ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ
ಕನ್ನಡ ಸುದ್ದಿ  /  ಕರ್ನಾಟಕ  /  ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

Sulya Crime: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.

ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)
ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ) (Pixabay)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಮರ್ಕಂಜ ಸಮೀಪದ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಪತಿ, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲಿನ ರಾಮಚಂದ್ರ ಗೌಡ (54), ಅವರ ಪತ್ನಿ ವಿನೋದಾ (43) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ; ಏನಿದು ಭೀಕರ ಘಟನೆ

ಕೋಡಿಮಜಲು ಎಂಬಲ್ಲಿ ರಾಮಚಂದ್ರ ಗೌಡ, ಅವರ ಪತ್ನಿ ವಿನೋದಾ ಮತ್ತು ಹಿರಿಯ ಮಗ ಪ್ರಶಾಂತ್ ವಾಸವಿದ್ದರು. ಶುಕ್ರವಾರ (ಜನವರಿ 17) ರಾತ್ರಿ ಮದ್ಯ ಸೇವಿಸಿ ಬಂದ ರಾಮಚಂದ್ರ ಗೌಡ, 10 ಗಂಟೆ ಬಳಿಕ ಪತ್ನಿ ವಿನೋದಾ ಜತೆಗೆ ಜಗಳಕ್ಕಾರಂಭಿಸಿದ್ದ. ಈ ರೀತಿ ಜಗಳಾಡುವುದನ್ನು ಪುತ್ರ ಪ್ರಶಾಂತ್ ವಿರೋಧಿಸಿದ್ದ. ಇದರಿಂದ ಕೋಪಗೊಂಡ ರಾಮಚಂದ್ರಗೌಡ, ಮನೆಯಲ್ಲಿದ್ದ ಕೋವಿ ತಗೊಂಡು ಬಂದು ಮಗನಿಗೆ ಗುಂಡಿಕ್ಕಲು ಮುಂದಾಗಿದ್ದ. ಅದೇ ಸಂದರ್ಭದಲ್ಲಿ ಪತ್ನಿ ವಿನೋದಾ ಮಗನ ರಕ್ಷಣೆಗಾಗಿ ಎದುರು ನಿಂತರು. ಕೋವಿಯಿಂದ ಸಿಡಿದ ಗುಂಡು ವಿನೋದಾ ಅವರಿಗೆ ತಾಗಿದ್ದು ಅವರು ಮೃತಪಟ್ಟರು. ಇದಾದ ಬಳಿಕ, ರಾಮಚಂದ್ರ ಗೌಡ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner