
Karnataka News Live January 23, 2025 : ಮೈಕ್ರೋಫೈನಾನ್ಸ್ ಕಿರುಕುಳ ವಿರೋಧಿಸಿ ಸರ್ಕಾರಕ್ಕೆ ಮಾಂಗಲ್ಯ ಸರ ರವಾನೆ, ಗಮನ ಸೆಳೆಯಿತು ವಿಶೇಷ ಅಭಿಯಾನ, ಜ 25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 23 Jan 202503:34 PM IST
Microfinance Harassment: ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಪ್ರತಿನಿಧಿಗಳ ಕಿರಕುಳ ಹೆಚ್ಚಾಗಿದೆ. ಈಗಾಗಲೇ ಅನೇಕರು ಪ್ರಾಣಕಳೆದುಕೊಂಡಿದ್ದಾರೆ. ಸಂತ್ರಸ್ತ ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ ಅವರಿಗೆ ಮಾಂಗಲ್ಯ ಸರ ಕಳುಹಿಸಿ ರಕ್ಷಣೆ ಕೋರುವ ಅಭಿಯಾನ ಶುರುಮಾಡಿದ್ದಾರೆ. ಹೀಗಾಗಿ ಜ 25ರಂದು ವಿಶೇಷ ಸಭೆ ನಡೆಯಲಿದೆ.
Thu, 23 Jan 202502:15 PM IST
Massage Parlour Attack: ಗೃಹಸಚಿವ ಡಾ ಪರಮೇಶ್ವರ ಅವರು ಉಡುಪಿ ಪ್ರವಾಸದಲ್ಲಿರುವಾಗಲೇ ಮಂಗಳೂರಿನ ಮಸಾಜ್ ಸೆಂಟರ್ ದಾಳಿ – ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಪ್ರಸಾದ್ ಅತ್ತಾವರ ಬಂಧನ, ವಿವರಗಳು ಇಲ್ಲಿವೆ.
Thu, 23 Jan 202501:06 PM IST
- ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಿಟ್ಲ ಬೋಳಂತೂರಿನ ಉದ್ಯಮಿಯ ಮನೆಯಲ್ಲಿ ದರೋಡೆ ಮಾಡಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಅಂತಾರಾಜ್ಯ ದರೋಡೆಕೋರನ ಬಂಧಿಸಲಾಗಿದೆ. ಕಾರು, ನಗದು ವಶಪಡಿಸಿಕೊಳ್ಳಲಾಗಿದೆ.
Thu, 23 Jan 202511:57 AM IST
Ola and Uber: ಗ್ರಾಹಕರ ಫೋನ್‌ಗೆ ತಕ್ಕಂತೆ ದರ ವಿಧಿಸುತ್ತಿದ್ದ ಓಲಾ ಮತ್ತು ಉಬರ್‌ಗೆ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ. ಈ ಕುರಿತು ಪ್ರಲ್ಹಾದ್ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ.
Thu, 23 Jan 202511:55 AM IST
- Suttur Jatra Mahotsava 2025: ಜನವರಿ 26ರಿಂದ ಜನವರಿ 31ರವರೆಗೆ 6 ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದೆ. ಇಲ್ಲಿದೆ ಸಂಪೂರ್ಣ ಕಾರ್ಯಕ್ರಮಗಳ ವಿವರ.
Thu, 23 Jan 202511:21 AM IST
- Mangaluru: ರಾಮ ಸೇನೆ ಕಾರ್ಯಕರ್ತರು ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಮಸಾಜ್ ಸೆಂಟರ್‍ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಶಂಕೆಯ ಮೇಲೆ ದಾಳಿ ನಡೆಸಲಾಗಿದೆ.
Thu, 23 Jan 202511:07 AM IST
Bengaluru Mpox virus Case: ದುಬೈನಿಂದ ಕರ್ನಾಟಕಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಎಂಪೋಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. " ರೋಗಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಯಪಡುವ ಅಗತ್ಯವಿಲ್ಲ" ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
Thu, 23 Jan 202510:38 AM IST
- Karnataka CM Race: ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ ನಡೆಯುತ್ತಿದೆ. ಆದರೆ ಸದಾ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಿದ್ದಾರೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಹುದ್ದೆಯಿಂದ ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸಪಡುತ್ತಿದ್ದಾರೆ. ಸಿಎಂ ಬಣ ಪಟ್ಟು ಬಿಡುತ್ತಿಲ್ಲ. (ವರದಿ-ಎಚ್ ಮಾರುತಿ)
Thu, 23 Jan 202510:13 AM IST
Yellapura Lorry Accident: ಸಣ್ಣ ವ್ಯಾಪಾರಿಗಳಾದ ಕಾರಣ ಅನಿರೀಕ್ಷಿತ ಆಘಾತವು ಮೃತರ ಕುಟುಂಬಗಳ ಬದುಕಿನ ಬಂಡಿಯನ್ನು ಹಳಿತಪ್ಪುವಂತೆ ಮಾಡಿದೆ. ಇಂದೋ ನಾಳೆಯೋ ಹುಟ್ಟಬೇಕಿದ್ದ ಮಗುವಿನ ಮುಖ ನೋಡಬೇಕಾಗಿದ್ದವ ಸದ್ದಿಲ್ಲದೇ ಹೊರಟು ಹೋದ ಎಂದು ಅಲ್ಫಾಜ್ ಜಾಫರ್ ಮಂಡಕಿ ಅವರ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.
Thu, 23 Jan 202509:08 AM IST
- Digital Crime Awareness: ಸೈಬರ್ ಅಪರಾಧ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಜನರಲ್ಲಿ ಆನ್‌ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸಲು ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬಿ ನಿಂಬರಗಿ ಕೆಲವೊಂದು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಎಚ್ಚರಿಕೆಯಿಂದ ಓದಿ.
Thu, 23 Jan 202508:55 AM IST
ಬೆಂಗಳೂರು: ಬ್ಯಾಚುಲರ್ ಲೈಫ್ ಅಂದ್ರೆ ಹಾಗೇನೆ. ಎಲ್ಲವೂ ವ್ಯವಸ್ಥಿತವಾಗಿರುವುದು ಅಪರೂಪ. ಅವಾಂತರಗಳೇ ಹೆಚ್ಚು. ಅಂತಹ ಒಂದು ಅವಾಂತರ ಇದು. 4 ತಿಂಗಳು ಗೀಸರ್ ಆನ್ ಇತ್ತು ಎಂದು ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕನ ಬಳಿ ಜನ ಕೇಳಿದ್ದಿಷ್ಟು ಕರೆಂಟ್ ಬಿಲ್ ಎಷ್ಟು ಬಂತು!, ಆತ ಕೊಟ್ಟ ಉತ್ತರ ಮತ್ತು ಹಲವರ ಕಾಮೆಂಟ್‌ಗಳ ವಿವರ ಇಲ್ಲಿದೆ.
Thu, 23 Jan 202505:41 AM IST
KCET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ವೃತ್ತಿಪರ ಕೋರ್ಸುಗಳ 2025-26ನೇ ಸಾಲಿನ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ನಿನ್ನೆ (ಜನವರಿ 22) ಪ್ರಕಟಿಸಿದೆ .ಕರ್ನಾಟಕ ಸಿಇಟಿ ನೋಂದಣಿ ಇಂದು ಶುರುವಾಗಿದೆ. ಫೆ 21 ರ ಅಂತಿಮ ದಿನ. ಕರ್ನಾಟಕ ಸಿಇಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
Thu, 23 Jan 202505:26 AM IST
- Muda site Scam: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ.
Thu, 23 Jan 202505:00 AM IST
- ಬೆಂಗಳೂರು ನಗರಕ್ಕೆ ಟನಲ್ ರಸ್ತೆಯ ಯೋಜನೆಯನ್ನು ಮುಂದಿಟ್ಟ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ರಾಜೀವ ಹೆಗಡೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಸಂಚಾರ-ಸಾರಿಗೆಯನ್ನು ಸರಿಪಡಿಸುವತ್ತ ಯಾವುದೇ ಆಸಕ್ತಿಯನ್ನು ತೋರದೇ ಏಕಾಏಕಿ ಟನಲ್ ಯೋಜನೆಗೆ ಮುಂದಾಗಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
Thu, 23 Jan 202504:49 AM IST
Rare Interfaith Friendship: ಉಡುಪಿಯ ಕಾಪುವಿನಲ್ಲಿ ವಿರಳ ಅಂತರ್ಧಮೀಯ ಸ್ನೇಹವನ್ನು ಬಿಂಬಿಸುವ ಪ್ರಕರಣ ಒಂದು ಗಮನಸೆಳೆದಿದೆ. ಮುಸ್ಲಿಮನ ಮನೆಯಲ್ಲೇ ವಾಸವಿದ್ದ ಹಿಂದೂ ಮಹಿಳೆ ವಯೋಸಹಜವಾಗಿ ಮೃತಪಟ್ಟಿದ್ದಾರೆ. ಇದಾದ ಬಳಿಕ ಅವರ ಅಂತ್ಯಸಂಸ್ಕಾರವನ್ನು ಹಿಂದೂ ವಿಧಿ ಪ್ರಕಾರವೇ ನೆರವೇರಿಸಲಾಗಿದೆ. ಇದು ಅಂತರ್ಧಮೀಯ ಸ್ನೇಹಕ್ಕೆ ಮಾದರಿಯಾಗಿ ಗಮನಸೆಳೆದಿದೆ.
Thu, 23 Jan 202504:24 AM IST
Tumul President: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ವಿಚಾರವಾಗಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್ ಅವರು ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. (ವರದಿ- ಈಶ್ವರ್, ತುಮಕೂರು)
Thu, 23 Jan 202503:00 AM IST
Thu, 23 Jan 202502:30 AM IST
- Invest Karnataka 2025: ಕರ್ನಾಟಕದಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ಸಿದ್ದತೆಗಳು ನಡೆದಿವೆ. ಸಚಿವರ ನೇತೃತ್ವದ ತಂಡವು ದೆಹಲಿಯಲ್ಲಿ ರೋಡ್ ಶೋ ನಡೆಸಿದೆ.
Thu, 23 Jan 202502:24 AM IST
- ಬೆಂಗಳೂರಿನ ಬಸವೇಶ್ವರ ನಗರದ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನೇ ಕಳವು ಮಾಡಲಾಗಿದೆ. ಕದ್ದವರು ಯಾರು ಎನ್ನುವುದು ನಿಗೂಢವಾಗಿದೆ. ಬೆಂಗಳೂರಿನ ಹೊರವಲಯದ ಹೆಸರುಘಟ್ಟ ಸುತ್ತಮುತ್ತ ಮತ್ತೆ ಚಿರತೆ ಕಾಟ ಶುರುವಾಗಿದ್ದು, ಐದಾರು ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. (ವರದಿ: ಎಚ್. ಮಾರುತಿ)
Thu, 23 Jan 202502:00 AM IST
- ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅದರ ವಿವರ ಇಲ್ಲಿದೆ.
Thu, 23 Jan 202501:50 AM IST
- ನಕಲಿ ಚಿನ್ನ ಅಡವಿಟ್ಟು ಹಣ ಪಡೆದಿದ್ದಕ್ಕಾಗಿ ಪ್ರಶ್ನಿಸಿದ ರೌಡಿಯೊಬ್ಬನನ್ನು ಮತ್ತೊಬ್ಬ ರೌಡಿ ಕೊಲೆ ಮಾಡಿ ಸುಟ್ಟು ಹಾಕಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹಸು ಕದ್ದು ಮಾರಾಟ ಮಾಡುತ್ತಿದ್ದವನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಎರಡೂ ಪ್ರತ್ಯೇಕ ಘಟನೆಗಳು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. (ವರದಿ: ಎಚ್. ಮಾರುತಿ)
Thu, 23 Jan 202501:11 AM IST
- ಕರ್ನಾಟಕದಲ್ಲಿ ಚಳಿಯ ಪ್ರಮಾಣ ತಗ್ಗುತ್ತಿಲ್ಲ. ಕರಾವಳಿ ಪ್ರದೇಶ ಹೊರತು ಪಡಿಸಿ ಉಳಿದೆಲ್ಲಾ ಕಡೆ ಚಳಿಯ ಪ್ರಭಾವ ಜೋರಿದೆ. ಬೆಂಗಳೂರು, ಬೀದರ್, ಚಿಕ್ಕಮಗಳೂರು ಸೇರಿ ಈ ಕೆಲವು ಜಿಲ್ಲೆಗಳಲ್ಲಿ ಜನವರಿ 28ರವರೆಗೆ ಚಳಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೆಲವೆಡೆ ದಟ್ಟ ಮಂಜು ಬೀಳುವ ಸಾಧ್ಯತೆಯೂ ಇದೆ. ಜ. 23ರ ಕರ್ನಾಟಕ ಹವಾಮಾನ ವರದಿ ಇಲ್ಲಿದೆ.