Karnataka News Live December 10, 2024 : ಮುಡಾ ಪ್ರಕರಣ; ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಲು ಹೈಕೋರ್ಟ್ ಆದೇಶ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 10 Dec 202405:46 PM IST
ಮುಡಾ ಪ್ರಕರಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಹ್ಯಾಂಡ್ ಸಮನ್ಸ್ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇದರ ವಿವರ ವರದಿ ಇಲ್ಲಿದೆ. (ವರದಿ ಎಚ್.ಮಾರುತಿ, ಬೆಂಗಳೂರು)
Tue, 10 Dec 202405:24 PM IST
SM Krishna; ಸದ್ಯದ ಆಡಳಿತದಲ್ಲಿ, ಗ್ಯಾರೆಂಟಿ ಯೋಜನೆಗಳ ಪ್ರತಿಪಾದಕರೇ ಹೆಚ್ಚು. ಆದರೆ ದಶಕಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬೇರೆಯೇ ಇತ್ತು. ವಿಶೇಷವಾಗಿ ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ ಯೋಜನೆಗಳು ಭಿನ್ನವಾಗಿದ್ದವು. ಹಾಗಾಗಿ, ಈಗ ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ ಎನ್ನುತ್ತಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.
Tue, 10 Dec 202404:54 PM IST
SM Krishna Death: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಸುಕಿನಲ್ಲಿ ವಿಧಿವಶರಾದರು. ಕರ್ನಾಟಕದ ರಾಜಕಾರಣದಲ್ಲಿ ಜಂಟಲ್‌ಮನ್ ಎಂದೇ ಗುರುತಿಸಿಕೊಂಡಿದ್ದ ಎಸ್ ಎಂ ಕೃಷ್ಣರ ಬಗ್ಗೆ ಹಲವು ಟೀಕೆಗಳು ಇರಬಹುದು. ಆದರೆ, ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವುಕಾರಣಗಳಿವೆ ಎಂಬುದನ್ನು ವಿವರಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.
Tue, 10 Dec 202404:34 PM IST
Bengaluru techie suicide: ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್ ದೇಶದ ಗಮನಸೆಳೆದಿದ್ದು, ಕೌಟುಂಬಿಕ ಕಲಹಕ್ಕೆ ನೊಂದು ಉತ್ತರ ಪ್ರದೇಶದ ಯುವಕ ಅತಿರೇಕದ ನಿರ್ಧಾರ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಯುವಕನ ಮೇಲೆ ಆತನ ಪತ್ನಿ 10ಕ್ಕೂ ಹೆಚ್ಚು ದೂರು ದಾಖಲಿಸಿದ್ದು, 26 ಪುಟಗಳ ಮರಣ ಪತ್ರದಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tue, 10 Dec 202403:43 PM IST
Murdeshwar beach Tragedy: ಕೋಲಾರ ಜಿಲ್ಲೆ ಮುಳುಬಾಗಿಲು ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ನಾಲ್ವರ ಪೈಕಿ ಒಬ್ಬಳ ಮೃತದೇಹ ಪತ್ತೆಯಾಗಿದ್ದು, ಮೂವರಿಗಾಗಿ ಶೋಧ ನಡೆದಿದೆ.
Tue, 10 Dec 202402:15 PM IST
Alvas Virasat 2024: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿ ಇಂದು (ಡಿಸೆಂಬರ್ 10) ಆಳ್ವಾಸ್ ವಿರಾಸತ್ 2024ರ ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲಾ, ಮಹಾಮೇಳಗಳಿಗೆ ಚಾಲನೆ ಸಿಕ್ಕಿದೆ. 30ನೇ ವರ್ಷದ ಆಳ್ವಾಸ್ ವಿರಾಸತ್ ವೈಭವ ಕಣ್ತುಂಬಿಕೊಳ್ಳುವ ಸಂಭ್ರಮ, ಸಡಗರ ಕಂಡುಬಂತು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Tue, 10 Dec 202401:21 PM IST
Kollegal Ex MLA S Jayanna: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶರಾದರು. ಇಂದು (ಡಿಸೆಂಬರ್ 10) ಮಧ್ಯಾಹ್ನ ಹೃದಯಾಘಾತಕ್ಕೆ ಒಳಗಾದ ಜಯಣ್ಣ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
Tue, 10 Dec 202412:30 PM IST
- Bangalore Literature Festival: ಸಾಹಿತ್ಯಾಸಕ್ತರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವ ಇದೇ ಡಿಸೆಂಬರ್ 14 ಮತ್ತು 15ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆಯಲಿದೆ. ಈ ಸಾಹಿತ್ಯೋತ್ಸವದಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಯ ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ.
Tue, 10 Dec 202407:48 AM IST
ದಕ್ಷಿಣ ಕನ್ನಡದ ಕಲ್ಕಡ್ಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಚಟುವಟಿಕೆ ಸದಾ ವಿಭಿನ್ನ. ಈ ಬಾರಿ ಮಕ್ಕಳು ಸಾಹಸಮಯ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದರು.
ವರದಿ: ಹರೀಶ ಮಾಂಬಾಡಿ. ಮಂಗಳೂರು
Tue, 10 Dec 202406:36 AM IST
- ಬೆಂಗಳೂರಿನ ಜನ ನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನ್ಯಾಯಾಧೀಶರನ್ನು ಮಾತನಾಡಿಸುವ ನಾಟಕವಾಡಿ ಮೊಬೈಲ್ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.
Tue, 10 Dec 202405:10 AM IST
- ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 11ರ ಬುಧವಾರ ಕರ್ನಾಟಕದಲ್ಲಿ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ.
Tue, 10 Dec 202404:44 AM IST
- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗಿನ ಸಾರ್ವಜನಿಕ ಬದುಕಿನ ಕ್ಷಣಗಳನ್ನು ಸಿಎಂ ಸಿದ್ದರಾಮಯ್ಯ ಸಹಿತ ಹಲವರು ಹಂಚಿಕೊಂಡಿದ್ದಾರೆ.
Tue, 10 Dec 202403:27 AM IST
- ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ ಡಿಸೆಂಬರ್ 10ರ ಮಂಗಳವಾರ ವಿದ್ಯುತ್ ಸಂಪರ್ಕ ಇರುವುದಿಲ್ಲ.
Tue, 10 Dec 202403:15 AM IST
- Bengaluru Chennai Expressway Updates: ಬೆಂಗಳೂರಿನಿಂದ ಚೆನ್ನೈಗೆ ಸುಸೂತ್ರವಾಗಿ ಪಯಣಿಸಲು ರೂಪಿಸುತ್ತಿರುವ ಎಕ್ಸ್‌ಪ್ರೆಸ್ ವೇ ಕರ್ನಾಟಕದ ಭಾಗ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತ ಕೂಡ ಮಾಡಲಾಗಿದೆ.
Tue, 10 Dec 202402:37 AM IST
- Karnataka Weather Updates: ಕರ್ನಾಟಕದ 12 ಜಿಲ್ಲೆಗಳಲ್ಲಿ ಮಂಗಳವಾರ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.
Tue, 10 Dec 202412:38 AM IST
- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಸೋಮವಾರ ಮಧ್ಯರಾತ್ರಿ ವಿಧಿವಶರಾಗಿದ್ದಾರೆ.