ಕನ್ನಡ ಸುದ್ದಿ / ಕರ್ನಾಟಕ /
LIVE UPDATES

IAS Posting: ಐಎಎಸ್ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ
Karnataka News Live January 31, 2025 : IAS Posting: ಐಎಎಸ್ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 31 Jan 202511:44 AM IST
ಕರ್ನಾಟಕ News Live: IAS Posting: ಐಎಎಸ್ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ
- ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
Fri, 31 Jan 202511:06 AM IST
ಕರ್ನಾಟಕ News Live: ಬದುಕುವ ಹಕ್ಕಿನಲ್ಲಿ ಘನತೆಯಿಂದ ಜೀವ ಬಿಡುವ ಹಕ್ಕೂ ಸೇರುತ್ತದೆ: ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಸರ್ಕಾರದಿಂದ ಹೊಸ ಸುತ್ತೋಲೆ
- ಚೇತರಿಕೆಯ ಭರವಸೆಯಿಲ್ಲದ ರೋಗಿಯು ಘನತೆಯಿಂದ ಮರಣಹೊಂದುವ ಹಕ್ಕಿನ ಕುರಿತು ಸುಪ್ರೀಂಕೋರ್ಟ್ ಹೊರಡಿಸಿರುವ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ನಮ್ಮ ಕರ್ನಾಟಕ ಆರೋಗ್ಯ ಇಲಾಖೆ ಐತಿಹಾಸಿಕ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Fri, 31 Jan 202511:00 AM IST
ಕರ್ನಾಟಕ News Live: Budget 2025: ಕೇಂದ್ರ ಬಜೆಟ್ ನಾಳೆ ಮಂಡನೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿರುವ ಕರ್ನಾಟಕದ ಪ್ರಮುಖ 25 ಬೇಡಿಕೆಗಳೇನು
Budget 2025: ಕೇಂದ್ರ ಸರ್ಕಾರವು ಮಂಡಿಸಲಿರುವ ಬಜೆಟ್‌ಗೆ ಪೂರಕವಾಗಿ ಕರ್ನಾಟಕವೂ ಪ್ರಮುಖ 25 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.ಅದರ ಪ್ರಮುಖ ಅಂಶಗಳು ಇಲ್ಲಿವೆ.
Fri, 31 Jan 202510:11 AM IST
ಕರ್ನಾಟಕ News Live: Bangalore News: ಬೆಂಗಳೂರಿನಲ್ಲಿ ಕನ್ನಡ ಫಲಕ ಹಾಕಿಲ್ಲವೇ, ವಾಣಿಜ್ಯ ಮಳಿಗೆದಾರರಿಗೆ ಫೆಬ್ರವರಿ 1ರಿಂದ ದಂಡ ಬೀಳಲಿದೆ ಹುಷಾರು
- ಬೆಂಗಳೂರಿನಲ್ಲಿ ವಾಣಿಜ್ಯ ಮಳಿಗೆಗಳವರು ಅಳವಡಿಸುವ ಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶವಿದ್ದರೂ ಇನ್ನೂ ಪೂರ್ಣಗೊಳಿಸದವರ ವಿರುದ್ದ ದಂಡ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ.
Fri, 31 Jan 202510:06 AM IST
ಕರ್ನಾಟಕ News Live: ಚೆಕ್ ಬೌನ್ಸ್ ಪ್ರಕರಣ: ಸಂಚಲನ ಸೃಷ್ಟಿಸಿದ್ದ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣಗೆ 6 ತಿಂಗಳು ಜೈಲು ಶಿಕ್ಷೆ
- ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿ ನಿಂತಿರುವ ದೂರುದಾರ ಸ್ನೇಹಮಯಿ ಕೃಷ್ಣ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
Fri, 31 Jan 202508:42 AM IST
ಕರ್ನಾಟಕ News Live: ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ, ಸರ್ಕಾರ ನಿಮ್ಮ ಜೊತೆಗಿದೆ, ದೂರು ಕೊಡಿ: ಸಿಎಂ ಸಿದ್ದರಾಮಯ್ಯ ಸಲಹೆ
- ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ನಡೆದ ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು.
Fri, 31 Jan 202507:41 AM IST
ಕರ್ನಾಟಕ News Live: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025ಕ್ಕೆ ಅರ್ಜಿ ಆಹ್ವಾನ, ಪುಸ್ತಕ ಸಲ್ಲಿಸಲು ಫೆಬ್ರವರಿ 28 ಕೊನೆ ದಿನ
- ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಭಾರತೀಯ ಲೇಖಕರು, ಲೇಖಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. 2019, 2020, 2021, 2022 ಮತ್ತು 2023ರಲ್ಲಿ ಮೊದಲು ಪ್ರಕಟವಾದ ಪುಸ್ತಕವನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.
Fri, 31 Jan 202507:27 AM IST
ಕರ್ನಾಟಕ News Live: ಸಿಎಂ ಬದಲಾವಣೆ ವಿಚಾರ ನನಗೆ ಪದೇ ಪದೇ ಕೇಳಬೇಡಿ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೊ ಅದೇ ಆಗುತ್ತದೆ: ಸಿದ್ದರಾಮಯ್ಯ
- ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ನಡೆದಿರುವ ರಾಜಕೀಯ ಬೆಳವಣಿಗೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಮಾತನಾಡಿದ್ದಾರೆ.
Fri, 31 Jan 202506:51 AM IST
ಕರ್ನಾಟಕ News Live: ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಮಹಾಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ಮೂಲದ ಸತ್ಯನಾರಾಯಣ ನೇಮಕ
- ಕನ್ನಡಿಗ ದಕ್ಷಿಣ ಕನ್ನಡ ಬೆಳ್ತಂಗಡಿ ಮೂಲಕ ಸತ್ಯನಾರಾಯಣ ತೋಡ್ತಿಲ್ಲಾಯ ಅವರನ್ನು ಭಾರತದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಕೇರಳ ತಿರುವನಂತಪುರ ಅನಂತಪದ್ಮನಾಭ ದೇಗುಲದ ಮಹಾಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದಾರೆ
- ವರದಿ: ಹರೀಶ ಮಾಂಬಾಡಿ.ಮಂಗಳೂರು
Fri, 31 Jan 202506:24 AM IST
ಕರ್ನಾಟಕ News Live: Kittur Chennamma Award: ಮಹಿಳಾ ಅಭಿವೃದ್ಧಿ ಮಾಡಿದ್ದೀರಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಹಾಕಿ; ಫೆಬ್ರವರಿ 3 ಕಡೆ ದಿನ
- Kittur Chennamma Award: ಕರ್ನಾಟಕದಲ್ಲಿ ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Fri, 31 Jan 202506:24 AM IST
ಕರ್ನಾಟಕ News Live: Mule Accounts: ಸೈಬರ್ ಅಪರಾಧಿಗಳಿಗೆ ಹೇಸರಗತ್ತೆ ಖಾತೆ ತೆರೆಯಲು ನೆರವಾಗುತ್ತಿದ್ದ ಬ್ಯಾಂಕ್ ಅಧಿಕಾರಿಗಳ ಬಂಧನ, ಏನಿದು ಮ್ಯೂಲ್ ಖಾತೆ?
- ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ (ಹೇಸರಗತ್ತೆ ಖಾತೆ ಅಥವಾ ಮ್ಯೂಲ್ ಅಕೌಂಟ್ಸ್) ತೆರೆಯಲು ನೆರವಾಗುತ್ತಿದ್ದ ಮೂವರು ಹಿರಿಯ ಬ್ಯಾಂಕ್ ಉದ್ಯೋಗಿಗಳನ್ನು ಬೆಂಗಳೂರು, ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಮ್ಯೂಲ್ ಖಾತೆ ಎಂದರೆ ಏನು ಎಂಬ ಮಾಹಿತಿಯೂ ಇಲ್ಲಿದೆ.
Fri, 31 Jan 202506:07 AM IST
ಕರ್ನಾಟಕ News Live: ರಾಜೀವ ಹೆಗಡೆ ಬರಹ: ಮೂರು ಲಕ್ಷ ಕೋಟಿ ಕಥೆ ಹೇಳಿ ನೀರಲ್ಲೂ ಪೈಸೆಗಳ ಟೋಪಿ ಹಾಕುವ ಸರ್ಕಾರ; ಬೆಂಗಳೂರು ಜಲಮಂಡಳಿ ದರ ಏರಿಕೆ ಸುತ್ತ ಮುತ್ತ
ಬೆಂಗಳೂರು ಜಲಮಂಡಳಿಯು ನೀರಿನ ದರ ಏರಿಕೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದರ ಆರ್ಥಿಕ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ಲೇಖಕ ರಾಜೀವ್ ಹೆಗಡೆ ಇಲ್ಲಿ ವಿಶ್ಲೇಷಿಸಿದ್ದಾರೆ.
Fri, 31 Jan 202504:54 AM IST
ಕರ್ನಾಟಕ News Live: Gold Price: 10 ಗ್ರಾಂ ಚಿನ್ನಕ್ಕೆ 82357 ರೂ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ತಿಳಿಯಿರಿ
- Gold Price Today: ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿರುವುದರಿದ ಶುಕ್ರವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 10 ಗ್ರಾಂ ಚಿನ್ನದ ದರ 82,357 ರೂ.ಗೆ ತಲುಪಿದೆ. ಜಾಗತಿಕ ವಿದ್ಯಾಮಾನಗಳು, ಸುಂಕ ಹೆಚ್ಚುವ ಭೀತಿ ಇತ್ಯಾದಿಗಳಿಂದ ಜನರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
Fri, 31 Jan 202504:31 AM IST
ಕರ್ನಾಟಕ News Live: ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ನಗರದಲ್ಲಿ ತಾಪಮಾನ ಎಷ್ಟಿದೆ?
- Karnataka Weather: ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ 1ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Fri, 31 Jan 202503:48 AM IST
ಕರ್ನಾಟಕ News Live: ಬೆಳ್ಳಂಬೆಳ್ಳಗೆ ಭ್ರಷ್ಟರ ಬೇಟೆ; ಬೆಂಗಳೂರು, ಬೆಳಗಾವಿ, ರಾಯಚೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ
- ಬೆಳ್ಳಂಬೆಳ್ಳಗೆ ಭ್ರಷ್ಟರ ಬೇಟೆಗಿಳಿದಿರುವ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಬೆಳಗಾವಿ, ರಾಯಚೂರು ಸೇರಿ ವಿವಿಧೆಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
Fri, 31 Jan 202501:41 AM IST
ಕರ್ನಾಟಕ News Live: ಸಿಟಿ ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ವಿನಯ ಕುಲಕರ್ಣಿ, ಯತ್ನಾಳ್ ಪ್ರಕರಣ ರದ್ದು; ರೇವಣ್ಣಗೂ ತಾತ್ಕಾಲಿಕ ರಿಲೀಫ್
- High Court of Karnataka: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಸಿಟಿ ರವಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಚ್ಡಿ ರೇವಣ್ಣ ವಿರುದ್ಧದ ಪ್ರಕರಣದ ತಡೆ ಆದೇಶ ವಿಸ್ತರಿಸಿರುವ ನ್ಯಾಯಾಲಯ, ವಿನಯ ಕುಲಕರ್ಣಿ ಮತ್ತು ಯತ್ನಾಳ್ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
- (ವರದಿ-ಎಚ್. ಮಾರುತಿ)