ಆಪರೇಷನ್ ಸಿಂಧೂರ: ಟೀಂ ಮೈಸೂರು ತಂಡದ ವತಿಯಿಂದ ಬೈಕ್ ರ್‍ಯಾಲಿ ಮೂಲಕ ಹೆಮ್ಮೆಯ ಸೈನಿಕರಿಗೆ ಗೌರವ
ಕನ್ನಡ ಸುದ್ದಿ  /  ಕರ್ನಾಟಕ  /  ಆಪರೇಷನ್ ಸಿಂಧೂರ: ಟೀಂ ಮೈಸೂರು ತಂಡದ ವತಿಯಿಂದ ಬೈಕ್ ರ್‍ಯಾಲಿ ಮೂಲಕ ಹೆಮ್ಮೆಯ ಸೈನಿಕರಿಗೆ ಗೌರವ

ಆಪರೇಷನ್ ಸಿಂಧೂರ: ಟೀಂ ಮೈಸೂರು ತಂಡದ ವತಿಯಿಂದ ಬೈಕ್ ರ್‍ಯಾಲಿ ಮೂಲಕ ಹೆಮ್ಮೆಯ ಸೈನಿಕರಿಗೆ ಗೌರವ

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕ್ ಉಗ್ರರಿಗೆ ಪ್ರತ್ಯುತ್ತರ ನೀಡಿದ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೈಸೂರಿನಲ್ಲಿ ದೇಶಕ್ಕಾಗಿ ರ್‍ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್‍ಯಾಲಿ

ಮೈಸೂರಿನಲ್ಲಿ ದೇಶಕ್ಕಾಗಿ ರ್‍ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್‍ಯಾಲಿ
ಮೈಸೂರಿನಲ್ಲಿ ದೇಶಕ್ಕಾಗಿ ರ್‍ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್‍ಯಾಲಿ

ಮೈಸೂರು: ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರ ವಿರುದ್ಧ ಭಾರತದ ಯೋಧರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಹಾಗೂ ನಮ್ಮ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮೈಸೂರಿನಲ್ಲಿ ಟೀಂ ಮೈಸೂರು ತಂಡದ ವತಿಯಿಂದ ದೇಶಕ್ಕಾಗಿ ರ್‍ಯಾಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಬೈಕ್ ರ್‍ಯಾಲಿ ಮಾಡಲಾಯಿತು.

ರ್‍ಯಾಲಿಯಲ್ಲಿ ಮೊದಲಿಗೆ ಮಡಿದ ವೀರ ಯೋಧರಿಗೆ ಹಾಗೂ ಅಕಾಲಿಕ ಮರಣಕ್ಕೆ ತುತ್ತಾದ ಮೈಸೂರಿನ ಪದ್ಮಶ್ರೀ ಪುರಸ್ಕೃತ ಡಾ. ಸುಬ್ಭಣ್ಣ ಅಯ್ಯಪ್ಪನ್ ಅವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಲಾಯಿತು. ನಂತರ ಬೈಕ್ ರ್‍ಯಾಲಿಯನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಚಿಕ್ಕಗಡಿಯಾರದ ಮುಖಾಂತರ ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಶಾಂತಲಾ ಚಿತ್ರಮಂದಿರದ ಬಳಿ ಕೊನೆಗೂಳಿಸಲಾಯಿತು.

ಟೀಂ ಮೈಸೂರು ತಂಡದ ಸದಸ್ಯರ ಜೊತೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಕೂಡ ಬೆಂಬಲಿಸಿ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿತು. ಸಾಕಷ್ಟು ಸಂಖ್ಯೆಯಲ್ಲಿ ಯುವಕರು, ಹಿರಿಯರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದರು.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in