Karnataka News Live August 30, 2024 : UGNEET 2024; ವೈದ್ಯ ಕೋರ್ಸ್‌ಗಳ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 30 Aug 202405:25 PM IST
UGNEET 2024 Post Seat Allotment Procedure; ವೈದ್ಯ ಕೋರ್ಸ್‌ಗಳ ಅಂದರೆ, ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಕೋರ್ಸುಗಳಿಗೆ ಸೀಟು ಹಂಚಿಕೆ ನಂತರದ ಮೊದಲ ಸುತ್ತಿನ ಟೈಮ್ ಟೇಬಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು (ಆಗಸ್ಟ್ 30) ಪ್ರಕಟಿಸಿದೆ.
Fri, 30 Aug 202404:29 PM IST
How to get BMTC Digital Pass; ಬೆಂಗಳೂರಿನಲ್ಲಿ ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ. ಹೌದು ಬಿಎಂಟಿಸಿ ಇದನ್ನು ದೃಢೀಕರಿಸಿದ್ದು, ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್‌ಗಳನ್ನು ಡಿಜಿಟಲ್ ಪಾಸ್‌ಗಳನ್ನಾಗಿ ಮಾಡುತ್ತಿರುವುದಾಗಿ ಹೇಳಿದೆ. ಡಿಜಿಟಲ್ ಪಾಸ್ ಖರೀದಿಸುವುದು ಹೇಗೆ? ಅದರ ಸಿಂಪಲ್ ಸ್ಟೆಪ್ಸ್ ಹೀಗಿದೆ.
Fri, 30 Aug 202403:16 PM IST
Bengaluru News; ಬೆಸ್ಕಾಂ ವ್ಯಾಪ್ತಿಯಲ್ಲಿ ಇನ್ನು, ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಲೈನ್‌ಮ್ಯಾನ್ ಬಂದು ಕರೆಂಟ್ ಕಟ್ ಮಾಡ್ತಾರೆ. ಬಿಲ್‌ನ 30 ದಿನಗಳ ಗಡುವು ಮೀರಿದಲ್ಲಿಈ ಕ್ರಮ ಜರುಗಿಸಲು ಬೆಸ್ಕಾಂ ಮುಂದಾಗಿದೆ. ಇದರ ವಿವರ ಈ ವರದಿಯಲ್ಲಿದೆ.
Fri, 30 Aug 202402:46 PM IST
Mangaluru News; ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವ ದೇವಸ್ಥಾನದ ಹೊರ ಆವರಣದಲ್ಲಿ ಹೊಯ್ಸಳ ಶಾಸನ ಪತ್ತೆಯಾಗಿದೆ. ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಗಮನಸೆಳೆದ ಶಿಲಾಶಾಸನದ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Fri, 30 Aug 202402:24 PM IST
Viral Fever in Dakshina Kannada; ದಕ್ಷಿಣ ಕನ್ನಡದಲ್ಲಿ ವೈರಲ್ ಜ್ವರದ ಕಾಟ ತೀವ್ರವಾಗಿದೆ. ಶಾಲೆ, ಕಾಲೇಜುಗಳಲ್ಲೂ ಪ್ರಕರಣ ಹೆಚ್ಚಾಗುತ್ತಿವೆ. ಇದು ಕಳವಳ ಮೂಡಿಸಿದ್ದು, ಆರೋಗ್ಯ ಇಲಾಖೆಯೂ ಈ ಬಗ್ಗೆ ಗಮನಹರಿಸತೊಡಗಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
Fri, 30 Aug 202401:58 PM IST
Dharwad News; ವಿವಾಹಿತ ಹಿಂದೂ ಮಹಿಳೆಯ ಅಪಹರಣ ಕೇಸ್‌ನ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು (ಆಗಸ್ಟ್ 30) ಧಾರವಾಡ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಏನಿದು ಪ್ರಕರಣ -ಇಲ್ಲಿದೆ ವಿವರ. (ವರದಿ- ಪ್ರಸನ್ನ ಕುಮಾರ್ ಹಿರೇಮಠ, ಹುಬ್ಬಳ್ಳಿ)
Fri, 30 Aug 202401:35 PM IST
Sarjapur Hebbal Metro Line; ಬೆಂಗಳೂರಿನ ಸರ್ಜಾಪುರ ಹೆಬ್ಬಾಳ ಮೆಟ್ರೋ ಮಾರ್ಗ ಬೇಗ ಪೂರ್ಣಗೊಳಿಸಲು ಒತ್ತಾಯಿಸಿ 10000 ಸಹಿ ಸಂಗ್ರಹದ ಎಸ್‌ಒಎಸ್ (ಸೇವ್ ಅವರ್ ಸರ್ಜಾಪುರ) ಅಭಿಯಾನ ಪ್ರಗತಿಯಲ್ಲಿದೆ. ಸರ್ಜಾಪುರ ಮೆಟ್ರೋ ಮಾರ್ಗದ ಸಮಗ್ರ ಅಭಿವೃದ್ಧಿಯ ಕಾಳಜಿ ವ್ಯಕ್ತವಾಗಿದ್ದು, ಅದರ ವಿವರ ಇಲ್ಲಿದೆ.
Fri, 30 Aug 202412:31 PM IST
- Ganesh Chaturthi Guidelines: ಬೆಂಗಳೂರಿನಲ್ಲಿ ನೀವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೀರಾ? ಹಾಗಿದ್ದರೆ ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ, ತಪ್ಪಿದರೆ ಕ್ರಮ.
Fri, 30 Aug 202411:32 AM IST
ಬೆಂಗಳೂರು ಟೆಕ್ ಕಾರಿಡಾರ್‌ನಲ್ಲಿ ಹೊರವರ್ತುಲ ರಸ್ತೆ ಹದಗೆಟ್ಟು ಹೋಗಿರುವ ವಿಚಾರ ತೀವ್ರ ಚರ್ಚೆಗೆ ಒಳಗಾಗಿದ್ದು, ತುರ್ತು ಸ್ಪಂದಿಸುವಂತೆ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ನಿನ್ನೆ (ಆಗಸ್ಟ್ 29) ಸ್ಥಳೀಯಾಡಳಿತ ಸಂಸ್ಥೆ, ಸರ್ಕಾರಕ್ಕೆ ಮನವಿ ಮಾಡಿದೆ.
Fri, 30 Aug 202410:33 AM IST
- ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೈಸೂರಿನ ಹಲವರಿಂದ ಲಕ್ಷ ಲಕ್ಷವನ್ನು ಹಣ ಕಿತ್ತಿರುವ ಇಬ್ಬರು ವಂಚಕರನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Fri, 30 Aug 202410:01 AM IST
- Business News ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಸ ಕ್ಲಸ್ಟರ್‌ಗಳನ್ನು ಘೋಷಿಸಿದೆ.
Fri, 30 Aug 202408:58 AM IST
Bengaluru News; ನಕಲಿ ಅಂಕಪಟ್ಟಿಗಳನ್ನು ನೀಡಿ ಜಲಸಂಪನ್ಮೂಲ ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ಗಿಟ್ಟಿಸಿದ್ದ 12 ಜಿಲ್ಲೆಗಳ 62 ಅಭ್ಯರ್ಥಿಗಳ ಪತ್ತೆ ಮಾಡಲಾಗಿದ್ದು, ಈ ಪೈಕಿ 32 ಮಂದಿ ಬಂಧನವಾಗಿದೆ. ಉಳಿದ 30 ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Fri, 30 Aug 202408:50 AM IST
- MAAM Inspire Award: ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಯಾವುದೇ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸಾಧಕ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ವಿವರಗಳು ಈ ಸುದ್ದಿಯಲ್ಲಿದೆ.
Fri, 30 Aug 202408:38 AM IST
- ಕವಿ ಮನಸ್ಸಿನ ರಾಜಕಾರಣಿ, ಮಲೆನಾಡಿನ ತವರು ಸಾಗರದ ಕೆಎಚ್.ಶ್ರೀನಿವಾಸ್( KH Srinivas) ನಿಧನರಾಗಿದ್ದಾರೆ.
Fri, 30 Aug 202407:36 AM IST
- Mandya Sahitya Sammelana ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳು ಪಕ್ಕಾ ಲೋಕಲ್ ಮುದ್ದೆ ಉಪ್ಸಾರು( Mandya Food) ಸವಿಯಲಿದ್ದಾರೆ.
Fri, 30 Aug 202407:13 AM IST
- PSI Exam ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಸೆಪ್ಟಂಬರ್ ನಲ್ಲಿ ಆಯೋಜಿಸಿರುವ ಪಿಎಸ್‌ಐ ಪರೀಕ್ಷೆ ಮುಂದೆ ಹಾಕುವ ಸಾಧ್ಯತೆಯಿದೆ.
Fri, 30 Aug 202406:49 AM IST
Train Updates ಬೆಂಗಳೂರು ಹಾಗೂ ಕಲಬುರಗಿ ನಗರಗಳ ನಡುವೆ ಗಣೇಶ ಹಬ್ಬಕ್ಕೆ ಮೂರು ದಿನ ವಿಶೇಷ ರೈಲು ಸಂಚರಿಸಲಿವೆ.
Fri, 30 Aug 202405:53 AM IST
Bangalore News ಭಾರತದ ಶ್ರೀಮಂತರ ಪಟ್ಟಿಯಲ್ಲಿ(2024 Hurun India Rich List) ಬೆಂಗಳೂರು( Bangalore) ಹಿಂದೆ ಬಿದ್ದಿದೆ. ಇದನ್ನು ಅಭಿವೃದ್ದಿ ಸ್ಥಗಿತದ ಫಲ ಎಂದು ಉದ್ಯಮಿ ಮೋಹನ್ ದಾಸ್ ಪೈ( Mohan Das Pai) ಎಕ್ಸ್ ಮೂಲಕ ಕರ್ನಾಟಕ ಸರ್ಕಾರವನ್ನು ಕುಟುಕಿದ್ದಾರೆ.
Fri, 30 Aug 202405:01 AM IST
- HSRP Number Plate Karnataka Last Date: ಕರ್ನಾಟಕದಲ್ಲಿ 2019ಕ್ಕಿಂತ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್ ಅಳವಡಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಇನ್ನು ಹದಿನೈದು ದಿನಗಳು ಬಾಕಿ ಉಳಿದಿದ್ದು, ಕೊನೆಯ ಕ್ಷಣದವರೆಗೆ ಕಾಯದೇ ನಿಮ್ಮ ಸ್ಲಾಟ್ ಈಗಲೇ ಬುಕ್ ಮಾಡಿ.
Fri, 30 Aug 202404:08 AM IST
- Elephant Attack ಕಾಡಾನೆ ದಾಳಿಯಿಂದ ವೃದ್ದೆಯೊಬ್ಬರು ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ಶುಕ್ರವಾರ ನಡೆದಿದೆ.
Fri, 30 Aug 202403:33 AM IST
- Karnataka Dams Level ಕರ್ನಾಟಕದಲ್ಲಿ ಮಳೆ ಪ್ರಮಾಣ ಏರಿಕೆಯಾಗಿದ್ದು, ಕೆಆರ್ ಎಸ್, ಹೇಮಾವತಿ, ಆಲಮಟ್ಟಿ ಸಹಿತ ಹಲವು ಜಲಾಶಯಗಳ ಒಳ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ.
Fri, 30 Aug 202403:17 AM IST
- Food Safety ಕರ್ನಾಟಕದಲ್ಲಿ ಆಹಾರಗಳಲ್ಲಿ ರಾಸಾಯನಿಕ ಬಳಕೆ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯ ಮತ್ತು ಆಹಾರ ಇಲಾಖೆಗಳು ದಾಳಿ ಜತೆಗೆ ಜಾಗೃತಿ ಮೂಡಿಸಲು ಮುಂದಾಗಿವೆ.
Fri, 30 Aug 202402:17 AM IST
- Bangalore News ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಸಮಗ್ರ ಟೌನ್ ಶಿಪ್‌ಗಳ ಯೋಜನೆಗೆ ಬಲ ನೀಡಿದೆ.
Fri, 30 Aug 202401:59 AM IST
- ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಇಂಡಿಯನ್ ಪಬ್ಲಿಕ್ ಶಾಲೆಗೆ ಗುರುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪೊಲೀಸರು ಪರಿಶೀಲನೆ ನಡೆಸಿದ ಮೇಲೆ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಸ್ಪಷ್ಟವಾಗಿದೆ. (ವರದಿ: ಎಚ್.ಮಾರುತಿ)
Fri, 30 Aug 202401:38 AM IST
- Prajwal Revanna: ಪ್ರಜ್ವಲ್ ರೇವಣ್ಣ ಅತ್ಯಾಚಾರ, ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಗೋಪ್ಯ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಮನವಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. (ವರದಿ: ಎಚ್. ಮಾರುತಿ)
Fri, 30 Aug 202401:15 AM IST
- Karnataka Weather ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದ್ದು, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
Fri, 30 Aug 202401:12 AM IST
- ಮುಡಾ ಪ್ರಕರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್‌ನಲ್ಲಿ ಸಿಎಂ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಲಾಗಿದೆ.