Karnataka News Live January 4, 2025 : ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಪತ್ನಿ ನಿಖಿತಾ ಸಿಂಘಾನಿಯಾಗೆ ಬಿಗ್ ರಿಲೀಫ್; ಅತ್ತೆ, ಬಾಮೈದನಿಗೂ ಸಿಕ್ತು ಜಾಮೀನು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 04 Jan 202504:27 PM IST
- Atul Subhash case: ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ಪತ್ನಿ ನಿಖಿತಾ ಸಿಂಘಾನಿಯಾ ಸೇರಿ ಮೂವಗರು ಆರೋಪಿಗಳಿಗೆ ಬೆಂಗಳೂರಿನ ಸಿವಿಲ್ ಕೋರ್ಟ್ ಜಾಮೀನು ನೀಡಿದೆ.
Sat, 04 Jan 202501:16 PM IST
Aero India 2025: ಏರೋ ಇಂಡಿಯಾ 2025ರ ಪ್ರದರ್ಶನ ಫೆ.10 ರಿಂದ 14ರ ತನಕ ನಡೆಯಲಿದೆ. ಇದಕ್ಕಾಗಿ ಸಂದರ್ಶಕರ ನೋಂದಣಿ ಶುರುವಾಗಿದ್ದು, ಟಿಕೆಟ್ ದರ ಮತ್ತು ನೋಂದಣಿ ವಿವರ ಇಲ್ಲಿದೆ.
Sat, 04 Jan 202512:02 PM IST
Bengaluru Temperature: ಬೆಂಗಳೂರು ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ಇನ್ನೆರಡು ದಿನ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ಆಸುಪಾಸಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಮೈ ನಡುಕದ ಚಳಿಯೂ ಕಾಡಬಹುದು. ಅಂದ ಹಾಗೆ, ಬೆಂಗಳೂರಿನ ಸಾರ್ವಕಾಲಿಕ ಕನಿಷ್ಠ ತಾಪಮಾನ ಎಷ್ಟು ಎಂದು ತಿಳಿಯುವ ಕುತೂಹಲವೇ? ಈ ವರದಿ ಓದಿ.
Sat, 04 Jan 202508:44 AM IST
- ಸಮಾಜಶಾಸ್ತ್ರಜ್ಞ, ವಿದ್ವಾಂಸ ಪ್ರೊ.ಮುಜಾಫರ್ ಅಸ್ಸಾದಿ ಇಂದು (ಶನಿವಾರ) ನಿಧನರಾಗಿದ್ದಾರೆ. ಈ ಸಮಯದಲ್ಲಿ ಅಸ್ಸಾದಿ ಕುರಿತು ಅವರ ಒಡನಾಡಿಗಳಾದ ದಿನೇಶ್ ಅಮೀನ್ ಮಟ್ಟು, ರಹಮತ್ ತರಿಕೇರೆ, ರಂಜಾನ್ ದರ್ಗಾ ಸೋಷಿಯಲ್ ಮೀಡಿಯಾದಲ್ಲಿ ಬರೆದ ಬರಹಗಳು ಗಮನ ಸೆಳೆಯುತ್ತವೆ.
Sat, 04 Jan 202508:01 AM IST
- Prof Muzaffar Assadi passed away: ಪ್ರಖರ ಸಮಾಜಶಾಸ್ತ್ರಜ್ಞ, ವಿದ್ವಾಂಸ ಪ್ರೊ. ಮುಜಾಫರ್ ಅಸ್ಸಾದಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
Sat, 04 Jan 202506:32 AM IST
- ಮೈಸೂರು ಜಿಲ್ಲೆ ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕೇಕ್ ತಿಂದು ಅಸ್ವಸ್ಥರಾದ ಘಟನೆ ನಡೆದಿದೆ. ಮಕ್ಕಳಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
Sat, 04 Jan 202506:10 AM IST
- KPSC Jobs: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಮರುಚಾಲನೆ ನೀಡಿದೆ. ಒಟ್ಟು 945 ಹುದ್ದೆಗಳಿವೆ. ಅರ್ಜಿ ಸಲ್ಲಿಕೆ, ಹುದ್ದೆಗಳ ವರ್ಗೀಕರಣ, ಅರ್ಹತೆಗಳು ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
Sat, 04 Jan 202504:50 AM IST
Fake ED Raid: ಬಂಟ್ವಾಳ ತಾಲೂಕು ವಿಟ್ಲ ಸಮೀಪ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಿನ್ನೆ ರಾತ್ರಿ ಇಡಿ ಅಧಿಕಾರಿಗಳಂತೆ ದಾಳಿ ನಡೆಸಿದ ವಂಚಕರು, 30 ಲಕ್ಷ ರೂಪಾಯಿ ದೋಚಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Sat, 04 Jan 202502:38 AM IST
ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 18 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 19 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಬಿಬಿಎಂಪಿ ಸಜ್ಜಾಗಿದೆ. ಇದರಿಂದ ಪ್ರಯಾಣದ ಸಮಯ 90 ನಿಮಿಷಗಳಿಂದ 20 ನಿಮಿಷಗಳಿಗೆ ಇಳಿಯಲಿದೆ. ಆದರೆ, ಟೋಲ್ ದರವೂ ದುಬಾರಿಯಾಗಲಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Sat, 04 Jan 202502:33 AM IST
Chitra Santhe 2025: ಬೆಂಗಳೂರು ಚಿತ್ರಸಂತೆ ಇದೇ ಭಾನುವಾರ (ಜನವರಿ 5) ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ. ಜನವರಿ 4ರ ಶನಿವಾರವಾದ ಇಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರಸಂತೆ ನಿಮಿತ್ತ ಸಂಚಾರ ನಿರ್ಬಂಧದ ಜೊತೆಗೆ ಪರ್ಯಾಯ ಮಾರ್ಗ ವಿವರವನ್ನು ಪೊಲೀಸರು ಪ್ರಕಟಿಸಿದ್ದಾರೆ. ಇಂದು ಮತ್ತು ನಾಳೆ ಏನೇನು ಕಾರ್ಯಕ್ರಮ, ಇಲ್ಲಿದೆ ಆ ವಿವರ.
Sat, 04 Jan 202512:44 AM IST
ಬೆಂಗಳೂರಿನ ನಾಗವಾರ ಸಮೀಪ ಕುಡುಕ ಚಾಲಕನ ಕಿರುಕುಳ ತಾಳದೆ 30 ವರ್ಷದ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಚಾವ್ ಆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಆಟೋ ಚಾಲಕನ ವಿರುದ್ಧ ಕ್ರಮ ಜರುಗಿಸಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದು, ವಿವರ ಪಡೆದಿರುವುದು ಕಂಡುಬಂದಿದೆ. ನಮ್ಮ ಯಾತ್ರಿ ಕೂಡ ಆಟೋ ಚಾಲಕನನ್ನು ತನ್ನ ಪ್ಲಾಟ್‌ಫಾರಂನಿಂದ ತೆಗೆದುಹಾಕಿದೆ.
Sat, 04 Jan 202512:42 AM IST
Karnataka Weather: ಕರ್ನಾಟಕದಲ್ಲಿ ಇಂದು ಚಳಿಗಾಲದ ಒಣಹವೆ ಇರಲಿದ್ದು, ಬೀದರ್, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಬೀಸುವ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ ಇಳಿಕೆಯಾಗಿ ಚಳಿ ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಎಚ್ಚರಿಸಿದೆ.