Karnataka News Live January 3, 2025 : ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 03 Jan 202501:47 PM IST
Namma Metro Fare Hike: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಭಾನುವಾರ (ಜನವರಿ 5) ದಿಂದಲೇ ಜಾರಿಗೆ ಬರುತ್ತಿದೆ. ಇದರ ಬೆನ್ನಿಗೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಗಮನಸೆಳೆದಿದೆ. ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಒಲವು ತೋರಿಸಿದ್ದಾಗಿ ಮೂಲಗಳು ತಿಳಿಸಿವೆ.
Fri, 03 Jan 202512:44 PM IST
- ಆನ್‌ಲೈನ್ ವಂಚನೆಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಆನ್‌ಲೈನ್ ಬೆದರಿಕೆ, ಹ್ಯಾಕಿಂಗ್ ಮಾತ್ರವಲ್ಲದೆ ಪರಿಚಿತರ ಸೋಗಿನಲ್ಲಿ ಅಪರಿಚಿತರು ನಮ್ಮ ಖಾತೆಯಿಂದ ಹಣ ಕದಿಯಲು ಪ್ರಯತ್ನಿಸುತ್ತಾರೆ. ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಆನ್‌ಲೈನ್ ಮೋಸದ ವಿವರಗಳನ್ನು ಪರಿಶೀಲಿಸಿ.
Fri, 03 Jan 202512:36 PM IST
BWSSB bill: ಕಳೆದ 10 ವರ್ಷಗಳಲ್ಲಿ ನೀರಿನ ದರ ಪರಿಷ್ಕರಣೆ ಆಗಿಲ್ಲ ಎಂದು ಹೇಳಿರುವ ಬೆಂಗಳೂರು ಜಲ ಮಂಡಳಿ, ಶೀಘ್ರವೇ ನೀರಿನ ದರ ಶೇ 40 ಹೆಚ್ಚಳದ ಸುಳಿವು ನೀಡಿದೆ. ಶುಲ್ಕ ಏರಿಕೆಗೆ ಒತ್ತಡ ಹೆಚ್ಚಾಗಿದ್ದು, ಈ ತಿಂಗಳ ಎರಡನೇ ವಾರ ಪರಿಷ್ಕರಣೆ ಅಂತಿಮವಾಗಲಿದೆ.
Fri, 03 Jan 202511:11 AM IST
KSRTC Fare Hike: ನಾಲ್ಕು ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆಯಾಗುತ್ತಿದೆ. ಶೇಕಡ 15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಕೆಎಸ್‌ಆರ್‌ಟಿಸಿ ಹೊಸ ದರ ಭಾನುವಾರದಿಂದ ಜಾರಿಯಾಗುತ್ತಿದ್ದು, ಬೆಂಗಳೂರಿನಿಂದ ವಿವಿಧೆಡೆಗೆ ಪರಿಷ್ಕೃತ ದರ ಎಷ್ಟಿರಬಹುದು ಎಂಬ ವಿವರ ಇಲ್ಲಿದೆ.
Fri, 03 Jan 202510:21 AM IST
KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪರಿಷ್ಕೃತ ಹೊಸ ಬಸ್ ಪ್ರಯಾಣ ದರ ಜನವರಿ 5 ರಿಂದ ಜಾರಿಗೆ ಬರಲಿದೆ. ಈ ಬಸ್ ಪ್ರಯಾಣ ದರ ಏರಿಕೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಮರ್ಥಸಿಕೊಂಡಿವೆ. ಖರ್ಚು ವೆಚ್ಚಗಳ ವಿವರ ಮತ್ತು ನೆರೆ ರಾಜ್ಯಗಳ ಸಾರಿಗೆ ದರವನ್ನೂ ನೀಡಿವೆ. ಆ ವಿವರ ಇಲ್ಲಿದೆ.
Fri, 03 Jan 202510:19 AM IST
ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಕಚೇರಿಯಲ್ಲೇ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಸಿಕ್ಕಿದೆ. ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ್ ತವರು ಜಿಲ್ಲೆ ತುಮಕೂರಿನಲ್ಲಿ ಈ ಘಟನೆ ಜರುಗಿದೆ.
Fri, 03 Jan 202509:49 AM IST
ತುಮಕೂರು ತಾಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ ಬಂಧುಗಳು ನೆರವಿಗೆ ಬಾರದ ಕಾರಣ 6ನೇ ತರಗತಿಯ ಬಾಲಕಿ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ನಿರ್ವಹಿಸಿದ ಮನಕಲಕುವ ಘಟನೆ ಗಮನಸೆಳೆದಿದೆ. (ವರದಿ- ಈಶ್ವರ್, ತುಮಕೂರು)
Fri, 03 Jan 202507:46 AM IST
ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಅಕ್ರಮ ಕಟ್ಟಡ ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ನಿರ್ದೇಶನ ಉಲ್ಲೇಖಿಸಿದ ಬೆಸ್ಕಾಂ ಸುತ್ತೋಲೆ, ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದೆ. ಇನ್ನೊಂದೆಡೆ, 3 ವರ್ಷದ ಅವಧಿಯಲ್ಲಿ ಕರೆಂಟ್ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿದೆ ವಿವರ.
Fri, 03 Jan 202502:30 AM IST
ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ಸಂಚರಿಸುವ ವಾಹನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹೆಚ್ಚುವರಿ ಬಸ್ ಸೇವೆಯೂ ಇರುವುದಿಲ್ಲ ಎನ್ನುವುದು ಸಚಿವ ಈಶ್ವರ ಖಂಡ್ರೆ ನೀಡಿರುವ ವಿವರಣೆ.
Fri, 03 Jan 202501:30 AM IST
- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 3ರ ಶುಕ್ರವಾರ ಮುಂಜಾನೆ ದಟ್ಟ ಮಂಜು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ತೀವ್ರ ಚಳಿಯಿಂದಾಗಿ ಜನರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹವಾಮಾನದ ವರದಿ ಇಲ್ಲಿದೆ.