Karnataka News Live December 27, 2024 : ಕ್ಯಾಬ್‌ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 27, 2024 : ಕ್ಯಾಬ್‌ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು

ಕ್ಯಾಬ್‌ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು

Karnataka News Live December 27, 2024 : ಕ್ಯಾಬ್‌ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು

03:40 PM ISTDec 27, 2024 09:10 PM HT Kannada Desk
  • twitter
  • Share on Facebook
03:40 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 27 Dec 202403:40 PM IST

ಕರ್ನಾಟಕ News Live: ಕ್ಯಾಬ್‌ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು

  • Bengaluru Viral News: ಬೆಂಗಳೂರಿನಲ್ಲಿ ಐಐಟಿ ಪದವೀಧರ ಮಿಲಿಂದ್ ಚಂದ್ವಾನಿಗೆ ವಿನೂತನ ಅನುಭವವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಬಂದಾಗ ಚಾಲಕ ನಿದ್ದೆಗಣ್ಣಿನಲ್ಲಿದ್ದನು. ಈ ಸಮಯದಲ್ಲಿ ತಾನೇ ಕಾರು ಚಲಾಯಿಸಿಕೊಂಡು ಬರಬೇಕಾಯಿತು ಎಂದು ಹೇಳಿದ್ದಾರೆ. ಈ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆಗಳು ಬಂದಿವೆ.

Read the full story here

Fri, 27 Dec 202402:11 PM IST

ಕರ್ನಾಟಕ News Live: ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ, ಡಿ 31ಕ್ಕೆ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

  • New year in Bengaluru: ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜಾಗಿದೆ. ಎಂಜಿ ರಸ್ತೆ, ಬಿಗ್ರೇಡ್ ರಸ್ತೆಗಳಲ್ಲಿ ಇದಕ್ಕೆ ತಯಾರಿ ನಡೆದಿದೆ. ಹೊಸ ವರ್ಷಾಚರಣೆ ಖುಷಿಯಲ್ಲಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ ಕೊಟ್ಟಿದೆ ಬಿಎಂಆರ್‌ಸಿಎಲ್‌. ಡಿಸೆಂಬರ್ 31 ರಂದು ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ ಆಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

Read the full story here

Fri, 27 Dec 202401:35 PM IST

ಕರ್ನಾಟಕ News Live: ಹೊಸ ವರ್ಷಾಚರಣೆಗೆ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ, 8 ಆರೋಪಿಗಳ ಬಂಧನ

  • New Year in Bangalore: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ರೈಲಿನ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ  8 ಆರೋಪಿಗಳ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ:  ಎಚ್.ಮಾರುತಿ, ಬೆಂಗಳೂರು)

Read the full story here

Fri, 27 Dec 202401:32 PM IST

ಕರ್ನಾಟಕ News Live: Special Train: ನೈರುತ್ಯ ರೈಲ್ವೆಯಿಂದ ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಆರಂಭ; ರೈಲು ಸಂಖ್ಯೆ, ಸಮಯ ತಿಳಿಯಿರಿ

  • Christmas Special train: ಭಾರತೀಯ ರೈಲ್ವೆಯು ಕ್ರಿಸ್‌ಮಸ್‌ ಹಬ್ಬದ ಬಳಿಕ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳನ್ನು ಬಿಟ್ಟಿದೆ. ನೈರುತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಆರಂಭಿಸಿರುವುದಾಗಿ ತಿಳಿಸಿದೆ.
Read the full story here

Fri, 27 Dec 202412:18 PM IST

ಕರ್ನಾಟಕ News Live: ಹುಬ್ಬಳ್ಳಿ ಎಲ್‌ಪಿಜಿ ಸ್ಪೋಟ; ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ

  • Hubballi LPG Blast: ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

Read the full story here

Fri, 27 Dec 202410:31 AM IST

ಕರ್ನಾಟಕ News Live: ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ

  • Manmohan Singh Death: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಮೈಸೂರು ವಿವಿ‌ ರಿಜಿಸ್ಟ್ರಾರ್ ಎನ್ ನಾಗರಾಜ್ ಮಾಹಿತಿ ನೀಡಿದ್ದಾರೆ.

Read the full story here

Fri, 27 Dec 202408:45 AM IST

ಕರ್ನಾಟಕ News Live: ಅಕ್ರಮ ಸಂಬಂಧ ಶಂಕೆ: ಅರೆಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಹೊಡೆದಿದ್ದ ವ್ಯಕ್ತಿ ಸಾವು, 9 ಮಂದಿ ಬಂಧನ

  • ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನಲ್ಲಿ ಅಕ್ರಮ ಸಂಬಂಧದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದೂ ಅಲ್ಲದೇ ಚಪ್ಪಲಿ ಹಾರ ಹಾಕಿದ್ದು, ಆತ ಮೃತಪಟ್ಟಿರುವ ಘಟನೆ ನಡೆದಿದೆ.
Read the full story here

Fri, 27 Dec 202407:01 AM IST

ಕರ್ನಾಟಕ News Live: HSRP Number Plate: ವಾಹನಗಳ ಎಚ್‌ಎಸ್‌ಆರ್‌ಪಿ ನೋಂದಣಿಗೆ ಹೊಸ ವರ್ಷದ ಮೊದಲ ತಿಂಗಳವರೆಗೂ ಉಂಟು ಗಡುವು; ಜನವರಿ 31ರವರೆಗೂ ವಿಸ್ತರಣೆ

  • ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ ಪಿ ನೋಂದಣಿಗೆ ಕಡ್ಡಾಯಗೊಳಿಸಿದ್ದರೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಗಡುವನ್ನು ಜನವರಿ 31 ರವರೆಗೂ ವಿಸ್ತರಿಸಲಾಗಿದೆ.
Read the full story here

Fri, 27 Dec 202404:54 AM IST

ಕರ್ನಾಟಕ News Live: Manmohan Singh Karnataka Relation: ಮನಮೋಹನಸಿಂಗ್‌ ಕರ್ನಾಟಕ ನಂಟು: ಹುಬ್ಬಳ್ಳಿಯಲ್ಲಿ ಸಂಬಂಧ, ಮೈಸೂರಲ್ಲಿ ಗೆಳೆತನ, ಬೆಂಗಳೂರು ಪ್ರೀತಿ

  • Manmohan Singh Karnataka Relation: ಅಗಲಿದ ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ಸ್ನೇಹಿತನ ಒಡನಾಟದಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷ ಅನುದಾನ ನೀಡಿದ್ದರು. ಇನ್ಫೋಸಿಸ್‌ ಮೈಸೂರು ಘಟಕ ಉದ್ಘಾಟನೆಗೂ ಬಂದಿದ್ದರು.

Read the full story here

Fri, 27 Dec 202401:46 AM IST

ಕರ್ನಾಟಕ News Live: ಮನಮೋಹನ್‌ ಸಿಂಗ್‌ ನಿಧನ; ಕರ್ನಾಟಕದಲ್ಲಿ ಇಂದು ಶಾಲಾ, ಕಾಲೇಜುಗಳಿಗೂ ರಜೆ; ವರ್ಷಾಂತ್ಯ ರಜೆ ವಿಸ್ತರಣೆಯಿಂದ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ರಶ್

  • ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರವೂ ಸರ್ಕಾರಿ ರಜೆ ಘೋಷಣೆಯಾಗಿದೆ. ಈಗಾಗಲೇ ವರ್ಷಾಂತ್ಯ, ವಾರಾಂತ್ಯದ ರಜೆ ಮೂಡ್‌ನಲ್ಲಿದ್ದವರಿಗೆ ಹೆಚ್ಚುವರಿ ರಜೆ ಸಿಗಲಿದೆ. ಇದರಿಂದ ಪ್ರವಾಸಿ ತಾಣಗಳು ಮತ್ತಷ್ಟು ಪ್ರವಾಸಿಗರಿಂದ ಭರ್ತಿಯಾಗಬಹುದು.

Read the full story here

Fri, 27 Dec 202401:21 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ; ಇಂದು ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

  • ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ರಾಜಧಾನಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಡಿಸೆಂಬರ್ 27ರ ಶುಕ್ರವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಕರ್ನಾಟಕ ಹವಾಮಾನ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter