ಕನ್ನಡ ಸುದ್ದಿ  /  Photo Gallery  /  Sumanahalli Flyover: Road Caves In On Sumanahalli Flyover In Bengaluru And Civic Body Bbmp Under Fire

Sumanahalli Flyover: ಸುಮನಹಳ್ಳಿ ಫ್ಲೈಓವರ್‌ನಲ್ಲೊಂದು ʻಕಿಂಡಿʼ; ಕೆಳಗಿನ ರಸ್ತೆ ಕಾಣಿಸುತ್ತೆ ಈ ಫೋಟೋಸ್‌ ನೋಡಿದ್ರೆ ಗೊತ್ತಾಗುತ್ತೆ!

  • ಬೆಂಗಳೂರಿನ ಹೊರ ವರ್ತುಲ ರಸ್ತೆ (ಒಆರ್‌ಆರ್) ವಿಸ್ತರಣೆಯಲ್ಲಿರುವ ಸುಮನಹಳ್ಳಿ ಮೇಲ್ಸೇತುವೆ (Sumanahalli Flyover) ಯ ಮೇಲೆ ರಂಧ್ರ ಉಂಟಾಗಿದೆ. ಆದರೆ ಇದು ಮೊದಲಲ್ಲ. 2019 ರಿಂದೀಚೆಗೆ ಇದು ಎರಡನೇ ಸಲ. ಬಿಬಿಎಂಪಿ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇಲ್ಲಿದೆ ಸಚಿತ್ರ ವರದಿ.

ಬೆಂಗಳೂರಿನ ಸುಮನಹಳ್ಳಿ ಮೇಲ್ಸೇತುವೆ ಮತ್ತೊಮ್ಮೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. 2019 ರಿಂದೀಚೆಗೆ ಇದು ಎರಡನೇ ಬಾರಿಗೆ ಫ್ಲೈಓವರ್‌ನಲ್ಲಿ ಮತ್ತೆ ರಂಧ್ರ ಗೋಚರಿಸಿದೆ. ವಾಹನ ಸವಾರರು ಸಂಚರಿಸುತ್ತಿದ್ದ ವೇಳೆ, ಮಂಗಳವಾರ ಫ್ಲೈಓವರ್‌ನ ಈ ರಂಧ್ರ ಗಮನಸೆಳೆದಿದೆ. ಇದರಿಂದಾಗಿ ವಾಹನ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಸಮೀಪದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಗಮನಸೆಳೆದರು. ಸಂಚಾರ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ದಟ್ಟಣೆ ನಿರ್ವಹಿಸಿದರು. 
icon

(1 / 4)

ಬೆಂಗಳೂರಿನ ಸುಮನಹಳ್ಳಿ ಮೇಲ್ಸೇತುವೆ ಮತ್ತೊಮ್ಮೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. 2019 ರಿಂದೀಚೆಗೆ ಇದು ಎರಡನೇ ಬಾರಿಗೆ ಫ್ಲೈಓವರ್‌ನಲ್ಲಿ ಮತ್ತೆ ರಂಧ್ರ ಗೋಚರಿಸಿದೆ. ವಾಹನ ಸವಾರರು ಸಂಚರಿಸುತ್ತಿದ್ದ ವೇಳೆ, ಮಂಗಳವಾರ ಫ್ಲೈಓವರ್‌ನ ಈ ರಂಧ್ರ ಗಮನಸೆಳೆದಿದೆ. ಇದರಿಂದಾಗಿ ವಾಹನ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಸಮೀಪದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಗಮನಸೆಳೆದರು. ಸಂಚಾರ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ದಟ್ಟಣೆ ನಿರ್ವಹಿಸಿದರು. (ANI)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರದಿಂದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿದೆ, ಈ ಸಮಯದಲ್ಲಿ ಫ್ಲೈಓವರ್‌ನ ಒಂದು ಲೇನ್ ಅನ್ನು ಮುಚ್ಚಲಾಗುತ್ತದೆ. 2019 ರಲ್ಲಿ ಫ್ಲೈಓವರ್‌ನ ಪ್ಯಾಚ್ ಕೈಕೊಟ್ಟಾಗ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ. ಎರಡೂ ಸನ್ನಿವೇಶದಲ್ಲಿ ಲೋಹದ ರಾಡ್‌ ಒಟ್ಟಿಗೆ ಹಿಡಿದಿದ್ದರೂ ಸಿಮೆಂಟ್ ಮತ್ತು ಡಾಂಬರು ಲೇಪ ಹಿಡಿದಿಟ್ಟುಕೊಳ್ಳದೇ ಸಮಸ್ಯೆ ಆಗಿದೆ. ಕಳಪೆ ಕಾಮಗಾರಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. 
icon

(2 / 4)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುರುವಾರದಿಂದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿದೆ, ಈ ಸಮಯದಲ್ಲಿ ಫ್ಲೈಓವರ್‌ನ ಒಂದು ಲೇನ್ ಅನ್ನು ಮುಚ್ಚಲಾಗುತ್ತದೆ. 2019 ರಲ್ಲಿ ಫ್ಲೈಓವರ್‌ನ ಪ್ಯಾಚ್ ಕೈಕೊಟ್ಟಾಗ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ. ಎರಡೂ ಸನ್ನಿವೇಶದಲ್ಲಿ ಲೋಹದ ರಾಡ್‌ ಒಟ್ಟಿಗೆ ಹಿಡಿದಿದ್ದರೂ ಸಿಮೆಂಟ್ ಮತ್ತು ಡಾಂಬರು ಲೇಪ ಹಿಡಿದಿಟ್ಟುಕೊಳ್ಳದೇ ಸಮಸ್ಯೆ ಆಗಿದೆ. ಕಳಪೆ ಕಾಮಗಾರಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. (ANI)

ಘಟನೆಯ ನಂತರ ದ್ವಿಚಕ್ರ ವಾಹನ ಸವಾರರು ಮತ್ತು ಪ್ರಯಾಣಿಕರು ಮೇಲ್ಸೇತುವೆಯ ಮೇಲಿನ ಸಂಚಾರದ ಬಗ್ಗೆ ಜಾಗರೂಕರಾಗಿದ್ದರು. ಇದು ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂದು ಹಲವರು ಅಲ್ಲಿದ್ದ ಸವಾರರಿಗೆ ಸಲಹೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು ಎಂದು ವರದಿಗಳು ಹೇಳಿವೆ. ಫ್ಲೈಓವರ್‌ನ ಜೀವಿತಾವಧಿಯು 50 ರಿಂದ 80 ವರ್ಷ ಎಂದು ಅಂದಾಜಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿದೆ. ಸುಮನಹಳ್ಳಿ ಮೇಲ್ಸೇತುವೆಯು ಮೈಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಇದನ್ನು ಮೊದಲು ಚೆನ್ನೈ ಮೂಲದ ಸಂಸ್ಥೆಯು 2010 ರಲ್ಲಿ ನಿರ್ಮಿಸಿತು. ಈ ಸಂಸ್ಥೆಯು ನಂತರ  ಕಳಪೆ ಕಾಮಗಾರಿ ಕಾರಣಕ್ಕೆ ಹಲವಾರು ರಾಜ್ಯಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟದ್ದು ವರದಿಯಾಗಿತ್ತು. 
icon

(3 / 4)

ಘಟನೆಯ ನಂತರ ದ್ವಿಚಕ್ರ ವಾಹನ ಸವಾರರು ಮತ್ತು ಪ್ರಯಾಣಿಕರು ಮೇಲ್ಸೇತುವೆಯ ಮೇಲಿನ ಸಂಚಾರದ ಬಗ್ಗೆ ಜಾಗರೂಕರಾಗಿದ್ದರು. ಇದು ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂದು ಹಲವರು ಅಲ್ಲಿದ್ದ ಸವಾರರಿಗೆ ಸಲಹೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು ಎಂದು ವರದಿಗಳು ಹೇಳಿವೆ. ಫ್ಲೈಓವರ್‌ನ ಜೀವಿತಾವಧಿಯು 50 ರಿಂದ 80 ವರ್ಷ ಎಂದು ಅಂದಾಜಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿದೆ. ಸುಮನಹಳ್ಳಿ ಮೇಲ್ಸೇತುವೆಯು ಮೈಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಇದನ್ನು ಮೊದಲು ಚೆನ್ನೈ ಮೂಲದ ಸಂಸ್ಥೆಯು 2010 ರಲ್ಲಿ ನಿರ್ಮಿಸಿತು. ಈ ಸಂಸ್ಥೆಯು ನಂತರ  ಕಳಪೆ ಕಾಮಗಾರಿ ಕಾರಣಕ್ಕೆ ಹಲವಾರು ರಾಜ್ಯಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟದ್ದು ವರದಿಯಾಗಿತ್ತು. (ANI)

ಹೊಂಡಗುಂಡಿಗಳನ್ನು ಒಳಗೊಂಡ ಕೆಟ್ಟ ರಸ್ತೆಗಳು, ಸಂಚಾರ ದಟ್ಟಣೆಗಳು ಮತ್ತು ಮಳೆ ಬಂದರೆ ಜಲಾವೃತವಾಗುವ ಪ್ರದೇಶಗಳು ಮತ್ತು ಇತರ ಸಮಸ್ಯೆಗಳೊಂದಿಗೆ ಮಹಾನಗರವು ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಬೆಂಗಳೂರು ಸರಾಸರಿಗಿಂತ ಕಡಿಮೆ ಮೂಲಸೌಕರ್ಯದ ಕಾರಣ ಗಮನಸೆಳೆಯುತ್ತಿದೆ. ಅಲ್ಲದೆ, ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯು ನಾಗರಿಕ ನಿರಾಸಕ್ತಿಯ ಆರೋಪವನ್ನು ಎದುರಿಸುತ್ತಿದೆ. 
icon

(4 / 4)

ಹೊಂಡಗುಂಡಿಗಳನ್ನು ಒಳಗೊಂಡ ಕೆಟ್ಟ ರಸ್ತೆಗಳು, ಸಂಚಾರ ದಟ್ಟಣೆಗಳು ಮತ್ತು ಮಳೆ ಬಂದರೆ ಜಲಾವೃತವಾಗುವ ಪ್ರದೇಶಗಳು ಮತ್ತು ಇತರ ಸಮಸ್ಯೆಗಳೊಂದಿಗೆ ಮಹಾನಗರವು ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಬೆಂಗಳೂರು ಸರಾಸರಿಗಿಂತ ಕಡಿಮೆ ಮೂಲಸೌಕರ್ಯದ ಕಾರಣ ಗಮನಸೆಳೆಯುತ್ತಿದೆ. ಅಲ್ಲದೆ, ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯು ನಾಗರಿಕ ನಿರಾಸಕ್ತಿಯ ಆರೋಪವನ್ನು ಎದುರಿಸುತ್ತಿದೆ. (ANI)


IPL_Entry_Point

ಇತರ ಗ್ಯಾಲರಿಗಳು