Karnataka News Live December 14, 2024 : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತರೆಂಬ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 14 Dec 202405:27 PM IST
K Leelavathi Baipadithaya Death: ಕಳೆದ ನಾಲ್ಕು ದಶಕಗಳಿಂದಲೂ ಹೆಚ್ಚು ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದ, ಯಕ್ಷಗಾನ ರಂಗದ ಮೊದಲ ಮಹಿಳಾ ವೃತ್ತಿಪರ ಭಾಗವತರೆನಿಸಿದ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ. ಅವರು ಶನಿವಾರ ಸಂಜೆ ಅವರು ಕೆಲಕಾಲದ ವಯೋಸಹಜ ಅನಾರೋಗ್ಯದ ಬಳಿಕ ನಿಧನರಾದರು. ಭಾನುವಾರ ಬೆಳಗ್ಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.
Sat, 14 Dec 202402:02 PM IST
- Circus Culture in Danger: ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು. ಆದರೆ ಈಗ ಸರ್ಕಸ್ ಸಂಸ್ಕೃತಿಯೇ ದುರಂತದ ಅಂಚಿನಲ್ಲಿದೆ ಎಂದು ಬೇಳೂರು ಸುದರ್ಶನ ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ.
Sat, 14 Dec 202401:50 PM IST
- ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂಬ ಸಂಕಲ್ಪದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರ್ನಾಟಕದ ವಸತಿ ರಹಿತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮನೆ ಪಡೆಯಲು ಯಾವ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
Sat, 14 Dec 202412:41 PM IST
ಮಂಕುತಿಮ್ಮನ ಕಗ್ಗ ಎನ್ನುವ ಡಿವಿಜಿ ಅವರ ಕೃತಿಯ ಪ್ರಭಾವ ಅಪರಿಮಿತ. ಅದೇ ರೀತಿ ಅವರ ಪುತ್ರ ಬಿಜಿಎಲ್ ಸ್ವಾಮಿ ಏಳು ದಶಕದ ಹಿಂದೆಯೇ ಕೊಟ್ಟ ಹಸುರುಹೊನ್ನು ಕೃತಿ ಈಗಲೂ ಜನರ ಮನಸಿನಲ್ಲಿ ಹಸುರಾಗಿಯೇ ಉಳಿದಿದೆ. ಅಂತಹ ಕೃತಿಗಳು ಈಗ ಇಂಗ್ಲೀಷ್‌ಗೆ ಅನುವಾದಗೊಂಡು ಬೆಂಗಳೂರಲ್ಲಿ ಬಿಡುಗಡೆಗೊಳ್ಳುವ ಸಂತಸದ ಕ್ಷಣ. ಲೇಖಕರ ಮಾತು, ಕಾರ್ಯಕ್ರಮದ ವಿವರ ಇಲ್ಲಿದೆ.
Sat, 14 Dec 202409:31 AM IST
- ಬೆಂಗಳೂರಿನ ಸರ್ಜಾಪುರ ಕೈಗಾರಿಕಾ ಪ್ರದೇಶವನ್ನು ಸ್ವಿಫ್ಟ್ ಸಿಟಿಯಾಗಿ ರೂಪಿಸುವ ಸಂಬಂಧ ಚರ್ಚೆಗಳು ಶುರುವಾಗಿವೆ. ಇದರಿಂದ ಹೊಸ ರೂಪದ ಉದ್ಯೋಗಗಳು ಬೆಂಗಳೂರಿಗರಿಗೆ ಸಿಗುವ ವಿಶ್ವಾಸವಿದೆ.
Sat, 14 Dec 202408:44 AM IST
- ಕರ್ನಾಟಕ ಲೋಕಸೇವಾ ಆಯೋಗವು ನಡೆಸಲು ಉದ್ದೇಶಿಸಿರುವ ವಿವಿಧ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರವೇಶ ಪರೀಕ್ಷೆ ದಿನಾಂಕದ ಗೊಂದಲ ಬಗೆಹರಿದಿದ್ದು ಡಿಸೆಂಬರ್ 29ರಂದೇ ಪರೀಕ್ಷೆ ನಡೆಯಲಿದೆ.
Sat, 14 Dec 202407:55 AM IST
Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನವೆಂಬರ್ 27 ರಂದು ಆರಂಭವಾಗಿದ್ದ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ಡಿಸೆಂಬರ್ 12 ಗುರುವಾರ ಮುಕ್ತಾಯಗೊಂಡಿದೆ. ಗುರುವಾರ ರಾತ್ರಿ ದೈವಗಳ ನಡಾವಳಿ ಸೇವೆ ಕಾರ್ಯಕ್ರಮ ರಾತ್ರಿ ನೆರವೇರಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
Sat, 14 Dec 202404:47 AM IST
- ಬೆಂಗಳೂರಿನ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ನಿತ್ಯ ಸಂಚರಿಸುವ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲು ಚಿಕ್ಕ ಬಾಣಾವರದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ.
Sat, 14 Dec 202404:06 AM IST
- ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆಯಾಗುವ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್, ಬ್ಯಾನರ್‌ಗಳ ನಿಗ್ರಹಕ್ಕೆ ಬಿಬಿಎಂಪಿ ಕಠಿಣ ಕಾನೂನು ರೂಪಿಸದೇ ಇರುವುದಕ್ಕೆ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಕ್ರಮದ ಕುರಿತು ವರದಿ ನೀಡುವಂತೆಯೂ ತಾಕೀತು ಮಾಡಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
Sat, 14 Dec 202402:00 AM IST
- ಉತ್ಥಾನ ಮಾಸಪತ್ರಿಕೆಯ ಆಯೋಜಿಸಿದ್ದ ವಾರ್ಷಿಕ ಕಥಾಸ್ಪರ್ಧೆಯಲ್ಲಿ ವಿಜೇತರನ್ನು ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ.
Sat, 14 Dec 202401:40 AM IST
Karnataka Weather Today: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಬಹುತೇಕ ಕಡೆ ಮಳೆಯಾಗುತ್ತಿದೆ. ಜೊತೆಗೆ ದಟ್ಟ ಮಂಜು ಆವರಿಸಿದ್ದು ಚಳಿ ಕೂಡಾ ಹೆಚ್ಚಾಗಿದೆ. ವಿಜಯಪುರದಲ್ಲಿ ಶುಕ್ರವಾರ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು ಡಿಸೆಂಬರ್ 17 ರಿಂದ ರಾಜ್ಯಾದ್ಯಂತ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Sat, 14 Dec 202401:30 AM IST
- ಉತ್ತರ ಕನ್ನಡದ ಗಂಗಾವಳಿ ನದಿ ಸೇತುವೆ ಕುಸಿದು ಮೂರು ವರ್ಷವೇ ಆದರೂ ಕೆಲಸ ಮಾತ್ರ ಮುಗಿದಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರಾದ ನಾಗರಾಜ ವೈದ್ಯ ಎಂಬುವವರು ಡ್ರೋಣ್ ಮೂಲಕ ಸೆರೆ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.