ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ, ಭುವನೇಶ್ವರ್‌ಗೆ ಬೇಸಿಗೆ ವಿಶೇಷ ರೈಲು ಸಂಚಾರ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ, ಭುವನೇಶ್ವರ್‌ಗೆ ಬೇಸಿಗೆ ವಿಶೇಷ ರೈಲು ಸಂಚಾರ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ, ಭುವನೇಶ್ವರ್‌ಗೆ ಬೇಸಿಗೆ ವಿಶೇಷ ರೈಲು ಸಂಚಾರ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರಿಂದ ಮುಜಾಫರ್‌ಪುರ್ ಸೇರಿ ಮೂರು ನಗರಗಳಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ದಿನಾಂಕ, ಸಮಯ ಸೇರಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ, ಭುವನೇಶ್ವರ್‌ಗೆ ಬೇಸಿಗೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ, ಭುವನೇಶ್ವರ್‌ಗೆ ಬೇಸಿಗೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ.

ಬೆಂಗಳೂರು: ಬೇಸಿಗೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಪೂರ್ವ ಮಧ್ಯ ರೈಲ್ವೆ (East Central Railway) ಬೆಂಗಳೂರಿನಿಂದ ಪ್ರಮುಖ ಮೂರು ನಗರಗಳಿಗೆ ವಿಶೇಷ ರೈಲು ಸೇವೆಯನ್ನು (Summer Special Train Service) ಆರಂಭಿಸಿದೆ. ಈ ಹೆಚ್ಚುವರಿ ರೈಲು ಟ್ರಿಪ್‌ಗಳು ಬೆಂಗಳೂರಿನಿಂದ ಮುಜಾಫರ್‌ಪುರ, ಸಂಬಲ್‌ಪುರ ಹಾಗೂ ಭುವನೇಶ್ವರ್‌ಗೆ ಇರಲಿವೆ.

05271 ಸಂಖ್ಯೆಯ ರೈಲು ಮೇ 31ರ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಮುಜಾಫರ್‌ಪುರದಿಂದ ಹೊರಟು ಮರು ದಿನ ಅಂದ್ರೆ ಜೂನ್ 1ರ ರಾತ್ರಿ 7 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.

05272 ಸಂಖ್ಯೆ ರೈಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಮೇ 27ರ ಬೆಳಗ್ಗೆ 7.30ಕ್ಕೆ ಹೊರಟ್ಟಿದ್ದು, ಮೇ 29ರ ಮಧ್ಯಾಹ್ನ ಮುಜಾಫರ್‌ಪುರ್‌ ರೈಲು ನಿಲ್ದಾಣಕ್ಕೆ ತಲುಪಲಿದೆ.

ನೈರುತ್ಯ ರೈಲ್ವೆಯಿಂದ ಬೆಂಗಳೂರಿನಿಂದ ಭುವನೇಶ್ವರ್‌ಗೆ ವಿಶೇಷ ರೈಲು

ನೈರುತ್ಯ ರೈಲ್ವೆ (Western railway) ಬೇಸಿಗೆಯ ಹಲವು ವಿಶೇಷ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್‌ಎಂವಿಟಿ) ಭುವನೇಶ್ವರ್‌ಗೆ ಬೇಸಿಗೆಯ ವಿಶೇಷ ಹೆಚ್ಚುವರಿ ರೈಲು ಸೇವೆಯನ್ನು ಆರಂಭಿಸಿದೆ.

ಮೇ 31ರ ಶುಕ್ರವಾರ ಮಧ್ಯಾರಾತ್ರಿ 12.10ಕ್ಕೆ 06271 ಸಂಖ್ಯೆಯ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ಮರುದಿನ ಅಂದ್ರೆ ಜೂನ್ 1ರ ಶನಿವಾರ ಬೆಳಗ್ಗೆ 4 ಗಂಟೆಗೆ ಭುವನೇಶ್ವರ್ ರೈಲು ನಿಲ್ದಾಣವನ್ನು ತಲುಪಲಿದೆ.

ರೈಲು ಸಂಕ್ಯೆ 06272 ಜೂನ್ 2ರ ಭಾನುವಾರ ಬೆಳಗ್ಗೆ 6.30ಕ್ಕೆ ಭುವನೇಶ್ವರ್‌ದಿಂದ ಹೊರಟು ಮರು ದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸಲಿದೆ.

ಬೆಂಗಳೂರು-ಸಂಬಲ್‌ಪುರಕ್ಕೆ ವಿಶೇಷ ರೈಲು ಸೇವೆ

06279 ಸಂಖ್ಯೆ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಜೂನ್ 7ರ ಶುಕ್ರವಾರ ಬೆಳಗ್ಗೆ 6.30ಕ್ಕೆ ಹೊರಟು ಮರು ದಿನ ಬೆಳಗ್ಗೆ ಅಂದರೆ ಜೂನ್ 8ರ ಶನಿವಾರ ಬೆಳಗ್ಗೆ 5 ಗಂಟೆಗೆ ಸಂಬರ್‌ಪುರ ತಲುಪಲಿದೆ.

06280 ಸಂಖ್ಯೆ ರೈಲು ಜೂನ್ 8ರ ಶನಿವಾರ ಬೆಳಗ್ಗೆ 11.35ಕ್ಕೆ ಸಂಬಲ್‌ಪುರ ರೈಲ್ವೆ ನಿಲ್ದಾಣದಿಂದ ಹೊರಟು ಮರು ದಿನ ಅಂದರೆ ಜೂನ್ 9ರ ಭಾನುವಾರ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸಲಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ದಿನಾಂಕ ಹಾಗೂ ಸಮಯವನ್ನು ತಿಳಿದು ತಮ್ಮ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಯುಟಿಎಸ್ ಆ್ಯಪ್‌ನಲ್ಲೂ ತಾತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner