ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live December 9, 2024 : ಕನ್ನಡ ಸಾಹಿತ್ಯ ಸಮ್ಮೇಳನದ ಸ್ಟಾಲ್‌ಗಳಲ್ಲಿ ಮಾಂಸಯುಕ್ತ ಖಾದ್ಯ ಮಾರಲು ಅನುವು ಮಾಡಿಕೊಡಬಹುದು, ಆದರೆ...! ಮಧು ವೈಎನ್ ಬರಹ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 09 Dec 202403:42 PM IST
ಕರ್ನಾಟಕ News Live: ಕನ್ನಡ ಸಾಹಿತ್ಯ ಸಮ್ಮೇಳನದ ಸ್ಟಾಲ್‌ಗಳಲ್ಲಿ ಮಾಂಸಯುಕ್ತ ಖಾದ್ಯ ಮಾರಲು ಅನುವು ಮಾಡಿಕೊಡಬಹುದು, ಆದರೆ...! ಮಧು ವೈಎನ್ ಬರಹ
- ಮಧು ವೈಎನ್ ಲೇಖನ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸನಿಹದಲ್ಲಿರುವಾಗ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧದ ಕುರಿತು ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಲೇಖಕರಾದ ಮಧು ವೈ ಎನ್ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದು ಗಮನ ಸೆಳೆಯುತ್ತದೆ. "ಖಾದ್ಯಗಳ ತಯಾರಿಕೆ, ಸೇವನೆ, ಮತ್ತು ವಿಲೇವಾರಿ ವಿಚಾರಗಳಲ್ಲಿ ನಾವು ಸಾಂಸ್ಕೃತಿಕವಾಗಿ ಬದಲಾಗಬೇಕಿದೆ" ಎಂದು ಅವರು ಹೇಳಿದ್ದಾರೆ.
Mon, 09 Dec 202401:27 PM IST
ಕರ್ನಾಟಕ News Live: Indian Railways: ಹೊಸ ವರ್ಷದಿಂದ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ
- ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯು ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಎಸಿ ಬೋಗಿಯನ್ನು ಆಳವಡಿಸಲು ಮುಂದಾಗಿದೆ.
Mon, 09 Dec 202401:26 PM IST
ಕರ್ನಾಟಕ News Live: ತುಮಕೂರಿನಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ; ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ 4 ದಿನ ಕಾರ್ಯಕ್ರಮ
- ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಡಿಸೆಂಬರ್ 12ರ ಗುರುವಾರ ಬೆಳಗ್ಗೆ ಯೋಗಾಸನ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. (ವರದಿ: ಈಶ್ವರ್ ತುಮಕೂರು)
Mon, 09 Dec 202401:05 PM IST
ಕರ್ನಾಟಕ News Live: Tumkur News: ತುಮಕೂರಿನ ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿಗೆ ವಿಸರ್ಜನೆ ವೇಳೆ ಸಂಭ್ರಮದ ಮೆರವಣಿಗೆ, ಗೌರವ ವಿದಾಯ
- ತುಮಕೂರಿನ ಗೂಳೂರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ, ವಿಸರ್ಜನೆ ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು.
- ವರದಿ: ಈಶ್ವರ್, ತುಮಕೂರು
Mon, 09 Dec 202411:52 AM IST
ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಮಧ್ಯಂತರ ಜಾಮೀನು ಮುಂದುವರಿಕೆ; ಡಿ.11ರ ಬುಧವಾರ ದರ್ಶನ್ ಬೆನ್ನುನೋವಿಗೆ ಸರ್ಜರಿ
- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಜಾಮೀನು ಮುಂದುವರಿಯಲಿದೆ. ಇನ್ನುಎರಡು ದಿನದಲ್ಲಿ ಅವರ ಬೆನ್ನು ನೋವಿಗೆ ಚಿಕಿತ್ಸೆ ದೊರೆಯಲಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
Mon, 09 Dec 202411:04 AM IST
ಕರ್ನಾಟಕ News Live: IPO Analysis: ವಿಶಾಲ್ ಮೆಗಾ ಮಾರ್ಟ್ ಆರಂಭಿಕ ಷೇರು ವಿತರಣೆ, ಈ ಐಪಿಒಗೆ ಬಿಡ್ ಮಾಡಬಹುದೇ, ಜಿಎಂಪಿ ಎಷ್ಟಿದೆ? ಇಲ್ಲಿದೆ ವಿವರ
- Vishal Mega Mart IPO: ವಿಶಾಲ್ ಮೆಗಾ ಮಾರ್ಟ್ ಐಪಿಒ ಇದೇ ಡಿಸೆಂಬರ್ 11ರಿಂದ ಬಿಡ್‌ಗೆ ಮುಕ್ತವಾಗಲಿದೆ. 8,000.00 ಕೋಟಿ ರೂಪಾಯಿಯ, 102.56 ಕೋಟಿ ಷೇರುಗಳ ಮಾರಾಟದ ಆಫರ್ ಫಾರ್ ಸೇಲ್ (ಒಎಫ್‌ಎಸ್) ಐಪಿಒ ಇದಾಗಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒ ಜಿಎಂಪಿ (ಗ್ರೇ ಮಾರ್ಕೆಟ್ ಪ್ರೀಮಿಯಂ) ಇಂದು (ಡಿಸೆಂಬರ್ 9) 24 ರೂಪಾಯಿ ಇದೆ.
Mon, 09 Dec 202410:36 AM IST
ಕರ್ನಾಟಕ News Live: ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ: ಪ್ರಜ್ಞೆ ತಪ್ಪಿ ತಡೆಗೋಡೆಗೆ ಗುದ್ದಿ ವ್ಯಕ್ತಿ ಸಾವು; ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ನೋಡಿ
- ಹೃದಯಾಘಾತದಿಂದ ಕುಳಿತವರು ಮಾತ್ರವಲ್ಲದೇ ವಾಹನ ಚಲಾಯಿಸುತ್ತಿರುವವರೂ ಮೃತಪಡುತ್ತಿರುವ ಪ್ರಕರಣ ವರದಿಯಾಗುತ್ತಿವೆ. ಮೈಸೂರಿನಲ್ಲಿಯೂ ಬೈಕ್ ಓಡಿಸಿಕೊಂಡು ಹೊರಟಿದ್ದ ವ್ಯಕ್ತಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
Mon, 09 Dec 202410:04 AM IST
ಕರ್ನಾಟಕ News Live: ಕರ್ನಾಟಕದ ಎರಡು ಜಿಲ್ಲೆಗಳಲ್ಲಿನ 9 ಕಂಪನಿಗಳ 5150 ಗುತ್ತಿಗೆ ಅರಣ್ಯಭೂಮಿ ಮರುವಶಕ್ಕೆ ಪಡೆಯಲು ಮುಂದಾದ ಅರಣ್ಯ ಇಲಾಖೆ
- ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ನೀಡಿದ್ದ ಅರಣ್ಯ ಭೂಮಿಯನ್ನು ವಾಪಾಸ್ ಪಡೆಯಲು ಕರ್ನಾಟಕ ಅರಣ್ಯ ಇಲಾಖೆಯು ಕಾನೂನು ಕ್ರಮಕ್ಕೆ ಮುಂದಾಗಿದೆ.
Mon, 09 Dec 202409:15 AM IST
ಕರ್ನಾಟಕ News Live: Banashankari Expressway: ಬೆಂಗಳೂರು ಬನಶಂಕರಿಯಿಂದ ನೈಸ್‌ರಸ್ತೆಗೆ 10 ಕಿ.ಮೀ. ದೂರದ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯಾಕೆ?
Banashankari Expressway: ಬೆಂಗಳೂರು ಬನಶಂಕರಿ ಮತ್ತು ನೈಸ್ ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಕುರಿತು ಬಿಬಿಎಂಪಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟೂರಾದ ಕನಕಪುರದ ಕಡೆಗೆ ಈ 10 ಕಿ.ಮೀ. ದೂರದ ಯೋಜನೆಗೆ ಸುಮಾರು 1,200 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ.
Mon, 09 Dec 202405:41 AM IST
ಕರ್ನಾಟಕ News Live: Red sandalwood Mafia: ಪುಷ್ಪ ಸಿನಿಮಾದ ತಳಹದಿ ರಕ್ತಚಂದನಕ್ಕೆ ಏಕಿಷ್ಟು ಬೇಡಿಕೆ? ಕರ್ನಾಟಕ, ಆಂಧ್ರದಲ್ಲಿಯೇ ಅಷ್ಟೊಂದು ಬೆಳೆಯೋದು ಏಕೆ?
- Pushpa 2 Movie: ಪುಷ್ಪ ಸಿನಿಮಾ ನೋಡಿದವರು ರಕ್ತಚಂದನವನ್ನು ಮರೆಯುವಂತೆಯೇ ಇಲ್ಲ. ಕ್ರಿಮಿನಲ್ ಗ್ಯಾಂಗ್‌ಗಳ ಆಟಾಟೋಪವಾಗಿರುವ ರಕ್ತಚಂದನಕ್ಕೆ ಶ್ರೀಗಂಧದಂತೆಯೇ ಹಲವು ಕಾರಣಕ್ಕೆ ಬೇಡಿಕೆ. ಆಂಧ್ರಪ್ರದೇಶ, ಕರ್ನಾಟಕ ಗಡಿಯಲ್ಲಿ ಮಾಫಿಯಾ ಹಿಡಿತ ಬಿಗಿಯಾಗಲೂ ಈ ಬೇಡಿಕೆಯೇ ಮುಖ್ಯ ಕಾರಣ. ‘ಪುಷ್ಪ 2 ’ ಸಿನಿಮಾ ನೆಪದಲ್ಲಿ ರಕ್ತಚಂದನದ ಕುರಿತಾದ ಮಾಹಿತಿ ಇಲ್ಲಿದೆ.
Mon, 09 Dec 202404:59 AM IST
ಕರ್ನಾಟಕ News Live: ಬೆಂಗಳೂರಿನ ಕನಕಪುರ ರಸ್ತೆಯಿಂದ ನೈಸ್ ರಸ್ತೆ ಸಂಪರ್ಕಕ್ಕೆ ಬರಲಿದೆ ಹೊಸ ಎಕ್ಸ್‌ಪ್ರೆಸ್ ವೇ,ಮೇಲ್ಸೇತುವೆ ಮೇಲೆ ಸಂಚಾರಕ್ಕೆ ಒತ್ತು
- ಬೆಂಗಳೂರು -ಕನಕಪುರ ಮಾರ್ಗ ಮಧ್ಯದಲ್ಲಿನ ಸಂಚಾರ ದಟ್ಟಣೆಯನ್ನು ತಗ್ಗಿಸಲು ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾಗೆ ಮೇಲ್ಸೇತುವೆ ಎಕ್ಸ್‌ಪ್ರೆಸ್ ವೇ ರೂಪಿಸಲು ಡಿಪಿಆರ್ ಸಿದ್ದಪಡಿಸಲಾಗುತ್ತಿದೆ.
Mon, 09 Dec 202403:36 AM IST
ಕರ್ನಾಟಕ News Live: ನೀವಿನ್ನೂ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಿದ್ದರೆ ಇಂದಿನಿಂದ ಸಾಮೂಹಿಕ ವಿದ್ಯುತ್ ಸಂಪರ್ಕ ಕಡಿತ ಶುರು ಪರಿಣಾಮ ಎದುರಿಸಿ
- ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವವರು ಡಿಸೆಂಬರ್ 9 ಒಳಗಾಗಿ ಪಾವತಿ ಮಾಡಿಬಿಡಿ. ಇಲ್ಲದೇ ಇದ್ದರೆ ಸಾಮೂಹಿಕ ವಿದ್ಯುತ್ ಕಡಿತ ಶುರುವಾಗಲಿದೆ.
Mon, 09 Dec 202401:10 AM IST
ಕರ್ನಾಟಕ News Live: ಕರ್ನಾಟಕದ ಕೆಲವೆಡೆ ಹಗುರ ಮಳೆ ಜೊತೆ ದಟ್ಟ ಮಂಜು ಕವಿಯುವ ಸಾಧ್ಯತೆ, ಬಹುತೇಕ ಕಡೆ ಒಣಹವೆ ಮುಂದುವರಿಕೆ; ಡಿ.9ರ ಹವಾಮಾನ ವರದಿ
- ಕರ್ನಾಟಕದಲ್ಲಿ ವ್ಯತಿರಿಕ್ತ ವಾತಾವರಣವಿದ್ದು ಕೆಲವೆಡೆ ಮಳೆ, ಕೆಲವೆಡೆ ಚಳಿ ಹಾಗೂ ಕೆಲವೆಡೆ ಬಿಸಿಲು ಹಾಗೂ ಒಣಹವೆ ಇದೆ. ಫೆಂಗಲ್ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ, ಆದರೂ ಇಂದು ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಕೆಲವು ಕಡೆ ದಟ್ಟ ಮಂಜು ಕವಿದಿರಲಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ.