Karnataka News Live January 18, 2025 : ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 18, 2025 : ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

Karnataka News Live January 18, 2025 : ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

03:06 PM ISTJan 18, 2025 08:36 PM HT Kannada Desk
  • twitter
  • Share on Facebook
03:06 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 18 Jan 202503:06 PM IST

ಕರ್ನಾಟಕ News Live: ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್​​ಗೆ ಜೀವಮಾನ ಸಾಧನೆ ಪ್ರಶಸ್ತಿ

  • ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸೂಜಿ ಚಿಕಿತ್ಸಾ ಸ್ನಾತಕೋತ್ತರ ಹಾಗೂ ಪದಗ್ರಹಣ ಸಮಾರಂಭದಲ್ಲಿ ಅಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ತಜ್ಞ ಡಾ. ಎಂ ಈಶ್ವರ್​ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
Read the full story here

Sat, 18 Jan 202502:32 PM IST

ಕರ್ನಾಟಕ News Live: ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವ; 139 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ, ಭೂಮಿಕಾಗೆ 18 ಸ್ವರ್ಣ

  • Mysore University 105th convocation: ಮೈಸೂರು ವಿಶ್ವವಿದ್ಯಾಲಯ 105ನೇ ಘಟಿಕೋತ್ಸವದಲ್ಲಿ 139 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪಡೆದಿದ್ದಾರೆ. ಎಂಎಸ್ಸಿ ವಿದ್ಯಾರ್ಥಿನಿ ಭೂಮಿಕಾ ಅವರು 18 ಗೋಲ್ಡ್​ ಮೆಡಲ್​ಗೆ ಕೊರೊಳೊಡ್ಡಿದ್ದಾರೆ.
Read the full story here

Sat, 18 Jan 202501:42 PM IST

ಕರ್ನಾಟಕ News Live: ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ; ಏಪ್ರಿಲ್​ನಿಂದ ಪ್ರತಿ ತಿಂಗಳು 10 ಸಾವಿರ ಮುಂಗಡ ಪಾವತಿ

  • ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸಿಲ್ಲ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Read the full story here

Sat, 18 Jan 202501:13 PM IST

ಕರ್ನಾಟಕ News Live: KCET 2025: ಸಿಇಟಿ ಪಠ್ಯಕ್ರಮ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಜನವರಿ 23ರಿಂದ ಅರ್ಜಿ ಸಲ್ಲಿಸಿ

  • Karnataka CET Exam 2025: ಸಿಇಟಿ ಪಠ್ಯಕ್ರಮ/ಸಿಲೇಬಸ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಎಂಜಿನಿಯರಿಂಗ್‌, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏಪ್ರಿಲ್‌ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.
Read the full story here

Sat, 18 Jan 202511:20 AM IST

ಕರ್ನಾಟಕ News Live: Aero India 2025: ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ; ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ; ಬಿಬಿಎಂಪಿ ಮಹತ್ವದ ಆದೇಶ

  • Aero India 2025: ಬೆಂಗಳೂರು ಎರಡು ವರ್ಷಕ್ಕೆ ಒಮ್ಮೆ ನಡೆಯುವ ಏರ್‌ ಶೋಗೆ ಸಜ್ಜಾಗಿದೆ. ಏರೋ ಇಂಡಿಯಾ 2025 ಫೆಬ್ರವರಿಯಲ್ಲಿ ನಡೆಯಲಿರುವ ಕಾರಣ, ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ. ನಾನ್‌ ವೆಜ್‌ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ಈ ಕುರಿತು ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.

Read the full story here

Sat, 18 Jan 202506:53 AM IST

ಕರ್ನಾಟಕ News Live: KMF Nandini: ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌

  • KMF Nandini: ನಂದಿನಿ ಬ್ರಾಂಡ್‌ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಆದರೆ, ಚಿಕ್ಕಬಳ್ಳಾಪುರದಲ್ಲಿ ಹಾಲಿನ ಡೈರಿಗಳಲ್ಲಿ ಕಲಬೆರಕೆಯಾಗುತ್ತಿರುವ ವಿಚಾರ ಗಮನಸೆಳೆದಿದೆ. ಅಲ್ಲಿನ ಸಿಬ್ಬಂದಿಯೇ ಅದರಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ. ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌ ಆದ ಕೂಡಲೇ, ಚಿಮುಲ್‌ ಸಿಬ್ಬಂದಿ ವಜಾಗೊಳಿಸಿದೆ.

Read the full story here

Sat, 18 Jan 202505:44 AM IST

ಕರ್ನಾಟಕ News Live: ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

  • ಬೀದರ್‌ ಜಿಲ್ಲೆಯ ಜಲಸಂಗಿ ಗ್ರಾಮದಲ್ಲಿ ಸ್ಯಾಟಲೈಟ್ ಪೇಲೋಡ್ ಬಿದ್ದಿದೆ. ಇದರಿಂದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ, ಯಾವುದೇ ಅಪಾಯ ಇಲ್ಲ ಎಂದು ಗ್ರಾಮದ ಜನರು ನಿರಾಳರಾಗಿದ್ದಾರೆ.
Read the full story here

Sat, 18 Jan 202505:18 AM IST

ಕರ್ನಾಟಕ News Live: ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ

  • Sulya Crime: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. 

Read the full story here

Sat, 18 Jan 202504:36 AM IST

ಕರ್ನಾಟಕ News Live: ಮೈಸೂರು: ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

  • Hunsur ATM Fraud: ಬೀದರ್‌ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಕಾವು ಆರುವ ಮೊದಲೇ ಬ್ಯಾಂಕ್ ದರೋಡೆ ಗಮನಸೆಳೆದಿದೆ. ಇನ್ನೊಂದೆಡೆ, ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಎಸಗಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. 

Read the full story here

Sat, 18 Jan 202504:26 AM IST

ಕರ್ನಾಟಕ News Live: ಬೀದರ್‌ ಎಟಿಎಂ ಹಣ ದರೋಡೆ ಪ್ರಕರಣ; ಆರೋಪಿಗಳ ಗುರುತು ಪತ್ತೆ, ಮೃತನ ಕುಟುಂಬಕ್ಕೆ 8 ಲಕ್ಷ ರೂ ಪರಿಹಾರ

  • ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ಹಣ ದರೋಡೆ ನಡೆದ ಪ್ರಕರಣ ಸಂಬಂಧ, ಈಗಾಗಲೇ ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅತ್ತ, ದರೋಡೆಕಾರರ ಗುಂಡಿನ ದಾಳಿಗೆ ಬಲಿಯಾದ ಸಿಬ್ಬಂದಿ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ. 
Read the full story here

Sat, 18 Jan 202503:50 AM IST

ಕರ್ನಾಟಕ News Live: Namma Metro timings: ನಾಳೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್‌- ಇಂದಿರಾನಗರ ರೈಲು ಸಂಚಾರದಲ್ಲಿ ವ್ಯತ್ಯಯ

  • Namma Metro timings: ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ. ನಾಳೆ (ಜನವರಿ 19) ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್‌- ಇಂದಿರಾನಗರ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಕುರಿತ ವಿವರ ಇಲ್ಲಿದೆ.

Read the full story here

Sat, 18 Jan 202502:30 AM IST

ಕರ್ನಾಟಕ News Live: ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

  • Melkote Dasoha: ಪ್ರಮುಖ ಧಾರ್ಮಿಕ ಪ್ರವಾಸಿ ತಾಣ ಮಂಡ್ಯದ ಮೇಲುಕೋಟೆಯಲ್ಲಿ  ವಾರಾಂತ್ಯ ಮತ್ತು ರಜೆ ದಿನಗಳಂದು ನೀಡುವ ದಾಸೋಹ ಸೇವೆಗೆ ಚಾಲನೆ ಸಿಕ್ಕಿದೆ.

Read the full story here

Sat, 18 Jan 202502:21 AM IST

ಕರ್ನಾಟಕ News Live: 2025ರ ಆರಂಭದಲ್ಲೇ ಕ್ರೈಮ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯ 2 ದರೋಡೆಗಳು

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯಲ್ಲಿ 2 ದೊಡ್ಡ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜನವರಿ 3ರಂದು ಬಂಟ್ವಾಳ ತಾಲೂಕಿನ ಬೀಡಿ ಉದ್ಯಮಿಯೊಬ್ಬರ ಮನೆಗೆ ಇಡಿ ಹೆಸರಿನಲ್ಲಿ ನಕಲಿ ರೇಡ್ ನಡೆದಿದ್ದರೆ, ಜನವರಿ 17ರಂದು ಉಳ್ಳಾಲದದ ಕೋಟೆಕಾರ್ ಬ್ಯಾಂಕ್‌ನಲ್ಲಿ ಮತ್ತೊಂದು ದರೋಡೆ ನಡೆದಿದೆ.
Read the full story here

Sat, 18 Jan 202501:30 AM IST

ಕರ್ನಾಟಕ News Live: ಭದ್ರಾ, ಚಿತ್ರದುರ್ಗ ಉತ್ತರೆಗುಡ್ಡ, ಅರಸೀಕೆರೆ, ಕೊಪ್ಪಳ ಬಂಕಾಪುರ ವನ್ಯಜೀವಿಧಾಮ ಇನ್ನು ಪರಿಸರ ಸೂಕ್ಷ್ಮ ವಲಯ: ಇಲ್ಲಿ ಮರ ಕಡಿಯಲು ಬೇಕು ಅನುಮತಿ

  • ಕರ್ನಾಟಕದಲ್ಲಿ ಪ್ರಮುಖ ನಾಲ್ಕು ವನ್ಯಜೀವಿಧಾಮಗಳ ಪ್ರದೇಶಗಳು ಇನ್ನು ಮುಂದೆ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರಲಿವೆ. ಯಾವೆಲ್ಲಾ ಪ್ರದೇಶ ಇದೆ ಇಲ್ಲಿದೆ ವಿವರ.
Read the full story here

Sat, 18 Jan 202501:23 AM IST

ಕರ್ನಾಟಕ News Live: Karnataka Weather: ರಾಜ್ಯದಾದ್ಯಂತ ಇಂದು ಚಳಿ ಮುಂದುವರಿಕೆ; ಜನವರಿ 19ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

  • ಜನವರಿ 19ರ ಭಾನುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter