Karnataka News Live February 4, 2025 : ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 4, 2025 : ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್(ANI / GoK)

Karnataka News Live February 4, 2025 : ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

05:45 PM ISTFeb 04, 2025 11:15 PM HT Kannada Desk
  • twitter
  • Share on Facebook
05:45 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 04 Feb 202505:45 PM IST

ಕರ್ನಾಟಕ News Live: ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

  • ಬೆಂಗಳೂರಿನಲ್ಲಿ ಲಘು ಅಪಘಾತದ ಬಳಿಕ ರಾಹುಲ್‌ ದ್ರಾವಿಡ್‌ ತಮ್ಮ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ನಡುವೆ ದ್ರಾವಿಡ್‌ ಮತ್ತು ಆಟೊ ಚಾಲಕನ ನಡುವೆ ಸಣ್ಣ ವಾಗ್ವಾದವೂ ನಡೆದಿದೆ. ಇಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ.
Read the full story here

Tue, 04 Feb 202503:20 PM IST

ಕರ್ನಾಟಕ News Live: ಪಿಸ್ತೂಲ್‌ನಿಂದ ಆಕಸ್ಮಿಕ ಗುಂಡೇಟು; ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಬೊಂಡಾಲಗೆ ಗಂಭೀರ ಗಾಯ

  • ಪಿಸ್ತೂಲು ಮಿಸ್ ಫೈರ್ ಆಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read the full story here

Tue, 04 Feb 202502:48 PM IST

ಕರ್ನಾಟಕ News Live: ವಿಧಾನಸೌಧ ಆವರಣದಲ್ಲೇ ಬೀದಿ ನಾಯಿಗಳಿಗೆ ಆಶ್ರಯ;‌ ಸ್ಪೀಕರ್ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ

  • ವಿಧಾನಸೌಧದ ಆವರಣದಲ್ಲಿ ನಾಯಿಗಳಿಗಾಗಿ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿ ಮಾಲಾಗುತ್ತದೆ. ಅವುಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ವಹಿಸಲಾಗುತ್ತದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದ್ದಾರೆ.
Read the full story here

Tue, 04 Feb 202501:29 PM IST

ಕರ್ನಾಟಕ News Live: ಹೈಕಮಾಂಡ್ ಅಂಗಳದಲ್ಲಿ ಬಿಜೆಪಿ ಬಣ ಜಗಳ; ಶ್ರೀರಾಮುಲು ರಾಜ್ಯಾಧ್ಯಕ್ಷರಾಗಲು ಯತ್ನಾಳ್ ಒಲವು; ವರಿಷ್ಠರ ಸಂಪರ್ಕದಲ್ಲಿ ವಿಜಯೇಂದ್ರ

  • ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಪಕ್ಷದೊಳಗೆ ಬಣ ರೂಪುಗೊಂಡಿದೆ. ಯಾವುದೇ ಕಾರಣಕ್ಕೂ ಬಿಎಸ್‌ವೈ ಪುತ್ರ ಮುಂದಿನ ರಾಜ್ಯಾಧ್ಯಕ್ಷರಾಗಬಾರದು ಎಂದು ಪಣ ತೊಟ್ಟಿದೆ. ಅತ್ತ ವಿಜಯೇಂದ್ರ ಪರವೂ ಬಣವೊಂದು ತೊಡೆ ತಟ್ಟಿ ನಿಂತಿದ್ದು, ದೆಹಲಿ ಹೈಕಮಾಂಡ್‌ಗೆ ಹೊಸ ಸವಾಲು ಸೃಷ್ಟಿಯಾಗಿದೆ.
Read the full story here

Tue, 04 Feb 202511:13 AM IST

ಕರ್ನಾಟಕ News Live: ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು; ಪ್ರವಾಸ ಮುಂದೂಡಲು ಹೆಚ್ಚಿದ ಬೇಡಿಕೆ

  • ಕರ್ನಾಟಕ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರಯಾಣಿಕರು ಮಹಾ ಕುಂಭಮೇಳಕ್ಕೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಅವರಲ್ಲಿ ಶೇ.25ರಷ್ಟು ಮಂದಿ ಟಿಕೆಟ್ ರದ್ದು ಅಥವಾ ಪ್ರಯಾಣ ಮುಂದೂಡಿಕೆಗೆ ಕೇಳುತ್ತಿದ್ದಾರೆ.
Read the full story here

Tue, 04 Feb 202509:50 AM IST

ಕರ್ನಾಟಕ News Live: ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ; ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಬಲಿ, ರೈತ ಆತ್ಮಹತ್ಯೆ

  • ರಾಜ್ಯದಲ್ಲಿ ಮೈಕ್ರೊಫೈನಾನ್ಸ್‌ಗಳಿಗೆ ಮೂಗುದಾರ ಹಿಡಿಯಲು ರಾಜ್ಯಸರ್ಕಾರವು ಸುಗ್ರೀವಾಜ್ಞೆ ಮೂಲಕ ಹೊಸ  ಕಾನೂನು ತರಲು ಅಂತಿಮ ಹಂತದ ಸಿದ್ಧತೆಯಲ್ಲಿದೆ. ಈ ನಡುವೆ ಮೈಕ್ರೊಫೈನಾನ್ಸ್‌ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
Read the full story here

Tue, 04 Feb 202507:50 AM IST

ಕರ್ನಾಟಕ News Live: ಹುಬ್ಬಳ್ಳಿ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಶೂಟ್‌ಔಟ್‌, ಗುಜರಾತ್‌ನ ಇಬ್ಬರು ದರೋಡೆಕೋರರ ಬಂಧನ, ಮೂವರ ಪತ್ತೆಗೆ ಬಲೆ ಬೀಸಿದ ಬೆಂಡಿಗೇರಿ ಪೊಲೀಸರು

  • Hubballi Shootout: ಹುಬ್ಬಳ್ಳಿ ಹೊರವಲಯದ ಗಬ್ಬೂರ ಬಳಿ ಮಂದಿರದಲ್ಲಿ ಕಳ್ಳತನ, ಮನೆಗಳ್ಳತನ ಹಾಗೂ ಬೈಕ್ ಸವಾರರನ್ನು ತಡೆದು ಸುಲಿಗೆ ಮಾಡುತ್ತಿದ್ದ ಗುಜರಾತ್ ಮೂಲದ ಇಬ್ಬರು ದರೋಡೆಕೋರರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಶೂಟ್‌ಔಟ್ ನಡೆದಿದ್ದು, ಅದರಲ್ಲಿ ಈ ಇಬ್ಬರು ಪೊಲೀಸ್ ಬಲೆಗೆ ಬಿದ್ದರು.

     

Read the full story here

Tue, 04 Feb 202506:56 AM IST

ಕರ್ನಾಟಕ News Live: ಪ್ರಸಿದ್ಧ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್‌ನಾಕ್‌ ಕಳ್ಳನ ಬಂಧನ, ಸಿನಿಮೀಯ ಬದುಕು ಬೆನ್ನು ಹತ್ತಿದ ಖದೀಮ ಬೆಂಗಳೂರು ಪೊಲೀಸರ ಬಲೆಗೆ

  • Bengaluru Crime: ಜನಪ್ರಿಯ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್‌ನಾಕ್‌ ಕಳ್ಳ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದೆ. ಸಿನಿಮೀಯ ಬದುಕಿನ ಶೋಕಿಗೆ ಬಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

Read the full story here

Tue, 04 Feb 202505:54 AM IST

ಕರ್ನಾಟಕ News Live: Aero India 2025: ಬೆಂಗಳೂರು ಏರ್‌ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯ, ಫೆ 5 ರಿಂದ 14 ರ ತನಕದ ವೇಳಾಪಟ್ಟಿ ಪರಿಷ್ಕರಣೆ

  • Aero India 2025: ಬೆಂಗಳೂರು ಏರ್‌ ಶೋ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ, ಏರ್‌ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯವಾಗಿದ್ದು, ಫೆ 5 ರಿಂದ 14 ರ ತನಕದ ವೇಳಾಪಟ್ಟಿ ಪರಿಷ್ಕರಣೆಯಾಗಿದೆ. ಇದಕ್ಕೆ ಸಂಬಂಧಿಸಿ ಬೆಂಗಳೂರು ವಿಮಾನ ನಿಲ್ದಾಣ ಎಕ್ಸ್ ಖಾತೆಯಲ್ಲಿ ಅಪ್ಡೇಟ್ಸ್ ನೀಡಿದೆ. ಅದರ ವಿವರ ಇಲ್ಲಿದೆ

Read the full story here

Tue, 04 Feb 202505:11 AM IST

ಕರ್ನಾಟಕ News Live: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ; ಕಾನೂನು ಉಲ್ಲಂಘಿಸಿದರೆ ಗರಿಷ್ಠ 3 ಅಲ್ಲ 10 ವರ್ಷ ಜೈಲು ಶಿಕ್ಷೆ, 10 ಮುಖ್ಯ ಅಂಶಗಳಿವು

  • Karnataka Microfinance Law: ಕರ್ನಾಟಕದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯ ಕರಡು ಅಂತಿಮಗೊಳಿಸಿ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಿದೆ. ಇಂದು ಅಥವಾ ನಾಳೆ (ಫೆ 5) ಈ ಸುಗ್ರೀವಾಜ್ಞೆ ಆದೇಶಕ್ಕೆ ರಾಜ್ಯಪಾಲರು ಸಹಿ ಹಾಕುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Tue, 04 Feb 202504:14 AM IST

ಕರ್ನಾಟಕ News Live: ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ ಹೀಗಿದೆ

  • Bengaluru Ratha Saptami: ರಥ ಸಪ್ತಮಿ ಜಾತ್ರಾ ಮಹೋತ್ಸವದ ಕಾರಣ, ಬೆಂಗಳೂರು ಆಡುಗೋಡಿ ಸಮೀಪ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಸಂಚಾರ ಪೊಲೀಸರು ನೀಡಿರುವ ಸಂಚಾರ ಸಲಹೆಯ ಪೂರ್ಣ ವಿವರ ಇಲ್ಲಿದೆ. 

Read the full story here

Tue, 04 Feb 202503:37 AM IST

ಕರ್ನಾಟಕ News Live: ಬೆಂಗಳೂರು ಹವಾಮಾನ; ಸೂರ್ಯ ಸಂಚಾರಕ್ಕೆ ಅನುಗುಣವಾಗಿ ತಾಪಮಾನ ಹೆಚ್ಚಳ, ಶಿವರಾತ್ರಿಗೂ ಮೊದಲೇ ಕಡಿಮೆಯಾದ ಚಳಿ, ರಥ ಸಪ್ತಮಿ ದಿನ ಕರ್ನಾಟಕದ ಹವಾಮಾನ

  • Ratha Saptami Weather: ಶಿವರಾತ್ರಿಗೆ ಇನ್ನು ಮೂರು ವಾರ ಇದೆ. ಅಂದರೆ, ಚಳಿಗಾಲ ಇನ್ನು ಮುಗಿಯಲು ಮೂರು ವಾರಗಳು ಇದೆ. ಆಗಲೇ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಯ ಅನುಭವವಾಗತೊಡಗಿದೆ. ರಥ ಸಪ್ತಮಿ ದಿನ ಕರ್ನಾಟಕದ ಹವಾಮಾನ ಹೀಗಿದೆ ನೋಡಿ.

Read the full story here

Tue, 04 Feb 202502:35 AM IST

ಕರ್ನಾಟಕ News Live: ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು, ಬೆಂಗಳೂರು ಸಂಚಾರ ಪೊಲೀಸರ ಖಡಕ್ ವಾರ್ನಿಂಗ್‌

  • Bengaluru Traffic Police: ಬೆಂಗಳೂರಲ್ಲಿ ಸಂಚಾರ ದಟ್ಟಣೆ ಎದುರಾದ ವೇಳೆ ಅನೇಕರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ ಈಗ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Read the full story here

Tue, 04 Feb 202501:42 AM IST

ಕರ್ನಾಟಕ News Live: ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ಕಳವು; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು

  • Gold Theft on KSRTC Bus: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3,000 ರೂಪಾಯಿ ನಗದು ಕಳುವಾಗಿದೆ. ಕುಣಿಗಲ್ ಸಮೀಪ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Read the full story here

Tue, 04 Feb 202512:06 AM IST

ಕರ್ನಾಟಕ News Live: SSLC Grace Marks: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೆಚ್ಚುವರಿ ಶೇ 10 ಗ್ರೇಸ್ ಅಂಕ ಇರಲ್ಲ; ಉಳಿದ 10 ಕೂಡ ಡೌಟ್

  • SSLC Grace Marks: ಪರೀಕ್ಷಾ ಅಕ್ರಮ ತಡೆಗಾಗಿ ವೆಬ್‌ಕಾಸ್ಟಿಂಗ್ ಜಾರಿ ಮಾಡಿದ ಕಾರಣ ಫಲಿತಾಂಶ ಕುಸಿದಿತ್ತು. ಹೀಗಾಗಿ ಕಳೆದ ಬಾರಿ ಹೆಚ್ಚುವರಿಯಾಗಿ ಶೇಕಡ 10 ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ ಈ ಹೆಚ್ಚುವರಿ ಶೇಕಡ 10 ಗ್ರೇಸ್ ಅಂಕ ಇರಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter