
Karnataka News Live January 19, 2025 : ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 19 Jan 202501:13 PM IST
Koraga Tribe land rights: ಮಂಗಳೂರು ವಿವಿ ಪ್ರೊಫೆಸರ್ ಡಾ ಮೊಹಮ್ಮದ್ ಪೀರ್ ಸಮಿತಿ ಸಲ್ಲಿಸಿದ ವರದಿ 30 ವರ್ಷಗಳಿಂದ ನನೆಗುದಿಗೆ ಬಿದ್ದುಕೊಂಡಿದೆ. ಸಮಿತಿ ವರದಿ ಪ್ರಕಾರ ಸಿಗಬೇಕಾಗಿದ್ದ ಹಕ್ಕಿನ ಭೂಮಿ ಇನ್ನೂ ಕೊರಗ ಸಮುದಾಯದವರಿಗೆ ಸಿಕ್ಕಿಲ್ಲ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
Sun, 19 Jan 202510:37 AM IST
- TNPura Kumbh Mela 2025: ಮೈಸೂರು ಜಿಲ್ಲೆಯ ಕಾವೇರಿ ಹಾಗೂ ಕಬಿನಿ ನದಿನಿ ಸಂಗಮದ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
Sun, 19 Jan 202509:13 AM IST
- Hubli News: ಹುಬ್ಬಳ್ಳಿ ನಗರದಲ್ಲಿ ಸಾಲಗಾರರ ಕಾಟ ತಾಳಲಾರದೇ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಟ್ರಕ್‌ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರ ಪ್ರಕರಣ ನಡೆದಿದೆ.
Sun, 19 Jan 202508:40 AM IST
- Hubballi and Mysore Crime: ಹಣದ ಆಸೆ ತೋರಿಸಿ ಅಪ್ರಾಪ್ತ ಯುವತಿಯರೊಂದಿಗೆ ಕಾಮದಾಟ ನಡೆಸುತ್ತಿದ್ದ ವಿಕೃತಕಾಮಿ ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೈಸೂರಿನಲ್ಲಿ ಎಂಟಿಎಂಗೆ ಹಣ ತುಂಬಿಸದೆ ತೆಗೆದುಕೊಂಡ ಹೋದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Sun, 19 Jan 202507:59 AM IST
- Hubballi Crime: ಪಿಎಂ ಕುಸುಮ್-ಬಿ ಯೋಜನೆ ಹೆಸರಿನಲ್ಲಿ ರೈತರಿಗೆ ನಕಲಿ ಅನುಮೋದನೆ ಪತ್ರ ರವಾನಿಸಿ ಹಣ ವಸೂಲಿ ಮಾಡಲು ವಂಚಕರು ಯತ್ನಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
Sun, 19 Jan 202507:55 AM IST
Bangalore cyber fraud: ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣ ವರದಿಯಾಗಿದ್ದು, ಉದ್ಯಮಿಯೊಬ್ಬರಿಗೆ ಐಟಿ ಅಧಿಕಾರಿಗಳೆಂದು ವಂಚಿಸಿ 35 ಲಕ್ಷ ರೂ. ದೋಚಿದ ಪ್ರಕರಣ ನಡೆದಿದೆ.
Sun, 19 Jan 202505:40 AM IST
- ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕ ಕಷ್ಟದಲ್ಲಿರುವವರಿಗೆ ಆಹಾರ ನೀಡಿ ಸ್ಪಂದಿಸಿದ ರೀತಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Sun, 19 Jan 202504:37 AM IST
Indian Railways: ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಸಂಚರಿಸುತ್ತಿದ್ದ ಮೆಮು ರೈಲು ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಸೋಮವಾರದಿಂದ ಈ ರೈಲು ಸಂಚರಿಸುವುದಿಲ್ಲ.
Sun, 19 Jan 202504:05 AM IST
Aero India 2025: ಏರೋ ಇಂಡಿಯಾ 2025 ಭಾಗವಾಗಿ ಬೆಂಗಳೂರಿನ ಯಲಹಂಕ ವಾಯುನೆಲೆಯ ಪ್ರದೇಶದಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ.
Sun, 19 Jan 202503:04 AM IST
- ಮಾರಾಟ ಮಾಡಲು ನೀಡಿದ್ದ 8 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಮಾರಾಟ ಪ್ರತಿನಿಧಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ. ಇದೇ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಾಮರಾಜಪೇಟೆಯ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಹಾಗೂ 40 ಮಂದಿ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್.ಮಾರುತಿ, ಬೆಂಗಳೂರು)
Sun, 19 Jan 202502:55 AM IST
Unsung hero: ಇವರೊಬ್ಬ ವಿಶಿಷ್ಟ ಸಾಧಕ. 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಸಾಧನೆ ಇವರದ್ದು. ಅಂದ ಹಾಗೆ ಇವರು ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಕೂಡ. ಹೆಸರು ಗಣೇಶ್ ಕುಲಾಲ್. ಈ ತೆರೆಮರೆಯ ಸಾಧಕನನ್ನು ಗುರುತಿಸಿರುವ ಮಂಗಳೂರು ಪ್ರೆಸ್ ಕ್ಲಬ್, ತನ್ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ. (ವರದಿ - ಹರೀಶ್ ಮಾಂಬಾಡಿ, ಮಂಗಳೂರು)
Sun, 19 Jan 202501:55 AM IST
Success Story: ನರಿಕೊಂಬು ಗ್ರಾಮದ ಮುಳ್ಳುಕಂಟಿಗಳಿಂದ ತುಂಬಿದ್ದ ಒಂದೂವರೆ ಎಕರೆ ಪಾಳುಭೂಮಿಯನ್ನು ಖರೀದಿಸಿ, ಹಸಿರು ತೋಟವನ್ನಾಗಿಸಿದ ತೆರೆಮರೆಯ ಸಾಧಕ ಇವರು. ಸಜೀಪಮೂಡದಲ್ಲೂ ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್. ಅವರ ಯಶೋಗಾಥೆ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
Sun, 19 Jan 202501:18 AM IST
- ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜ.19) ಬೆಳಗ್ಗೆಯೇ ಮಳೆ ಆರಂಭವಾಗಿದೆ. ರಾಜ್ಯದ ಕರಾವಳಿ ಸೇರಿದಂತೆ 11 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.