Karnataka News Live January 8, 2025 : ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 08 Jan 202504:05 PM IST
BMTC Bus Pass Price: ಬೆಂಗಳೂರು ಮಹಾನಗರ ಸಾರಿಗೆ ಬಿಎಂಟಿಸಿ ಬಸ್ ಪಾಸ್ ದರ ಪರಿಷ್ಕರಣೆಯಾಗಿದೆ. ಇದು ಗುರುವಾರ (ಜನವರಿ 9) ಜಾರಿಗೆ ಬರಲಿದ್ದು, ಪ್ರತಿಯೊಂದು ಬಸ್ ಪಾಸ್‌ಗಳ ಪರಿಷ್ಕೃತ ದರ ವಿವರ ಇಲ್ಲಿದೆ.
Wed, 08 Jan 202501:15 PM IST
Karnataka Naxal Surrender: ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಇಂದು (ಜನವರಿ 8) ಶರಣಾಯಿತು. ಬಳಿಕ ಅವರನ್ನು ಆಡುಗೋಡಿಯ ಪೊಲೀಸ್ ಗ್ರೌಂಡ್‌ಗೆ ಕರೆದೊಯ್ದು, ಅಧಿಕೃತ ಬಂಧನ ದಾಖಲಿಸಲಿದ್ದಾರೆ ಪೊಲೀಸರು. ಈ ವಿದ್ಯಮಾನದ ವಿವರ ಇಲ್ಲಿದೆ.
Wed, 08 Jan 202511:38 AM IST
- Bhu Suraksha Project: ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಯ ಎರಡನೇ ಹಂತಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಲಾಗಿದೆ. ಏನಿದು ಭೂ ಸುರಕ್ಷಾ ಯೋಜನೆ? ಹಳೆಯ ಭೂ ದಾಖಲೆಗಳ ಡಿಜಿಟಲೀಕರಣದ ಪ್ರಯೋಜನಗಳೇನು? ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.
Wed, 08 Jan 202511:20 AM IST
Coconut Price Hike: ಕರ್ನಾಟಕದಲ್ಲಿ ತೆಂಗಿನಕಾಯಿ ದರ ದಿಢೀರ್ ಹೆಚ್ಚಳವಾಗಿದ್ದು, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಇದು ಹೊರೆಯಾಗಿದ್ದು, ತಿಂಡಿ ತಿನಿಸುಗಳ ಬೆಲೆ ಏರಿಕೆಯ ಸುಳಿವು ನೀಡಿದೆ.
Wed, 08 Jan 202510:59 AM IST
- ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎಎಂಸಿ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಮುದ್ರಕ್ಕಿಳಿದು ನೀರುಪಾಲಾಗಿದ್ದಾರೆ. ಸುರತ್ಕಲ್ ಹೊಸಬೆಟ್ಟು ಬೀಚ್ ಬಳಿ ಕಡಲಿಗಿಳಿದ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದಾರೆ.
Wed, 08 Jan 202509:10 AM IST
ಎರಡು ತಿಂಗಳ ನಿರಂತರ ಮಾತುಕತೆಯ ನಂತರ ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಆರು ಮಂದಿ ನಕ್ಸಲರು ಬುಧವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಶರಣಾಗಲಿದ್ದಾರೆ.
Wed, 08 Jan 202507:45 AM IST
- ಕರ್ನಾಟಕ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಉತ್ತರ ಭಾರತ ಹಾಗೂ ಹೊರ ದೇಶಗಳ ಪ್ಯಾಕೇಜ್ ಟೂರ್‌ಗಳನ್ನು ಪರಿಚಯಿಸಿದೆ. ಎಲ್ಲಿಗೆ, ಎಷ್ಟು ದರ ಎನ್ನುವ ವಿವರ ಇಲ್ಲಿದೆ.
Wed, 08 Jan 202506:53 AM IST
- ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೇಕ್ ತಯಾರಿಸುವ ಎಸೆನ್ಸ್ ಅನ್ನು ಸೇವಿಸಿದ್ದ ಮೂವರು ಖೈದಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Wed, 08 Jan 202503:41 AM IST
- ಮಂಗಳೂರಿನಲ್ಲಿ ಜನವರಿ 11ರಿಂದ ಎರಡು ದಿನಗಳ ಕಾಲ ಮಂಗಳೂರು ಲಿಟ್ ಫೆಸ್ಟ್ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಉದ್ಘಾಟಿಸುವರು. ಎರಡು ದಿನದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
- ವರದಿ: ಹರೀಶ ಮಾಂಬಾಡಿ.ಮಂಗಳೂರು
Wed, 08 Jan 202502:30 AM IST
- ಕರ್ನಾಟಕದಲ್ಲಿ ನಾಲ್ಕೈದು ವರ್ಷಗಳಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ವ್ಯವಸ್ಥೆಯಲ್ಲಿ ಆಗಿರುವ ವ್ಯತ್ಯಯ, ಪ್ರಕಾಶಕರಿಗೆ ಇದರಿಂದ ಆಗುತ್ತಿರುವ ಅಡೆತಡೆಗಳ ಕುರಿತು ಪ್ರಕಾಶಕ ಸೃಷ್ಟಿ ನಾಗೇಶ್ ಪೋಸ್ಟ್ ಚರ್ಚೆ ಹುಟ್ಟು ಹಾಕಿದೆ.
Wed, 08 Jan 202501:41 AM IST
Karnataka SSLC exam 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ದತೆ ನಡೆಸಿದ್ದೀರಾ, ಹಾಗಾದರೆ 10ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆಗಾಗಿ ಅಲ್ಲಿ ಇಲ್ಲಿ ಹುಡುಕಾಡಬೇಡಿ. 10ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಲು ನೇರ ಲಿಂಕ್ ಇಲ್ಲಿದೆ. ಡೌನ್‌ಲೋಡ್ ಮಾಡುವ ಹಂತಗಳ ವಿವರವೂ ಇದೆ.
Wed, 08 Jan 202501:40 AM IST
- ಕರ್ನಾಟಕದಲ್ಲಿ ಚಳಿ ಪ್ರಮಾಣ ಇನ್ನೂ ಮೂರು ದಿನ ಕೊಂಚ ಹೆಚ್ಚೇ ಇರಲಿದೆ. ಆನಂತರ ನಿಧಾನವಾಗಿ ಕನಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.