
Karnataka News Live January 24, 2025 : ತಕ್ಷಣದಿಂದ ಜಾರಿಗೆ ಬರುವಂತೆ 12 ಐಎಎಸ್ ಅಧಿಕಾರಿಗಳ ವರ್ಗಾವಣೆ; ಕರ್ನಾಟಕ ಸರ್ಕಾರದ ಆದೇಶ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 24 Jan 202504:03 PM IST
- ತಕ್ಷಣಕ್ಕೆ ಜಾರಿಯಾಗುವಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
Fri, 24 Jan 202503:03 PM IST
- ಕ್ಷುಲ್ಲಕ ವಿಚಾರವಾಗಿ ವಿವಾಹ ನಿಶ್ಚಿತ ಯುವತಿಯೊಂದಿಗೆ ಜಗಳ ಮಾಡಿರುವ ಯುವಕ, ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯಲ್ಲಿ ಬೆಳಕಿಗೆ ಬಂದಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Fri, 24 Jan 202502:34 PM IST
- Palace Grounds land row: ಬೆಂಗಳೂರು ಅರಮನೆ ಮೈದಾನದ ಜಾಗ ಬಳಕೆ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
Fri, 24 Jan 202502:01 PM IST
- ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗುತ್ತಿದೆ. ಜನವರಿ 26ರಂದು ಬೆಳಗ್ಗೆ 8.58ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ಬಳಿಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
Fri, 24 Jan 202512:44 PM IST
Bengaluru Power Cut: ಬೆಸ್ಕಾಂ ವ್ಯಾಪ್ತಿಯಲ್ಲಿ ವಿಶೇಷವಾಗಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಜನವರಿ 25, 27 ಮತ್ತು 28 ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಯಾವ ದಿನಾಂಕದಂದು ಎಲ್ಲಿ ಪವರ್ ಕಟ್ ಇರಲಿದೆ ಎಂಬ ವಿವರವನ್ನು ಬೆಸ್ಕಾಂ ನೀಡಿದ್ದು, ಅದು ಹೀಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Fri, 24 Jan 202512:25 PM IST
- ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ಬಾಳೆಪುಣಿಯ ಸ್ವಗೃಹದಲ್ಲಿ ಆರೈಕೆಯಲ್ಲಿದ್ದಾರೆ.
Fri, 24 Jan 202509:44 AM IST
Perumkaliyattam 2025: ಕೇರಳ - ಕರ್ನಾಟಕ ಗಡಿಪ್ರದೇಶ ಆದೂರಿನಲ್ಲಿ ಜನವರಿ 19ರಿಂದ 24 ತನಕದ ಪೆರುಂಕಳಿಯಾಟ ಮಹೋತ್ಸವು ತುಳು ಮಲಯಾಳಂ ಸಂಸ್ಕೃತಿಗಳ ಸಮ್ಮಿಲನವಾಗಿ ರೂಪುಗೊಂಡು ಗಮನ ಸೆಳೆಯಿತು. ಇದು 351 ವರ್ಷಗಳ ಬಳಿಕ ನಡೆದ ಉತ್ಸವವಾಗಿದ್ದು, ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Fri, 24 Jan 202509:42 AM IST
- ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕನ್ನಡನಾಡಿಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ, ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
Fri, 24 Jan 202507:58 AM IST
Organic Products in APMC: ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದೇ ವೇಳೆ, ಎಂಎಸ್‌ಪಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರಕ್ಕೆ ಒತ್ತಾಯಿಸಿದರು.
Fri, 24 Jan 202506:46 AM IST
Bengaluru Crime: ಬೆಂಗಳೂರು ಮಂತ್ರಿ ಮಾಲ್‌ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇನ್ನೊಂದೆಡೆ, ಗಂಟೆಗಾನಹಳ್ಳಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾನೆ. ಮತ್ತೊಂದೆಡೆ, ಆಟೋ ತಗುಲಿದ್ದಕ್ಕೆ ಆಟೋ ಚಾಲಕನ ಹತ್ಯೆ ಮಾಡಿದ ಆರೋಪಿಗಳ ಬಂಧನವಾಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Fri, 24 Jan 202505:51 AM IST
Vijayapura Accident: ವಿಜಯಪುರ ತಾಲೂಕು ಕನ್ನಾಳ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ದುರ್ಮರಣಕ್ಕೀಡಾದರು.
Fri, 24 Jan 202505:32 AM IST
ಬೆಂಗಳೂರು ವಿಧಾನಸೌಧದ ಆವರಣದಲ್ಲಿ ನಾಡದೇವತೆ ಭುವನೇಶ್ವರಿ ಪ್ರತಿಮೆ ಅನಾವರಣಕ್ಕೆ ಸಮಯ ನಿಗದಿಯಾಗಿದೆ. ಜ. 27ರಂದು ಸಂಜೆ 4ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮತ್ತೊಂದು ಪ್ರವಾಸಿ ತಾಣ ಸಿದ್ಧವಾಗುತ್ತಿದ್ದು ಪಾಸ್ ಇಲ್ಲದೆಯೂ ನೋಡುವ ಅವಕಾಶ ಇರಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Fri, 24 Jan 202504:19 AM IST
Bengaluru Cyber Crime: ಬೆಂಗಳೂರು ಸೈಬರ್ ವಂಚನೆ ಪ್ರಕರಣ ದಿನೇದಿನೆ ಹೆಚ್ಚಳವಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಒಬ್ಬರು ಡಿಜಿಟಲ್ ಅರೆಸ್ಟ್, ಇಬ್ಬರು ಹೆಚ್ಚು ಹಣಗಳಿಸಲು ಟ್ರೇಡಿಂಗ್ ಗ್ರೂಪ್‌ಗೆ ಸೇರಿ ಒಟ್ಟು 30 ಲಕ್ಷ ರೂ ಕಳೆದುಕೊಂಡಿದ್ದಾರೆ. ದೂರು ದಾಖಲಾಗಿದೆ. ಜಾಗೃತರಾಗಿ, ಸೈಬರ್ ವಂಚನೆಗೆ ಒಳಗಾಗದಿರಲು ಹೀಗೆ ಮಾಡಿ. (ವರದಿ- ಎಚ್ ಮಾರುತಿ, ಬೆಂಗಳೂರು)
Fri, 24 Jan 202503:40 AM IST
BDA Anti-Encroachment Drive: ಬೆಂಗಳೂರು ಯಶವಂತಪುರ ಹೋಬಳಿ ನಾಗರಬಾವಿ ಲೇಔಟ್‌ನ ಮಾಳಗಾಳದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ತಂಡ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಗುರುವಾರ 120 ಕೋಟಿ ರೂ ಮೌಲ್ಯದ ಒತ್ತುವರಿ ಭೂಮಿ ವಶಪಡಿಸಿ, ಅಲ್ಲಿದ್ದ ಕಟ್ಟಡಗಳನ್ನು ನೆಲಸಮಮಾಡಿದರು. (ವರದಿ-ಎಚ್. ಮಾರುತಿ, ಬೆಂಗಳೂರು)
Fri, 24 Jan 202501:30 AM IST
ಮಡಿಕೇರಿಯ ವಾರಾಂತ್ಯ ಪ್ರವೇಶದ ವಿಶೇಷವಾಗಿ ರಾಜಾಸೀಟ್ ನಲ್ಲಿ ಈ ವರ್ಷದ ಫಲಪುಷ್ಪ ಪ್ರದರ್ಶನ ಶುಕ್ರವಾರ ಆರಂಭಗೊಳ್ಳಲಿದೆ. ಇದರ ವಿವರ ಇಲ್ಲಿದೆ.
Fri, 24 Jan 202512:10 AM IST
National Girl Child Day: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿಮಿತ್ತ ಇಂದು (ಜನವರಿ 24) ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಸ್ಪೆಷಲ್ ಗಿಫ್ಟ್ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಏನದು ಗಿಫ್ಟ್ - ಇಲ್ಲಿದೆ ಪೂರ್ತಿ ವಿವರ.