ಕನ್ನಡ ಸುದ್ದಿ / ಕರ್ನಾಟಕ /
LIVE UPDATES

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕ
Karnataka News Live January 30, 2025 : ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 30 Jan 202502:36 PM IST
ಕರ್ನಾಟಕ News Live: ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕ
- ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಅವರನ್ನು ನೇಮಕಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
Thu, 30 Jan 202501:23 PM IST
ಕರ್ನಾಟಕ News Live: ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್ ಆಗಿ 5 ತಾಲೂಕುಗಳ ಅಭಿವೃದ್ಧಿ; ಮಹಾನಗರ ಪಾಲಿಕೆಯಾಗಿ ಬೀದರ್ ಮೇಲ್ದರ್ಜೆಗೆ
- ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರಿನ ಹೊರೆ ತಗ್ಗಿಸಲು ಸ್ಯಾಟಲೈಟ್ ಟೌನ್‌ಶಿಪ್ ಆಗಿ 5 ತಾಲೂಕುಗಳ ಅಭಿವೃದ್ಧಿ ಮಾಡುವುದರ ಜತೆಗೆ, ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದಿಸಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Thu, 30 Jan 202510:29 AM IST
ಕರ್ನಾಟಕ News Live: Micro Finance: ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ಗಳಿಗೆ ಮೂಗುದಾರ, ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ಸಂಪುಟ ತೀರ್ಮಾನ
- ಕರ್ನಾಟಕದಲ್ಲಿ ಮಿತಿ ಮೀರಿ ಜನ ಜೀವ ಕಳೆದುಕೊಂಡು ಮನೆ ತೊರೆಯುವ ಹಂತಕ್ಕೂ ಹೋಗಿರುವ ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಗ್ರಹ ಹೇರಲು ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ಸಚಿವ ಸಂಪುಟ ತೀರ್ಮಾನಿಸಿದೆ.
Thu, 30 Jan 202510:08 AM IST
ಕರ್ನಾಟಕ News Live: Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಸಿಗಲಿದೆ ಆದ್ಯತೆ: ರೈಲ್ವೆ ಸಚಿವ ಸೋಮಣ್ಣ ಹೇಳಿದ್ದೇನು?
- Budget 2025: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಈ ಬಾರಿ ಬಜೆಟ್‌ನಲ್ಲಿ ಬೆಂಗಳೂರು ಸರ್ಕುಲರ್ ರೈಲ್ವೆ ಸಹಿತ ಇತರ ಯೋಜನೆಗಳಿಗೆ ಒತ್ತು ಸಿಗಬಹುದು ಎಂದು ಹೇಳಿದ್ದಾರೆ.
Thu, 30 Jan 202508:33 AM IST
ಕರ್ನಾಟಕ News Live: Mandya Agriculture Varsity: ಕರ್ನಾಟಕ ಬಜೆಟ್ ಘೋಷಣೆ, ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ವಿಶೇಷಾಧಿಕಾರಿ ಸದ್ಯವೇ ನೇಮಕ
ಕಳೆದ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಮಂಡ್ಯದ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯ ಈ ವರ್ಷದಿಂದಲೇ ಆರಂಭವಾಗುತ್ತಿದೆ. ಅದರ ವಿವರ ಇಲ್ಲಿದೆ.
Thu, 30 Jan 202507:53 AM IST
ಕರ್ನಾಟಕ News Live: Karnataka BJP: ಜಿಲ್ಲಾಧ್ಯಕ್ಷರ ನೇಮಕಕ್ಕೆ ಉಸ್ತುವಾರಿಗಳಿದ್ದಾರೆ, ನನ್ನ ಪಾತ್ರ ಇಲ್ಲ, ಸುಧಾಕರ್ ಜತೆಗೆ ಯುದ್ದ ಏಕೆ ಮಾಡಲಿ; ವಿಜಯೇಂದ್ರ
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಮಾಡಿದ ಟೀಕೆಗೆ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉತ್ತರ ನೀಡಿದ್ದಾರೆ.
Thu, 30 Jan 202507:11 AM IST
ಕರ್ನಾಟಕ News Live: Union Budget 2025: ಜನರ ಚಿತ್ತ ಕೇಂದ್ರ ಬಜೆಟಿನತ್ತ, ಹೊಸ ತೆರಿಗೆ ಪದ್ಧತಿ, ಗೃಹ ಸಾಲ ಸೇರಿ ಗರಿಗೆದರಿದ ನಿರೀಕ್ಷೆಗಳು; ಜಯ ಕುಮಾರ ಶೆಟ್ಟಿ
- Union Budget 2025 Expectations Highlights: ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸುವ 2025ರ ಕೇಂದ್ರ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳು ಏನೆಲ್ಲಾ ಇವೆ ಎಂಬುದರ ಕುರಿತು ಎಸ್ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಜಯ ಕುಮಾರ ಶೆಟ್ಟಿ ಅವರು ವಿವರಿಸಿದ್ದಾರೆ.
Thu, 30 Jan 202506:12 AM IST
ಕರ್ನಾಟಕ News Live: Bangalore Water: ಬೆಂಗಳೂರು ನಗರಕ್ಕೆ 583 ಎಂಎಲ್‌ಡಿ ನೀರು, ಹೆಚ್ಚುವರಿ ಸಂಸ್ಕರಣೆ ಘಟಕಗಳಿಗೆ ಹಣಕಾಸು ನೀಡಲು ಅನುಮತಿ
ಬೆಂಗಳೂರು ನಗರದ ಜನತೆಯ ನೀರಿನ ಬೇಡಿಕೆಗಳನ್ನು ಪೂರೈಸಲು ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ನೀರು ಸಂಸ್ಕರಣೆಯ ಘಟಕಗಳನ್ನು ರೂಪಿಸಲಾಗುತ್ತಿದೆ.
Thu, 30 Jan 202503:40 AM IST
ಕರ್ನಾಟಕ News Live: ಕರ್ನಾಟಕ: 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಿಸಿದ ಬಿಜೆಪಿ; ಯಾವ ಜಿಲ್ಲೆಗೆ, ಯಾರು ಆಯ್ಕೆ? ಇಲ್ಲಿದೆ ಪಟ್ಟಿ
- ಕರ್ನಾಟಕದ 23 ಜಿಲ್ಲೆಗಳಿಗೆ ನೂತನ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ತನ್ನ ಆಪ್ತರಿಗೆ ಹೆಚ್ಚು ಮಣೆ ಹಾಕಿದ್ದಾರೆ ಎಂದು ಸ್ವಪಕ್ಷದಲ್ಲೇ ಆರೋಪ ಕೇಳಿ ಬಂದಿದೆ.
Thu, 30 Jan 202501:50 AM IST
ಕರ್ನಾಟಕ News Live: ವ್ಹೀಲಿಂಗ್ ತಡೆ ಯಾವಾಗ? ವಾಮಾಚಾರದ ಹೆಸರಿನಲ್ಲಿ ವಂಚನೆ, ದೂರು ದಾಖಲು; 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
- ವ್ಹೀಲಿಂಗ್ ತಡೆಯುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಾಮಾಚಾರದ ಹೆಸರಿನಲ್ಲಿ ವಂಚಿಸಿದವರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ವರದಿ-ಎಚ್.ಮಾರುತಿ)