
Karnataka News Live February 7, 2025 : ಕನ್ನಡದ ಹಿರಿಯ ನಟ ದಿನೇಶ್ ಪುತ್ರ, ನವಗ್ರಹ ಚಿತ್ರದಲ್ಲಿ ಅಭಿನಯಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ನಿಧನ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 07 Feb 202506:03 PM IST
- ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಅವರ ಪುತ್ರ ಗಿರಿ ದಿನೇಶ್ ಹೃದಯಾಘಾತದಿಂದ ಶುಕ್ರವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
Fri, 07 Feb 202504:11 PM IST
- Heart Attack: ಕೋವಿಡ್ ಬಳಿಕ ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
Fri, 07 Feb 202512:47 PM IST
- Karnataka Kumbha Mela 2025: ಮೈಸೂರು ಜಿಲ್ಲೆ ತಿನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯಲಿದ್ದು, ಮೂರು ದಿನದ ಕಾರ್ಯಕ್ರಮಗಳ ವಿವರ ಇಲ್ಲಿದೆ.
Fri, 07 Feb 202511:48 AM IST
BMTC Fare Hike Impact: ಬಿಎಂಟಿಸಿ ಡಿಜಿಟಲ್ ಮೈಲಿಗಲ್ಲು ಸಾಧಿಸಿದ್ದು, ಫೆ.3 ರಂದು ಒಂದೇ ದಿನ ಯುಪಿಐ ಮೂಲಕವೆ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಹಾಗೆ ಬಿಎಂಟಿಸಿಯ ದೈನಂದಿನ ಆದಾಯ ಯುಪಿಐ ಮೂಲಕ 1 ಕೋಟಿ ರೂಪಾಯಿ ಗಡಿ ದಾಟಿದ ದಾಖಲೆ ಸೃಷ್ಟಿಯಾಗಿದೆ.
Fri, 07 Feb 202511:12 AM IST
Aero India 2025: ಬೆಂಗಳೂರಿನ ಯಲಹಂಕದಲ್ಲಿ ಫೆ 10 ರಿಂದ 14 ರ ತನಕ ನಡೆಯಲಿರುವ ಏರೋ ಇಂಡಿಯಾದಲ್ಲಿ ಭಾರತೀಯ ವಾಯುಪಡೆ ವಿಮಾನಗಳ ಪ್ರದರ್ಶನ ಪ್ರಮುಖ ಆಕರ್ಷಣೆ. ವಿಶ್ವದ ಬಲಾಢ್ಯ ವಾಯುಪಡೆಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ ಎಂಬುದನ್ನು ತಿಳಿಯಲು ಇದೊಂದು ನಿಮಿತ್ತ.
Fri, 07 Feb 202511:08 AM IST
- ಮಹಾ ಕುಂಭಮೇಳ ಪ್ರವಾಸಕ್ಕೆಂದು ಹೋಗಿದ್ದ ಬೆಳಗಾವಿಯವರ ವಾಹನ ಮಧ್ಯಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿ ನಾಲ್ವರು ಮೃತಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
Fri, 07 Feb 202510:25 AM IST
- ಆರ್‌ಬಿಐ ರೆಪೊ ದರ ಕಡಿತ ಮಾಡಿರುವುದರಿಂದ ಬ್ಯಾಂಕ್‌ಗಳು ಎಕ್ಸಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್‌ಆರ್) ಬಡ್ಡಿದರಗಳು ಇದರಿಂದ ಕಡಿಮೆಯಾಗಲಿವೆ. ಮನೆ ಖರೀದಿ ಅಥವಾ ಇತರೆ ಸಾಲ ಪಡೆದವರಿಗೆ ಇದರಿಂದ ಅನುಕೂಲವಾಗಲಿದೆ. ಇವರ ತಿಂಗಳ ಇಎಂಐ ಇಳಿಕೆ ಕಾಣಲಿದೆ. ಎಂಸಿಎಲ್‌ಆರ್ ಸಾಲದ ಬಡ್ಡಿದರ ಕಡಿಮೆಯಾಗಲಿದೆ.
Fri, 07 Feb 202508:43 AM IST
Mysore Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಿಲ್ಲುವುದಿಲ್ಲ ಎಂದು ಮೈಸೂರಿನ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
Fri, 07 Feb 202508:08 AM IST
ಕರ್ನಾಟಕ ಸರ್ಕಾರ ಕಳುಹಿಸಿದ್ದ ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಿರಸ್ಕರಿಸಿದ್ದಾರೆ. ಕಾನೂನು ಸಂಬಂಧಿಸಿದಂತೆ ಹಲವು ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
Fri, 07 Feb 202507:03 AM IST
Eternal Lamp Extinguished: ಮುಂಡಗೋಡ ತಾಲೂಕು ಚಿಗಳ್ಳಿಯ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಮೂರು ನಂದಾದೀಪಗಳು ಬುಧವಾರ (ಫೆ 5) ಆರಿ ಹೋದವು. ಏನಿದು ವಿದ್ಯಮಾನ- ಇಲ್ಲಿದೆ ವಿವರ.
Fri, 07 Feb 202506:52 AM IST
- ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿನ ಬೀದಿಗಳಲ್ಲಿ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಲಸಂದ್ರದ ವಿವಿಧೆಡೆ ಅಂಟಿಸಲಾಗಿರುವ ಇಂತಹ ಬೋರ್ಡ್‌ಗಳ ಫೋಟೋಗಳನ್ನು ಓದುಗರಾದ ವಿಶ್ವನಾಥ್ ಅವರು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಕ್ಕೆ ಕಳಿಸಿದ್ದಾರೆ.
Fri, 07 Feb 202505:27 AM IST
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸೈಟು ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದ ಮುಡಾ ಕೇಸ್ ತನಿಖೆಯನ್ನು ಸಿಬಿಐಗೆ ನೀಡಬೇಕಾದ್ದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇಂದು (ಫೆ 7) ತೀರ್ಪು ನೀಡಿದೆ. ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಇದರಿಂದ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
Fri, 07 Feb 202505:14 AM IST
BS Yediyurappa: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೊ ಕೇಸ್‌ನಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್, ಪೋಕ್ಸೊ ಕೇಸ್ ರದ್ದು ಇಲ್ಲ ಎಂದು ಸ್ಪಷ್ಟಪಡಿಸಿದೆ.
Fri, 07 Feb 202503:39 AM IST
ರಾಷ್ಟ್ರೀಯ ಅಕ್ಷರ ಹಬ್ಬ: ದಾವಣಗೆರೆಯ ಶ್ಯಾಮನೂರು ರಸ್ತೆಯ ಎಂಬಿಎ ಕಾಲೇಜು ಅಡಿಟೋರಿಯಂನಲ್ಲಿ ಇಂದಿನಿಂದ ಮೂರು ದಿನ 'ರಾಷ್ಟ್ರೀಯ ಅಕ್ಷರ ಹಬ್ಬ' ನಡೆಯಲಿದೆ. ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆಯ ಸಹಯೋಗದ ಕಾರ್ಯಕ್ರಮ ಇದಾಗಿದ್ದು, ಎಷ್ಟು ಗಂಟೆಗೆ ಏನು ಕಾರ್ಯಕ್ರಮ ಎಂಬಿತ್ಯಾದಿ ವಿವರ ಇಲ್ಲಿದೆ.