Karnataka News Live November 10, 2024 : ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 10 Nov 202405:06 PM IST
- ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ? ರಾತ್ರಿ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಬ್ಬರಿಗೆ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು? ತುರ್ತು ಸಹಾಯವಾಣಿಗೆ ಕರೆ ಮಾಡದಿದ್ದರೆ ಆ ಮಹಿಳೆ ಸ್ಥಿತಿ ಏನಾಗಿರುತ್ತಿತ್ತು? (ವರದಿ-ಎಚ್.ಮಾರುತಿ)
Sun, 10 Nov 202404:56 PM IST
Charmadi Ghat: ಬರೋಬ್ಬರಿ 343 ಕೋಟಿ ರೂಪಾಯಿಗಳ ಅನುದಾನದೊಂದಿಗೆ ಚಾರ್ಮಾಡಿ ಘಾಟ್ 11 ಕಿಲೋಮೀಟರ್ ದ್ವಿಪಥ ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ.
Sun, 10 Nov 202401:49 PM IST
- Karnataka WAQF Controversy: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮತ್ತೊಂದು ಭೂಮಿ ವಕ್ಫ್ ಆಸ್ತಿ ಎಂದು ಆರ್ಟಿಸಿಯಲ್ಲಿ ನಮೂದಾಗಿದೆ. ವರುಣ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಬಳಿಕ ಇದೀಗ ಇಲವಾಲದ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.
Sun, 10 Nov 202411:39 AM IST
Seat-Blocking Scam: ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಇತರೆ ಸಂಬಂಧಿತ ವಿಷಯಗಳಿರುವ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ದಂಧೆ ಶಂಕಿಸಲಾಗಿದೆ. ಸೀಟು ಬ್ಲಾಕ್ ಮಾಡುವುದಕ್ಕೆ ಬಳಕೆಯಾಗಿದ್ದ ಐಪಿ ವಿಳಾಸಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. 2300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಯಾಗಿದೆ.
Sun, 10 Nov 202411:24 AM IST
- MUDA Land Case: ಮುಡಾದ ಬಹುಕೋಟಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ದಾಖಲೆಗಳ ಸಮೇತ ಆರೋಪಿಸಿದ್ದಾರೆ.
Sun, 10 Nov 202410:58 AM IST
ಕರ್ನಾಟಕದಲ್ಲಿ ಅಕ್ಟೋಬರ್ ಜತೆಗೆ ನವೆಂಬರ್ ಮೊದಲ ವಾರದವರೆಗೂ ಉತ್ತಮ ಮಳೆಯಾಗಿದೆ. ಮೂರು ಜಿಲ್ಲೆಗಳಲ್ಲಿ ಮಾತ್ರ ಕೊರತೆ ಎದುರಾಗಿದೆ.
Sun, 10 Nov 202410:53 AM IST
ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾವನೆಗೆ ಸಂಬಂಧಿಸಿ ಸಮಾಲೋಚನೆ ನಡೆಯುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಸರ್ಕಾರ ಆಹ್ವಾನಿಸಿದೆ.
Sun, 10 Nov 202410:07 AM IST
- Bengaluru Crime News: ಜಯನಗರದ ಹೋಲಿ ಕ್ರೈಸ್ಟ್ ಶಾಲೆಯಲ್ಲಿ ಹಿಂದಿ ಶಿಕ್ಷಕಿಯೊಬ್ಬರು 11 ವರ್ಷದ ಬಾಲಕನಿಗೆ ಕೋಲಿನಿಂದ ಹೊಡೆದ ಪರಿಣಾಮ ಹಲ್ಲು ಮುರಿದಿದೆ. ಇದೀಗ ಬಾಲಕನ ತಂದೆ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.
Sun, 10 Nov 202408:07 AM IST
ಮಂಗಳೂರು ಸಮೀಪದ ಪಕ್ಷಿಕೆರೆಯಲ್ಲಿ ಮನೆಯಲ್ಲಿ ಪುಟ್ಟ ಮಗ, ಪತ್ನಿಯನ್ನು ಕೊಂದು ಹಾಕಿದ ಯುವಕ ಬಳಿಕ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಮನೆಯಲ್ಲಿದ್ದ ಯುವಕನ ಅಪ್ಪ- ಅಮ್ಮನಿಗೆ ಕೊಲೆಯ ವಿಚಾರ ಪೊಲೀಸರು ಬರುವ ತನಕ ಗೊತ್ತಿರಲಿಲ್ಲ ಎಂಬುದು ಕಳವಳಕಾರಿಯಾಗಿ ಗಮನಸೆಳೆದಿದೆ.
Sun, 10 Nov 202407:40 AM IST
- ಕರ್ನಾಟಕದಲ್ಲಿನ ವಕ್ಫ್ ಆಸ್ತಿ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಸಿಎಂ ಸಿದ್ದರಾಮಯ್ಯ ಬಗೆಹರಿಸಬೇಕು. ಆದೇಶದಲ್ಲಿ ಸುಳ್ಳು ಯಾವುದು, ಸತ್ಯ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಎನ್ನುವುದು ಬಿಜೆಪಿ ಆಗ್ರಹ.
Sun, 10 Nov 202407:21 AM IST
- Bangalore Crime: ಬೆಂಗಳೂರಿನ ಮನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ಮಾಲೀಕರು ಗುಜರಾತ್‌ಗೆ ತೆರಳಿದಾಗ ಭಾರಿ ಪ್ರಮಾಣ ನಗ, ನಗದು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ಆತನ ಪತ್ತೆಗೆ ಪೊಲೀಸ್ ತಂಡ ನೇಪಾಳಕ್ಕೆ ತೆರಳಿವೆ.
- ವರದಿ: ಎಚ್.ಮಾರುತಿ. ಬೆಂಗಳೂರು
Sun, 10 Nov 202407:09 AM IST
ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಂಸ್ಟೆಕ್)ದ ಭಾಗವಾಗಿ ಬೆಂಗಳೂರಿನಲ್ಲಿ ಬಿಂಸ್ಟೆಕ್ ಎನರ್ಜಿ ಸೆಂಟರ್ ಶುರುವಾಗಲಿದೆ. ಇದಕ್ಕೆ ಸಂಬಂಧಿಸಿದ ಒಪ್ಪಂದ ವಿದೇಶಾಂಗ ಸಚಿವಾಲಯದ ಮಟ್ಟದಲ್ಲಿ ಆಗಿದ್ದು, ಶೀಘ್ರವೇ ಬೆಂಗಳೂರಿನಲ್ಲಿ ಈ ಕೇಂದ್ರದ ಕಾರ್ಯಾಚರಣೆ ಶುರುವಾಗಲಿದೆ.
Sun, 10 Nov 202406:36 AM IST
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲಂಕಾರಿಕ ಸಸ್ಯಗಳ ನಡುವೆ ಗಾಂಜಾ ಬೆಳೆದ ಸಿಕ್ಕಿಂ ಮೂಲದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ದಂಪತಿಯ ರೀಲ್ಸ್‌ನಲ್ಲಿ ಗಾಂಜಾ ಗಿಡ ಕಂಡ ಕಾರಣ ಪೊಲೀಸರು ಹುಡುಕಿ ಹೋಗಿ ಅವರನ್ನು ಬಂಧಿಸಿ, ಗಾಂಜಾ ವಶಪಡಿಸಿಕೊಂಡರು.
Sun, 10 Nov 202406:20 AM IST
- Bengaluru Weather: ಬೆಂಗಳೂರಿನಲ್ಲಿ ಭಾನುವಾರ ಭಾರೀ ಚಳಿಯ ಜತೆಗೆ ಹಿಮದ ವಾತಾವರಣ ಕಂಡು ಬಂದಿತು. ಜನ ಚಳಿಯಲ್ಲೇ ವಿಹಾರ ನಡೆಸಿದರು. ಬೆಂಗಳೂರಿನ ಹಿಮದ ವಾತಾವರಣದಿಂದ ಕೆಲವು ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ.
