ಕನ್ನಡ ಸುದ್ದಿ  /  Karnataka  /  Tipu Nijakanasugalu Author Gets Death Threat: Author Director Of Kannada Play On Tipu Sultan Alleges Death Threats

Tipu Nijakanasugalu Author gets death threat: ಜೀವ ಬೆದರಿಕೆ ಬಂದಿದೆ ಎಂದ ಲೇಖಕ ಅಡ್ಡಂಡ ಸಿ. ಕಾರ್ಯಪ್ಪ

Tipu Nijakanasugalu Author gets death threat: ವಿವಾದಿತ ಕೃತಿ ʻಟಿಪ್ಪು ನಿಜ ಕನಸುಗಳುʼ ಕೃತಿಯ ಲೇಖಕ - ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಜೀವ ಬೆದರಿಕೆ ಬಂದಿದೆ. ಈ ಕುರಿತು ಅವರು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಅಡ್ಡಂಡ ಸಿ.ಕಾರ್ಯಪ್ಪ
ಅಡ್ಡಂಡ ಸಿ.ಕಾರ್ಯಪ್ಪ (Facebook)

ವಿವಾದಿತ ಕೃತಿ ʻಟಿಪ್ಪು ನಿಜ ಕನಸುಗಳುʼ ಕೃತಿಯ ಲೇಖಕ - ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಜೀವ ಬೆದರಿಕೆ ಬಂದಿದೆ. ಈ ಕುರಿತು ಅವರು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಶಿವಮೊಗ್ಗದ ಬ್ರಾಹ್ಮಣ ಬೀದಿಯ ವಿಳಾಸದಿಂದ ಜೀವ ಬೆದರಿಕೆ ಪತ್ರ ಬಂದಿದೆ. ಜೀವ ಬೆದರಿಕೆ ಒಡ್ಡಿದವರು ಯಾರು ಎಂಬುದು ತಿಳಿದಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ನನಗೆ ಎರಡು ಪತ್ರಗಳು ಬಂದಿದ್ದವು. ಅದರಲ್ಲಿ ಒಂದು ಪೋಸ್ಟ್‌ ಕಾರ್ಡ್‌. ಇನ್ನೊಂದು ಎನ್‌ವಲೆಪ್‌ನೊಳಗಿದ್ದ ಪತ್ರ. ನನ್ನ ಹತ್ಯೆ ಮಾಡುವುದಾಗಿ ಅದರಲ್ಲಿ ಬೆದರಿಕೆ ಇದೆ. ಯಾವ ದೇವರು ಕೂಡ ಕಾಪಾಡಲಾರ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ. ಪತ್ರದ ತುಂಬ ಪ್ರಚೋದನಕಾರಿ ಮಾತುಗಳೇ ಇವೆ ಎಂದು ಅಡ್ಡಂಡ ಕಾರ್ಯಪ್ಪ ಪಿಟಿಐಗೆ ತಿಳಿಸಿದ್ದಾಗಿ ವರದಿ ಹೇಳಿದೆ.

ಮೈಸೂರು ರಂಗಾಯಣದ ನಿರ್ದೇಶಕರೂ ಆಗಿರುವ ಅಡ್ಡಂಡ ಕಾರ್ಯಪ್ಪ ಅವರು, ಇತ್ತೀಚೆಗಷ್ಟೇ ತೀವ್ರ ವಿರೋಧದ ನಡುವೆ ಟಿಪ್ಪು ನಿಜಕನಸು ನಾಟಕ ಕೃತಿ ರಚಿಸಿ, ನಾಟಕವನ್ನು ನಿರ್ದೇಶನ ಮಾಡಿದ್ದರು. ಇದರ ಪ್ರದರ್ಶನ ನಡೆದಿರುವ ಸಂದರ್ಭದಲ್ಲೇ ಅವರಿಗೆ ಈ ಬೆದರಿಕೆ ಪತ್ರಗಳು ತಲುಪಿವೆ. ಟಿಪ್ಪು ನಿಜಕನಸು ನಾಟಕ ನವೆಂಬರ್‌ 20ರಿಂದ ಪ್ರದರ್ಶನವಾಗುತ್ತಿದೆ. ಇದುವರೆ ಆರು ಪ್ರದರ್ಶನ ಕಂಡಿದೆ. ಇಂದು, ಮೂರು ಮತ್ತು ನಾಲ್ಕನೇ ತಾರೀಕಿಗೂ ಪ್ರದರ್ಶನ ನಿಗದಿಯಾಗಿದೆ.

ರಾಜ್ಯದಾದ್ಯಂತ 75 ಪ್ರದೇಶಗಳಲ್ಲಿ ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನ ಆಯೋಜಿಸಬೇಕು ಎಂಬ ಚಿಂತನೆ ನನ್ನದು. ವಿಶೇಷವಾಗಿ ಎಲ್ಲೆಲ್ಲಿ ರಂಗ ಸಜ್ಜಿಕೆಗಳಿವೆಯೋ ಅಲ್ಲಿ ಇದನ್ನು ಪ್ರದರ್ಶಿಸಲಾಗುವುದು. ಬೆದರಿಕೆ ಇರುವ ಕಾರಣ ಬಯಲು ರಂಗಮಂದಿರಗಳಲ್ಲಿ ಇದನ್ನು ಪ್ರದರ್ಶಿಸಲಾಗದು ಎಂದು ಕಾರ್ಯಪ್ಪ ಹೇಳಿದ್ದಾರೆ.

ನಾಟಕದಲ್ಲಿ 70 ಪಾತ್ರಗಳಿದ್ದು, ಟಿಪ್ಪು ಸುಲ್ತಾನ್‌, ಆತನ ಪತ್ನಿ, ಪುತ್ರಿ ಮತ್ತು ದಿವಾನ್‌ ಪೂರ್ಣಯ್ಯ ಮತ್ತು ಬ್ರಿಟಷರ ಪಾತ್ರ ಪ್ರಮುಖವಾದವು ಎಂದು ಅಡ್ಡಂಡ ಕಾರ್ಯಪ್ಪ ವಿವರಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

ಬಿಬಿಎಂಪಿ ಚುನಾವಣೆ ನಡೆಸಲು ಸಮಯಾವಕಾಶ ಬೇಕು - ಹೈಕೋರ್ಟ್‌ಗೆ ಮನವಿ ಮಾಡಿದ ರಾಜ್ಯ ಸರ್ಕಾರ; ಚುನಾವಣಾ ಆಯೋಗದ ಆಕ್ಷೇಪ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಬುಧವಾರ ಮನವಿ ಮಾಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

Tokay Gecko lizard: ವಿರಳ ಟೋಕೇ ಗೆಕ್ಕೊ ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಐವರ ಬಂಧನ; ಈ ಹಲ್ಲಿಗೇಕಿಷ್ಟು ಬೇಡಿಕೆ?

ಬಿಹಾರದ ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪರೂಪದ ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಚಿತ್ರ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

EOS-06 started sending images: ಭೂಮಿಯ ಚಿತ್ರ ಕಳುಹಿಸಿತು EOS-06 ಉಪಗ್ರಹ; ಮೊದಲ ದಿನದ ಚಿತ್ರಗಳಲ್ಲಿ ಏನಿದೆ?

EOS-06 started sending images: ಪಿಎಸ್‌ಎಲ್‌ವಿ-ಸಿ 54 ಮೂಲಕ ಇತ್ತೀಚೆಗೆ ಉಡಾವಣೆಯಾದ ಭೂ ವೀಕ್ಷಣಾ ಉಪಗ್ರಹ EOS-06 ಬುಧವಾರ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಶಾದ್‌ನಗರದ NRSCನಲ್ಲಿ ನಿನ್ನೆ ಮೊದಲ ದಿನದ ಚಿತ್ರಗಳು ಸಂಗ್ರಹವಾಗಿದೆ. ಇನ್ನಷ್ಟು ಚಿತ್ರ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point