Bengaluru Layoffs 2025: ಬೆಂಗಳೂರಲ್ಲಿ ಟೆಕ್‌ ಉದ್ಯೋಗ ಕಡಿತ; ಪಿಜಿ ಬೇಡಿಕೆ ಕುಸಿತ, ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೂ ಹೊಡೆತ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Layoffs 2025: ಬೆಂಗಳೂರಲ್ಲಿ ಟೆಕ್‌ ಉದ್ಯೋಗ ಕಡಿತ; ಪಿಜಿ ಬೇಡಿಕೆ ಕುಸಿತ, ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೂ ಹೊಡೆತ

Bengaluru Layoffs 2025: ಬೆಂಗಳೂರಲ್ಲಿ ಟೆಕ್‌ ಉದ್ಯೋಗ ಕಡಿತ; ಪಿಜಿ ಬೇಡಿಕೆ ಕುಸಿತ, ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೂ ಹೊಡೆತ

Bengaluru Layoffs 2025: ಬೆಂಗಳೂರಿನಲ್ಲಿ ಉದ್ಯೋಗ ಕಡಿತ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಪರಿಣಾಮ ಪಿಜಿ ಹಾಗೂ ರಿಯಲ್‌ ಎಸ್ಟೇಟ್‌ ವಹಿವಾಟಿನ ಮೇಲೂ ಸದ್ದಿಲ್ಲದೇ ಆಗುತ್ತಿದೆ.

ಬೆಂಗಳೂರಿನಲ್ಲಿ ಉದ್ಯೋಗ ಕಡಿತದ ಪರಿಣಾಮ ಹಲವು ವಲಯಗಳ ಮೇಲೆ ಆಗುತ್ತಿದೆ.
ಬೆಂಗಳೂರಿನಲ್ಲಿ ಉದ್ಯೋಗ ಕಡಿತದ ಪರಿಣಾಮ ಹಲವು ವಲಯಗಳ ಮೇಲೆ ಆಗುತ್ತಿದೆ.

Bengaluru Layoffs 2025: ಬೆಂಗಳೂರಿನ ಮಾಹಿತಿ ತಂತ್ರಜ್ಞಾನ, ರೀಟೇಲ್‌ ಉದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ಕಡಿತ ಜೋರಾಗಿದೆ. ಇನ್ನೇನು ಹತ್ತು ದಿನ ಕಳೆದರೆ ಆರ್ಥಿಕ ವರ್ಷ ಮುಕ್ತಾಯವಾಗಲಿದೆ. ಬಹುತೇಕ ಹನ್ನೆರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಈವರೆಗೂ 87 ಟೆಕ್ ಕಂಪನಿಗಳು ಒಟ್ಟು 23,054 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಭಾರತದಲ್ಲೇ ಅತಿ ಹೆಚ್ಚು ವಿಭಿನ್ನ ರೀತಿಯ ಹಾಗೂ ಹೆಚ್ಚು ವೇತನ ಸಿಗಬಲ್ಲ ಉದ್ಯೋಗದಾತ ನಗರಿ ಬೆಂಗಳೂರು ಎನ್ನುವ ಹೆಸರೂ ಇದೆ. ಆದರೆ ಉದ್ಯೋಗ ಕಡಿತದ ಪ್ರಮಾಣ ಹೆಚ್ಚುತ್ತಿರುವುದು ವಿವಿಧ ಆರ್ಥಿಕ ಹಿನ್ನಡೆಗೂ ದಾರಿ ಮಾಡಿಕೊಟ್ಟಿದೆ. ಉದ್ಯೋಗ ಅರಸಿ ಬರುವವರಿಗೆ ಉಳಿಯಲು ಬೇಕಾದ ಪಿಜಿ( ಪೇಯಿಂಗ್‌ ಗೆಸ್ಟ್‌) ವ್ಯವಸ್ಥೆ ಬೆಂಗಳೂರಲ್ಲಿ ಬೆಳೆದಿದ್ದು, ಅದರ ಮೇಲೂ ಪರಿಣಾಮ ಬೀರಿದೆ. ಪಿಜಿ ಆದಾಯದಲ್ಲಿ ಏರುಪೇರು ಆಗಿರುವುದು ಆಸ್ತಿ ಮೌಲ್ಯ ಕುಸಿದು ರಿಯಲ್‌ ಎಸ್ಟೇಟ್‌ ವಹಿವಾಟು ಕೂಡ ಕೊಂಚ ಹಿನ್ನಡೆ ಅನುಭವಿಸಿದೆ ಎನ್ನುವ ವಿಶ್ಲೇಷಣೆಗಳು ನಡೆದಿವೆ.

ಹೇಗಿದೆ ಉದ್ಯೋಗ ಟ್ರೆಂಡ್‌

ಬೆಂಗಳೂರಿನಲ್ಲಿ ಐಟಿ ವಲಯ ಹಾಗೂ ರೀಟೇಲ್‌ ವಲಯ ವಿಸ್ತರಣೆಯಾದ ಪರಿಣಾಮವಾಗಿ ಸಣ್ಣ ಹಾಗೂ ಮಧ್ಯಮ ಉದ್ಯೋಗಗಳ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಅದರಲ್ಲೂ ಐಟಿ ವಲಯದ ಉದ್ಯೋಗಗಳು ಬೆಂಗಳೂರು ನಗರಕ್ಕೆ ಹೊಸ ತಲೆಮಾರಿನವನ್ನು ಆಕರ್ಷಿಸುತ್ತಿದೆ. ಐಟಿ ವಲಯ ಬೆಳೆದಂತೆ ಬೆಂಗಳೂರಿನ ಎಲ್ಲೆಗಳೂ ವಿಸ್ತರಣೆಗೊಂಡು ಹಲವು ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳು ಹಿಗ್ಗಲು ದಾರಿಯಾಗಿದೆ. ಪಿಜಿಗಳ ಬೇಡಿಕೆಯಿಂದಲೂ ಕಟ್ಟಡಗಳ ನಿರ್ಮಾಣ, ಇಲ್ಲಿ ಉದ್ಯೋಗ ಅರಸಿ ಬಂದವರು ನಿವೇಶನ, ಮನೆ ಖರೀದಿಯಂತ ಚಟುವಟಿಕೆಯಲ್ಲಿ ತೊಡಗುವುದು ಕೂಡ ವಹಿವಾಟು ಹೆಚ್ಚಲು ಅವಕಾಶ ಮಾಡಿಕೊಟ್ಟಿದೆ. ಆದರೆ ತಂತ್ರಜ್ಞಾನದಲ್ಲಿಯೇ ಆಗಿರುವ ಬದಲಾವಣೆಗಳು, ಅದರಲ್ಲೂ ಕೃತಕ ಬುದ್ದಿಮತ್ತೆ(ಎಐ) ತಂತ್ರಜ್ಞಾನದ ಫಲವಾಗಿ ಉದ್ಯೋಗದಲ್ಲೂ ಏರು ಪೇರು ಆಗಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಿರುವುದು ಕಂಡು ಬಂದಿದೆ.

ಉದ್ಯೋಗ ಕಡಿತ ಏಕೆ

ವರದಿಗಳ ಪ್ರಕಾರ, ವೆಚ್ಚವನ್ನು. ತಗ್ಗಿಸಲು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ನವೆಂಬರ್‌ನಲ್ಲಿ 18,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಇನ್ನೂ ಸುಮಾರು 14,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಸಿದ್ದತೆಯಲ್ಲಿದೆ. ಇದಲ್ಲದೇ ಇತರೆ ಕಂಪೆನಿಗಳು ಕೂಡ ಅಗತ್ಯದಷ್ಟು ಉದ್ಯೋಗಿಗಳನ್ನು ಉಳಿಸಿಕೊಂಡು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಅಮೆಜಾನ್ ವಜಾಗೊಳಿಸುವಿಕೆಯು ಮುಖ್ಯವಾಗಿ ಎಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ಉತ್ಪನ್ನ ನಿರ್ವಹಣಾ ಉದ್ಯೋಗ ಪಾತ್ರಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ವಿಶ್ಲೇಷಣೆಗಳು ನಡೆದಿವೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ, ಇಲ್ಲಿಯವರೆಗೆ 87 ಟೆಕ್ ಕಂಪನಿಗಳು ಒಟ್ಟು 23,054 ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ಲೇಆಫ್ಸ್.ಫೈಐ ವರದಿ ಮಾಡಿದೆ. ಇದು ಅಮೆಜಾನ್‌ನ ಅಂಕಿಅಂಶಗಳನ್ನು ಹೊರತುಪಡಿಸಿದೆ. 2024 ರಲ್ಲಿ, 549 ಟೆಕ್ ಕಂಪನಿಗಳು ಒಟ್ಟು 152,472 ಉದ್ಯೋಗಿಗಳನ್ನು ವಜಾಗೊಳಿಸಿದ್ದವು. 2023 ರಲ್ಲಿ ಅತಿ ಹೆಚ್ಚು ವಜಾಗೊಳಿಸುವಿಕೆ ಕಂಡುಬಂದಿದ್ದು, 1,193 ಟೆಕ್ ಕಂಪನಿಗಳು 2,64,220 ಉದ್ಯೋಗಿಗಳನ್ನು ವಜಾಗೊಳಿಸಿವೆ. ಎಐ ಯಾಂತ್ರೀಕರಣದ ಬದಲಾವಣೆಯ ನಡುವೆ ವೆಚ್ಚವನ್ನು ಉಳಿಸುವ ಸಲುವಾಗಿ ಟೆಕ್ ಕಂಪನಿಗಳು ಕಳೆದ ಎರಡು-ಮೂರು ವರ್ಷಗಳಿಂದ ವಜಾಗೊಳಿಸುತ್ತಿವೆ ಎನ್ನುತ್ತವೆ ವರದಿಗಳು.

ಪರಿಣಾಮ ಹಲವು

ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೆಕ್ ಉದ್ಯೋಗಗಳ ವಜಾಗಳು ಬೆಂಗಳೂರಿನ ಪಿಜಿ ಬೇಡಿಕೆ ಮತ್ತು ಬಾಡಿಗೆ ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತವೆ. ಜೂನಿಯರ್ ಐಟಿ ಉದ್ಯೋಗಿಗಳಿಗೆ ಪಿಜಿ ಅತ್ಯಂತ ಕೈಗೆಟುಕುವ ಆಯ್ಕೆಯಾಗಿದೆ. ಪಿಜಿಗೆ ಬೇಡಿಕೆ ಕಡಿಮೆಯಾಗುತ್ತಿರುವುದು ಮನೆ ಮಾಲೀಕರು ಮತ್ತು ನಿರ್ವಾಹಕರ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಆಕ್ಯುಪೆನ್ಸಿ ದರಗಳು ಕುಸಿಯುತ್ತಿರುವ ಮತ್ತು ಆಸ್ತಿ ಮೌಲ್ಯಗಳು ಕಡಿಮೆಯಾಗುತ್ತಿರುವ ನಡುವೆ ಅವರು ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದಾರೆ.

ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯ ಮೇಲೆ ಇದರ ಪರಿಣಾಮ ಈಗಾಗಲೇ ಆಗುತ್ತಿರುವುದು ಗೋಚರಿಸುತ್ತಿದೆ. ಒಂದು ಕಾಲದಲ್ಲಿ ಕಿರಿಯ ಐಟಿ ಉದ್ಯೋಗಿಗಳಿಂದ ತುಂಬಿದ್ದ ಪಿಜಿ ಸೌಲಭ್ಯಗಳು ಬೇಡಿಕೆ ಕಡಿಮೆಯಾಗುತ್ತಿವೆ. ಅನೇಕ ಮನೆಮಾಲೀಕರು ಮತ್ತು ಆಸ್ತಿ ಹೂಡಿಕೆದಾರರು, ವಿಶೇಷವಾಗಿ ಔಟರ್ ರಿಂಗ್ ರಸ್ತೆನ ಅಕ್ಕಪಕ್ಕದ ತಂತ್ರಜ್ಞಾನ ಕೇಂದ್ರಗಳಲ್ಲಿ ಉದ್ಯೋಗ ಕಡಿತವಾಗಿ ಕುಸಿಯುತ್ತಿರುವ ಆಕ್ಯುಪೆನ್ಸಿ ದರಗಳು ಕುಸಿಯುತ್ತಿವೆ. ಆಸ್ತಿ ಮೌಲ್ಯಗಳ ಕುಸಿತವನ್ನು ಎದುರಿಸುತ್ತಿದ್ದಾರೆ" ಎಂದು ವಿಶ್ಲೇಷಿಸಲಾಗುತ್ತಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner