Karnataka News Live December 30, 2024 : ನಟ ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳಿಗೆ ಮತ್ತೆ ಸಂಕಷ್ಟ; ಜಾಮೀನು ರದ್ದುಗೊಳಿಸೋಕೆ ಸುಪ್ರೀಂ ಮೊರೆ, ವಕೀಲರ ನೇಮಕ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 30 Dec 202405:46 PM IST
- Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಜಾಮೀನು ಅವರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ ನೀಡಿದೆ. (ವರದಿ ಎಚ್. ಮಾರುತಿ)
Mon, 30 Dec 202403:06 PM IST
- 2024ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಜತೆಗೆ ಇತರೆ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.
Mon, 30 Dec 202402:43 PM IST
ಕರ್ನಾಟಕದಲ್ಲಿ ಈಗಲೂ ಸಕ್ರಿಯರಾಗಿರುವ ನಕ್ಸಲೀಯರು ಶರಣಾಗುವುದಾದರೆ ಅವರಿಗೆ ಪ್ಯಾಕೇಜ್ ಜತೆಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Mon, 30 Dec 202412:48 PM IST
- Indian Raiways: ಭಾರತೀಯ ರೈಲ್ವೆ ಮೈಸೂರು ವಿಭಾಗದಿಂದ ಹೊರಡುವ ಹಾಗೂ ಬರುವ ಕೆಲವು ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಜನವರಿ ಒಂದರಿಂದ ಇದು ಜಾರಿಯಾಗಲಿದೆ.
Mon, 30 Dec 202411:53 AM IST
- ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸ್ವಾಮೀಜಿಗಳು ನೀಡಿರುವ ಮದುವೆ, ಮಕ್ಕಳು, ಕುಟುಂಬ ವಿಸ್ತರಣೆ ಕುರಿತಾದ ಅಭಿಪ್ರಾಯಗಳ ಗಟ್ಟಿ ಚರ್ಚೆಯೇ ನಡೆದಿದೆ. ಇದಕ್ಕೆ ಬರಹಗಾರ, ಪತ್ರಕರ್ತ ರಾಜೀವ್ ಹೆಗಡೆ ಲೇಖನದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
Mon, 30 Dec 202409:07 AM IST
- ಹೊಸ ವರ್ಷದ ಸಂಭ್ರಮಾಚರಣೆಗೆ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಗಳಲ್ಲಿ ಬ್ರೇಕ್ ಬಿದ್ದಿದೆ. ಆದರೆ ಶಿವಮೊಗ್ಗ ಜೋಗದಲ್ಲಿ ಮೂರು ತಿಂಗಳು ಸಾರ್ವಜನಿಕ ಭೇಟಿಗೆ ನಿಷೇಧ ಹೇರಿದ್ದರೂ ಹೊಸ ವರ್ಷದ ಭೇಟಿಗೆ ಅವಕಾಶ ನೀಡಲಾಗಿದೆ.
Mon, 30 Dec 202407:49 AM IST
- ಹೊಸ ವರ್ಷ 2025ರ ಮೊದಲ ದಿನದಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಭಕ್ತರು ಬರುವುದರಿಂದ ಅಂದು ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸೂಚನೆ ನೀಡಲಾಗಿದೆ.
Mon, 30 Dec 202406:17 AM IST
- ಮೈಸೂರು ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪಸಿಂಹ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾನು ಆರ್‌ಎಸ್‌ಎಸ್ ನಿಂದ ಬಂದವನು ಎಂದು ಹೇಳಿಕೊಂಡಿದ್ದಾರೆ.
Mon, 30 Dec 202405:36 AM IST
- ಹುಬ್ಬಳ್ಳಿಯಲ್ಲಿ ಕಳೆದ ವಾರ ಆಕಸ್ಮಿಕವಾಗಿ ಸಿಲೆಂಡರ್ ಸೋರಿ ನಂತರ ಸ್ಪೋಟಗೊಂಡಿದ್ದ ಪ್ರಕರಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ ಆರಕ್ಕೆ ಏರಿಕೆ ಕಂಡಿದೆ.
Mon, 30 Dec 202403:42 AM IST
- ಕಲಬುರಗಿಯ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜುಕಪನೂರು ವಿರುದ್ದ ಪ್ರಕರಣ ದಾಖಲಾಗಿದೆ. ಬಿಜೆಪಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ನಡೆಸಲು ಅಣಿಯಾಗಿದೆ.
Mon, 30 Dec 202402:27 AM IST
- ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಪಡೆದು ವಂಚಿಸಿದ್ದ ಆರೋಪಿ ಶ್ವೇತಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇತರೆ ಅಪರಾಧ ಸುದ್ದಿಗಳನ್ನು ನೋಡುವುದಾದರೆ ಒಂಟಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Mon, 30 Dec 202402:09 AM IST
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.31ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ಹಿಂಪಡೆದಿದೆ. ಸಂಕ್ರಾತಿ ಬಳಿಕ ಅಂದರೆ, ಜನವರಿ 15ರಂದು ಮತ್ತೊಂದು ಸುತ್ತಿನ ಸಭೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಸಮಿತಿಗೆ ಭರವಸೆ ನೀಡಿದ್ದಾರೆ.
Mon, 30 Dec 202401:39 AM IST
- ರಾಜ್ಯದಲ್ಲಿ ಡಿಸೆಂಬರ್ 30ರ ಸೋಮವಾರ ಚಳಿಯ ಜೊತೆಗೆ ಮಂಜಿನ ವಾತಾವರಣ ಮುಂದುವರಿದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ಸ್ ದಾಖಲಾಗಿದೆ. ಮುಂದಿನ 5 ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
Mon, 30 Dec 202401:10 AM IST
Cyber Crime Helpline: ಸೈಬರ್ ವಂಚನೆ, ಸೈಬರ್ ಕ್ರೈಂ ಹೆಚ್ಚುತ್ತಿರುವ ಹೊತ್ತಲ್ಲಿ ಬೆಂಗಳೂರಲ್ಲಿ 9 ಹೆಲ್ಪ್‌ಲೈನ್ ಇದ್ರೂ ಕೆಲಸ ಮಾಡ್ತಾ ಇರೋದು ಎರಡು ಮಾತ್ರ. ಅದೂ ಜನರಿಗೆ ಸಮಾಧಾನ ನೀಡುವಂತಿಲ್ಲ. ಪೊಲೀಸರ ಬಳಿ ಸ್ಪಷ್ಟೀಕರಣ ಇದ್ರೂ, 2024ರಲ್ಲಿ ಕನ್ನಡಿಗರು ಕಳೆದುಕೊಂಡದ್ದು 109 ಕೋಟಿ ರೂಪಾಯಿ!