ಕನ್ನಡ ಸುದ್ದಿ  /  Karnataka  /  Teacher Transfer Bill Karnataka Approved Regulation Of Transfer Of Teachers Explained

Teacher Transfer Bill Karnataka: ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ, ಗಂಡ-ಹೆಂಡತಿಗೂ ಟ್ರಾನ್ಸ್‌ಫಾರ್‌ಗೆ ಅವಕಾಶ, ವಿಧೇಯಕದಲ್ಲಿ ಏನಿದೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರಕಿದೆ. ಪರಸ್ಪರ ವರ್ಗಾವಣೆ ಹಾಗೂ ಪತಿ-ಪತ್ನಿ ವರ್ಗಾವಣೆಗೂ ಅವಕಾಶವಿದೆ. ಸಿವಿಲ್ ಸರ್ವಿಸ್ ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕಯನ್ನು ಸಚಿವ ಗೋವಿಂದ ಕಾರಜೋಳ ಮಂಡನೆ ಮಾಡಿದ ಬಳಿಕ ಈ ವಿಧೇಯಕಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

Teacher Transfer Bill Karnataka: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ
Teacher Transfer Bill Karnataka: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರಕಿದೆ. ಪರಸ್ಪರ ವರ್ಗಾವಣೆ ಹಾಗೂ ಪತಿ-ಪತ್ನಿ ವರ್ಗಾವಣೆಗೂ ಅವಕಾಶವಿದೆ. ಸಿವಿಲ್ ಸರ್ವಿಸ್ ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕವನ್ನು ಸಚಿವ ಗೋವಿಂದ ಕಾರಜೋಳ ಮಂಡನೆ ಮಾಡಿದ ಬಳಿಕ ಈ ವಿಧೇಯಕಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

<p>ಶಿಕ್ಷಕರ ವರ್ಗಾವಣೆ ವಿಧೇಯಕ</p>
ಶಿಕ್ಷಕರ ವರ್ಗಾವಣೆ ವಿಧೇಯಕ

ಈ ರೀತಿ ವರ್ಗಾವಣೆಗೆ ಅವಕಾಶ ನೀಡಿದರೆ ಶಿಕ್ಷಕ-ಶಿಕ್ಷಕಿಯರು ತಮ್ಮ ಊರುಗಳಿಗೆ ವರ್ಗಾವಣೆ ಪಡೆದು ಹೋಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. "ಶಿಕ್ಷಕರ ವರ್ಗಾವಣೆಗೆ ಅವಕಾಶ ನೀಡಿದ್ರೆ ಉತ್ತರ ಕರ್ನಾಟಕದಲ್ಲಿ ಇದ್ದ ದಕ್ಷಿಣ ಭಾಗದ ಶಿಕ್ಷಕರು ವರ್ಗಾವಣೆ ಆಗುತ್ತೆ. ಇದರಿಂದ ನಮ್ಮ ಭಾಗದಲ್ಲಿ ತೊಂದರೆ ಉಂಟಾಗುತ್ತದೆʼʼ ಎಂದು ಶಾಸಕರಾದ ಎ ಎಸ್ ಪಾಟೀಲ್ ನಡಹಳ್ಳಿ, ವೆಂಕಟರಾವ್ ನಾಡಗೌಡ ಆಕ್ಷೇಪ ವ್ಯಕ್ತಪಡಿಸಿದರು.‌

<p>ಶಿಕ್ಷಕರ ವರ್ಗಾವಣೆ ವಿಧೇಯಕ</p>
ಶಿಕ್ಷಕರ ವರ್ಗಾವಣೆ ವಿಧೇಯಕ

ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶ

ಈಗಾಗಲೇ 2018-19 ರಲ್ಲಿ ಯಾರು ಕಡ್ಡಾಯ ವರ್ಗಾವಣೆ ಆಗಿದ್ದಾರೋ ಅವರಿಗೆ ಮಾತ್ರ ಮರು ವರ್ಗಾವಣೆಗೆ ಅವಕಾಶ ನೀಡಲಾಗಿದೆ.‌ ಇದರಿಂದ ಅಧ್ಯಾಪಕರಿಗೆ ಅನಾನುಕೂಲವಾದ ಕಾರಣ ಸುಗ್ರೀವಾಜ್ಞೆ ಮೂಲಕ ಅವಕಾಶ ಕೊಡಲಾಗಿದೆ. ಇದೀಗ ಅದನ್ನು ವಿಧೇಯಕದ ಮೂಲಕ ಮಂಡಿಸಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.

<p>ಶಿಕ್ಷಕರ ವರ್ಗಾವಣೆ ವಿಧೇಯಕ</p>
ಶಿಕ್ಷಕರ ವರ್ಗಾವಣೆ ವಿಧೇಯಕ

ವಿಧೇಯಕದ ಮೂಲಕ ಒಂದು ಬಾರಿ ವರ್ಗಾವಣೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಬೇರೆ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

<p>ಶಿಕ್ಷಕರ ವರ್ಗಾವಣೆ ವಿಧೇಯಕ</p>
ಶಿಕ್ಷಕರ ವರ್ಗಾವಣೆ ವಿಧೇಯಕ

ಶಿಕ್ಷಕರ ವರ್ಗಾವಣೆ ಮಸೂದೆಯಲ್ಲಿರುವ ಪ್ರಮುಖಾಂಶಗಳು

- ಪತಿ ಅಥವಾ ಪತ್ನಿ ಕೆಲಸ ಮಾಡುವ ತಾಲೂಕುಗಳಲ್ಲಿ ಖಾಲಿ ಹುದ್ದೆಗಳು ಇಲ್ಲದೆ ಇದ್ದಲ್ಲಿ ಪಕ್ಕದ ತಾಲೂಕಿಗೆ ವರ್ಗಾವಣೆ ಹೋಗಬಹುದಾಗಿದೆ. ಮೆಲೆನಾಡು ಜಿಲ್ಲೆ ಮತ್ತು ತಾಲೂಕಿನಲ್ಲಿ, ಹೈದರಾಬಾದ್‌ ಕರ್ನಾಟಕದ ತಾಲೂಕುಗಳ ಒಳಗಡೆ ಬರುವವವರಿಗೆ ಯಾವುದೇ ವರ್ಗಾವಣೆ ಮಿತಿಯಲ್ಲ.