Sun, 10 Nov 202405:36 AM IST
ಕರ್ನಾಟಕದ ಜಲಾಶಯಗಳು ಭರ್ತಿಯಾಗಿದ್ದು, ಜಲವಿದ್ಯುತ್ ಉತ್ಪಾದನೆಗೆ ಬೇಕಾದಷ್ಟು ನೀರಿನ ಸಂಗ್ರಹವಿದೆ. ಆದಾಗ್ಯೂ, ವಿದ್ಯುತ್ ಬೇಡಿಕೆ ಈ ಬಾರಿ ಕೂಡ ಹೆಚ್ಚಾಗಬಹುದು ಎಂಬ ಕಾರಣಕ್ಕೆ ವಿದ್ಯುತ್ ದರ ಏರಿಕೆ ಸುಳಿವು ಸಿಕ್ಕಿದ್ದು, ಈ ಕುರಿತು ಬೆಸ್ಕಾಂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ ಎಂದು ವರದಿ ಹೇಳಿದೆ.
Sun, 10 Nov 202405:15 AM IST
- Indian Railways Updates: ಭಾರತೀಯ ರೈಲ್ವೆಯು ಹುಬ್ಬಳ್ಳಿ, ಬೆಂಗಳೂರಿನಿಂದ ಗುಜರಾತ್, ಉತ್ತರಾಖಂಡಕ್ಕೆ ವಿಶೇಷ ರೈಲುಗಳನ್ನು ಓಡಿಸಲಿದ್ದು. ಈಗಾಗಲೇ ಇರುವ ರೈಲುಗಳ ಸೇವೆ ವಿಸ್ತರಣೆ ಮಾಡಿದೆ.
Sun, 10 Nov 202404:27 AM IST
ಬೆಂಗಳೂರಿನ ಪ್ರವಾಸಿ ಆಕರ್ಷಣೆಯಾಗಿರುವ ಲಾಲ್‌ಬಾಗ್ ಸಸ್ಯತೋಟದ ಪ್ರವೇಶ ದರ ಮತ್ತು ವಾಹನ ನಿಲುಗಡೆ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ ನಿತ್ಯ ನಡಿಗೆದಾರರು, ಸಾರ್ವಜನಿಕರ ಅಸಮಾಧಾನ ವ್ಯಕ್ತವಾಗಿದ್ದು, ನಿರ್ವಹಣೆ ಇಲ್ಲದೇ ಶುಲ್ಕ ಏರಿಸಿದ್ದು ಯಾಕೆ ಎಂದು ಪ್ರಶ್ನಿಸತೊಡಗಿದ್ದಾರೆ.
Sun, 10 Nov 202404:18 AM IST
- ವಕ್ಫ್ ಭೂ ವಿವಾದ ಕರ್ನಾಟಕದಲ್ಲಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈಗಾಗಲೇ ರೈತರಿಗೆ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ವಾಪಾಸ್ ಪಡೆಯುವಂತೆ ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದೆ.
Sun, 10 Nov 202402:36 AM IST
ಬೆಂಗಳೂರು, ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ವಿಗ್ಗಿ ಸಂಸ್ಥೆಯ ಸಹಾಯವಾಣಿಯಲ್ಲಿ ಕನ್ನಡದ ಆಯ್ಕೆಯೇ ಇಲ್ಲ. ಕನ್ನಡದಲ್ಲಿ ಮಾತನಾಡಬೇಕು ಅಂದರೆ ‘ವಿ ಆರ್ ಇಂಡಿಯನ್ಸ್’ ಎನ್ನುತ್ತಾರೆ. ಅಂದ್ರೆ ಕನ್ನಡಿಗರೇನು ಭಾರತೀಯರಲ್ವಾ? ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಣ್ಣಿಗೆ ಇಂಥವು ಬೀಳುವುದೇ ಇಲ್ಲವೇ? ನವೆಂಬರ್‌ನಲ್ಲಿ ಆದ ಕೆಟ್ಟ ಅನುಭವ ಇದು.
Sun, 10 Nov 202401:29 AM IST
ಬೆಂಗಳೂರು ನಗರ ಸಂಚಾರ: ನಾಲ್ಕೇ ಗಂಟೆಗಳಲ್ಲಿ 1757 ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರು, 88 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದರು. ಪ್ರತ್ಯೇಕ ಪ್ರಕರಣ ಒಂದರಲ್ಲಿ ಮನೆಯ ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)