Jio Net Down: ಜಿಯೋ ನೆಟ್‌ವರ್ಕ್‌ ಡೌನ್‌, ಬೆಂಗಳೂರು ಸೇರಿ ಭಾರತದ ಹಲವು ನಗರಗಳಲ್ಲಿ ಮೊಬೈಲ್‌ , ಬ್ರಾಂಡ್‌ ಬ್ಯಾಂಡ್‌ ಬಳಕೆಯಲ್ಲಿ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Jio Net Down: ಜಿಯೋ ನೆಟ್‌ವರ್ಕ್‌ ಡೌನ್‌, ಬೆಂಗಳೂರು ಸೇರಿ ಭಾರತದ ಹಲವು ನಗರಗಳಲ್ಲಿ ಮೊಬೈಲ್‌ , ಬ್ರಾಂಡ್‌ ಬ್ಯಾಂಡ್‌ ಬಳಕೆಯಲ್ಲಿ ವ್ಯತ್ಯಯ

Jio Net Down: ಜಿಯೋ ನೆಟ್‌ವರ್ಕ್‌ ಡೌನ್‌, ಬೆಂಗಳೂರು ಸೇರಿ ಭಾರತದ ಹಲವು ನಗರಗಳಲ್ಲಿ ಮೊಬೈಲ್‌ , ಬ್ರಾಂಡ್‌ ಬ್ಯಾಂಡ್‌ ಬಳಕೆಯಲ್ಲಿ ವ್ಯತ್ಯಯ

Jio Network ಭಾರತದ ಪ್ರಮುಖ ನಗರಗಳಲ್ಲಿ ಗುರುವಾರದಂದು ಜಿಯೋ ನೆಟ್‌ವರ್ಕ್‌( Jio Network Issues) ಸಮಸ್ಯೆ ಕಂಡು ಬಂದಿತು.

Jio Network disruption ಜಿಯೋ ನೆಟ್‌ ವರ್ಕ್‌ ಗುರುವಾರ ಭಾರತದ ಹಲವು ನಗರಗಳಲ್ಲಿ ಬಾಧಿಸಿತು.
Jio Network disruption ಜಿಯೋ ನೆಟ್‌ ವರ್ಕ್‌ ಗುರುವಾರ ಭಾರತದ ಹಲವು ನಗರಗಳಲ್ಲಿ ಬಾಧಿಸಿತು.

ಬೆಂಗಳೂರು: ಭಾರತದ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಸಂಸ್ಥೆಯ ನೆಟ್‌ವರ್ಕ್‌ ಗುರುವಾರ ಡೌನ್‌ ಆಗಿ ಗ್ರಾಹಕರು ಪರದಾಡಬೇಕಾಯಿತು.ಇದು ಬೆಂಗಳೂರು ಮಾತ್ರವಲ್ಲದೇ ಭಾರತದ ಹಲವು ನಗರಗಳ ಗ್ರಾಹಕರಿಗೆ ಈ ಅನುಭವವಾಗಿದೆ. ಅದರಲ್ಲೂ ಸ್ವಾತಂತ್ರ್ಯೋತ್ಸವದ ಕಾರಣದಿಂದ ಮನೆಯಲ್ಲಿಯೇ ಇದ್ದ ಬಹಳಷ್ಟು ಗ್ರಾಹಕರು ಜಿಯೋ ನೆಟ್‌ ಬಳಸಲು ಆಗದೇ ಪರದಾಡಿದರು. ಒಂದು ಗಂಟೆಗೂ ಹೆಚ್ಚು ಕಾಲ ನೋ ಸಿಗ್ನಲ್‌ ಎನ್ನುವುದನ್ನು ನೋಡಿ ಆಕ್ರೋಶವನ್ನೂ ಹೊರ ಹಾಕಿದರು. ಸಂಸ್ಥೆಯವರು ಕೆಲವು ಭಾಗಗಳಲ್ಲಿ ಆಗಿರುವ ಸಮಸ್ಯೆಯನ್ನು ಆದಷ್ಟು ಬೇಗನೆ ಸರಿಪಡಿಸುವುದಾಗಿ ಭರವಸೆ ನೀಡಿದರೂ ಸಮಸ್ಯೆ ಬಹುಹೊತ್ತಿನವರೆಗೆ ಮುಂದುವರೆದಿತ್ತು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳೂ ನಡೆದು ನೆಟ್‌ವರ್ಕ್‌ ಸಮಸ್ಯೆ ಆಗಿದ್ದಕ್ಕೆ ಹಲವರನ್ನು ತಮ್ಮದೇ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಗೆ ಭಾರತದ ಹಲವು ನಗರಗಳಲ್ಲಿ ಏಕಕಾಲಕ್ಕೆ ಜಿಯೋ ನೆಟ್‌ ವರ್ಕ್‌ ನಲ್ಲಿ ಸಮಸ್ಯೆ ಕಂಡು ಬಂದಿತು. ಬಹುತೇಕರು ತಮ್ಮ ಇಂಟರ್‌ ನೆಂಟ್‌ ಸೇವೆಗೆ ಜಿಯೋವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದರಿಂದ ಹಲವು ಕಡೆಗಳಲ್ಲಿ ನೆಟ್‌ವರ್ಕ್‌ ವ್ಯತ್ಯಯವಾಗಿ ಗ್ರಾಹಕರಿಗೆ ತೊಂದರೆಯಾಯಿತು. ಜಿಯೋ ಫೈಬರ್‌, ಜಿಯೋ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಹಲವಾರು ಕಡೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲೂ ವ್ಯತ್ಯಯವಾಗಿದ್ದು ಕಂಡು ಬಂದಿತು.

ಭಾರತದಲ್ಲಿ ರಿಲಯನ್ಸ್ ಜಿಯೋದ ಸೇವೆಗಳಲ್ಲಿ ಹಲವಾರು ಬಳಕೆದಾರರು ಸಮಸ್ಯೆಗಳನ್ನು ಕೂಡಲೇ ವರದಿ ಕೂಡ ಮಾಡಿದರು. ಮೇಲ್ವಿಚಾರಣಾ ಸೈಟ್ನಲ್ಲಿ 'ಜಿಯೋ ಸ್ಥಗಿತ' ದ ಹೆಚ್ಚಿನ ದೂರುಗಳೇ ಇದ್ದವು. ಭಾರತದಲ್ಲಿ 1,600 ಕ್ಕಿಂತ ಹೆಚ್ಚಿನ ದೂರುಗಳು ದಾಖಲಾದವು. ಬಾಧಿತ ಬಳಕೆದಾರರು ಪ್ರಾಥಮಿಕವಾಗಿ ನೆಟ್ವರ್ಕ್ ಸಿಗ್ನಲ್ಗಳೊಂದಿಗೆ ಸಮಸ್ಯೆಗಳನ್ನು ಎದುರಿಸಿದರು, ನಂತರ ಮೊಬೈಲ್ ಇಂಟರ್ನೆಟ್ ಮತ್ತು ಜಿಯೋಫೈಬರ್ ಸೇವೆಗಳು ಕೂಡ ಇಲ್ಲದಾಗಿ ತೊಂದರೆಯಾಯಿತು.

ಡೌನ್ ಡಿಟೆಕ್ಟರ್‌ ಸ್ಥಗಿತ ಮಾಹಿತಿ ಪ್ರಕಾರ, ದೆಹಲಿ, ಪಾಟ್ನಾ, ಗುವಾಹಟಿ, ಕೋಲ್ಕತ್ತಾ, ಕಟಕ್, ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ನಾಸಿಕ್, ಸೂರತ್, ಅಹಮದಾಬಾದ್, ನಾಗ್ಪುರ, ಇಂದೋರ್ ಮತ್ತು ಹೆಚ್ಚಿನ ಪ್ರದೇಶಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.

ಆದಾಗ್ಯೂ,ನೆಟ್‌ ವರ್ಕ್ ವ್ಯತ್ಯಯವನ್ನು ದೃಢೀಕರಿಸುವ ಹೇಳಿಕೆಯನ್ನು ಜಿಯೋ ಸೇವಾ ವಿಭಾಗದವರು ಬಿಡುಗಡೆ ಮಾಡಲಿಲ್ಲ. ಡೌನ್ ಡಿಟೆಕ್ಟರ್ನಲ್ಲಿ ಜಿಯೋದ ಸ್ಥಗಿತ ಗ್ರಾಫ್. ಸಮಸ್ಯೆಯನ್ನು ವರದಿ ಮಾಡಿದ ಬಾಧಿತ ಬಳಕೆದಾರರಲ್ಲಿ, ಸುಮಾರು ಅರ್ಧದಷ್ಟು ಜನರು 'ನೋ ಸಿಗ್ನಲ್' ನ ವರದಿ ಮಾಡಿದ ಸಮಸ್ಯೆಗಳನ್ನು ಎದುರಿಸಿದರು. ಸುಮಾರು 33 ಪ್ರತಿಶತ ಸಮಸ್ಯೆಗಳು ಮೊಬೈಲ್ ಇಂಟರ್ನೆಟ್ ಗೆ ಸಂಬಂಧಿಸಿದ್ದವು. ಉಳಿದವು ಜಿಯೊದ ಬ್ರಾಡ್‌ ಬ್ಯಾಂಡ್ ಮತ್ತು ಮನರಂಜನಾ ಸೇವೆಗೆ ಸಂಬಂಧಿಸಿವೆ.

ಇದನ್ನು ಹಲವಾರು ಗ್ರಾಹಕರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಸ್ಥೆಯವರು ಒಂದು ಗಂಟೆ ದಾಟಿದರೂ ಕ್ರಮ ವಹಿಸದ ಬಗ್ಗೆ ಹಾಗೂ ಏನಾಗಿದೆ ಎಂದು ತಿಳಿಸದ್ದರ ಕುರಿತಾಗಿಯೂ ಆಕ್ರೋಶಗಳು ಕೇಳಿ ಬಂದವು.

"ಜಿಯೋ 30 ನಿಮಿಷಗಳ ಕಾಲ ಡೌನ್ ಆಗಿತ್ತು ಮತ್ತು ಜಗತ್ತು ಕೊನೆಗೊಳ್ಳಲಿದೆ ಎಂದು ನಾನು ಭಾವಿಸಿದೆ" ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇದ್ದಕ್ಕಿದ್ದಂತೆ #jio ನೆಟ್ವರ್ಕ್ ಹೋಯಿತು. @JioCare ಏನಾಯಿತು ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.

"ನನ್ನ ಜಿಯೋ ಏರ್ಫೈಬರ್ ಈಗ ಒಂದು ಗಂಟೆಗೂ ಹೆಚ್ಚು ಕಾಲ ಡೌನ್ ಆಗಿದೆ, ಇದನ್ನು ಯಾವಾಗ ಸರಿಪಡಿಸಲಾಗುತ್ತದೆ" ಎಂದು ಮತ್ತೊಬ್ಬ ಬಳಕೆದಾರ ಕೇಳಿದರೆ, ಜಿಯೋದ ಸಪೋರ್ಟ್ ಹ್ಯಾಂಡಲ್-@JioCare ಸಹ ಬಳಕೆದಾರರ ಕೆಲವು ದೂರುಗಳಿಗೆ ಪ್ರತಿಕ್ರಿಯಿಸಿಲ್ಲ ಎಂದು ಇನ್ನೊಬ್ಬ ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.

ಎರಡು ತಿಂಗಳ ಹಿಂದೆಯೂ ಇದೇ ರೀತಿ ಸಮಸ್ಯೆಯಾಗಿ ಗ್ರಾಹಕರು ಜಿಯೋ ಬಳಕೆಯಿಂದ ಹೈರಾಣಾಗಿದ್ದರು. ಈಗ ಅಂತಹುದ್ದೇ ಸಮಸ್ಯೆ ಕಂಡು ಬಂದರೂ ಹಲವು ಕಡೆ ಇದು ಬಗೆಹರಿದಿಲ್ಲ.

Whats_app_banner