- ಜೇಷ್ಠತಾ ಘಟಕದ ಒಳಗಿನ ಅಥವಾ ಹೊರಗಿನ ಸ್ಥಳಕ್ಕೆ ಪರಸ್ಪರ ವರ್ಗಾವಣೆಯು ಇಬ್ಬರು ಶಿಕ್ಷಕರು ಆ ವೃಂದದಲ್ಲಿ ಕನಿಷ್ಠ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು, ಆ ವಲಯದ ವರ್ಗಾವಣೆಗೆ ಅರ್ಹರಾಗಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಸೇವೆ ಉಳಿದಿರಬೇಕು.

- ಒಂದು ಜೇಷ್ಠತಾ ಘಟಕದಿಂದ ಇನ್ನೊಂದು ಜೇಷ್ಠತಾ ಘಟಕಕ್ಕೆ ಸ್ವಇಚ್ಛೆಯಿಂದ ವರ್ಗಾವಣೆಗೊಂಡಿದ್ದರೆ ಜೇಷ್ಠತೆಯ ಸಂರಕ್ಷಣೆಗಾಗಿ ಆಗು ಇತರೆ ಷರತ್ತಿಗೆ ಅರ್ಹರಾಗಿರುವುದಿಲ್ಲ.

- ಪದವಿ ಪೂರ್ವ ಕಾಲೇಜು ಅಥವಾ ಸಂಯುಕ್ತ ಕಾಲೇಜಿನ ಉಪನ್ಯಾಸಕರಾದರೆ ವರ್ಗಾವಣೆಗೆ ಕನಿಷ್ಠ ಏಳು ವರ್ಷಗಳ ಸೇವೆಯನ್ನು ಪೂರೈಸಿರಬೇಕು.

- ಶಿಕ್ಷಕನು ತನ್ನ ಸೇವಾ ಅವಧಿಯಲ್ಲಿ ಒಂದು ಮಾತ್ರ ಆದ್ಯತೆಯನ್ನು ಕ್ಲೇಮ್‌ ಮಾಡಬೇಕು.

ಶಿಕ್ಷಕರ ವರ್ಗಾವಣೆ ವಿಧೇಯಕದ ಉದ್ದೇಶ

- ಇಬ್ಬರು ಶಿಕ್ಷಕರು ಐದು ವರ್ಷಗಳ ಸೇವೆಯನ್ನು ಕಡ್ಡಾಯಗೊಳಿಸಿದ ಷರತ್ತಿಗೆ ಒಳಪಟ್ಟು ಒಂದಕ್ಕಿಂತ ಹೆಚ್ಚು ಬಾರಿ ಜೇಷ್ಠತಾ ಘಟಕದಿಂದ ಹೊರಗೆ ಪರಸ್ಪರ ವರ್ಗಾವಣೆಗೆ ಅನುಮತಿ ನೀಡಲು.

- ಪತಿ ಅಥವಾ ಪತ್ನಿಯು ರಾಜ್ಯ ಅಥವಾ ಕೇಂದ್ರ ಸರಕಾರ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗಾಗಿ ಕೋರಿಗೆ ವರ್ಗಾವಣೆ ಸಮಯದಲ್ಲಿ ಆದ್ಯತೆಯನ್ನು ನೀಡುವುದು ಸೇರಿದಂತೆ ಹಲವು ಉದ್ದೇಶಗಳಿಂದ ಈ ವಿಧೇಯಕ ಪಾಸ್‌ ಮಾಡಲಾಗಿದೆ.

ಹಲವು ವಿಧೇಯಕಗಳಿಗೆ ಅಂಗೀಕಾರ

ಇಂದು ವಿಧಾನಸಭೆಯಲ್ಲಿ ಹಲವು ವಿಧೇಯಕಗಳಿಗೆ ಅಂಗೀಕಾರ ದೊರಕಿದೆ. ಪ್ರೌಢ ಶಿಕ್ಷಣ ಮಂಡಳಿ ತಿದ್ದುಪಡಿ ವಿಧೇಯಕ ಸಹ ಅಂಗೀಕಾರಗೊಂಡಿದೆ. ಪಿಯುಸಿ ಪರೀಕ್ಷಾ ಮಂಡಳಿ ವಿಲೀನಕ್ಕೂ ಅವಕಾಶ ನೀಡಲಾಗಿದೆ. ಒಂದೇ ಮಂಡಳಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿಯೊಂದಿಗೆ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದೆ.

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ ಹಾಗೂ 2021 ನೇ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ಎರಡನೇ ‌ತಿದ್ದುಪಡಿ ವಿಧೇಯಕವೂ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.

ನಿನ್ನೆಯೂ ಹಲವು ವಿಧೇಯಕಗಳಿಗೆ ಅಂಗೀಕಾರ

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ನಿನ್ನೆ ಪರಿಷತ್ ಕಲಾಪದಲ್ಲಿ ಅಂಗೀಕರಿಸಲಾಗಿತ್ತು.