
Karnataka News Live January 17, 2025 : Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 17 Jan 202505:09 PM IST
Mangalore Bank Robbery: ಮಂಗಳೂರು ಹೊರವಲಯದ ಬ್ಯಾಂಕ್ ದರೋಡೆ: ಆರಂಭಿಕ ಅಂದಾಜಿನ ಪ್ರಕಾರ ಹೊತ್ತೊಯ್ದದ್ದು 4 ಕೋಟಿ ರೂ ಮೊತ್ತದ ಹಣ, ಆಭರಣ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Fri, 17 Jan 202504:38 PM IST
MUDA Scam: ಸಿಎಂ ಸಿದ್ದರಾಮಯ್ಯಗೆ ಸಂಬಂಧಿಸಿದ ಮುಡಾ ಸೈಟು ಅಕ್ರಮ ಹಂಚಿಕೆ ಪ್ರಕರಣದಲ್ಲಿ 300 ಕೋಟಿ ರೂ ಮೌಲ್ಯದ ಸ್ಥಿರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು (ಜನವರಿ 17) ಜಪ್ತಿ ಮಾಡಿದೆ. ಈ ವಿದ್ಯಮಾನವು ಸಂಚಲನ ಮೂಡಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Fri, 17 Jan 202504:15 PM IST
C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿಯಲ್ಲಿ ಸಿಟಿ ರವಿ ಅವಾಚ್ಯ ಪದ ಬಳಸಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಧ್ವನಿ ಪರೀಕ್ಷೆ ಸೇರಿ ಸಿಐಡಿ ತನಿಖೆಗೆ ಸಹಕರಿಸುವಂತೆ ಸಿಟಿ ರವಿಗೆ ಕೋರ್ಟ್ ತಾಕೀತು ಮಾಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Fri, 17 Jan 202503:15 PM IST
- ಪೋಕ್ಸೋ ಪ್ರಕರಣ; ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಖುದ್ದು ಹಾಜರಾತಿಗೆ ವಿನಾಯಿತಿ ವಿಸ್ತರಿಸಲು ಅನುಮತಿ ನೀಡಿದ್ದಾರೆ.
Fri, 17 Jan 202512:28 PM IST
Bidar SBI ATM Robbery: ಬೀದರ್ ಎಸ್‌ಬಿಐ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಪಿ ಹರಿಶೇಖರನ್ ಸುದ್ಧಿಗೋಷ್ಠಿ ನಡೆಸಿದ್ದು, ಕೇಸ್‌ಗೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ನೀಡಿದರು. ಬೀದರ್ ಎಸ್‌ಬಿಐ ಎಟಿಎಂ ದರೋಡೆ ಸಂಬಂಧ ಡಕಾಯಿತರಿಬ್ಬರು, ಮ್ಯಾನೇಜರ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Fri, 17 Jan 202511:29 AM IST
- ವಿಜಯಪುರದಲ್ಲಿ ಪೊಲೀಸರು ದರೋಡೆಕೋರರ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶ ಮೂಲದ ಒಬ್ಬ ದರೋಡೆಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ.
Fri, 17 Jan 202511:11 AM IST
Kotekar Bank Robbery: ಮಂಗಳೂರು ಸಮೀಪದ ಉಳ್ಳಾಲದ ಕೆಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಹಗಲುದರೋಡೆ ನಡೆದಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Fri, 17 Jan 202510:22 AM IST
Bidar SBI ATM Robbery: ಬೀದರ್ ಎಟಿಎಂ ವಾಹನ ದರೋಡೆ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದೆ. ಅವರನ್ನು ಪತ್ತೆ ಹಚ್ಚಿ ಬಂಧಿಸುವುದಕ್ಕೆ ಪೊಲೀಸ್ ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ ಮಾಹಿತಿ ನೀಡಿದರು.
Fri, 17 Jan 202510:04 AM IST
Indian Railways: ಬೆಂಗಳೂರು ರೈಲ್ವೆ ನಿಲ್ದಾಣಗಳ ಉನ್ನತೀಕರಣ, ಮೇಲ್ದರ್ಜೆಗೇರಿಸುವಿಕೆ ಕಾರ್ಯಗಳನ್ನು ಭಾರತೀಯ ರೈಲ್ವೆ ಕೈಗೆತ್ತಿಕೊಂಡಿದೆ. ಇದರಂತೆ, 180 ಕೋಟಿ ರೂ ಯೋಜನಾ ವೆಚ್ಚದಲ್ಲಿ ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ ನಿರ್ಮಾಣವಾಗಲಿದೆ.
Fri, 17 Jan 202509:27 AM IST
- ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ ನಡೆದಿದೆ. ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆಕೋರರು ಬಂದೂಕು ತೋರಿಸಿ ಲೂಟಿ ಮಾಡಿದ್ದಾರೆ.
