Karnataka News Live December 18, 2024 : School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 18, 2024 : School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ

School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ

Karnataka News Live December 18, 2024 : School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ

04:01 PM ISTDec 18, 2024 09:31 PM HT Kannada Desk
  • twitter
  • Share on Facebook
04:01 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 18 Dec 202404:01 PM IST

ಕರ್ನಾಟಕ News Live: School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ

  •  ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಶುಕ್ರವಾರ ಹಾಗೂ ಶನಿವಾರದಂದು ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಡಿಸಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಭಾನುವಾರವೂ ರಜೆ ಇರುವುದರಿಂದ ಮಕ್ಕಳಿಗೆ ಮೂರು ದಿನ ರಜೆ ಸಿಕ್ಕಂತಾಗಲಿದೆ.

Read the full story here

Wed, 18 Dec 202403:04 PM IST

ಕರ್ನಾಟಕ News Live: 2024ರಲ್ಲಿ ಪ್ರಕಟವಾದ ಎಚ್‌ಟಿ ಕಾಡಿನ ಕಥೆಗಳು ಅಂಕಣದಲ್ಲಿ ಗಮನ ಸೆಳೆದ 10 ಬರಹಗಳು; ಕೇರಳ ದುರಂತದಿಂದ ಹುಲಿ ಸಾವಿನವರೆಗೆ

  • 2024 Memories: ಹಿಂದೂಸ್ತಾನ್‌ ಟೈಂಸ್‌ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳು( Forest Tales) ಎನ್ನುವ ಅಂಕಣದಲ್ಲಿ 2024ರಲ್ಲಿ ಗಮನ ಸೆಳೆದ 10 ಬರಹಗಳ ವಿವರ ಇಲ್ಲಿದೆ.
Read the full story here

Wed, 18 Dec 202401:23 PM IST

ಕರ್ನಾಟಕ News Live: Mandya Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಮಂಡ್ಯ ಜಿಲ್ಲೆಯಾದ್ಯಂತ ಮೂರು ದಿನ ಉಚಿತ ಸಾರಿಗೆ ವ್ಯವಸ್ಥೆ

  • ಮಂಡ್ಯದಲ್ಲಿ ಶುಕ್ರವಾರದಿಂದ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಮಂಡ್ಯ ಜಿಲ್ಲಾದ್ಯಂತ ಕನ್ನಡಾಭಿಮಾನಿಗಳನ್ನು ಕರೆ ತರಲು ಉಚಿತ ಸಾರಿಗೆ ಬಸ್‌ ಸೇವೆ ವ್ಯವಸ್ಥೆ ಮಾಡಲಾಗಿದೆ.
Read the full story here

Wed, 18 Dec 202401:02 PM IST

ಕರ್ನಾಟಕ News Live: Bangalore Power Cut: ಬೆಂಗಳೂರಿನಲ್ಲಿ 2 ದಿನ ವಿದ್ಯುತ್‌ ಪೂರೈಕೆಯಲ್ಲಿ ಅಡಚಣೆ, ಯಾವ ಬಡಾವಣೆಯಲ್ಲಿ ಇರೋಲ್ಲ ಕರೆಂಟ್‌

  • Bangalore Power Cut Updates: ಬೆಂಗಳೂರು ಪ್ರಮುಖ ಬಡಾವಣೆಗಳಲ್ಲಿ 2024 ರ ಡಿಸೆಂಬರ್19‌ರಿಂದ ಎರಡು ದಿನಗಳ ಕಾಲ ವಿದ್ಯುತ್‌ ಸರಬರಾಜಿನಲ್ಲ ವ್ಯತ್ಯಯ ಆಗಲಿದೆ.
  • ವರದಿ:ಎಚ್‌.ಮಾರುತಿ.ಬೆಂಗಳೂರು
Read the full story here

Wed, 18 Dec 202411:19 AM IST

ಕರ್ನಾಟಕ News Live: ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್‌, ಪ್ರವೃತ್ತಿಯಲ್ಲಿ ಜೀವವೈವಿಧ್ಯದ ಮಾಹಿತಿ ಕಣಜ; ಬೆಂಗಳೂರಿನ ಐಐಎಸ್ಸಿಯಲ್ಲಿದ್ದ ಪೊನ್ನಣ್ಣರ ಪರಿಸರ ಸೇವೆ

  • ಕೊಡಗು ಮೂಲದವರಾದರೂ ಸೇನೆಯಲ್ಲಿ ನಾನಾ ಕಡೆ ಕೆಲಸ ಮಾಡಿ ನಂತರ ಬೆಂಗಳೂರಿನ ಐಐಎಸ್ಸಿಗೆ ಸೆಕ್ಯುರಿಟಿ ಸಿಬ್ಬಂದಿಯಾಗಿ ಬಂದ ಪೊನ್ನಣ್ಣ ಅವರ ಪರಿಸರ ಜ್ಞಾನ ಅನಾವರಣಗೊಳ್ಳುವ ಅವಧಿ. ಈಗಲೂ ಅವರ ಅಪರಿಮಿತ ಜ್ಞಾನ, ಬದ್ದತೆ ಬಗ್ಗೆಯೇ ಗೌರವ. ಅವರ ಕುರಿತ ಮಾಹಿತಿ ಇಲ್ಲಿದೆ.

Read the full story here

Wed, 18 Dec 202408:23 AM IST

ಕರ್ನಾಟಕ News Live: SBI Recruitment 2024-25: ಎಸ್‌ಬಿಐನಲ್ಲಿ ಹೊಸ ವರ್ಷದಲ್ಲಿ ನೇಮಕ, 13,735 ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವೇತನ 64480 ರೂ.

  • SBI Recruitment 2024-25: ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಆರಂಭಗೊಂಡಿದೆ.
Read the full story here

Wed, 18 Dec 202406:57 AM IST

ಕರ್ನಾಟಕ News Live: ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂಗೆ ಅರಣ್ಯಾಧಿಕಾರಿಗಳ ದಾಳಿ, ಶ್ರೀಗಂಧ ಅಕ್ರಮ ದಾಸ್ತಾನು ಕೇಸ್‌ನಲ್ಲಿ ಪರವಾನಗಿ ನಷ್ಟ

  • Cauvery Emporium: ಸರ್ಕಾರಿ ಸ್ವಾಮ್ಯದ ಬೆಂಗಳೂರು ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿಗಳ ದಾಳಿ ನಡೆಸಿ, ಶ್ರೀಗಂಧ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಈ ಕೇಸ್‌ನಲ್ಲಿ ಕಾವೇರಿ ಎಂಪೋರಿಯಂಗೆ ಶ್ರೀಗಂಧ ದಾಸ್ತಾನು ಪರವಾನಗಿ ನಷ್ಟವಾಗಿದೆ.

Read the full story here

Wed, 18 Dec 202406:17 AM IST

ಕರ್ನಾಟಕ News Live: ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ;ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ, ವಿಡಿಯೋ ವೈರಲ್‌

  • Mangaluru Crime: ಸಾಲ ಮರುಪಾವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದು, ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಸಂತ್ರಸ್ತನ ವಿಡಿಯೋ ವೈರಲ್ ಆಗಿದ್ದು, ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ ವ್ಯಕ್ತವಾಗಿದೆ.

     

Read the full story here

Wed, 18 Dec 202405:22 AM IST

ಕರ್ನಾಟಕ News Live: ಬೆಂಗಳೂರು ಹೊಸ ವರ್ಷಾಚರಣೆಗೆ ಡ್ರಗ್ಸ್‌ ಮಾರಾಟ; 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 190 ಕೆಜಿ ಗಾಂಜಾ ವಶ, 11 ಆರೋಪಿಗಳ ಬಂಧನ

  • ಬೆಂಗಳೂರು ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಈ ನಡುವೆ, ಹೊಸ ವರ್ಷಾಚರಣೆಗೆ ಡ್ರಗ್ಸ್‌ ಮಾರಾಟ ಜೋರಾಗಿದ್ದು, ಪೊಲೀಸರು ಕೂಡ ಜಾಗೃತರಾಗಿ ಡ್ರಗ್ಸ್‌ ದಂಧೆ ನಿಗ್ರಹ ಕಾರ್ಯಾಚರಣೆ ನಡೆಸಿದ್ದಾರೆ. 1.26 ಕೋಟಿ ರೂ. ಮೌಲ್ಯದ 190 ಕೆಜಿ ಗಾಂಜಾ ವಶ, 11 ಆರೋಪಿಗಳನ್ನು ಬಂಧಿಸಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Wed, 18 Dec 202404:58 AM IST

ಕರ್ನಾಟಕ News Live: ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ

  • ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನವಾಗಿದೆ. ಬಂಧಿತರಿಂದ 51 ಸ್ಮಾರ್ಟ್‌ಫೋನ್‌ ಸೇರಿ ಹಲವು ವಸ್ತುಗಳನ್ನು ವಶಪಡಿಸಲಾಗಿದೆ. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಮುಖ್ಯ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ. ಪ್ರಕರಣದ ವಿವರ ಇಲ್ಲಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Wed, 18 Dec 202404:20 AM IST

ಕರ್ನಾಟಕ News Live: ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌; ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

  • Karnataka High Court: ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌ನಲ್ಲಿ ರಿಪಬ್ಲಿಕ್ ಕನ್ನಡ ಟಿವಿ ಚಾನೆಲ್‌ನ ಕಾರ್ಯಕಾರಿ ನಿರ್ದೇಶಕ ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. (ವರದಿ - ಎಚ್.‌ ಮಾರುತಿ, ಬೆಂಗಳೂರು)

Read the full story here

Wed, 18 Dec 202403:55 AM IST

ಕರ್ನಾಟಕ News Live: ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ, ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಹೃದಯವಿದ್ರಾವಕ ಘಟನೆ

  • Kalaburagi Hospital Tragedy: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಕಹಿನೆನಪು ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಕಲಬುರಗಿಯಿಂದ ಮನಕಲಕುವ ಘಟನೆ ವರದಿಯಾಗಿದೆ. ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟ ಬಳಿಕ ಹಸುಗೂಸು ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹೃದಯವಿದ್ರಾವಕ ಘಟನೆ ಗಮನಸೆಳೆದಿದೆ.

Read the full story here

Wed, 18 Dec 202402:36 AM IST

ಕರ್ನಾಟಕ News Live: ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕರಿಸಿದೆ ಕರ್ನಾಟಕ ವಿಧಾನಸಭೆ

  • Karnataka Assembly Session: ಆದಾಯ ಹೆಚ್ಚಳದ ಕಡೆಗೆ ಗಮನಹರಿಸಿರುವ ಕರ್ನಾಟಕ ಸರ್ಕಾರ ಮಂಗಳವಾರ (ಡಿಸೆಂಬರ್ 17) ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಬಹುದು.

Read the full story here

Wed, 18 Dec 202402:30 AM IST

ಕರ್ನಾಟಕ News Live: ಮಹಾರಾಷ್ಟ್ರದ ಸೊಲ್ಲಾಪುರ ತೊಗರಿ ಖರೀದಿ ಬೆಲೆಯಲ್ಲಿ ಭಾರೀ ಕುಸಿತ; ವಿಜಯಪುರ, ಕಲಬುರಗಿ ಭಾಗದ ರೈತರಲ್ಲಿ ಆತಂಕ, ದರ ಎಷ್ಟಿದೆ

  • ಕಲಬುರಗಿ ಹಾಗೂ ವಿಜಯಪುರ ರೈತರು ಕಷ್ಟದಲ್ಲಿಯೇ ತೊಗರಿ ಬೆಳೆದು ಇಳುವರಿ ಪಡೆದರೂ ದರವೂ ಸರಿಯಾಗಿ ಸಿಗದೇ ತೊಂದರೆಗೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಮಾರುಕಟ್ಟೆಯಲ್ಲಿ ತೊಗರಿ ಖರೀದಿ ಬೆಲೆ ಕುಸಿದಿದೆ.
Read the full story here

Wed, 18 Dec 202402:00 AM IST

ಕರ್ನಾಟಕ News Live: ಬೆಳಗಾವಿ ಹಿಡಕಲ್‌ ಜಲಾಶಯ ಪ್ರದೇಶದಲ್ಲಿ ಕೆಆರ್‌ಎಸ್‌ ಮಾದರಿ ಅಭಿವೃದ್ದಿ: ಬರಲಿವೆ ಮೊಸಳೆ ಪಾರ್ಕ್‌, ಬಿದಿರು ಉದ್ಯಾನ

  • ಬೆಳಗಾವಿ ಜಿಲ್ಲೆಯ ಜಲಾಶಯವಾದ ಹಿಡಕಲ್‌ ಭಾಗದಲ್ಲೂ ಕೆಆರ್‌ಎಸ್‌ ಮಾದರಿಯಲ್ಲಿಯೇ ವಿಶಾಲ ಉದ್ಯಾನವನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ರೂಪಿಸುವ ಚರ್ಚೆಗಳು ಗಂಭೀರವಾಗಿಯೇ ನಡೆದಿವೆ. 
Read the full story here

Wed, 18 Dec 202401:30 AM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರ ಶೌಚಾಲಯ ಸರಿಯಾಗಿ ಮಾಡ್ಸ್‌ರೀ ಮಹೇಶ್‌ ಜೋಷಿ; ಲೇಖಕಿಯರ ಬೇಡಿಕೆಗೆ ಭಾರೀ ಬೆಂಬಲ

  • ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಆಹಾರದ ಬೇಡಿಕೆ ನಡುವೆ ಮಹಿಳೆಯರ ಶೌಚಾಲಯದ ಕಡೆಗೆ ಗಮನ ನೀಡಬೇಕು ಎನ್ನುವ ಬೇಡಿಕೆಯೂ ಲೇಖಕಿಯರ ಕಡೆಯಿಂದ ಕೇಳಿ ಬಂದಿದೆ.
Read the full story here

Wed, 18 Dec 202401:30 AM IST

ಕರ್ನಾಟಕ News Live: KSRTC Strike: ಡಿ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಸಾರಿಗೆ ನಿಗಮ ನೌಕರರು, ಬಾಕಿಯಿದೆ ಶಕ್ತಿ ಯೋಜನೆಯ 1,800 ಕೋಟಿ

  • ಒಂದು ಕಡೆ ಸರ್ಕಾರ ಶಕ್ತಿ ಯೋಜನೆಯ ಬಾಕಿ ನೀಡುತ್ತಿಲ್ಲ. ಮತ್ತೊಂದು ಕಡೆ ಬಸ್‌ ಪ್ರಯಾಣ ದರವನ್ನೂ ಏರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದ ಮತ್ತೊಂದು ಕಡೆ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ನೌಕರರಿಗೂ ಸಂಬಳ ನೀಡಲು ಸಾರಿಗೆ ನಿಗಮಗಳು ಹೆಣಗಾಡುತ್ತಿವೆ.
Read the full story here

Wed, 18 Dec 202401:26 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ತತ್ತರಿಸಿದ ಜನ, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು

  • Karnataka Weather: ಕರ್ನಾಟಕದಲ್ಲಿಇಂದು (ಡಿಸೆಂಬರ್ 18) ಒಣಹವೆ ಇರಲಿದ್ದು, ಚಳಿಗಾಲದ ಚಳಿ ಎಲ್ಲೆಡೆ ಅನುಭವಕ್ಕೆ ಬರಲಿದೆ. ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ ತತ್ತರಿಸಿದ್ದು, ಇಂದು ಕೂಡ ವಿಪರೀತ ಶೀತದ ಅಲೆಗಳು ಇರಲಿವೆ. ಇನ್ನು ಬೆಂಗಳೂರಲ್ಲಿ ಇಂದು ಕೂಡ ರಾತ್ರಿ ಮೈನಡುಕದ ಚಳಿ ಇರಲಿದ್ದು, ಮುಂಜಾನೆ ಮಂಜು ಕಾಡಲಿದೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.

Read the full story here

Wed, 18 Dec 202411:30 PM IST

ಕರ್ನಾಟಕ News Live: ಕರ್ನಾಟಕದ ಅತಿ ದೊಡ್ಡ ಡ್ರಗ್ಸ್‌ ಬೇಟೆ, 24 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಕಿಂಗ್‌ ಪಿನ್‌ ಮಹಿಳೆ ನಾಪತ್ತೆ

  • ಈ ಡ್ರಗ್ಸ್‌ ಪ್ರಕರಣದಲ್ಲಿ ಜ್ಯೂಲಿಯೆಟ್‌ ಎಂಬ ಮಹಿಳೆ ನಾಪತ್ತೆಯಾಗಿದ್ದಾಳೆ. ಈಕೆಯೇ ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿ ರೋಸ್‌ ಲಿನ್‌ಗೆ ಸರಬರಾಜು ಮಾಡುತ್ತಿದ್ದಳು. ಈಕೆ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter