Karnataka News Live January 22, 2025 : ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 22, 2025 : ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

Karnataka News Live January 22, 2025 : ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

03:46 PM ISTJan 22, 2025 09:16 PM HT Kannada Desk
  • twitter
  • Share on Facebook
03:46 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 22 Jan 202503:46 PM IST

ಕರ್ನಾಟಕ News Live: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

  • Republic Day 2025: ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ಜ. 26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ.

Read the full story here

Wed, 22 Jan 202501:25 PM IST

ಕರ್ನಾಟಕ News Live: SSLC Question Papers: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿಗೆ 2025ರ ಮಾದರಿ ಪ್ರಶ್ನೆ ಪತ್ರಿಕೆಗಳು, ಪಿಡಿಎಫ್‌ ಡೌನ್‌ಲೋಡ್‌ ಮಾಡಿ

  • 2025 Sslc Examination Model Question Papers: ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಅನುಕೂಲವಾಗುವಂತೆ 2025ರ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಈ ಪಿಡಿಎಫ್‌ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Read the full story here

Wed, 22 Jan 202511:04 AM IST

ಕರ್ನಾಟಕ News Live: ಯಲ್ಲಾಪುರ ಅಪಘಾತ: ನರೇಂದ್ರ ಮೋದಿ, ಅಮಿತ್‌ ಶಾ ಸಂತಾಪ, ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ ಪರಿಹಾರ ಘೋಷಣೆ

  • ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ 10 ಜನರು ಮೃತಪಟ್ಟು, 15 ಜನರು ಗಾಯಗೊಂಡ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪರಿಹಾರ ನಿಧಿಯಿಂದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
Read the full story here

Wed, 22 Jan 202510:00 AM IST

ಕರ್ನಾಟಕ News Live: Robbery: ಕರ್ನಾಟಕ ಕರಾವಳಿ ಆಯಿತೇ ದರೋಡೆಕೋರರ ಟಾರ್ಗೆಟ್? ಇವರಿಗೆ ಮಾಹಿತಿ ನೀಡಿದ ಸ್ಥಳೀಯರು ಯಾರು?

  • ಕರ್ನಾಟಕ ಕರಾವಳಿ ಭಾಗದಲ್ಲಿ ದರೋಡೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನ ಏರಿಕೆ ಕಾಣುತ್ತಿವೆ. ಅದಕ್ಕೆ ನಿಖರವಾದ ಕಾರಣವೇನು? ದರೋಡೆಕಾರರಿಗೆ ಮಾಹಿತಿ ನೀಡುತ್ತಿರುವ ಸ್ಥಳೀಯರು ಯಾರು? ಇಲ್ಲಿದೆ ಸಂಪೂರ್ಣ ವಿವರ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
Read the full story here

Wed, 22 Jan 202508:03 AM IST

ಕರ್ನಾಟಕ News Live: ಸಾರ್ವಜನಿಕರ ಹಣದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸುವ ಕೆಲಸ ಮಾಡುತ್ತಿವೆ; ರಾಜೀವ ಹೆಗಡೆ ಬರಹ

  • ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ 25 ಅಡಿ ಎತ್ತರದ ಗಾಂಧೀಜಿ ಪುತ್ಥಳಿಯನ್ನು ಚರಕ ನೇಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ಜನರ ಹಣ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಆಕ್ಷೇಪ ಕೇಳಿಬರುತ್ತಲೇ ಇದೆ. ಈ ವಿಚಾರವಾಗಿ ಲೇಖಕ ರಾಜೀವ್‌ ಹೆಗಡೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

Read the full story here

Wed, 22 Jan 202506:39 AM IST

ಕರ್ನಾಟಕ News Live: ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ

  • Yellapura Accident: ಯಲ್ಲಾಪುರ ತಾಲೂಕು ಅರಬೈಲ್ ಘಾಟ್‌ನ ಗುಳ್ಳಾಪುರದಲ್ಲಿ ಇಂದು (ಜನವರಿ 22) ನಸುಕಿನ ವೇಳೆ ನಡೆದ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ನಡುವೆ, ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read the full story here

Wed, 22 Jan 202505:55 AM IST

ಕರ್ನಾಟಕ News Live: ಉಡುಪಿ: ಕರ್ನಾಟಕದಲ್ಲಿ ಗೋವುಗಳ ಮೇಲೆ ಸರಣಿ ವಿಕೃತ; ಜ 23 ರಿಂದ 29 ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಅಭಿಯಾನ - ಪೇಜಾವರ ಶ್ರೀ

  • ಗೋವುಗಳ ಮೇಲಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜನವರಿ 23 ರಿಂದ 29 ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಅಭಿಯಾನವನ್ನು ಕೈಗೊಂಡಿರುವುದಾಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕೋಟಿ ವಿಷ್ಣುಸಹಸ್ರನಾಮ ಪಾರಾಯಣಕ್ಕೆ ಕರೆ ನೀಡಿದ್ದಾರೆ.
Read the full story here

Wed, 22 Jan 202505:31 AM IST

ಕರ್ನಾಟಕ News Live: ಯಲ್ಲಾಪುರ, ಸಿಂಧನೂರು ಅಪಘಾತಗಳಲ್ಲಿ 14 ಜನರ ದುರ್ಮರಣ; ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

  • ಯಲ್ಲಾಪುರ, ಸಿಂಧನೂರು ಅಪಘಾತಗಳಲ್ಲಿ 14 ಜನರ ದುರ್ಮರಣಕ್ಕೀಡಾದರು. ಎರಡು ಅಪಘಾತಗಳಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದರು. 

Read the full story here

Wed, 22 Jan 202505:03 AM IST

ಕರ್ನಾಟಕ News Live: ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

  • Yellapura Accident: ಯಲ್ಲಾಪುರ ಸಮೀಪ ಗುಳ್ಳಾಪುರದಲ್ಲಿ ಲಾರಿ ಕಂದಕಕ್ಕೆ ಉರುಳಿ ಭಾರಿ ದುರಂತ ಸಂಭವಿಸಿದೆ. ಯಲ್ಲಾಪುರ ಅಪಘಾತದಲ್ಲಿ ಮೃತಪಟ್ಟವರು ಯಾರು, ಅವರು ಎಲ್ಲಿಯವರು, ಅವರ ಹಿನ್ನೆಲೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ.

Read the full story here

Wed, 22 Jan 202504:16 AM IST

ಕರ್ನಾಟಕ News Live: ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

  • Road Accident: ಇಂದು (ಜನವರಿ 22) ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ ಸಂಭವಿಸಿದ್ದು, 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವನ್ನಪ್ಪಿದ್ದಾರೆ.
Read the full story here

Wed, 22 Jan 202503:42 AM IST

ಕರ್ನಾಟಕ News Live: Sindhanur Accident: ಸಿಂಧನೂರು ಸಮೀಪ ಅರಗಿನಮರ ಕ್ಯಾಂಪ್‌ ಬಳಿ ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣ

  • Sindhanur Accident: ರಾಯಚೂರು ಜಿಲ್ಲೆಯ ಸಿಂಧನೂರು ಸಮೀಪ ಭೀಕರ ರಸ್ತೆ ದುರಂತ ಸಂಭವಿಸಿದೆ. ಅರಗಿನಮನೆ ಕ್ಯಾಂಪ್ ಸಮೀಪ ಈ ರಸ್ತೆ ದುರಂತ ಸಂಭವಿಸಿದ್ದು, ಕ್ರೂಸರ್ ವ್ಯಾನ್ ಪಲ್ಟಿಯಾಗಿ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳ ದುರ್ಮರಣಕ್ಕೀಡಾದರು. 

Read the full story here

Wed, 22 Jan 202503:26 AM IST

ಕರ್ನಾಟಕ News Live: ಯಲ್ಲಾಪುರ ರಸ್ತೆ ಅಪಘಾತ: ಲಾರಿಯಲ್ಲಿದ್ದರು 40ಕ್ಕೂ ಹೆಚ್ಚು ಮಂದಿ, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರ; ಇಲ್ಲಿದೆ ಘಟನೆಯ ವಿವರ

  • ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರೆಬೈಲ್ ಘಟ್ಟದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಇಂದು (ಜನವರಿ 22) ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಲಾರಿಯಲ್ಲಿ 40ಕ್ಕೂ ಹೆಚ್ಚು ಜನ ಇದ್ದರು ಎಂದು ಹೇಳಲಾಗುತ್ತಿದೆ. ಮೃತರನ್ನು ಹಾವೇರಿ ಮೂಲದವರು ಎಂದು ಗುರುತಿಸಲಾಗಿದೆ.
Read the full story here

Wed, 22 Jan 202502:42 AM IST

ಕರ್ನಾಟಕ News Live: ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ ಕನಿಷ್ಠ 9 ಸಾವು ಶಂಕೆ, ಹಲವರಿಗೆ ಗಾಯ

  • Yellapur Accident: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕನಿಷ್ಠ 9 ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಹಲವರು ಗಾಯಗೊಂಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.

Read the full story here

Wed, 22 Jan 202501:58 AM IST

ಕರ್ನಾಟಕ News Live: ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತ; ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಧಿಸೂಚನೆ ಪ್ರಕಟಿಸಿದ ಕರ್ನಾಟಕ ಸರ್ಕಾರ

  • Dharwad Municipal Corporation: ಹುಬ್ಬಳ್ಳಿ ಧಾರವಾಡ ವಿಭಜನೆ ಅಧಿಕೃತವಾಗಿದ್ದು, ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಮಂಗಳವಾರ (ಜನವರಿ 21) ಪ್ರಕಟಿಸಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಈ ಅಧಿಸೂಚನೆ ಪ್ರಕಟವಾಗಿದ್ದು, ಲಿಖಿತ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

Read the full story here

Wed, 22 Jan 202501:30 AM IST

ಕರ್ನಾಟಕ News Live: ಸಂಬಳ ಕೊಡಲಿಲ್ಲ ಎಂದು ಬೆಂಗಳೂರಲ್ಲಿ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಕಲಬುರಗಿ ವ್ಯಕ್ತಿ ಬಂಧನ

  • ಬೆಂಗಳೂರಿನಲ್ಲಿ ಕೆಲಸ ಕೊಟ್ಟರೂ ಸರಿಯಾಗಿ ಸಂಬಳ ಕೊಡದೇ ಸತಾಯಿಸುತ್ತಿದ್ದ ಮನೆಯಲ್ಲಿಯೇ ಭಾರೀ ಕಳ್ಳತನ ಮಾಡಿದ್ದ ಕಲಬುರಗಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Wed, 22 Jan 202501:09 AM IST

ಕರ್ನಾಟಕ News Live: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಸಂಚುಕೋರನಿಗೆ ನೆರವಾದ ಆರೋಪಿ

  • Praveen Nettaru Murder: ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಕೇಸ್‌ನ ಮುಖ್ಯ ಸಂಚುಕೋರ ಪರಾರಿಯಾಗಲು ನೆರವಾಗಿದ್ದ ಆರೋಪ ಆತನ ಮೇಲಿದೆ.

Read the full story here

Wed, 22 Jan 202512:45 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಇಂದು ಬೆಂಗಳೂರು, ಮೈಸೂರು, ಬೀದರ್ ಭಾಗದಲ್ಲಿ ಚಳಿ ಹೆಚ್ಚಳ, ರಾಜ್ಯದಲ್ಲಿ ಒಣಹವೆ

  • Karnataka Weather: ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂದು (ಜನವರಿ 22) ಒಣಹವೆ ಇರಲಿದೆ. ಉಳಿದಂತೆ ಇಂದು ಬೆಂಗಳೂರು, ಮೈಸೂರು, ಬೀದರ್ ಭಾಗದಲ್ಲಿ ಚಳಿ ಹೆಚ್ಚಳವಾಗಲಿದ್ದು, ಕರ್ನಾಟಕ ಹವಾಮಾನದ ವಿವರ ಹೀಗಿದೆ.

Read the full story here

Wed, 22 Jan 202512:41 AM IST

ಕರ್ನಾಟಕ News Live: ಬೆಂಗಳೂರು: 6 ತಿಂಗಳಲ್ಲಿ ಜಪ್ತಿ ಮಾಡಲಾದ 38 ಕೋಟಿ ರೂ ಮೌಲ್ಯದ ಡ್ರಗ್ಸ್ ನಾಶ; ವೃದ್ಧರನ್ನು ದೋಚುತ್ತಿದ್ದ ಆರೋಪಿಯ ಬಂಧನ

  • Bengaluru Crime: ಬೆಂಗಳೂರು ನಗರದ ವಿವಿಧೆಡೆ 6 ತಿಂಗಳಲ್ಲಿ ಜಪ್ತಿ ಮಾಡಲಾದ 38.11 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ, ವೃದ್ಧರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.(ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

ಹಂಚಿಕೊಳ್ಳಲು ಲೇಖನಗಳು

  • twitter