Fri, 17 Jan 202509:19 AM IST
Bengaluru Metro Fare Hike: ಬೆಂಗಳೂರು ಮೆಟ್ರೋ ಟಿಕೆಟ್ ದರ ಹೆಚ್ಚಳ ಖಚಿತವಾಗಿದ್ದು, ಬಹುತೇಕ ನಾಳೆಯೇ ನಮ್ಮ ಮೆಟ್ರೋ ಟೋಕನ್ ದರ ಶೇಕಡ 10 ರಿಂದ ಶೇಕಡ 15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
Fri, 17 Jan 202507:45 AM IST
Karnataka Excise Dept Transfers: ಅಬಕಾರಿ ಇಲಾಖೆ ಉದ್ಯೋಗಿಗಳ ವರ್ಗಾವಣೆ ವ್ಯವಸ್ಥೆಯಲ್ಲಿ ಹೊಸ ಚೌಕಟ್ಟು ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಾಗರೀಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು, 2025 ಅನುಮೋದನೆ ಸಿಕ್ಕಿದ್ದು, ಅಂತಿಮ ನಿಯಮ ಜಾರಿಗೊಂಡರೆ ಕನಿಷ್ಠ ಸೇವಾವಧಿ ಜಾರಿಗೆ ಬರಲಿದೆ.
Fri, 17 Jan 202507:19 AM IST
Bidar SBI ATM Robbery: ಬೀದರ್‌ನ ಎಸ್‌ಬಿಐ ಎಟಿಎಂ ಡಕಾಯಿತಿ ಕೇಸ್ ನಿಗೂಢವಾಗಿ ಉಳಿದಿದೆ. ಈ ಪ್ರಕರಣದ ಆರೋಪಿಗಳ ಬಂಧನವಾಯಿತಾ, ಇದುವರೆಗೆ ಏನೇನಾಯಿತು ಎಂಬ ಕುತೂಹಲ ಸಹಜ. ಹೀಗಾಗಿ ಈ ಕೇಸ್‌ಗೆ ಸಂಬಂಧಿಸಿದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Fri, 17 Jan 202505:08 AM IST
US Consulate in Bengaluru: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಚೊಚ್ಚಲ ಅಮೆರಿಕ ರಾಯಭಾರ ಕಚೇರಿ ಶುರುವಾಯಿತು. ಇಂದು (ಜನವರಿ 17) ಯುಎಸ್ ಕಾನ್ಸುಲೇಟ್ ಉದ್ಘಾಟನೆ ನಡೆದಿದ್ದು, ಬೆಂಗಳೂರಿಗರ 4 ಮುಖ್ಯ ನಿರೀಕ್ಷೆಗಳ ಕಡೆಗೊಂದು ನೋಟ ಇಲ್ಲಿದೆ.
Fri, 17 Jan 202504:31 AM IST
- Bangalore Crime: ಬ್ಯಾಂಕಾಕ್ ನಿಂದ ಬೆಂಗಳೂರಿಗೆ ತಂದಿದ್ದ 23 ಕೋಟಿ ರೂಪಾಯಿ ಮೌಲ್ಯ ಗಾಂಜಾವನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Fri, 17 Jan 202504:19 AM IST
BBMP E Khata System: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಐದು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಇ-ಖಾತಾಗಳನ್ನು ನೀಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಆದ್ದರಿಂದ ಬೆಂಗಳೂರಲ್ಲಿ ಇ ಖಾತಾ ಪಡೆಯುವುದು ಹೇಗೆ ಎಂದು ಚಿಂತಿಸಬೇಡಿ, ಖಾತಾ ಇಲ್ಲದ ಆಸ್ತಿ ಮಾಲೀಕರಾಗಿದ್ದರೆ ಹೀಗೆ ಮಾಡಬಹುದು ನೋಡಿ.
Fri, 17 Jan 202503:00 AM IST
- ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಅವಳಿ ಗೋಪುರ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. 8.72 ಎಕರೆ ಪ್ರದೇಶದಲ್ಲಿ ಅವಳಿ ಗೋಪುರ ನಿರ್ಮಿಸುವ ಜವಬ್ಧಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. ರಸ್ತೆಗಾಗಿ ಬೆಂಗಳೂರು ಅರಮನೆ ಭೂಮಿ ವಶ ವಿಚಾರದಲ್ಲಿ ಮೈಸೂರು ರಾಜಮನೆತನದ ವಿರುದ್ಧ ಮತ್ತೊಂದು ಕಾನೂನು ಸಂಘರ್ಷಕ್ಕೆ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.
Fri, 17 Jan 202503:00 AM IST
- Karnataka School Guide 2025: ಮಕ್ಕಳ ಮುಂದಿನ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗನಿಂದಲೇ ಆರ್ಥಿಕ ಲೆಕ್ಕಾಚಾರ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ಟಿಪ್ಸ್‌ಗಳು ಇಲ್ಲಿವೆ.
Fri, 17 Jan 202502:18 AM IST
Fri, 17 Jan 202501:30 AM IST
Mandya Agriculture University: ಹಳೆ ಮೈಸೂರು ಭಾಗವನ್ನು ಕೇಂದ್ರವಾಗಿಟ್ಟುಕೊಂಡು ಮಂಡ್ಯದಲ್ಲಿ ಸಮಗ್ರ ಕೃಷಿ ವಿವಿ ಸ್ಥಾಪನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
Fri, 17 Jan 202501:21 AM IST
- ರಾಜ್ಯದ ಒಳನಾಡಿನ ಕನಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮುಂದಿನ 6 ದಿನಗಳ ಕಾಲ ಒಣ ಹವೆ ಮುಂದುವರಿಯಲಿದೆ. ಮುಂಜಾನೆ ಸಮಯದಲ್ಲಿ ಅಲ್ಲಲ್ಲಿ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಜನವರಿ 17 ಶುಕ್ರವಾರದ ಹವಾಮಾನ ವರದಿ ಇಲ್ಲಿದೆ.