Karnataka News Live January 25, 2025 : ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 25, 2025 : ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು

ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು(Photo: weather.com)

Karnataka News Live January 25, 2025 : ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು

03:38 PM ISTJan 25, 2025 09:08 PM HT Kannada Desk
  • twitter
  • Share on Facebook
03:38 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 25 Jan 202503:38 PM IST

ಕರ್ನಾಟಕ News Live: ಕೊಪ್ಪಳದ ತೊಗಲುಗೊಂಬೆಯಾಟ ಕಲಾವಿದೆ 96 ವರ್ಷದ ಭೀಮವ್ವಗೆ ಪದ್ಮಶ್ರೀ ಪ್ರಶಸ್ತಿ ಗೌರವ; 7 ದಶಕಗಳ ಕಲಾ ಕೃಷಿಯಲ್ಲಿ ಭೀಮವ್ವರ ಹಾದಿ ಹೀಗಿತ್ತು

  • ತೊಗಲುಗೊಂಬೆಯಾಟದ ಕಲಾ ಕ್ಷೇತ್ರದಲ್ಲಿ ಬರೋಬ್ಬರಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ 96 ವರ್ಷದ ವೃದ್ಧೆ ಭೀಮವ್ವಗೆ ಕೇಂದ್ರ ಸರ್ಕಾರ ನೀಡುವ ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರು ನಡೆದು ಬಂದ ಹಾದಿ ಇಲ್ಲಿದೆ.
Read the full story here

Sat, 25 Jan 202503:07 PM IST

ಕರ್ನಾಟಕ News Live: Padma Awards 2025: ಕಲಬುರಗಿಯ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮೀ ದೇಶಮಾನೆ ಅರಸಿ ಬಂದ ಪದ್ಮಶ್ರೀ ಗೌರವ

  • ಕಲಬುರಗಿಯ ಹಿರಿಯ ವೈದ್ಯೆ, ಕ್ಯಾನ್ಸರ್‌ ತಜ್ಞರಾದ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದು ಬಂದಿದೆ. 4 ದಶಕಗಳ ಕಾಲ ಕ್ಯಾನ್ಸರ್ ರೋಗಿಗಳ ಉಳಿವಿಗಾಗಿ ಶ್ರಮಿಸಿದ ತಾಯಿಗೆ ಕೇಂದ್ರ ಸರ್ಕಾರದಿಂದ ಉನ್ನತ ಗೌರವ ಸಂದಿದೆ.
Read the full story here

Sat, 25 Jan 202501:57 PM IST

ಕರ್ನಾಟಕ News Live: Padma Awards 2025: ಕರ್ನಾಟಕದ ಗೊಂಧಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಾಟೆಕರ್‌ಗೆ ಒಲಿದ ಪದ್ಮಶ್ರೀ ಪ್ರಶಸ್ತಿ

  • Padma Awards 2025: ಕರ್ನಾಟಕದ ಕರ್ನಾಟಕದ ಗೊಂಧಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಾಟೆಕರ್‌ಗೆ ಪ್ರತಿಷ್ಠಿತ 2025ರ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಾಗಲಕೋಟೆಯ ಈ ಸಾಧಕನಿಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
Read the full story here

Sat, 25 Jan 202512:17 PM IST

ಕರ್ನಾಟಕ News Live: ಕ್ಲಿನಿಕಲ್‌ ಟ್ರಯಲ್‌ನಲ್ಲಿ ಪಾಲ್ಗೊಂಡ ಬಳಿಕ ಬೆಂಗಳೂರು ವ್ಯಕ್ತಿ ಸಾವು; ಔಷಧಗಳ ಅಡ್ಡಪರಿಣಾಮವೇ ಸಾವಿಗೆ ಕಾರಣವೆಂದು ಕುಟುಂಬದ ಆರೋಪ

  • Clinical trial death: ಸಿಂಜಿನ್‌ ಸಂಸ್ಥೆಯ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ನಲ್ಲಿ ಭಾಗವಹಿಸಿದ ಬೆಂಗಳೂರಿನ ನಾಗೇಶ್‌ ವೀರಣ್ಣ (33 ವರ್ಷ) ಮೃತ ಪಟ್ಟಿದ್ದಾರೆ. ಪ್ರಾಯೋಗಿಕ ಔಷಧಗಳಿಂದ ಉಂಟಾದ ಅಡ್ಡಪರಿಣಾಮಗಳು ಸಾವಿಗೆ ಕಾರಣವೆಂದು ಮೃತರ ಸಹೋದರ ರೇವಣ್ಣ ಸಿದ್ದಪ್ಪ ಆರೋಪಿಸಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read the full story here

Sat, 25 Jan 202512:09 PM IST

ಕರ್ನಾಟಕ News Live: ಮಂಗಳೂರು: ಗೋಹತ್ಯೆ ಮತ್ತು ಗೋವಿನ ವಿರುದ್ಧದ ಹಿಂಸೆ ಖಂಡಿಸಿ ಹವ್ಯಕ ಮಹಾಮಂಡಲದಿಂದ ವಿಷ್ಣುಸಹಸ್ರನಾಮ ಪಠಣ, ಉಪವಾಸ

  • ಮಂಗಳೂರು: ಗೋಹತ್ಯೆ ಮತ್ತು ಗೋವಿನ ವಿರುದ್ಧದ ಹಿಂಸೆಯನ್ನು ಖಂಡಿಸಿ ಇಂದು (ಜನವರಿ 25) ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶನಿವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮತ್ತು ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಸಂಪನ್ನಗೊಂಡಿತು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sat, 25 Jan 202511:13 AM IST

ಕರ್ನಾಟಕ News Live: Bellary Doctor Kidnap: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅಪಹರಣ, ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು

  • Bellary Doctor Kidnap: ಆಘಾತಕಾರಿ ವಿದ್ಯಮಾನ ಒಂದರಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅವರ ಅಪಹರಣ ನಡೆದಿದೆ. ಇಂದು (ಜನವರಿ 25) ಬೆಳಗ್ಗೆ ದುಷ್ಕರ್ಮಿಗಳು ಡಾ ಸುನಿಲ್ ಅವರನ್ನು ಅಪಹರಣ ಮಾಡಿದ್ದು, ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read the full story here

Sat, 25 Jan 202510:17 AM IST

ಕರ್ನಾಟಕ News Live: Nanjangud Accident: ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು

  • Nanjangud Accident: ಮೈಸೂರು ಊಟಿ ಹೆದ್ದಾರಿಯಲ್ಲಿ ಇಂದು (ಜನವರಿ 25) ನಂಜನಗೂಡು ತಾಲೂಕು ಮುದ್ದಹಳ್ಳಿ ಸಮೀಪ ಈ ಹೃದಯ ವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ದಾರಿಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆ ಪ್ರಯಾಣಿಸಿದ್ದರು.

Read the full story here

Sat, 25 Jan 202509:26 AM IST

ಕರ್ನಾಟಕ News Live: ಮೈಕ್ರೋಫೈನಾನ್ಸ್ ವಿಶೇಷ ಸಭೆ; ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳಿಗೆ ಸಿಗದ ಸ್ಪಷ್ಟ ಉತ್ತರ, ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ತತ್ತರ

  • Microfinance Harassment: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜನವರಿ 25) ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮೈಕ್ರೋಫೈನಾನ್ಸ್‌ ವಿಶೇಷ ಸಭೆ ನಡೆಸಿದರು. ಅಲ್ಲಿ ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳಿಗೆ 5 ನೇರ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಉತ್ತರ ನೀಡಲಾಗದೆ ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ಕಷ್ಟಪಟ್ಟರು. ಇಲ್ಲಿದೆ ಆ ವಿವರ.

Read the full story here

Sat, 25 Jan 202509:11 AM IST

ಕರ್ನಾಟಕ News Live: ಮೈಕ್ರೋಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಹೊಸ ಕಾನೂನು; ಸುಗ್ರೀವಾಜ್ಞೆ ಮೂಲಕ ಜಾರಿಗೆ ಕ್ರಮ -ಸಿಎಂ ಸಿದ್ದರಾಮಯ್ಯ

  • ಮೈಕ್ರೋಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗುತ್ತಿರುವ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಿದ್ದಾರೆ. ಮೈಕ್ರೋಫೈನಾನ್ಸ್‌ ಕಂಪನಿಗಳ ಅಟ್ಟಹಾಸಕ್ಕೆ ಅಂಕುಶ ಹಾಕಲು ರಾಜ್ಯದಲ್ಲಿ ಶೀಘ್ರದಲ್ಲೇ ಹೊಸ ಕಾನೂನು ತರಲು ಸರ್ಕಾರ ನಿರ್ಧರಿಸಿದೆ.
Read the full story here

Sat, 25 Jan 202507:49 AM IST

ಕರ್ನಾಟಕ News Live: ಕರ್ನಾಟಕದ 17 ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ

  • Presidents Medals: ಕರ್ನಾಟಕ ರಾಜ್ಯದ 17 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. (ವರದಿ-ಎಚ್.‌ ಮಾರುತಿ)
Read the full story here

Sat, 25 Jan 202506:24 AM IST

ಕರ್ನಾಟಕ News Live: ಉದ್ಯಮಿಗೆ ಜೀವ ಬೆದರಿಕೆ, ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನ; ಮಹಿಳೆಯೊಬ್ಬರಿಗೆ 2 ಲಕ್ಷ ವಂಚಿಸಿದ ಸೈಬರ್‌ ವಂಚಕರು

  • ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ರೌಡಿ ಶೀಟರ್‌ ಫೈಟರ್ ರವಿ ಬಂಧನವಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸೈಬರ್‌ ವಂಚಕರು ಮಹಿಳೆಯೊಬ್ಬರಿಗೆ 2 ಲಕ್ಷ ರೂಪಾಯಿ ವಂಚಿಸಿದ್ದಾರೆ. (ವರದಿ-ಎಚ್.‌ ಮಾರುತಿ)
Read the full story here

Sat, 25 Jan 202506:22 AM IST

ಕರ್ನಾಟಕ News Live: Charmadi Ghat: ಚಾರ್ಮಾಡಿ ಘಾಟಿಯಲ್ಲಿ ಹರಡಿದೆ ಭಾರಿ ಕಾಡ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ನಾಶ ಶಂಕೆ

  • Charmadi Ghat Forest Fire: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಅರಣ್ಯಕ್ಕೆ ಭಾರಿ ಪ್ರಮಾಣದಲ್ಲಿ ಕಾಡ್ಲಿಚ್ಚು ಆವರಿಸಿದೆ. ಇದರ ಪರಿಣಾಮ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವುದು ಗಮನಸೆಳೆದಿದೆ. 

    (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sat, 25 Jan 202505:54 AM IST

ಕರ್ನಾಟಕ News Live: Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಬಂಧನ, ಕೊಡಿಗೇಹಳ್ಳಿ ಗಲಾಟೆ ಕೇಸ್ ದಾಖಲು

  • Lawyer Jagadish Arrested: ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ಉತ್ಸವದ ವಿಚಾರವಾಗಿ ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಿನ್ನೆ ಜಗದೀಶ್ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇಂದು (ಜನವರಿ 25) ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ಧಾರೆ.

Read the full story here

Sat, 25 Jan 202505:36 AM IST

ಕರ್ನಾಟಕ News Live: Planet parade 2025: ಆಕಾಶದಲ್ಲಿ ಅತ್ಯದ್ಭುತ ದೃಶ್ಯ, ಇಂದು ಗ್ರಹಗಳ ಪೆರೇಡ್‌ ಸ್ಪಷ್ಟವಾಗಿ ಕಣ್ತುಂಬಿಕೊಳ್ಳಿ; ಅಪರೂಪದ ವಿದ್ಯಮಾನ ಹೀಗೆ ನೋಡಿ

  • Planet parade 2025: ಆಕಾಶದಲ್ಲಿ ಈ ಜನವರಿಯಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ "ಪ್ಲಾನೇಟ್‌ ಪೆರೇಡ್‌" ಜನವರಿ 25 ಅಂದರೆ ಇಂದು ಹೆಚ್ಚು ಸ್ಪಷ್ಟವಾಗಿ ಕಾಣಲಿದೆ. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಆಕಾಶದಲ್ಲಿ ಒಂದೇ ಸಾಲಿನಲ್ಲಿ (ಪರಿಪೂರ್ಣ ಸಾಲು ಅಲ್ಲ) ನೋಡಬಹುದಾಗಿದೆ.

Read the full story here

Sat, 25 Jan 202503:05 AM IST

ಕರ್ನಾಟಕ News Live: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 1 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?

  • ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಅಪ್ಪನನ್ನೂ ಬಂಧಿಸಿರುವ ಮಂಗಳೂರು ಪೊಲೀಸರು, 16 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಮುಂಬೈ-ತಮಿಳುನಾಡು-ಮಂಗಳೂರು ಲಿಂಕ್ ಸಿಕ್ಕಿದ್ದು ಹೇಗೆ? (ವರದಿ-ಹರೀಶ್ ಮಾಂಬಾಡಿ) 
Read the full story here

Sat, 25 Jan 202502:31 AM IST

ಕರ್ನಾಟಕ News Live: ಸಂಸದ ಯದುವೀರ ಒಡೆಯರ್​​ಗೆ ಹೈಕೋರ್ಟ್ ನೋಟಿಸ್; ಮಹಿಳೆಯರಿಗೆ ಶೇ 30ರಷ್ಟು ಮೀಸಲಾತಿ, ವಕೀಲರ ಸಂಘದ ಚುನಾವಣೆ ರದ್ದು

  • Karnataka High court: ಚುನಾವಣಾ ತಕರಾರು ಕಾರಣ ಮೈಸೂರು ಸಂಸದ ಯದುವೀರ ಒಡೆಯರ್​​ಗೆ ಹೈಕೋರ್ಟ್ ನೋಟಿಸ್ ನೀಡಿದೆ.‌ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. (ವರದಿ: ಎಚ್.‌ ಮಾರುತಿ)
Read the full story here

Sat, 25 Jan 202501:53 AM IST

ಕರ್ನಾಟಕ News Live: ಗಣರಾಜ್ಯೋತ್ಸವ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ ಮೆಟ್ರೋ ಆರಂಭ; ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಮಾಡುವಂತಿಲ್ಲ; ಆದೇಶ

  • ಗಣರಾಜ್ಯೋತ್ಸವ ಅಂಗವಾಗಿ ಮೆಟ್ರೋ ರೈಲು ಸಂಚಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಸರ್ಕಾರಿ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಫೋಟೋ, ವಿಡಿಯೋ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. (ವರದಿ-ಎಚ್.ಮಾರುತಿ)
Read the full story here

Sat, 25 Jan 202501:34 AM IST

ಕರ್ನಾಟಕ News Live: Karnataka Weather Today: ಕರ್ನಾಟಕ ಹವಾಮಾನ: ಮುಂದಿನ ಆರು ದಿನಗಳ ಕಾಲ ಮೈಕೊರೆಯುವ ಚಳಿ, ವಿಪರೀತ ಥಂಡಿ

  • Karnataka Weather: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಜನವರಿ 25) ಒಣಹವೆ ಮುಂದುವರೆಯಲಿದೆ. ಆದರೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಶೀತ ಗಾಳಿ ಹೆಚ್ಚಾಗಲಿದೆ. ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter