
Karnataka News Live February 5, 2025 : ತುಮಕೂರು: ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ; ಪೂಜೆ ಸಲ್ಲಿಸಿದ ಗೃಹ ಸಚಿವ ಜಿ ಪರಮೇಶ್ವರ್
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 05 Feb 202505:50 PM IST
- ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ರಥಸಪ್ತಮಿ ದಿನದಂದು ಮಂಜಾನೆಯಿಂದಲೇ ಹಲವಾರು ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪಾಲ್ಗೊಂಡರು. (ವರದಿ: ಈಶ್ವರ್, ತುಮಕೂರು)
Wed, 05 Feb 202504:03 PM IST
- ಮಂಗಳೂರಿನಿಂದ ಸಮುದ್ರದ ಮೀನು ತುಮಕೂರಿನ ‘ಮತ್ಸ್ಯದರ್ಶಿನಿ’ಗೆ ತರುವುದರಿಂದ ಆ ಮೀನು ಬಹಳ ರುಚಿಯಾಗಿರಲಿವೆ. ಸ್ಥಳೀಯವಾಗಿ ಯಾವುದೇ ಮೀನು ಇಲ್ಲಿ ಬಳಕೆ ಮಾಡಲ್ಲ. ಗುಣಮಟ್ಟ ಹಾಗೂ ಶುಚಿ-ರುಚಿ ನೋಡಿ ಹೆಚ್ಚು ಗ್ರಾಹಕರು ಮತ್ಸ್ಯದರ್ಶಿನಿಗೆ ಬರುತ್ತಾರೆ ಎಂದು ಹೋಟೆಲ್ ವ್ಯವಸ್ಥಾಪಕಿ ಕಾವ್ಯ ತಿಳಿಸಿದ್ದಾರೆ. (ವರದಿ: ಈಶ್ವರ್, ತುಮಕೂರು)
Wed, 05 Feb 202503:27 PM IST
- ಕಾಡಿನ ಕಥೆಗಳು: ಕರ್ನಾಟಕವು ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರತದಲ್ಲೇ ಮುಂಚೂಣಿಯಲ್ಲಿರುವ ದೇಶ. ಕರ್ನಾಟಕ ಅರಣ್ಯ ಇಲಾಖೆಯೂ ಹಲವು ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಆನೆಗಳಿಗೆ ರೇಡಿಯೋ ಕಾಲರ್ ಅನ್ನು ಮೊದಲ ಬಾರಿ ಉತ್ಪಾದಿಸಿ ಮೇಕ್ ಇನ್ ಇಂಡಿಯಾಕ್ಕೆ ಸೇರಿದೆ. ರೇಡಿಯೋ ಕಾಲರ್ ಬಳಕೆ ಹಾದಿಯ ನೋಟ ಇಲ್ಲಿದೆ.
Wed, 05 Feb 202511:43 AM IST
Vijay Mallya: ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಮಲ್ಯ ಪರವಾಗಿ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ಅವರು ಈ ದಾವೆಯಲ್ಲಿ ವಾದ ಮಂಡಿಸುತ್ತಿದ್ದು, ಸಾಲದ ಮೊತ್ತ ಮತ್ತು ವಸೂಲಿ ಮೊತ್ತಗಳ ಒಟ್ಟು ವಿವರಣೆ ನೀಡುವುದಕ್ಕೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Wed, 05 Feb 202510:17 AM IST
- ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಎರಡು ಕುಟುಂಬಗಳು ಬೀದಿಗೆ ಬಂದಿವೆ. ಮೈಕ್ರೊ ಫೈನಾನ್ಸ್ ಕಡೆಯವರು ಮನೆಗೆ ಬೀಗ ಜಡಿದು ಹೋಗಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
Wed, 05 Feb 202508:49 AM IST
- Aero India 2025 Registration: ಏರೋ ಇಂಡಿಯಾ 2025 ಫೆ 10 ರಿಂದ 14 ತನಕ ನಡೆಯಲಿದೆ. ಇದಕ್ಕಾಗಿ ನೋಂದಣಿ ಪ್ರಕ್ರಿಯೆ, ಟಿಕೆಟ್, ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಇಲ್ಲಿದೆ.
Wed, 05 Feb 202507:28 AM IST
- ಕೃಷ್ಣ ಭಟ್ ಬರಹ: ಮೈಕ್ರೋಫೈನಾನ್ಸ್ ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ತಮಾಷೆಯಾಗಿದೆ. ಏನು ಮಾಡಬೇಕಿತ್ತೋ ಅದನ್ನು ಮಾಡದೇ, ತನ್ನ ವ್ಯಾಪ್ತಿಗೆ ಬರದ್ದನ್ನು ಮಾಡಿದೆ. ಬರಿ ರೋಗಲಕ್ಷಣಗಳನ್ನು ನೋಡಿ ಮದ್ದು ಕೊಟ್ಟಿದೆ. ಮೂಲ ರೋಗ ಹಾಗೆಯೇ ಉಳಿದಿದೆ. ಅದನ್ನು ಗುಣಪಡಿಸದಿದ್ದರೆ ಸ್ವಲ್ಪ ದಿನದಲ್ಲಿ ಬೇರೆ ರೂಪದಲ್ಲಿ ರೋಗಲಕ್ಷಣ ಕಾಣಿಸಲಿದೆ
Wed, 05 Feb 202502:38 AM IST
- ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ‘ನಾಕುತಂತಿ' ಕವನ ಸಂಕಲನದ ಷಷ್ಟಿಪೂರ್ತಿ ನಿಮಿತ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಮತ್ತು ಸಂಸ್ಕೃತಿ ವಿದ್ವಾಂಸ ಡಾ ಜಿಬಿ ಹರೀಶ್ ಮಾತನಾಡಿದರು.
Wed, 05 Feb 202502:36 AM IST
- ಬಂಟ್ವಾಳ ತಾಲೂಕು ವಿಟ್ಲ ಸಮೀಪ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಿನ್ನೆ ರಾತ್ರಿ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು, 30 ಲಕ್ಷ ರೂಪಾಯಿ ದೋಚಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Wed, 05 Feb 202502:04 AM IST
- ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ತಮ್ಮಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರಿ ಶಾಲೆಗೆ ನೀಡಿದ್ದಾರೆ. ಈ ಹಣದಿಂದ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ಖರೀದಿಸಲಾಗಿದೆ. ಆಶಾ ಕಾರ್ಯಕರ್ತೆಯ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Wed, 05 Feb 202501:42 AM IST
Karnataka Weather: ಶಿವರಾತ್ರಿಗೂ ಮೊದಲೇ ಬೆಂಗಳೂರಲ್ಲಿ ಚಳಿ ಬಿಡಿಸಿದೆ ಸೆಕೆ. ಎಲ್ಲೆಡೆ ವಾಡಿಕೆಗಿಂತ ಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಭಾಗಗಳಲ್ಲಿ ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳವಾಗಿದೆ. ಕರ್ನಾಟಕದ ಹವಾಮಾನ ಮುನ್ಸೂಚನೆ ವಿವರ ಹೀಗಿದೆ.