Karnataka News Live December 26, 2024 : ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 26 Dec 202405:54 PM IST
- Manmohan Singh death: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಕರ್ನಾಟಕ ಸರ್ಕಾರ 7 ದಿನಗಳ ಶೋಕಾಚರಣೆ, ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ.
Thu, 26 Dec 202412:21 PM IST
- ಆಂಬ್ಯುಲೆನ್ಸ್ ಸೇರಿದಂತೆ ಸಾಕಷ್ಟು ವಾಹನಗಳು ಸತ್ತೆಯ ಉರುಳಿಗೆ ಸಿಲುಕಿ ಗಂಟೆಗಟ್ಟಲೆ ಪರದಾಡುವಂತಹ ಘಟನೆಗಳು ದಿನನಿತ್ಯ ನಡೆಯತ್ತಿವೆ. ಈಗ ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ. ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
Thu, 26 Dec 202411:15 AM IST
- ತ್ರಿವೇಣಿ ಸಂಗಮದಲ್ಲಿ ಫೆಬ್ರುವರಿ 10, 11, 12 ರಂದು ಕುಂಭಮೇಳ ಆಯೋಜಿಸುವ ಕುರಿತು ವಿವಿಧ ಮಠಾಧೀಶರು ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಸರ್ಕಾರವೂ ಅಗತ್ಯ ಸಿದ್ಧತೆಗಾಗಿ ಕೈಜೋಡಿಸಿದೆ.
Thu, 26 Dec 202410:44 AM IST
- Mysore News: ಮೈಸೂರಿನ ಪ್ರಿನ್ಸೆನ್ಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರು ಇಟ್ಟರೆ ತಪ್ಪೇನು ಎಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ.
Thu, 26 Dec 202409:05 AM IST
Belagavi Banner Row: ಕಾಂಗ್ರೆಸ್ ಪಕ್ಷದ ವರಿಷ್ಠರು ಬಹಳ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಆಯೋಜಿಸಿದ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಈಗ ವಿವಾದಕ್ಕೀಡಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಹೀಗಾಗಿ, ಪಾಕಿಸ್ತಾನದ ಪರ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದೆ.
Thu, 26 Dec 202408:25 AM IST
- ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಹಾಲಿನ ಬೆಲೆಯನ್ನು ಏರಿಕೆ ಮಾಡುವ ಮುನ್ಸೂಚನೆಯನ್ನು ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ ನೀಡಿದ್ದಾರೆ.
Thu, 26 Dec 202408:00 AM IST
- ಹುಬ್ಬಳ್ಳಿ ನಗರದಲ್ಲಿ ನಾಲ್ಕು ದಿನದ ಹಿಂದೆ ಸಿಲೆಂಡರ್ ಸ್ಪೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Thu, 26 Dec 202407:16 AM IST
- ಬೆಳಗಾವಿಯಲ್ಲಿ ಕಾಂಗ್ರೆಸ್ ವಿಶೇಷ ಅಧಿವೇಶನ ಶುರುವಾಗಿದೆ. ಇದರ ಅಂಗವಾಗಿ ಬೆಳಗಾವಿ ನಗರದಲ್ಲಿ ಅಸ್ಮಿತೆ ವ್ಯಾಪಾರ ಮೇಳವನ್ನು ಆಯೋಜಿಸಲಾಗಿದೆ. ಇದರ ವಿವರ ಇಲ್ಲಿದೆ
Thu, 26 Dec 202406:05 AM IST
- Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆ ಮಂಗಳೂರಿನಿಂದ ಬಂಟ್ವಾಳಕ್ಕೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ.
- ವರದಿ: ಹರೀಶ ಮಾಂಬಾಡಿ.ಮಂಗಳೂರು
Thu, 26 Dec 202403:23 AM IST
- Belagavi Congress Session: ಬೆಳಗಾವಿಯಲ್ಲಿ ನೂರು ವರ್ಷದ ಹಿಂದೆ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಸವಿನೆನಪಿನಲ್ಲಿ ಈಗ ಎರಡು ದಿನಗಳ ಅಧಿವೇಶನ, ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರದಿಂದ ಚಟುವಟಿಕೆಗಳು ಶುರುವಾಗಲಿವೆ.
Thu, 26 Dec 202401:41 AM IST
Chitra Santhe 2025: ಬೆಂಗಳೂರು ಚಿತ್ರಸಂತೆ ಮತ್ತೆ ಬಂದಿದೆ. ಈ ಸಲ ಮೊದಲ ಭಾನುವಾರ ಜನವರಿ 5. ಆ ದಿನ ಚಿತ್ರಕಲಾ ಪರಿಷತ್ ಮತ್ತು ಕುಮಾರಕೃಪಾ ರಸ್ತೆ ಉದ್ದಕ್ಕೂ ಹಬ್ಬದ ಸಂಭ್ರಮ, ಸಡಗರ, ದಾರಿಯುದ್ದಕ್ಕೂ ಚಿತ್ರಗಳದ್ದೇ ಕಾರುಬಾರು. ಹಾಗಾಗಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ. ಏನೇನಿರುತ್ತೆ ಎಂಬ ವಿವರ ಇಲ್ಲಿದೆ ನೋಡಿ.
Thu, 26 Dec 202401:30 AM IST
- Karnataka Weather: ಕರ್ನಾಟಕದ ಮಲೆನಾಡು ಭಾಗದಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ಗುರುವಾರ ಹಾಗೂ ಶುಕ್ರವಾರ ಈ ಭಾಗದಲ್ಲಿ ಉಷ್ಣಾಂಶದಲ್ಲಿ ಕುಸಿತ ಕಂಡು ಬರಲಿದೆ.
Thu, 26 Dec 202401:19 AM IST
Opinion: ಸರ್ಕಾರಿ ವ್ಯವಸ್ಥೆಗಳೇ ಹಾಗೆ. ಬಹಳ ಜಡಹಿಡಿದಿರುವಂಥ ವ್ಯವಸ್ಥೆ. ಬಡಿದೆಬ್ಬಿಸಬೇಕಾದರೆ ಒಂದಿಷ್ಟು ಧೈರ್ಯ ಮೈಗೂಡಿಸಿ ಕೊಳ್ಳಬೇಕು. ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಪತ್ರಕರ್ತ ರಾಜೀವ ಹೆಗಡೆ.