ಕನ್ನಡ ಸುದ್ದಿ  /  Karnataka  /  Svym Jnanadeepa: Success Is Choice Not An Opportunity Said Holistic Trainer Girija D H

SVYM Jnanadeepa: ಯಶಸ್ಸು ಆಯ್ಕೆ, ಅವಕಾಶವಲ್ಲ - ಹೋಲಿಸ್ಟಿಕ್ ಟ್ರೇನರ್ ಗಿರಿಜಾ ಡಿ.ಎಚ್‌.

SVYM Jnanadeepa: ಯಶಸ್ಸು ಎಂಬುದು ಎಂಬುದು ಎಲ್ಲರಿಗೂ ಬೇಕು. ಆದರೆ ಅದನ್ನು ಪಡೆಯುವ ನಿಟ್ಟಿನಲ್ಲಿ ಕೆಲವರು ಗೆಲುವು ಸಾಧಿಸಿದರೆ, ಕೆಲವರಿಗೆ ಗೆಲುವು ಮರೀಚಿಕೆಯಾಗಿಯೇ ಉಳಿಯುತ್ತದೆ. ಹಾಗಾದರೆ ನಿಜವಾದ ಯಶಸ್ಸು ಎಂದರೆ ಯಾವುದು?- ಹೋಲಿಸ್ಟಿಕ್ ಟ್ರೇನರ್ ಗಿರಿಜಾ ಡಿ.ಎಚ್‌. ವಿವರಿಸಿದ್ದಾರೆ ಗಮನಿಸಿ.

ತಾವಿರುವಲ್ಲಿಂದಲೇ SVYM Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠದಲ್ಲಿ ಪಾಲ್ಗೊಂಡ ಸರ್ಕಾರಿ ಶಾಲೆಯ ಮಕ್ಕಳು.
ತಾವಿರುವಲ್ಲಿಂದಲೇ SVYM Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠದಲ್ಲಿ ಪಾಲ್ಗೊಂಡ ಸರ್ಕಾರಿ ಶಾಲೆಯ ಮಕ್ಕಳು. (SVYM)

ಧಾರವಾಡ: ಯಶಸ್ಸು ಎಂಬುದು ಆಯ್ಕೆ, ಅವಕಾಶ ಅಲ್ಲವೇ ಅಲ್ಲ ಎಂದು ಹುಬ್ಬಳ್ಳಿ- ಧಾರವಾಡ ಸೀಕರ್ಸ್‌ ಅಕಾಡೆಮಿಯ ಫೌಂಡರ್‌ ಡೈರೆಕ್ಟರ್‌ ಹೋಲಿಸ್ಟಿಕ್‌ ಟ್ರೇನರ್‌ ಗಿರಿಜಾ ಡಿ.ಎಚ್‌. ಪ್ರತಿಪಾದಿಸಿದರು.

ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಧಾರವಾಡ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾದ Wednesday Webinar - ಜ್ಞಾನ ದೀಪ, (SVYM Jnanadeepa) ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಯಶಸ್ಸು ಆಯ್ಕೆಯೋ? ಅವಕಾಶವೋ? ಎಂಬ ವಿಷಯದ ಮೇಲೆ ಮಾತನಾಡಿದರು.

ಯಶಸ್ಸು ಎಂಬುದು ಎಂಬುದು ಎಲ್ಲರಿಗೂ ಬೇಕು. ಆದರೆ ಅದನ್ನು ಪಡೆಯುವ ನಿಟ್ಟಿನಲ್ಲಿ ಕೆಲವರು ಗೆಲುವು ಸಾಧಿಸಿದರೆ, ಕೆಲವರಿಗೆ ಗೆಲುವು ಮರೀಚಿಕೆಯಾಗಿಯೇ ಉಳಿಯುತ್ತದೆ. ಹಾಗಾದರೆ ನಿಜವಾದ ಯಶಸ್ಸು ಎಂದರೆ ಯಾವುದು? ಯಶಸ್ಸು ಎಂದರೆ ಹಣಗಳಿಕೆಯೇ? ಹೆಸರು ಗಳಿಕೆಯೇ? ಉದ್ಯೋಗ ಗಳಿಕೆಯೇ? ಅಥವಾ ವ್ಯಕ್ತಿತ್ವ ಗಳಿಕೆಯೇ? ಇದಕ್ಕೆ ಉತ್ತರವನ್ನು ಹುಡುಕುತ್ತಾ ಹೊರಟಾಗ ನಮ್ಮೆದುರು ನಿಲ್ಲುವುದೇ ಆಯ್ಕೆ. ಆಯ್ಕೆ ಎಂದರೆ ನಿರ್ದಿಷ್ಟ ಮತ್ತು ಸಮಯೋಚಿತ ನಿರ್ಧಾರವಲ್ಲದೇ ಬೇರೆನೂ ಅಲ್ಲ ಎಂದು ಗಿರಿಜಾ ಅವರು ವಿವರಿಸಿದರು.

<p>ಮನೆ ಮಂದಿಯೊಂದಿಗೆ ಕುಳಿತು ವೆಬಿನಾರ್‌ ಆಲಿಸುತ್ತಿರುವ ಮಕ್ಕಳು</p>
ಮನೆ ಮಂದಿಯೊಂದಿಗೆ ಕುಳಿತು ವೆಬಿನಾರ್‌ ಆಲಿಸುತ್ತಿರುವ ಮಕ್ಕಳು

ವ್ಯಕ್ತಿಯು ಸಮುದಾಯದ ಪ್ರತೀಕ. ವ್ಯಕ್ತಿತ್ವ ವ್ಯಕ್ತಿಯ ಪ್ರತೀಕ ಇಂತಹ ವ್ಯಕ್ತಿತ್ವ ರೂಪಿಸುವಲ್ಲಿ ಮೌಲ್ಯಗಳ ಪಾತ್ರ ಮಹತ್ವದ್ದು. ಇಂತಹ ಮೌಲ್ಯಗಳ ಪ್ರತಿಫಲವಾಗಿ ಯಶಸ್ಸು ಎಂಬ ಶಿಖರ ತಲುಪಲು ಸಾದ್ಯ. ಯಶಸ್ಸಿನ ಹಾದಿಯಲ್ಲಿ ಅವಕಾಶಗಳು ಎಲ್ಲರಿಗೂ ಲಭ್ಯವಿರುತ್ತವೆ. ಆದರೆ ಯಶಸ್ಸಿನ ಹಾದಿಯಲ್ಲಿ ನಾವು ತಲುಪಬೇಕಾದ ಗುರಿಯಲ್ಲಿ ನಿರ್ದಿಷ್ಟತೆ ಇರಬೇಕು. ಸೂಕ್ತ ಮಾರ್ಗದರ್ಶನಕ್ಕಾಗಿ ಗುರುಗಳಿರಬೇಕು. ಪಾಲಕರಿಂದ ಉತ್ತಮ ಪ್ರೋತ್ಸಾಹವಿರಬೇಕು. ನಮ್ಮಲ್ಲಿನ ಕಾರ್ಯ ಶ್ರದ್ಧೆ ಮತ್ತು ಸಮಯೋಚಿತವಾದ ನಿರ್ಧಾರಗಳು ಕಾರ್ಯ ಸಾಧನೆಯ ಊರುಗೋಲಾಗಿವೆ ಎಂಬುದನ್ನು ತುಂಬಾ ಮಾರ್ಮಿಕವಾಗಿ ಗಿರಿಜಾ ಅವರು ತಿಳಿಸಿದರು.

ಭಾರತ ಕಂಡಂತಹ ಅನೇಕ ಮಹನೀಯರ ಯಶಸ್ಸಿನ ಗುಟ್ಟು ಆಯ್ಕೆಯೇ ಹೊರತು ಅವಕಾಶವಲ್ಲ. ಇದಕ್ಕೆ ಉದಾಹರಣೆಯಾಗಿ ಗಮನಿಸುವುದಾದರೆ, ಸಾಧಕರ ಸಾಲಿನಲ್ಲಿ ನಿಲ್ಲುವ ಅಬ್ದುಲ ಕಲಾಂ ರವರು ಒಬ್ಬ ವಿಜ್ಞಾನಿಯಾಗಿ ಭಾರತದ ರಾಷ್ಟ್ರಪತಿಗಳಾಗಿ, ಸಚಿನ ತೆಂಡೂಲ್ಕರ್ ಭಾರತದ ಕ್ರಿಕೆಟ್‌ನ ದಂತಕಥೆಯಾಗಿ, ಸ್ವಾಮಿ ವಿವೇಕಾನಂದರು ಭಾರತೀಯ ತತ್ವಜ್ಞಾನಿಯಾಗಿ, ಅಂಬೇಡ್ಕರ್ ರವರು ಸಂವಿಧಾನದ ಶಿಲ್ಪಿಯಾಗಿ ಹೀಗೆ ಹತ್ತು ಹಲವಾರು ಮಹನೀಯರ ಜೀವನಗಾಥೆಗಳು ನಮ್ಮ ಕಣ್ಮುಂದೆ ಜ್ವಲಂತ ಸಾಕ್ಷಿಯಾಗಿ ನಿಲ್ಲುತ್ತವೆ. ಒಟ್ಟಿನಲ್ಲಿ ಅವಕಾಶಗಳು ಎಲ್ಲರಲ್ಲೂ ಇದ್ದರೂ, ಸೂಕ್ತ ಸಂದರ್ಭದಲ್ಲಿ ಸೂಕ್ತ ಆಯ್ಕೆಯ ಕೊರತೆಯಿಂದ ಗೆಲುವಿನಿಂದ ದೂರ ಸರಿಯಬೇಕಾಗುತ್ತದೆ. ಹಾಗಾಗಿ ಯಶಸ್ಸಿನ ಗುಟ್ಟು ಆಯ್ಕೆಯೇ ಹೊರತು ಅವಕಾಶವಲ್ಲ ಎಂಬುದನ್ನು ಮಕ್ಕಳಗೆ ಮನಮುಟ್ಟುವಂತೆ ಗಿರಿಜಾ ಅವರು ವಿವರಿಸಿದರು.

<p>ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 672 ವಿದ್ಯಾರ್ಥಿಗಳು ಮತ್ತು 936 ವಿದ್ಯಾರ್ಥಿನಿಯರು ಸೇರಿದಂತೆ 1608 ಮಕ್ಕಳು ಅವರವರ ಮನೆಗಳಿಂದಲೇ ಪಾಲ್ಗೊಂಡರು.&nbsp;</p>
ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 672 ವಿದ್ಯಾರ್ಥಿಗಳು ಮತ್ತು 936 ವಿದ್ಯಾರ್ಥಿನಿಯರು ಸೇರಿದಂತೆ 1608 ಮಕ್ಕಳು ಅವರವರ ಮನೆಗಳಿಂದಲೇ ಪಾಲ್ಗೊಂಡರು.&nbsp;

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 672 ವಿದ್ಯಾರ್ಥಿಗಳು ಮತ್ತು 936 ವಿದ್ಯಾರ್ಥಿನಿಯರು ಸೇರಿದಂತೆ 1608 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ವೆಬಿನಾರ್ ಯಶಸ್ವಿಗೊಳಿಸಿದರು.

Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಎಂಬುದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಧಾರವಾಡ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವೆಬಿನಾರ್‌ ಮೂಲಕ ಒದಗಿಸುವ ವಿಚಾರ ಮಂಥನ ಕಾರ್ಯಕ್ರಮ.

IPL_Entry_Point