
Karnataka News Live February 17, 2025 : ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 17 Feb 202505:14 PM IST
Mahindra BE6 Test Drive: ಸ್ಪರ್ಧಾತ್ಮಕ ದರದಲ್ಲಿ ಗರಿಷ್ಠ ಐಷಾರಾಮಿ ಫೀಚರ್ಸ್ ಹೊಂದಿರುವ ಮಹೀಂದ್ರಾ BE6 ಕಾರಿಗೆ ಗ್ರಾಹಕರು ಫಿದಾ ಆಗುತ್ತಿರುವುದು ಕಂಡುಬಂದಿದೆ. ಮಂಗಳೂರಿನ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mon, 17 Feb 202504:47 PM IST
ಮೈಸೂರು ಉದಯಗಿರಿ ಗಲಭೆ ಕೇಸ್ ಸಂಬಂಧಿಸಿದಂತೆ, ವಿವಾದಾತ್ಮಕ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್‌ಗೆ ಷರತ್ತು ಬದ್ಧ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.
Mon, 17 Feb 202504:10 PM IST
ಧಾರವಾಡ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕೂರ ಗ್ರಾಮದಲ್ಲಿ ಯುವಕ, ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆ ಮಾಡಿಕೊಂಡಿರುವ ಕಳವಳಕಾರಿ ಘಟನೆ ನಡೆದಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ.
Mon, 17 Feb 202503:48 PM IST
ಧಾರವಾಡ: ರಾತ್ರಿ ನಗುನಗುತ್ತಲೇ ಎಲ್ಲರೊಂದಿಗೆ ಬೆರೆತು ಮಾತನಾಡಿದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಬೆಳಗ್ಗೆ ಎದ್ದಿರಲಿಲ್ಲ. ದಂಪತಿ ಜತೆಯಾಗಿಯೇ ಇಹಲೋಕ ಯಾನ ಮುಗಿಸಿರುವುದು ವಿಶೇಷ.
Mon, 17 Feb 202503:13 PM IST
Mahashivaratri Special: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಠಾರದಲ್ಲಿರುವ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಫೆ.17ರಿಂದ ಮಾ.1ರವರೆಗೆ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನ ನಡೆಯಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Mon, 17 Feb 202501:55 PM IST
ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸದ್ಯ ಬೆಂಗಳೂರು, ಕರ್ನಾಟಕ ಸೇಫ್ ಆಗಿದೆ. ಆದಾಗ್ಯೂ, ಬೇಯಿಸದ, ಅರೆ ಬೆಂದ ಚಿಕನ್ ತಿನ್ನಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Mon, 17 Feb 202501:29 PM IST
BWSSB Updates: ಕುಡಿಯುವ ನೀರನ್ನು ವಿವಿಧ ಉದ್ದೇಶಗಳಿಗೆ ಬಳಸುವುದು ನಿಷೇಧಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ. ಆದ್ದರಿಂದ ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ, ಕೈತೋಟಕ್ಕೆ ಬಳಸಿದರೆ 5000 ರೂ ದಂಡ ಪಾವತಿಸಬೇಕಾದೀತು.
Mon, 17 Feb 202501:16 PM IST
Bengaluru Weather: ಬೆಂಗಳೂರಿಗರೇ ಅವಧಿಗೂ ಮೊದಲೇ ಬೇಸಿಗೆಯನ್ನು ಬರಮಾಡಿಕೊಳ್ಳಲು ಸಜ್ಜಾಗಿ. ಬೆಂಗಳೂರಲ್ಲಿ ಈ ವಾರ ಸುಡುಬಿಸಿಲು ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
Mon, 17 Feb 202512:04 PM IST
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಯೋಜನೆ ಹಣ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಏನಿದು ವಿದ್ಯಮಾನ- 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Mon, 17 Feb 202511:12 AM IST
ಬೆಂಗಳೂರು: ಕಳವಳಕಾರಿ ಘಟನೆಯೊಂದರಲ್ಲಿ 5 ವರ್ಷದ ಮಗಳನ್ನು ಕೊಂದ ತಾಯಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಗುಂಟೆ ಸಮೀಪ ಈ ಘಟನೆ ನಡೆದಿದ್ದು, ಮೃತ ಮಹಿಳೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂದು ತಿಳಿದುಬಂದಿದೆ
Mon, 17 Feb 202510:04 AM IST
Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರ ಫೆ 9 ರಿಂದ ಏರಿಕೆಯಾಗಿದ್ದು, ಬಳಿಕ ಮುಖ್ಯಮಂತ್ರಿ ಸೂಚನೆ ಮೇರೆಗೆ ಕೊಂಚ ಇಳಿದಿದೆ. ಆದರೆ ಮೆಟ್ರೋ ಟಿಕೆಟ್ ದರ ಏರಿಕೆ ಪರಿಣಾಮ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. 6 ದಿನಗಳ ಲೆಕ್ಕಾಚಾರ ಇಲ್ಲಿದೆ ನೋಡಿ
Mon, 17 Feb 202510:04 AM IST
Karnataka Budget 2025: ಕರ್ನಾಟಕ ಬಜೆಟ್ 2025 ಈ ಬಾರಿ ಮಾರ್ಚ್ 7ರಂದು ಮಂಡನೆಯಾಗಲಿದೆ. ಬಜೆಟ್ ಅಧಿವೇಶನವು 3ರಂದು ಆರಂಭವಾಗಲಿದೆ.
Mon, 17 Feb 202508:54 AM IST
- Karnataka Next Cm: ಕರ್ನಾಟಕದಲ್ಲಿ ಸಿಎಂ ಸ್ಥಾನದ ಬದಲಾವಣೆ, ಹೊಸ ಸಿಎಂ ನಿಯೋಜನೆ ಚರ್ಚೆಗಳು ಶುರುವಾಗಿ ಆರು ತಿಂಗಳೇ ಆಗಿದೆ. ಹಾಗಾದರೆ ಸಿಎಂ ಬದಲಾವಣೆಯಾಗುವರೇ, ಹೊಸಬರು ಯಾರಾಗಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Mon, 17 Feb 202507:16 AM IST
- Viral video: ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕೆಲವೊಂದು ವಿಡಿಯೋ ಕುಟುಂಬವನ್ನು ಬೆಸೆಯಲೂ ಬಲ್ಲವು. ಅಂತಹದ್ದೇ ಒಂದು ಅನುಭವ ದಕ್ಷಿಣ ಕನ್ನಡದ ಪುತ್ತೂರಿನ ಕುಟುಂಬ ಒಂದಕ್ಕೆ ಆಗಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
Mon, 17 Feb 202505:29 AM IST
- Mysore News: ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ವರದಿಯಾಗಿದೆ. ವೃದ್ದೆ ತಾಯಿ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗ, ಪತ್ನಿ ಜತೆಗೆ ವ್ಯಕ್ತಿ ಆತ್ಮಹತ್ಯೆಗ ಶರಣಾಗಿದ್ದಾನೆ.
Mon, 17 Feb 202503:03 AM IST
Tumkur Siddaganga Jatre 2025: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಸಾಲಿನ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಫೆಬ್ರವರಿ 17ರಿಂದ ದನಗಳ ಪರಿಷೆ ಉದ್ಘಾಟನೆಯೊಂದಿಗೆ ಆರಂಭಗೊಳ್ಳಲಿವೆ. ಜಾತ್ರೆ ವಿವರ ಇಲ್ಲಿದೆ.
Mon, 17 Feb 202502:07 AM IST
- Kodagu News: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಅಲ್ಲಿನ ದಾಖಲೆಗಳನ್ನು ಹೊತ್ತೊಯ್ದ ಮೂವರನ್ನು ಬಂಧಿಸಲಾಗಿದೆ.
Mon, 17 Feb 202501:19 AM IST
Forest News: ಕರ್ನಾಟಕದಲ್ಲಿ ಬೇಸಿಗೆ ಬರುತ್ತಿರುವುದರಿಂದ ಕಾಡಾನೆಗಳನ್ನು ನೀರು ಆಹಾರ ಅರಸಿ ನಾಡಿನತ್ತ ಬರುವ ಸಾಧ್ಯತೆಯಿರುವುದರಿಂದ ಸಂಘಟಿತವಾಗಿ ಸಮಸ್ಯೆ ಎದುರಿಸುವಂತೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Mon, 17 Feb 202501:13 AM IST
- Karnataka Weather: ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಬಿಸಿಲಿನ ಕಾವು ಮತ್ತಷ್ಟು ಏರಿಕೆ ಕಂಡಿದೆ. ದಾವಣಗೆರೆಯಲ್ಲೂ ಕೂಡ ಬಿಸಿಲಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.