
Karnataka News Live February 18, 2025 : ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 18 Feb 202506:28 PM IST
Budget Session 2025: ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ ನಡೆಯಲಿದೆ. ಈ ಕುರಿತು ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಮಾರ್ಚ್ 7 ರಂದು ಬಜೆಟ್ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.
Tue, 18 Feb 202506:03 PM IST
Karnataka Panchayat Polls: ಪಂಚಾಯಿತಿ ಚುನಾವಣೆ ಸಂಬಂಧಿಸಿ ಕಾನೂನು ಹೋರಾಟ 2020ರಿಂದಲೂ ನಿರಂತರ ಮುಂದುವರಿದಿದೆ. ಇದೀಗ ಸೋಮವಾರ (ಫೆ17) ಪಂಚಾಯಿತಿ ಚುನಾವಣೆಗೆ ನಾವು ರೆಡಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಈ ಸಂಬಂಧ 5 ಮುಖ್ಯ ಅಂಶಗಳ ವಿವರ ಇಲ್ಲಿದೆ
Tue, 18 Feb 202505:10 PM IST
Coffee Price Hike: ಹಾಲಿನ ದರ ಏರಿಕೆ ಸಾಧ್ಯತೆ ಹಾಗೂ ಕಾಫಿ ಪುಡಿ ದರ ಏರಿಕೆಯಾಗಿರುವ ಕಾರಣ ಮಾರ್ಚ್ ತಿಂಗಳಲ್ಲಿ ಮತ್ತೊಂದು ಬೆಲೆ ಏರಿಕೆಗೆ ಬೆಂಗಳೂರಿಗರು ತಲೆಯೊಡ್ಡಬೇಕಾಗಿದೆ. ಬೆಂಗಳೂರಲ್ಲಿ ಬೈಟು ಕಾಫಿ ಕೂಡ ದುಬಾರಿಯಾಗಲಿದೆ. ಹೌದು, ಹೋಟೆಲ್‌ನವರು ಮಾರ್ಚ್‌ನಲ್ಲಿ ಕಾಫಿ ದರವನ್ನು 3 - 5 ರೂಪಾಯಿ ಏರಿಸುವುದಾಗಿ ಘೋಷಿಸಿದ್ದಾರೆ.
Tue, 18 Feb 202504:33 PM IST
Nandini milk prices: ಕರ್ನಾಟಕ ಬಜೆಟ್ ಮಂಡನೆ ಬೆನ್ನಿಗೆ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ ಇದೆ. ಕೆಎಂಎಫ್ ಮೂಲಗಳು ಹಾಗೂ ಸರ್ಕಾರದ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡ ಬಳಿಕ ಲೀಟರಿಗೆ 5 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿವೆ.
Tue, 18 Feb 202501:02 PM IST
BWSSB Updates: ಬೆಂಗಳೂರಿನ ಸಿವಿ ರಾಮನ್‌ನಗರ, ಇಂದಿರಾ ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಫೆ 20ರಂದು ಕಾವೇರಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ. ಇದೇ ದಿನ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಕೂಡ ಆಯೋಜಿಸಿರುವುದಾಗಿ ಅದು ಹೇಳಿದೆ.
Tue, 18 Feb 202512:39 PM IST
Mangaluru Crime: ಮಂಗಳೂರು ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ 119 ಕೆಜಿ ಗಾಂಜಾ ವಶಪಡಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ತಿಳಿಸಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Tue, 18 Feb 202512:11 PM IST
Dr Govinda Naregal Death: ಹುಬ್ಬಳ್ಳಿಯ ಹಿರಿಯ ಸ್ವಯಂಸೇವಕ, ಮಾಜಿ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತ್ ನಾಯಕ ಡಾ ಗೋವಿಂದ ನರೇಗಲ್ ನಿಧನರಾದರು. ಅವರು ಇಂದು (ಫೆ 18) ಬೆಳಿಗ್ಗೆ ನಿಧನರಾಗಿದ್ದು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Tue, 18 Feb 202511:31 AM IST
Bangalore Weather: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಗಳಲ್ಲಿ ಫೆ 22ರ ತನಕವೂ ಬಿಸಿಲಾಘಾತ ಮುಂದುವರಿಯಲಿದೆ. ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಶಿಯಸ್ ತನಕ ಹೋಗಬಹುದು. ತೇವಾಂಶವೂ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Tue, 18 Feb 202509:40 AM IST
Anganwadi Food Scam: ಧಾರವಾಡದಲ್ಲಿ ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಮಾಡಿದ ಪ್ರಕರಣದಲ್ಲಿ 18 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 329 ಚೀಲ ಆಹಾರ ವಸ್ತು ವಶಪಡಿಸಿಕೊಂಡಿದ್ದಾರೆ.
Tue, 18 Feb 202508:44 AM IST
- ನಮ್ಮ ಮೆಟ್ರೋ ಪ್ರಯಾಣಿಕರು ಬೆಂಗಳೂರು ನಗರದ ಬಿಎಂಟಿಸಿ ಎಸಿ ಬಸ್ ಪ್ರಯಾಣಿಕರು ವಾರ್ಷಿಕವಾಗಿ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಮೆಟ್ರೋ ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಮೆಟ್ರೋಗಿಂತ ಬಸ್ ಪ್ರಯಾಣವು ಅಗ್ಗವಾಗಿದ್ದು, ಜನರು ಅದರತ್ತ ಒಲವು ತೋರಿಸುತ್ತಿದ್ದಾರೆ.
Tue, 18 Feb 202506:46 AM IST
- Digital arrest cyber crime: ಯಾದಗಿರಿ ಜಿಲ್ಲೆಯ ನಿವೃತ್ತ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮಹಿಳಾ ಅಧಿಕಾರಿಯೊಬ್ಬರು ಡಿಜಿಟಲ್ ಅರೆಸ್ಟ್ ಸೈಬರ್ ಕ್ರೈಮ್‌ಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Tue, 18 Feb 202506:22 AM IST
- ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ದುಡ್ಡು ಮಾಡಲು ಹೋಗಿ ಸಾಲದ ಮೇಲೆ ಸಾಲ ಮಾಡಿಕೊಂಡು ನಷ್ಟ ಅನುಭವಿಸಿದ ಒಂದೇ ಕುಟುಂಬದ ಮೂವರು ಆತ್ಮಗತ್ಯೆಗೆ ಶರಣಾಗಿದ್ದಾರೆ.
Tue, 18 Feb 202505:38 AM IST
- ಕಾರವಾರ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ಕಳುಹಿಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Tue, 18 Feb 202504:59 AM IST
- ಮೈಸೂರು ಜಿಲ್ಲೆಯ ತಿ ನರಸೀಪುರದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಅತ್ತ ಮೈಸೂರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.
Tue, 18 Feb 202503:04 AM IST
- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ. ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Tue, 18 Feb 202502:10 AM IST
- ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಪೂರ್ಣಗೊಂಡಿವೆ. ಕೆಲವು ತಿಂಗಳುಗಳಿಂದ ಖಾತೆಗೆ ಹಣ ಜಮೆ ಆಗಿಲ್ಲ ಎಂಬ ಆರೋಪ ಮಹಿಳೆಯರದ್ದು. ಈ ನಡುವೆಯೂ ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ಹಣ ಯೋಜನೆಗಾಗಿ ವ್ಯಯಿಸಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)