SSLC Grace Marks: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ; ಉಳಿದ 10 ಕೂಡ ಡೌಟ್
ಕನ್ನಡ ಸುದ್ದಿ  /  ಕರ್ನಾಟಕ  /  Sslc Grace Marks: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ; ಉಳಿದ 10 ಕೂಡ ಡೌಟ್

SSLC Grace Marks: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ; ಉಳಿದ 10 ಕೂಡ ಡೌಟ್

SSLC Grace Marks: ಪರೀಕ್ಷಾ ಅಕ್ರಮ ತಡೆಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್ ಜಾರಿ ಮಾಡಿದ ಕಾರಣ ಫಲಿತಾಂಶ ಕುಸಿದಿತ್ತು. ಹೀಗಾಗಿ ಕಳೆದ ಬಾರಿ ಹೆಚ್ಚುವರಿಯಾಗಿ ಶೇಕಡ 10 ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ 10ನೇ ತರಗತಿ ಪರೀಕ್ಷೆಗೆ ಈ ಹೆಚ್ಚುವರಿ ಶೇಕಡ 10 ಗ್ರೇಸ್ ಅಂಕ ಇರಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಗ್ರೇಸ್ ಅಂಕ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ;. ಉಳಿದ ಶೇ 10ರ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. (ಕಡತ ಚಿತ್ರ)
ಕರ್ನಾಟಕ ಎಸ್‌ಎಸ್‌ಎಲ್‌ಸಿ ಗ್ರೇಸ್ ಅಂಕ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ;. ಉಳಿದ ಶೇ 10ರ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. (ಕಡತ ಚಿತ್ರ) (ANI / GoK)

SSLC Grace Marks: ಕರ್ನಾಟಕದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶೇಕಡ 10 ಗ್ರೇಸ್ ಮಾರ್ಕ್ ಇರಲ್ಲ. ಅದೇ ರೀತಿ ಇದುವರೆಗೂ ಜಾರಿಯಲ್ಲಿದ್ದ ಶೇ 10 ಗ್ರೇಸ್ ಮಾರ್ಕ್‌ ಕೊಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ. ವೆಬ್‌ಕ್ಯಾಸ್ಟಿಂಗ್ ಜಾರಿಯಿಂದ ತೀವ್ರವಾಗಿ ಫಲಿತಾಂಶ ಕುಸಿದಿದ್ದ ಕಾರಣ ಕಳೆದ ಬಾರಿ ಅದುವರೆಗೆ ಇದ್ದ ಶೇ 10 ಗ್ರೇಸ್ ಅಂಕದ ಜೊತೆ ಹೆಚ್ಚುವರಿಯಾಗಿ ಶೇ 10 ಅಂಕ ನೀಡಲಾಗಿತ್ತು. ಕಳೆದ ಬಾರಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೇಕಡ 20 ಗ್ರೇಸ್ ಅಂಕ ಸಿಕ್ಕಿತ್ತು ಎಂಬುದನ್ನು ಸಚಿವರು ನೆನಪಿಸಿದರು. ಅವರು, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ ಇಆರ್‌ಟಿ) ಕಚೇರಿಯಲ್ಲಿ ಸೋಮವಾರ (ಫೆ 3) ವಿವಿಧ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದ ಬಳಿಕ ಈ ವಿಚಾರ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ; ಸಚಿವ ಮಧು ಬಂಗಾರಪ್ಪ

ಪರೀಕ್ಷಾ ಅಕ್ರಮ ತಡೆಗಾಗಿ ವೆಬ್‌ಕಾಸ್ಟಿಂಗ್ ಜಾರಿ ಮಾಡಿದ ಕಾರಣ ಫಲಿತಾಂಶ ಕುಸಿದಿತ್ತು. ಹೀಗಾಗಿ ಕಳೆದ ಬಾರಿ ಹೆಚ್ಚುವರಿಯಾಗಿ ಶೇಕಡ 10 ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ ಈ ಹೆಚ್ಚುವರಿ ಶೇಕಡ 10 ಗ್ರೇಸ್ ಅಂಕ ಇರಲ್ಲ. ಇದುವರೆಗೂ ಚಾಲ್ತಿಯಲ್ಲಿದ್ದ ಉಳಿದ ಶೇಕಡ 10 ಗ್ರೇಸ್‌ ಅಂಕ ಈ ಬಾರಿ ನೀಡಬೇಕಾ ಅಥವಾ ಬೇಡವಾ ಎಂಬುದನ್ನು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ವೆಬ್‌ಕಾಸ್ಟಿಂಗ್ ಜಾರಿಯಿಂದ ಕಳೆದ ಶೈಕ್ಷಣಿಕ ವರ್ಷ ಕುಸಿದಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಈ ಬಾರಿ ಹೆಚ್ಚಿಸುವುದಕ್ಕಾಗಿ ಮಕ್ಕಳ ಕಲಿಕಾ ಸುಧಾರಣೆಗೆ ಹಲವು ಸೂತ್ರಗಳನ್ನು ಕೈಗೊಳ್ಳಲಾಗಿದೆ. ಪರಿಣಾಂ ಫಲಿತಾಂಶ ಏರಿಕೆಯಾಗುವುದು ಶೇ.100 ಗ್ಯಾರಂಟಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆಯೊಂದಿಗೆ ಹೇಳಿದರು.

ಎಸ್ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಲು ಮಾರ್ಗಸೂಚಿ

ಪರೀಕ್ಷೆಗೆ ಇನ್ನು 50 ದಿನ ಇದ್ದು, ಮಕ್ಕಳ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗಸೂಚಿ ತರಲಾಗಿದೆ. ಈ ಮಾರ್ಗಸೂಚಿ ಅನುಸಾರ ದೈನಂದಿನ ಅಧ್ಯಯನ ನಡೆಸಿದರೆ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸುವುದಕ್ಕೆ ಸಜ್ಜಾಗಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕಳೆದ ಸಾಲಿನಲ್ಲಿ 10ನೇ ತರಗತಿ ಫಲಿತಾಂಶ ಕುಸಿತವಾದರೂ ವೆಬ್‌ಕ್ಯಾಸ್ಟಿಂಗ್ ಜಾರಿಯಿಂದ ನಮ್ಮ ಮಕ್ಕಳ ನೈಜ ಕಲಿಕಾ ಮಟ್ಟ ಹೇಗಿದೆ ಎಂದು ತಿಳಿಯಲು ಸಾಧ್ಯವಾಯಿತು. ಇದರ ಪರಿಣಾಮ, ಮಕ್ಕಳ ಕಲಿಕಾ ಮಟ್ಟ ಸುಧಾರಿಸುವುದಕ್ಕಾಗಿ ಶಿಕ್ಷಕರು ಈ ಬಾರಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಗೆ ಕರೆ ಮಾಡಿ ಓದಲು ಎಚ್ಚರಿಸುವುದು, ವಿಶೇಷ ತರಗತಿ ನಡೆಸುವುದು ಮಾಡುತ್ತಿದ್ದಾರೆ. ಗಣಿತ ಗಣಕ ಕಾರ್ಯಕ್ರಮ, ಗುಂಪು ಅಧ್ಯಯನ ಹೀಗೆ ಹಲವು ಕಾಠ್ಯಕ್ರಮಗಳನ್ನು ಕೂಡ ನಡೆಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಕೂಡ ಶಾಲೆಗೆ ತೆರಳಿ ಪಾಠ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮಕ್ಕಳಲ್ಲಿ ವೆಬ್‌ಕಾಸ್ಟಿಂಗ್ ಬಗ್ಗೆ ಆತಂಕ, ಭಯ ಮೂಡದಂತೆ ಘಟಕ ಪರೀಕ್ಷೆಗಳನ್ನೂ ಇದೇ ವ್ಯವಸ್ಥೆಯಲ್ಲೇ ಮಾಡಲಾಗಿದೆ. ಈ ಎಲ್ಲಾ ಕ್ರಮಗಳಿಂದ ಈ ಬಾರಿ ಫಲಿತಾಂಶ ಸುಧಾರಣೆಯಾಗುವ ಸಂಪೂರ್ಣ ನಿರೀಕ್ಷೆ ಇದೆ ಎಂದು ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Whats_app_banner