Karnataka News Live January 1, 2025 : Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 1, 2025 : Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ

Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ(canva)

Karnataka News Live January 1, 2025 : Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ

01:33 PM ISTJan 01, 2025 07:03 PM HT Kannada Desk
  • twitter
  • Share on Facebook
01:33 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 01 Jan 202501:33 PM IST

ಕರ್ನಾಟಕ News Live: Activa Electric: 1 ಸಾವಿರ ರೂಗೆ ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಬುಕ್ಕಿಂಗ್‌ ಮಾಡಿ; ಫೆಬ್ರವರಿಯಲ್ಲಿ ಡೆಲಿವರಿ, ಯಾವುದು ತಗೋತೀರಿ

  • Activa Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬುಕ್ಕಿಂಗ್‌ ಆರಂಭವಾಗಿದೆ. ಫೆಬ್ರವರಿ ತಿಂಗಳಲ್ಲಿಯೇ ಈ ಸ್ಕೂಟರ್‌ಗಳ ಡೆಲಿವರಿ ಆರಂಭವಾಗಲಿದೆ. ಇವುಗಳಲ್ಲಿ ಕ್ಯೂಸಿ 1 ಸ್ಕೂಟರ್‌ ಅನ್ನು ನಿರ್ದಿಷ್ಟವಾಗಿ ಭಾರತದ ಮಾರುಕಟ್ಟೆಗೆ ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಆ್ಯಕ್ಟಿವಾ ಇ ಸ್ಕೂಟರ್‌ ಅನ್ನು ಭಾರತ ಮತ್ತು ಇತರೆ ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.
Read the full story here

Wed, 01 Jan 202501:22 PM IST

ಕರ್ನಾಟಕ News Live: ಚೀಜ ರಾಜೀವ್‌, ವಿನೋದ್‌ ಸಹಿತ 14 ಪತ್ರಕರ್ತರಿಗೆ ಪರಿಸರ, ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿ: ಎಚ್‌ಟಿ ಕನ್ನಡದಲ್ಲಿ ಬರೆಯುವ ಗಿರೀಶ್‌ಗೂ ಗೌರವ

  • ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಪರಿಸರ ಹಾಗೂ ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿಗೆ ಪತ್ರಕರ್ತರು ಹಾಗೂ ಲೇಖಕರನ್ನು ಆಯ್ಕೆ ಮಾಡಲಾಗಿದೆ.
Read the full story here

Wed, 01 Jan 202512:50 PM IST

ಕರ್ನಾಟಕ News Live: ಶಬರಿಮಲೆಗೆ ಅರಣ್ಯ ಮಾರ್ಗದಲ್ಲಿ ಮೆಟ್ಟಲು ಹತ್ತಿ ದರ್ಶನ ಹೋಗುವುದಕ್ಕೆ ತಡೆ: ಪಾಸ್‌ ರದ್ದುಪಡಿಸಿದ ದೇವಸ್ಥಾನ ಮಂಡಳಿ

  • ಶಬರಿಮಲೆಗೆ ಅರಣ್ಯ ಮಾರ್ಗದ ಮೂಲಕ ಬರುತ್ತಿದ್ದ ಭಕ್ತರಿಗೆ ನೀಡುತ್ತಿದ್ದ ವಿಶೇಷ ಪಾಸ್‌ ವ್ಯವಸ್ಥೆಯನ್ನು ಆಡಳಿತ ಮಂಡಳಿ ತಾತ್ಕಾಲಿಕವಾಗಿ ರದ್ದುಪಡಿಸಿದೆ.
Read the full story here

Wed, 01 Jan 202511:59 AM IST

ಕರ್ನಾಟಕ News Live: ಅಮೆಜಾನ್‌ ಕಂಪನಿಯ 1 ಕೋಟಿ ರೂ ಉದ್ಯೋಗ ಬಿಟ್ಟು ಸ್ವಂತ ಸ್ಟಾರ್ಟಪ್‌ ಆರಂಭಿಸಿದ ಬೆಂಗಳೂರು ಟೆಕ್ಕಿಯ ಸೋಲಿನ ಕಥೆ ವೈರಲ್‌

  • ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಒಂದು ಕೋಟಿ ರೂಪಾಯಿಯ ಅಮೆಜಾನ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಸ್ಥಾಪಿಸಿ ಸೋಲು ಅನುಭವಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. 2025ರ ಹೊಸ ವರ್ಷದಲ್ಲಿಯಾದರೂ ಯಶಸ್ಸು ದೊರಕಲಿ ಎಂದು ಆಶಿಸಿದ್ದಾರೆ. ಅವರ ಸೋಲಿನ ಕಥೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Read the full story here

Wed, 01 Jan 202511:56 AM IST

ಕರ್ನಾಟಕ News Live: ಕಾಡಿನ ಕಥೆಗಳು: ಆರಾಧ್ಯರು ಅಂದು ಪ್ರೀತಿಯಿಂದ ನೆಟ್ಟ ಸಸಿ ಅರಣ್ಯವೇ ಆಯಿತು; ಚಾಮರಾಜನಗರ ಅರಣ್ಯಾಧಿಕಾರಿ ಹಸಿರು ಪ್ರೀತಿ ಆಗಲಿ ಅಜರಾಮರ

  • ಕಾಡು ಬೆಳೆಸುವುದು ದಾಖಲೆಗಳಲ್ಲಿ ಮಾತ್ರ ಸೀಮಿತವಾದರೆ ಹೇಗೆ, ಚಾಮರಾಜನಗರ ಜಿಲ್ಲೆಯ ಸಣ್ಣ ಹಳ್ಳಿಯಿಂದ ಅರಣ್ಯ ಇಲಾಖೆಗೆ ಸೇರಿದ ಶ್ರೀಕಂಠ ಆರಾಧ್ಯರು ಮೂರು ದಶಕದ ಹಿಂದೆ ನೆಟ್ಟ ಸಸಿಗಳು ಈಗ ಮೀಸಲು ಅರಣ್ಯ ರೂಪ ಪಡೆದಿರುವುದು ನೈಜ ಅರಣ್ಯ ಬೆಳೆಸಿದ ಕಾಯಕಕ್ಕೆ ಸಿಕ್ಕ ಫಲ. ಕಾಡಿನ ಕಥೆಗಳ ಈ ವಾರದ ಅಂತಹ ಕಥನವಿದು.
Read the full story here

Wed, 01 Jan 202510:58 AM IST

ಕರ್ನಾಟಕ News Live: ರೈಲ್ವೇ ಪ್ರಯಾಣಿಕರಿಗೆ ಶುಭ ಸುದ್ದಿ; ಬೆಂಗಳೂರು ಓಕಳಿಪುರಂ ಜಂಕ್ಷನ್‌ ನ ಎರಡು ಪಥಗಳು ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ ಸಾಧ್ಯತೆ

  • ಬೆಂಗಳೂರಿನ ಓಕಳಿಪುರಂನ ರೈಲ್ವೆ ಮಾರ್ಗದಲ್ಲಿನ ಅಷ್ಟ ಪಥಗಳಲ್ಲಿ ಆರು ಪಥಗಳು ಈಗಾಗಲೇ ಬಳಕೆಯಲ್ಲಿವೆ. ಉಳಿದೆರಡು ಪಥಗಳ ಕಾಮಗಾರಿಯೂ ಮುಗಿದಿದ್ದು ಮುಂದಿನ ತಿಂಗಳು ಬಳಕೆಗೆ ಲಭ್ಯವಾಗಲಿದೆ.
  • ವರದಿ: ಎಚ್.ಮಾರುತಿ, ಬೆಂಗಳೂರು
Read the full story here

Wed, 01 Jan 202509:29 AM IST

ಕರ್ನಾಟಕ News Live: ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರೇ ಇಲ್ಲದ ಮೇಲೆ ರಾಜೀನಾಮೆ ಏಕೆ ಕೊಡಬೇಕ್ರಿ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

  •  ಬೀದರ್‌ ನ ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ಉಲ್ಲೇಖವಾಗದೇ ಇರುವುದರಿಂದ ಅವರ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Read the full story here

Wed, 01 Jan 202508:58 AM IST

ಕರ್ನಾಟಕ News Live: IFS Posting: ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ: ಹಾಸನಕ್ಕೆ ಏಡುಕೊಂಡಲು ನೂತನ ಸಿಎಫ್‌, ಕೊಡಗು ಅರಣ್ಯ ವೃತ್ತ ಮತ್ತೆ ಖಾಲಿ

  • ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬಡ್ತಿ ಹಾಗೂ ಹೊಸ ಹುದ್ದೆಗಳಿಗೆ ಐಎಫ್‌ಎಸ್‌ಅಧಿಕಾರಿಗಳ ನೇಮಕ ಪ್ರಕ್ರಿಯೆ ಮಾಡಲಾಗಿದೆ. ಅಧಿಕಾರಿಗಳ ವರ್ಗಾವಣೆ ವಿವರ ಪಟ್ಟಿ ಇಲ್ಲಿದೆ.
Read the full story here

Wed, 01 Jan 202506:11 AM IST

ಕರ್ನಾಟಕ News Live: LPG Price Cut: ಕಮರ್ಷಿಯಲ್‌ ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ, ಹೊಸ ವರ್ಷದ ಮೊದಲ ದಿನ ಶುಭ ಸುದ್ದಿ

  • LPG Price Cut: ಹೊಸ ವರ್ಷದ ಮೊದಲ ದಿನ ಎಲ್‌ಪಿಜಿ ದರ ತುಸು ಇಳಿಕೆಯಾಗಿದೆ. ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ದರ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ದರ ಎಷ್ಟಿದೆ ಎಂಬ ಮಾಹಿತಿಯೂ ಇಲ್ಲಿದೆ.
Read the full story here

Wed, 01 Jan 202504:20 AM IST

ಕರ್ನಾಟಕ News Live: ಮಾಜಿ ಸಂಸದ ಡಿಕೆ ಸುರೇಶ್‌ ಸಹೋದರಿ ಹೆಸರಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣ; ಆರೋಪಿ ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಕೋರ್ಟ್‌ ಆದೇಶ

  • ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿಕೆ ಸುರೇಶ್‌ ಸಹೋದರಿ ಹೆಸರಿನಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣದ ಆರೋಪಿ ದಂಪತಿ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಪ್ರತ್ಯೇಕ ಪ್ರಕರಣದಲ್ಲಿ ಬೆಲೆ ಬಾಳುವ ದ್ವಿಚಕ್ರ ವಾಹನ ಕಳ್ಳನ ಬಂಧಿಸಿದ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ ವಾಹನಗಳ ಜಪ್ತಿ ಮಾಡಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Wed, 01 Jan 202503:37 AM IST

ಕರ್ನಾಟಕ News Live: Opinion: ಈ ಮಾತು ಗಂಡ-ಹೆಂಡತಿ ಬಿಟ್ಟು ಬೇರೆ ಯಾರು ಹೇಳಿದರೂ ತಪ್ಪೇ? ಬೇಡದ ಉಸಾಬರಿಗೆ ಏಕೆ ಹೋಗ್ತೀರಿ ಸ್ವಾಮಿ

  • ಯಾವ ಜಾತಿಯವರನ್ನು ಮದುವೆ ಮಾಡಿಕೊಳ್ಳಬೇಕು ಎಂಬುದು ಎರಡು ಮನಸ್ಸುಗಳ ತೀರ್ಮಾನ. ಎಷ್ಟು ಮಕ್ಕಳು ಮಾಡಿಕೊಳ್ಳಬೇಕು ಅಂತ ಗಂಡ- ಹೆಂಡತಿ ನಿರ್ಧಾರ ಮಾಡ್ತಾರೆ. ಅದನ್ನು ಒಂದು ಜಾತಿಯೋ- ಧರ್ಮವೋ- ಧರ್ಮಗುರುಗಳೋ ಯಾಕೆ ಹೇಳಬೇಕು? ಕಾಮನ್ ಸೆನ್ಸ್ ಅನ್ನೋ ದೃಷ್ಟಿಯಿಂದಲೂ ಇದು ತಪ್ಪು. (ಬರಹ: ನೀಲಮಾಧವ)
Read the full story here

Wed, 01 Jan 202503:28 AM IST

ಕರ್ನಾಟಕ News Live: ಮಂಗಳೂರು ಹೊರವಲಯದಲ್ಲಿ ಬೈಕ್ ಅಪಘಾತ: 22 ವರ್ಷದ ವಿದ್ಯಾರ್ಥಿ ಕಲಾವಿದ ಪ್ರವಿತ್ ಆಚಾರ್ಯ ದುರ್ಮರಣ

  • Mangaluru Road Accident: ಮಂಗಳೂರು ಹೊರವಲಯದಲ್ಲಿ ನಿನ್ನೆ (ಡಿಸೆಂಬರ್ 31) ಬೈಕ್ ಅಪಘಾತ ಸಂಭವಿಸಿದ್ದು,  22 ವರ್ಷದ ವಿದ್ಯಾರ್ಥಿ ಕಲಾವಿದ ಪ್ರವಿತ್ ಆಚಾರ್ಯ ದುರ್ಮರಣಕ್ಕೀಡಾದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Wed, 01 Jan 202503:09 AM IST

ಕರ್ನಾಟಕ News Live: ಉಗ್ರ ಕೌಸರ್‌ಗೆ 7 ವರ್ಷ ಕಠಿಣ ಸಜೆ ವಿಧಿಸಿದ ಎನ್‌ ಐಎ ನ್ಯಾಯಾಲಯ‌; ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್‌ ಹತ್ಯೆ ಆರೋಪಿಗಳಿಗೆ ಜೀವಾವಧಿ

  • Court Verdict: ಎನ್‌ಐಎ ನ್ಯಾಯಾಲಯ‌ವು ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಕೌಸರ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

Read the full story here

Wed, 01 Jan 202502:32 AM IST

ಕರ್ನಾಟಕ News Live: IAS, IPS Promotions: 67 ಐಎಎಸ್‌, 65 ಐಪಿಎಸ್‌, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳ, ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್

  • IAS, IPS Promotions: ನಾಗರಿಕ ಸೇವಾ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಹೊಸ ವರ್ಷದ ಮುನ್ನಾದಿನ 150ಕ್ಕೂ ಹೆಚ್ಚು ಅಧಿಕಾರಿಗಳಿಗೆ ಮುಂಬಡ್ತಿ ಆದೇಶ ಪ್ರಕಟಿಸಿದೆ. 67 ಐಎಎಸ್‌, 65 ಐಪಿಎಸ್‌, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳ ಘೋಷಣೆಯಾಗಿದೆ. ಅದರ ವಿವರ ಇಲ್ಲಿದೆ.

Read the full story here

Wed, 01 Jan 202501:30 AM IST

ಕರ್ನಾಟಕ News Live: New Year Resolutions: ಹೊಸ ವರ್ಷ 2025 ರಲ್ಲಿ ಸರಳವಾಗಿ ನಾವು ಅನುಸರಿಸಬಹುದಾದ ಪರಿಸರ ಸ್ನೇಹಿ 10 ಸೂತ್ರಗಳು

  • ಹೊಸ ವರ್ಷ 2025 ನಮ್ಮ ಬದುಕು ಹೇಗೆ ಪರಿಸರ ಸ್ನೇಹಿಯಾಗಿರಬೇಕು.ನಮ್ಮ ಮನೆ, ಮನೆಯ ಆವರಣದೊಳಗೆ ಇದನ್ನು ಜಾರಿಗೊಳಿಸುವುದು ಹೇಗೆ ಎನ್ನುವುದಕ್ಕೆ ಇಲ್ಲಿವೆ ಸರಳ ಸೂತ್ರಗಳು.

Read the full story here

Wed, 01 Jan 202512:34 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಹೊಸ ವರ್ಷ ಮೊದಲ ದಿನ ಬೆಂಗಳೂರು ಸುತ್ತಮುತ್ತ ಇಂದು ಮುಂಜಾನೆ ಮಂಜು, ಚಳಿ, ಉಳಿದೆಡೆ ಚಳಿಗಾಲದ ಒಣಹವೆ

  • Weather Today Jan 1, 2025: ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಕರ್ನಾಟಕ ಹವಾಮಾನ ಇಂದು ಹೀಗಿರಲಿದೆ. ಹೊಸ ವರ್ಷ ಮೊದಲ ದಿನ ಬೆಂಗಳೂರು ಸುತ್ತಮುತ್ತ ಇಂದು ಮುಂಜಾನೆ ಮಂಜು, ಚಳಿ, ಉಳಿದೆಡೆ ಚಳಿಗಾಲದ ಒಣಹವೆ ಇರಬಹುದು. ಪೂರ್ತಿ ಹವಾಮಾನ ವಿವರಕ್ಕೆ ಈ ವರದಿ ಗಮನಿಸಿ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter