Karnataka News Live August 28, 2024 : ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 28 Aug 202405:19 PM IST
Karnataka Digital Advt Guidelines 2024; ಕರ್ನಾಟಕ ಸರ್ಕಾರ ನೂತನ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ಜಾರಿಗೊಳಿಸಿದೆ. ಇನ್ಮೇಲೆ ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
Wed, 28 Aug 202404:22 PM IST
Court News; ಹಾಸನದ ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅಬಾಧಿತವಾಗಿ ಉಳಿದಿದೆ. ಎಸ್‌ಐಟಿ ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ಪ್ರಕರಣದ ಉಳಿದ ಆರೋಪಿಗಳಿಗೂ ಜಾಮೀನು ನೀಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Wed, 28 Aug 202403:55 PM IST
IAS Tranfer and Postings; ಕರ್ನಾಟಕದ ಪ್ರಮುಖ ಐಎಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ನಿಯೋಜನೆ ಆದೇಶವನ್ನು ರಾಜ್ಯ ಸರ್ಕಾರ ಇಂದು (ಆಗಸ್ಟ್ 28) ಪ್ರಕಟಿಸಿದೆ. ಇದರಂತೆ, ಬೆಂಗಳೂರು ಜಲಮಂಡಳಿ ಚೇರ್‌ಮನ್ ಡಾ ರಾಮ ಪ್ರಸಾತ್ ಮನೋಹರ್ ವಿ ಸೇರಿ ಕೆಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಆಗಿದ್ದು, ಹೊಸ ಹೊಣೆಗಾರಿಕೆಗೆ ನಿಯೋಜನೆಯಾಗಿದೆ. ಇದರ ವಿವರ ಇಲ್ಲಿದೆ.
Wed, 28 Aug 202402:30 PM IST
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ ಮತ್ತು ಸಹಚರರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪ ಎದುರಾದ ಕಾರಣ, ಪೊಲೀಸರು ದರ್ಶನ್ ಅವರನ್ನು ತಡರಾತ್ರಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)
Wed, 28 Aug 202402:00 PM IST
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರೆಂಟಿ ಯೋಜನೆಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಹಾಯವಾಣಿ ಶುರುವಾಗಿದೆ. ಕುಂದುಕೊರತೆ ದೂರು ದಾಖಲಿಸಿಕೊಂಡು ಸ್ಪಂದಿಸುವಂತೆ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪ ಸೂಚಿಸಿದರು. ಸಹಾಯವಾಣಿ ಸಂಖ್ಯೆ ಮತ್ತು ಇತರೆ ವಿವರ ಇಲ್ಲಿದೆ.
Wed, 28 Aug 202412:13 PM IST
Mandya News; ಮಂಡ್ಯ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಿತ್ರ ಪಕ್ಷ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾದರು. ರಾಜಕೀಯ ಜಿದ್ದಾ ಜಿದ್ದಿನ ಕಣವಾಗಿದ್ದ ಚುನಾವಣಾ ತಂತ್ರಗಾರಿಕೆಯ ವಿವರ ಇಲ್ಲಿದೆ.
Wed, 28 Aug 202410:31 AM IST
- Train Updates ಮೈಸೂರು ರೈಲ್ವೆ ವಿಭಾಗವು ತಮಿಳುನಾಡಿನ ಸೆಂಗೋಟ್ಟೈಗೆ(Sengottai) ವಿಶೇಷ ರೈಲು ಸೇವೆಯನ್ನು ನೀಡಲಿದೆ.
Wed, 28 Aug 202409:34 AM IST
BPL Cards at Risk; ಕರ್ನಾಟಕದಲ್ಲಿ ರೇಷನ್ ಕಾರ್ಡ್ ಕೆವೈಸಿ ಮೂಲಕ ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಆದಾಗ, ತೆರಿಗೆ ಪಾವತಿಸುತ್ತಿದ್ದವರು, ಸರ್ಕಾರಿ ಉದ್ಯೋಗಿಗಳು ಯಾರೆಂಬುದು ಬಹಿರಂಗವಾಗಿದೆ. ಹೀಗಾಗಿ, ಅನರ್ಹ ಕಾರಣ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ, ಈ ಕುಟುಂಬದವರಿಗೆ ಅನ್ನಭಾಗ್ಯ ಸಿಗೋದು ಡೌಟ್. ಇದರ ವಿವರ ಇಲ್ಲಿದೆ.
Wed, 28 Aug 202409:04 AM IST
Ganesha Festival ಗಣೇಶೋತ್ಸವದ ಸಡಗರ ಇನ್ನೇನು ಶುರುವಾಗಲಿದೆ. ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆಯೂ ಜೋರಾಗಲಿದೆ. ಈ ರೀತಿ ಗಣೇಶನನ್ನು ಕೂರಿಸುವವರು ಈ ಹತ್ತು ಅಂಶಗಳನ್ನು ಪಾಲಿಸುವುದು ಒಳ್ಳೆಯದು.
Wed, 28 Aug 202408:12 AM IST
- Indian Railways ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದ್ದು, ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಿಂದ ಸೆಪ್ಟೆಂಬರ್ 20 ರಂದು ಸೆಟ್ ಅನ್ನು ರವಾನಿಸಲಾಗುವುದು.
Wed, 28 Aug 202406:55 AM IST
- New DIG ಕರ್ನಾಟಕ ಕಾರಾಗೃಹ ಇಲಾಖೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ನೂತನ ಡಿಐಜಿಯಾಗಿ ಕೆ.ಸಿ.ದಿವ್ಯಶ್ರೀ ಅವರನ್ನು ನೇಮಿಸಲಾಗಿದೆ.
Wed, 28 Aug 202405:28 AM IST
Hosur News ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿದ್ದು, ಚೆನ್ನೈ ಮೆಟ್ರೋ ತಂಡವೂ(Chennai metro Rail Limited) ಬೆಂಗಳೂರಿಗೆ ಭೇಟಿ ನೀಡಿದೆ.
Wed, 28 Aug 202403:26 AM IST
Karnataka Dam Levels ಕರ್ನಾಟಕದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು ನೀರಿನ ಪ್ರಮಾಣವೂ ಅಧಿಕವಾಗಿದೆ.
Wed, 28 Aug 202402:48 AM IST
- Udupi News ಗುಂಡಿಬಿದ್ದ ರಸ್ತೆಗಳನ್ನು ಮುಚ್ಚದೇ ಇದ್ದರೆ ಏನು ಮಾಡಬಹುದು. ಉಡುಪಿಯಲ್ಲಿ ವಿಭಿನ್ನ ಪ್ರತಿಭಟನೆ ದಾಖಲಿಸಿದ್ದು ಹೀಗೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
Wed, 28 Aug 202402:30 AM IST
- Encroachment issue ಕರ್ನಾಟಕದ ನಾನಾ ಭಾಗಗಳಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಆರಂಭಿಸಿದ್ದು, ಕೆಲವೆಡೆ ವಿವಾದದ ಸ್ವರೂಪ ಪಡೆದಿದೆ. ಈ ಕಾರಣದಿಂದ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Wed, 28 Aug 202401:37 AM IST
- Bangalore Police ಬೆಂಗಳೂರಿನ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಲಾಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
- ವರದಿ:ಎಚ್.ಮಾರುತಿ,ಬೆಂಗಳೂರು
Wed, 28 Aug 202401:16 AM IST
- Karntaka Weather Update ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ( Karntaka Rains) ಬುಧವಾರ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆ( Bangalore Rains) ಇರಲಿದೆ.