ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live December 31, 2024 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 31 Dec 202404:30 PM IST
ಕರ್ನಾಟಕ News Live: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ
- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಪ್ರಗತಿಪರ ಹೋರಾಟಗಾರ, ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ನಿಧನರಾಗಿದ್ದಾರೆ. ನಾಳೆ (ಜನವರಿ 1) ನಾಗವಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Tue, 31 Dec 202403:48 PM IST
ಕರ್ನಾಟಕ News Live: ಕ್ಯಾನ್ಸರ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ, ಮಣಿಪಾಲ್ ಆಸ್ಪತ್ರೆಯಿಂದ ಬ್ರೇಕಿಂಗ್ ಬ್ಯಾರಿಯರ್ಸ್, ಬಿಲ್ಡಿಂಗ್ ಅವೇರ್‌ನೆಸ್ ಅಭಿಯಾನ
- ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಬ್ರೇಕಿಂಗ್ ಬ್ಯಾರಿಯರ್ಸ್ ಬಿಲ್ಡಿಂಗ್ ಅವೇರ್‌ನೆಸ್‘ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಮೂಲಕ ಕ್ಯಾನ್ಸರ್ ರೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಮಣಿಪಾಲ್ ಆಸ್ಪತ್ರೆ ಕ್ಯಾನ್ಸರ್ ತಜ್ಞರು ಭಾಗವಹಿಸಿದ್ದರು.
Tue, 31 Dec 202409:01 AM IST
ಕರ್ನಾಟಕ News Live: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ, ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ಡ್ರಗ್ಸ್ ಶೇಖರಣೆ; 2.70 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
- ಬೆಂಗಳೂರಿನಲ್ಲಿ ಐದು ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಭಾರೀ ಮೌಲ್ಯದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
- ವರದಿ: ಎಚ್. ಮಾರುತಿ, ಬೆಂಗಳೂರು
Tue, 31 Dec 202408:43 AM IST
ಕರ್ನಾಟಕ News Live: ಬೆಂಗಳೂರು ಅಭಿವೃದ್ದಿಯ ಪ್ರಮುಖ 6 ಯೋಜನೆಗಳು; ಮೆಟ್ರೋ ಹಳದಿ ಮಾರ್ಗ, ಸ್ಕೈಡೆಕ್ ಸಹಿತ 2025 ರಲ್ಲಿ ಯಾವೆಲ್ಲಾ ಯೋಜನೆ ಉದ್ಘಾಟನೆಯಾಗಬಹುದು?
- 2024 ರಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸುರಂಗ ರಸ್ತೆಗಳು ಮತ್ತು 250 ಮೀಟರ್ ಸ್ಕೈಡೆಕ್ ನಂತಹ ಬೆಂಗಳೂರಿನ ನಗರಾಭಿವೃದ್ಧಿಗಾಗಿ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಳ್ಳಲಾಯಿತು. ಯೋಜನೆಗಳ ಸ್ಥಿತಿಗತಿ ವಿವರ ಇಲ್ಲಿದೆ.
Tue, 31 Dec 202407:58 AM IST
ಕರ್ನಾಟಕ News Live: ಜನವರಿ 1ರಿಂದ ದುಬಾರಿ: ಪಾರ್ಲೆ-ಜಿಯಿಂದ ಸೋಪ್ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ರೇಟ್ ಜಾಸ್ತಿ ಕಣ್ರೀ
- Changes in New Year: ಜನವರಿ 1, 2025ರಿಂದ ಹಲವು ನಿಯಮಗಳು ಬದಲಾಗಲಿವೆ. ಇದರಿಂದ ವಿವಿಧ ವಸ್ತುಗಳ ದರದ ಮೇಲೆ ಪರಿಣಾಮ ಬೀರಲಿದೆ. ಕೆಲವು ವಸ್ತುಗಳ ದರ ಅಗ್ಗವಾದರೆ, ಇನ್ನು ಕೆಲವು ವಸ್ತುಗಳ ದರ ಇನ್ನಷ್ಟು ದುಬಾರಿಯಾಗಲಿದೆ.
Tue, 31 Dec 202407:27 AM IST
ಕರ್ನಾಟಕ News Live: ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡ ಚಿರತೆ, ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ
- leopard at infosys campus: ಮೈಸೂರಿನ ಹೊರ ವಲಯದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಕಾಣಿಸಿಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
Tue, 31 Dec 202405:08 AM IST
ಕರ್ನಾಟಕ News Live: ಒಂದು ಕ್ಷಣದ ತಪ್ಪಿಗಾಗಿ 8 ಮಂದಿ ಜೀವ ಕಳೆದುಕೊಂಡರು; ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವು, ಕುಟುಂಬಗಳಿಗೂ ಜೀವನ ಪರ್ಯಂತ ನೋವು
- ಹುಬ್ಬಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಒಳಿತಾಗಲೆಂದು ಮಾಲಾಧಾರಿಗಳಾಗಿದ್ದಾಗ ಸಂಭವಿಸಿದ ದುರಂತ ಅವರ ಬದುಕನ್ನೇ ತೆಗೆದುಕೊಂಡಿದೆ. ಅವರ ಸಾವಿನ ನೋವು ಕುಟುಂಬಗಳಲ್ಲಿ ಆವರಿಸಿದೆ.
Tue, 31 Dec 202403:34 AM IST
ಕರ್ನಾಟಕ News Live: Breaking News: ಸಿಲಿಂಡರ್ ಸೋರಿಕೆ ಪ್ರಕರಣ ; ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸರಣಿ ಮುಂದುವರಿಕೆ, ಮತ್ತಿಬ್ಬರ ಸಾವು
- ಹುಬ್ಬಳ್ಳಿಯಲ್ಲಿ ಸಿಲೆಂಡರ್ ಸ್ಪೋಟದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇನ್ನೂ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಈವರೆಗೂ ಎಂಟು ಮಂದಿ ಮೃತಪಟ್ಟಂತಾಗಿದೆ.
Tue, 31 Dec 202403:21 AM IST
ಕರ್ನಾಟಕ News Live: Bangalore Flower Show: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅರಳಲಿವೆ ರಾಮಾಯಣದ ಘಟನಾವಳಿಗಳು, ಮಹರ್ಷಿ ವಾಲ್ಮೀಕಿ ಪ್ರತಿಕೃತಿ
Bangalore Flower Show 2025: ಬೆಂಗಳೂರಿನ ಲಾಲ್ ಬಾಗ್ ಈ ಬಾರಿ ವಿಭಿನ್ನ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲು ಅಣಿಯಾಗಿದೆ. ಇದರ ವಿವರ ಇಲ್ಲಿದೆ.
ವರದಿ: ಎಚ್.ಮಾರುತಿ.ಬೆಂಗಳೂರು
Tue, 31 Dec 202402:28 AM IST
ಕರ್ನಾಟಕ News Live: ಬೆಂಗಳೂರು: 4 ಲಕ್ಷ ರೂ ಸಾಲಕ್ಕೆ 42 ಲಕ್ಷ ರೂಪಾಯಿ ವಸೂಲಿ; ಮೀಟರ್ ಬಡ್ಡಿ ದಂಧೆಯ ಆರೋಪಿ ಶಾರದಮ್ಮ ಬಂಧನ
- ಸಾಲದ ರೂಪದಲ್ಲಿ ಪಡೆದಿದ್ದ 4 ಲಕ್ಷ 23 ಸಾವಿರ ಆದರೆ ಮರುಪಾವತಿ ಮಾಡಿರೋದು ಬರೋಬ್ಬರಿ 42 ಲಕ್ಷ ರೂಪಾಯಿ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಯ ಆರೋಪದಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಅಪರಾಧ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.
Tue, 31 Dec 202401:31 AM IST
ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ಮುಂದುವರಿದ ಚಳಿ; ಹಲವೆಡೆ ಮಂಜಿನ ವಾತಾವರಣದಿಂದ ಕೆಲಸ ಕಾರ್ಯಗಳಿಗೆ ಅಡ್ಡಿ
- ಕರ್ನಾಟಕ ಹವಾಮಾನ: ರಾಜ್ಯದ ಎಲ್ಲಾ ಕಡೆ ಮುಂಜಾನೆ ಸಮಯದಲ್ಲಿ ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದವರಿದಿದೆ. ಎಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಇಲ್ಲ, ಒಣ ಹವೆ ಮುಂದುವರಿಯಲಿದೆ. ಡಿಸೆಂಬರ್ 31ರ ಮಂಗಳವಾರದಿಂದ ಮುಂದಿನ 5 ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.