
Karnataka News Live February 10, 2025 : ಹಾವೇರಿ: ಮೃತ ವ್ಯಕ್ತಿ ಎದ್ದು ಕುಳಿತ ಸುದ್ದಿ ವೈರಲ್; ನಿಜ ಸ್ಥಿತಿ ವಿವರಿಸಿದ್ರು ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 10 Feb 202506:28 PM IST
“ಡಾಬಾ ಬಂತು ನೋಡು ಊಟ ಮಾಡುತ್ತೀಯಾ?” ಎಂದು ಪತ್ನಿ ಕೇಳಿದ ಕೂಡಲೇ ಎದ್ದು ಕುಳಿತ ಮೃತ ವ್ಯಕ್ತಿಯ ಸುದ್ದಿ ವೈರಲ್ ಆಗಿತ್ತು. ಆದರೆ, ನಿಜ ಸ್ಥಿತಿಯನ್ನು ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ವಿವರಿಸಿದ್ದಾರೆ.
Mon, 10 Feb 202505:08 PM IST
Rare Surgery: ಮಡಿಕೇರಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಪುತ್ರನ ಎದೆಗೆ ಹೊಕ್ಕಿದ್ದ ತೆಂಗಿನ ಗರಿಯನ್ನು ವೆನ್ಲಾಕ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ. ಅಪರೂಪದ ಶಸ್ತ್ರ ಚಿಕಿತ್ಸೆಯ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mon, 10 Feb 202504:45 PM IST
Waqf Board's authority: ಕರ್ನಾಟಕ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಫೆ 10) ಪ್ರಶ್ನಿಸಿದ್ದು, ಅದು ನೀಡುತ್ತಿರುವ ಮದುವೆ, ವಿಚ್ಛೇದನ ಪ್ರಮಾಣ ಪತ್ರದ ಕಾನೂನು ಮಾನ್ಯತೆ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದೆ.
Mon, 10 Feb 202501:50 PM IST
ಮುಡಾ ಪ್ರಕರಣ: ಇಡಿ ಸಮನ್ಸ್ ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆ ಮಾಡಿರುವ ಕರ್ನಾಟಕ ಹೈಕೋರ್ಟ್, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ ಗೆ ತಾತ್ಕಾಲಿಕ ರಿಲೀಫ್ ನೀಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Mon, 10 Feb 202501:25 PM IST
Bengaluru Metro: ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿಯಾಗಿದೆ. ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್ ದರಗಳೆಷ್ಟು ಎಂಬುದು ಗೊತ್ತಾದರೆ ಇದು ನಿಚ್ಚಳವಾಗುತ್ತದೆ. ಅವುಗಳನ್ನು ನಮ್ಮ ಮೆಟ್ರೋದೊಂದಿಗೆ ಹೋಲಿಸಿ ನೋಡೋಣ.
Mon, 10 Feb 202512:48 PM IST
ಬೆಂಗಳೂರು: ಸಾಲ ಕೊಟ್ಟಿದ್ದು 1.60 ಲಕ್ಷ ರೂಪಾಯಿಗೆ 3.80 ಲಕ್ಷ ರೂ. ಹಿಂತಿರುಗಿಸಿದ್ದರೂ ಕಿರುಕುಳ ನೀಡುತ್ತಿದ್ದ ಖಾಸಗಿ ಫೈನಾನ್ಷಿಯರ್ ದಂಪತಿ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ- ಎಚ್ ಮಾರುತಿ, ಬೆಂಗಳೂರು)
Mon, 10 Feb 202510:39 AM IST
Bengaluru Power Cut: ಬೆಂಗಳೂರಿನ ಸೋಲದೇವನಹಳ್ಳಿ, ಹೆಬ್ಬಾಳ ಭಾಗದಲ್ಲಿ ಮಂಗಳವಾರ (ಫೆ 11) ಮತ್ತು ಬುಧವಾರ (ಫೆ 12) ವಿದ್ಯುತ್ ಕಡಿತ ಉಂಟಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸುತ್ತಿರುವ ಕಾರಣ ಈ ಪವರ್ ಕಟ್ ಘೋಷಿಸಲಾಗಿದೆ ಎಂದು ಬೆಸ್ಕಾಂ ಹೇಳಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Mon, 10 Feb 202507:54 AM IST
- ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ದರ ಹೆಚ್ಚಳವನ್ನು ಹಗಲು ದರೋಡೆಗೆ ಹೋಲಿಸಿದ್ದಾರೆ. ಮೆಟ್ರೋ ಪ್ರಯಾಣಕ್ಕಾಗಿ ಇನ್ನು ಮುಂದೆ ಸಾಲ ಪಡೆದು ಇಎಂಐ ಆಯ್ಕೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
Mon, 10 Feb 202506:42 AM IST
- ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಹೊಣೆ ಹೊರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಇದು ಬೆಂಗಳೂರಿನ ಜನರು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ. ಜನಸಾಮಾನ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.
Mon, 10 Feb 202504:49 AM IST
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ತಲುಪಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವರಿಷ್ಠರ ಭೇಟಿಯಾಗಿ ತಮ್ಮ ತಮ್ಮ ಬೇಡಿಕೆ ಇಡುವುದು ಬಹುತೇಕ ಖಚಿತ. ರಾಜಧಾನಿಯಲ್ಲಿ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆ ನಡೆಯಲಿದೆ.
Mon, 10 Feb 202503:06 AM IST
- ಇಂದಿನಿಂದ ಮೂರು ದಿನಗಳ ಕಾಲ ತಿ ನರಸೀಪುರದಲ್ಲಿ ನಡೆಯುತ್ತಿರುವ ಕರ್ನಾಟಕ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 13ನೇ ಕುಂಭಮೇಳಕ್ಕೆ ಮೈಸೂರು ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಕೋವಿಡ್ ಕಾರಣದಿಂದಾಗಿ 2022ರ ಕುಂಭಮೇಳ ನಡೆದಿರಲಿಲ್ಲ.
Mon, 10 Feb 202501:23 AM IST
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಲೆಕ್ಕಾಚಾರ ಹಾಕಿದ್ದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಕೋಟಿ ಕೋಟಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Mon, 10 Feb 202512:31 AM IST
- ಫೆ. 15ರವರೆಗೂ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದ್ದು, ಹಗಲಿನ ವೇಳೆ ಬಿಸಿಲಿನ ವಾತಾವರಣವು ಜನರನ್ನು ಕಾಡಲಿದೆ. ರಾತ್ರಿ ವೇಳೆ ಚಳಿಯ ಪ್ರಮಾಣ ಕಡಿಮೆ ಇರಲಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ.