Karnataka News Live January 9, 2025 : Tumul Election 2025: ತುಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ; ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 09 Jan 202504:44 PM IST
Tumul Election 2025: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತುಮುಲ್‌ನ ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಅದರ ವಿವರ ಇಲ್ಲಿದೆ (ವರದಿ- ಈಶ್ವರ್, ತುಮಕೂರು)
Thu, 09 Jan 202503:53 PM IST
Vaikunta Ekadashi 2025: ಮಂಗಳೂರು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ತನ್ನಿಮಿತ್ತವಾಗಿ ದೇಗುಲದಲ್ಲಿ ವೈಕುಂಠ ಏಕಾದಶಿಗೆ 10,000 ಸಾವಯವ ಗಿಡ ಪ್ರಸಾದ ರೂಪದಲ್ಲಿ ನೀಡಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.
Thu, 09 Jan 202503:25 PM IST
Karnataka Naxal Surrender: ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ 6 ನಕ್ಸಲರಿಗೆ ನ್ಯಾಯಾಂಗ ಬಂಧನವನ್ನು ಎನ್‌ಐಎ ಕೋರ್ಟ್ ವಿಧಿಸಿದೆ. ಜನವರಿ 30 ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಶರಣಾದ ನಕಲ್ಸರು ಮತ್ತು ಸರ್ಕಾರದ ಜವಬ್ದಾರಿಗಳೇನು? ಎಂಬಿತ್ಯಾದಿ ವಿವರ ಇಲ್ಲಿದೆ.(ವರದಿ- ಎಚ್. ಮಾರುತಿ, ಬೆಂಗಳೂರು)
Thu, 09 Jan 202509:07 AM IST
Prajwal Revanna Case: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಣ್ಣ ರಿಲೀಫ್ ಸಿಕ್ಕಿದೆ. ಆರೋಪ ನಿಗದಿ ಪ್ರಕ್ರಿಯೆ ಆರಂಭಿಸದಂತೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ಜನವರಿ16ಕ್ಕೆ ವಿಚಾರಣೆಯನ್ನು ಮುಂದೂಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Thu, 09 Jan 202507:20 AM IST
- ಕಾರ್ಕಳದ ಬಂಡೀಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವನ್ನು ತೊಟ್ಟಿಲಿಗೆ ಹಾಕುವ ಅಪರೂಪದ ಆಚರಣೆಯೊಂದು ನಡೆದಿದೆ. ಇದನ್ನು ಡೋಲಾರೋಪಣಾ ಸೇವೆ ಎಂದು ಕರೆಯಲಾಗುತ್ತದೆ. ಅಪರೂಪದಲ್ಲಿ ಅಪರೂಪವಾಗಿರುವ ಈ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ. (ವರದಿ: ಹರೀಶ್ ಮಾಂಬಾಡಿ)
Thu, 09 Jan 202506:17 AM IST
- ನಮ್ಮ ಯಾತ್ರಿ ಆ್ಯಪ್ ಇದೀಗ ಮೈಸೂರಿನಲ್ಲೂ ಕಾರ್ಯಾರಂಭ ಮಾಡಿದೆ. ಈಗಾಗಲೇ 8 ಸಾವಿರಕ್ಕೂ ಹೆಚ್ಚು ಚಾಲಕರು ಇದಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರು, ತುಮಕೂರು, ಕಲಬುರಗಿ ಮತ್ತು ಮಂಗಳೂರಿನಲ್ಲಿ ಈಗಾಗಲೇ ನಮ್ಮ ಯಾತ್ರಿ ಸೇವೆ ಸಲ್ಲಿಸುತ್ತಿದೆ.
Thu, 09 Jan 202505:29 AM IST
- ಚಿಕ್ಕಬಳ್ಳಾಪುರ ಆದಿಯೋಗಿ ಸನ್ನಿಧಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಉಪಸ್ಥಿತಿಯಲ್ಲಿ ಜನವರಿ 14ರಂದು ಮಕರ ಸಂಕ್ರಾಂತಿ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮಗಳು ಮತ್ತು ಪ್ರವೇಶ ದರದ ಕುರಿತು ಮಾಹಿತಿ ಇಲ್ಲಿದೆ.
Thu, 09 Jan 202501:57 AM IST
- ತಾಪಮಾನ ಕುಸಿತದ ಕಾರಣ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಭಾವ ಜೋರಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಒಳಗಿದೆ. ಇನ್ನೂ ಒಂದೆರಡು ದಿನ ಇದೇ ವಾತಾವರಣ ಇರಲಿದೆ ಎನ್ನಲಾಗುತ್ತಿದ್ದು, ಅತಿಯಾದ ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಇಂದು (ಜ 9) ಕರ್ನಾಟಕ ಹವಾಮಾನ ಹೇಗಿದೆ ನೋಡೋಣ.