
Karnataka News Live January 27, 2025 : ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 27 Jan 202501:40 PM IST
- Bengaluru: ಪರವಾನಗಿ ಅವಧಿ ಮೀರಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್‌ಟಿಓ ಅಧಿಕಾರಿಗಳು ಶೋರೂಂ ಮೇಲೆ ದಾಳಿದ್ದರು. ಅದರ ಬೆನ್ನಲ್ಲೇ ಶುಕ್ರ ಮೋಟಾರ್ಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Mon, 27 Jan 202501:04 PM IST
- ಬೆಂಗಳೂರು ಬಿಟ್ಟು ಕರ್ನಾಟಕದ ಇತರೆ ನಗರಗಳಲ್ಲ ಇ ಖಾತೆಯನ್ನು ಹೊಂದಿರದ ಆಸ್ತಿದಾರರಿಗೆ ಬಿ ಖಾತೆಯನ್ನು ನೀಡಿ ಅವರ ಆಸ್ತಿಯನ್ನು ಗಟ್ಟಿ ಮಾಡಿಕೊಳ್ಳಲು ಕರ್ನಾಟಕ ಒಂದು ಅವಕಾಶ ಮಾಡಿಕೊಡಲಿದೆ.
Mon, 27 Jan 202512:42 PM IST
- ಕರ್ನಾಟಕದಲ್ಲಿ ಎರಡು ವಾರದಿಂದ ಮೈಕ್ರೋಫೈನಾನ್ಸ್ ಕಂಪೆನಿಗಳ ವಸೂಲಿ ಕಿರುಕುಳದಿಂದ ಹಲವರು ಆತ್ಮಹತ್ಯೆಗೆ ಶರಣಾದರೆ, ಇನ್ನಷ್ಟು ಮಂದಿ ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.
Mon, 27 Jan 202512:31 PM IST
- ಮಂಗಳೂರಿನ ಹೊರವಲಯದ ಕೋಟೆಕಾರಿನಲ್ಲಿ ನಡೆದಿದ್ದ ಭಾರೀ ಪ್ರಮಾಣದ ದರೋಡೆಯನ್ನು ಬೇಧಿಸಿರುವ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಮಾಹಿತಿಯೇ ದೊರೆತಿದೆ.
- ವರದಿ: ಹರೀಶ ಮಾಂಬಾಡಿ,ಮಂಗಳೂರು
Mon, 27 Jan 202511:57 AM IST
- ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯ 3 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿವೆ. ಪೊಲೀಸರು ತಪಾಸಣೆ ನಡೆಸಿ ಇದು ಹುಸಿ ಬೆದರಿಕೆ ಎಂದು ಹೇಳಿದ್ದಾರೆ.
Mon, 27 Jan 202511:29 AM IST
- ಮೈಸೂರು ಮುಡಾ ಬದಲಿ ನಿವೇಶನದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪೂರ್ಣಗೊಳಿಸಿ ಆದೇಶ ಬಾಕಿ ಇರಿಸಿದೆ.
Mon, 27 Jan 202511:06 AM IST
- ಮೈಕ್ರೋಫೈನಾನ್ಸ್ ಸಾಲ ಮರುಪಾವತಿ ಕಿರುಕುಳ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದ್ದು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಒಂದೇ ದಿನ ಆತ್ಮಹತ್ಯೆಗೆ ಶರಣಾಗಿದ್ದಾರೆ.
Mon, 27 Jan 202510:53 AM IST
ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಅಥವಾ ಮನೆಗಳನ್ನು ಬಾಡಿಗೆ ಪಡೆಯುವವರು ಭೂಮಾಲೀಕರಿಂದ ಅನುಭವಿಸುವ ಕಿರಿಕಿರಿ ಪ್ರಕರಣಗಳೂ ಇವೆ. ದಂಪತಿ ಎದುರಿಸಿದ ಪ್ರಕರಣವೊಂದನ್ನು ಸ್ಟಾರ್ಟ್‌ಅಪ್ ಕಂಪೆನಿ ಸಂಸ್ಥಾಪಕ ಹಂಚಿಕೊಂಡಿರುವುದು ವೈರಲ್ ಆಗಿದೆ.
Mon, 27 Jan 202509:46 AM IST
ಮಂಗಗಳ ಹಾವಳಿಯಿಂದ ತೋಟಗಾರಿಕೆ ಬೆಳೆಯನ್ನು ಪಡೆಯಲು ಕಷ್ಟವೇ. ಇದಕ್ಕಾಗಿ ದೇಸಿ ಹಾಗೂ ಸ್ಥಳೀಯ ಕೆಲವು ತಂತ್ರಗಳನ್ನು ಬಳಸುವುದು ಅನಿವಾರ್ಯವೂ ಹೌದು. ಅಂತಹ ಮಾದರಿಗಳನ್ನು ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವ ಲೇಖಕ ರಾಜೀವ್ ಹೆಗಡೆ ತಿಳಿಸಿದ್ದಾರೆ.
Mon, 27 Jan 202507:13 AM IST
- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿದೆ.
Mon, 27 Jan 202506:54 AM IST
- ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ತೀರದ ನಿಮಿಷಾಂಬ ದೇಗುಲದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನಕ್ಕೆ ಸಿದ್ದತೆಗಳು ನಡೆದಿವೆ.
Mon, 27 Jan 202505:14 AM IST
- Indian Railways: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಬೆಂಗಳೂರು ಭಾಗದಲ್ಲಿ ಪ್ರಮುಖ ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಿದೆ.
Mon, 27 Jan 202504:00 AM IST
- ಬೇಸಿಗೆ ಆರಂಭಕ್ಕೆ ಇನ್ನೂ ಸಮಯವಿದ್ದರೂ ಕರ್ನಾಟಕದಲ್ಲಿ ಜನವರಿ 30ರಿಂದಲೇ ಮೂರು ದಿನಗಳ ಕಾಲ 20 ಜಿಲ್ಲೆಗಳಲ್ಲಿ ಸಾಧಾರಣ ಅಥವಾ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.