ ರಂಜನ್ ಸಿಂಗ್, ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಸಿ. ಎನ್, ಡ್ರೇಪರ್ ಅಸೋಸಿಯೇಟ್ ಸಂಸ್ಥಾಪಕ ಟಿಮ್ ಡ್ರೇಪರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಯಾರಿಗೆ ಯಾವ ಪ್ರಶಸ್ತಿ

ಸರ್ವಾಂಗೀಣ ಪ್ರಗತಿಗಾಗಿ ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡವರು-

  • ಆರ್ಮಿ ಪಬ್ಲಿಕ್ ಸ್ಕೂಲ್, ಶಂಕರ್ ವಿಹಾರ್, ದೆಹಲಿ ಕಂಟೋನ್ಮೆಂಟ್
  • ದಿ ಹೆರಿಟೇಜ್ ಸ್ಕೂಲ್, ಕೋಲ್ಕತ.

ಸ್ಪೆಷಲ್‌ ಅವಾರ್ಡ್‌

  • ಅಮಿತಿ ಇಂಟರ್‌ನ್ಯಾಷನಲ್ ಸ್ಕೂಲ್, ಗುರುಗ್ರಾಮ.
  • ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರ
  • ಮೌಂಟ್ ಅಬು ಪಬ್ಲಿಕ್ ಸ್ಕೂಲ್ ರೋಹಿಣಿ, ನವದೆಹಲಿ.

ಸಮಗ್ರ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ

  • ಶ್ರೀಮತಿ ಸುಲೋಚನಾ ದೇವಿ ಸಿಂಘಾನಿಯಾ ಶಾಲೆ, ಥಾಣೆ
  • ಮೇಯೋ ಕಾಲೇಜು, ಅಜ್ಮೀರ್

ಪೂರ್ವ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀಶ್ರೀ ಪ್ರಶಸ್ತಿ

  • ಜಮ್ಶೆಡ್‌ಪುರದ ವಿದ್ಯಾಭಾರತಿ ಚಿನ್ಮಯ ವಿದ್ಯಾಲಯದಿಂದ ಸಹನಾ.

ಉತ್ತರ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿ-

  • KIIT ವರ್ಲ್ಡ್ ಗುರುಗ್ರಾಮದಿಂದ ಪ್ರಿಯಾಂಕ ಯಾದವ್

ದಕ್ಷಿಣ ವಲಯದಿಂದ ಉತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿ

  • ಡಾಕ್ಟರ್ ಗೀತಾ ಲಕ್ಷ್ಮಣ್ ಸಿಂಧಿ ಶಾಲೆ, ಹೆಬ್ಬಾಳ, ಬೆಂಗಳೂರು.

ಪಶ್ಚಿಮ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿ

  • ಸುನೀತಾ ಚಂದ್ , ಡಿಎ ವಿ ಪಬ್ಲಿಕ್ ಸ್ಕೂಲ್ ,ಐರೋಲಿ, ನವಿ ಮುಂಬೈ.

ಸ್ಪೆಷಲ್‌ ಅವಾರ್ಡ್

-‌ ಅಡ್ವೋಕೇಟ್ ರಾಜೇಂದರ್ ಅಪ್ಪಾ ಸಾಹೇಬ್, ಕೋಲಿ ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಳವೇಧ ಜಿಲ್ಲೆ ,ಶೋಲಾಪುರ.

ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅತ್ಯುತ್ತಮ ಕೊಡುಗೆ

  • ಪೋಲಾ ಭಾಸ್ಕರ್, ಕಾಲೇಜು ಶಿಕ್ಷಣದ ಕಮಿಷನರ್ ಕಾರ್ಯದರ್ಶಿ,GAD( ಸೇವೆಗಳು ಮತ್ತು HRM)

IPL_Entry_Point