ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live November 12, 2024 : ಬೆಂಗಳೂರಿಗೆ RRTS ರೈಲು ಬರೋದು ಯಾವಾಗ? ನಮ್ಮ ಎಂಪಿಗಳ ಕಣ್ಣಿಗೆ ಇಂಥವು ಬೀಳೋದೇ ಇಲ್ವಾ? ಇಂಟರ್ನೆಟ್‌ನಲ್ಲಿ ಬೆಂಗಳೂರು ಸಂಸದರಿಗೆ ಕ್ಲಾಸ್
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 12 Nov 202410:30 AM IST
ಕರ್ನಾಟಕ News Live: ಬೆಂಗಳೂರಿಗೆ RRTS ರೈಲು ಬರೋದು ಯಾವಾಗ? ನಮ್ಮ ಎಂಪಿಗಳ ಕಣ್ಣಿಗೆ ಇಂಥವು ಬೀಳೋದೇ ಇಲ್ವಾ? ಇಂಟರ್ನೆಟ್‌ನಲ್ಲಿ ಬೆಂಗಳೂರು ಸಂಸದರಿಗೆ ಕ್ಲಾಸ್
- ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನಂತಹ ಆರ್‌ಆರ್‌ಟಿಎಸ್ ಸಾರಿಗೆ ವ್ಯವಸ್ಥೆಯು ಕರ್ನಾಟಕಕ್ಕೂ ಬೇಕಿದೆ. ಬೆಂಗಳೂರು, ತುಮಕೂರು, ಹಾಸನ, ಮೈಸೂರು, ಕೆಐಎಎಲ್ ನಡುವೆ ಇಂತಹ ಆರ್‌ಆರ್‌ಟಿಎಸ್ ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
Tue, 12 Nov 202409:22 AM IST
ಕರ್ನಾಟಕ News Live: ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಿರಿ, ದರ ಕೇವಲ 45 ರೂಪಾಯಿ, ಆನ್‌ಲೈನ್- ಆಫ್‌ಲೈನ್‌ನಲ್ಲಿ ಇ-ಖಾತೆ ಪಡೆಯಲು ಇಲ್ಲಿದೆ ಮಾರ್ಗದರ್ಶಿ
- ಬೆಂಗಳೂರು ಪ್ರಾಪರ್ಟಿ ಮಾಲೀಕರು ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇಖಾತೆಯನ್ನು ಪಡೆಯಲು ಬಿಬಿಎಂಪಿಯು ಅವಕಾಶ ನೀಡಿದೆ. ಕೇವಲ 45 ರೂ. ಶುಲ್ಕ ನೀಡಿ ಇಖಾತೆ ಪಡೆಯಬಹುದು. ಬಿಬಿಎಂಪಿಗೆ ಅಂತಿಮ ಇ ಖಾತೆ ಪಡೆಯು 125 ರೂ. ಶುಲ್ಕ ಪಾವತಿಸಬೇಕು.
Tue, 12 Nov 202408:40 AM IST
ಕರ್ನಾಟಕ News Live: ಭಾರತದಲ್ಲಿ ಇದೇ ಮೊದಲು, ತೃತೀಯ ಲಿಂಗಿ ತಾಯಿ ಅಕ್ಕೈ ಪದ್ಮಶಾಲಿ ಹೆಸರಿನೊಂದಿಗೆ ಪಾಸ್‌ಪೋರ್ಟ್ ಪಡೆದ ಬೆಂಗಳೂರು ಹುಡುಗ ಅವಿನ್
- ಅಕ್ಕೈ ಪದ್ಮಶಾಲಿ ತೃತೀಯ ಲಿಂಗಿಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರ್ತಿ. ಇದೀಗ ಈಕೆಯ ಮಗ ಅವಿನ್‌ಗೆ ತನ್ನ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್ ದೊರಕಿದೆ. ಅಪ್ಪನ ಹೆಸರಿಲ್ಲದೆ, ಟ್ರಾನ್ಸ್‌ಜೆಂಡರ್ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್ ನೀಡಿರುವುದು ಇದೇ ಮೊದಲಾಗಿದೆ.
Tue, 12 Nov 202405:44 AM IST
ಕರ್ನಾಟಕ News Live: Lokayukta Raid: ಬೀದರ್, ಮೈಸೂರು, ಧಾರವಾಡ ಸಹಿತ ಹಲವು ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್
- ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳವಾರ ಬೆಳಿಗ್ಗೆ ಕರ್ನಾಟಕದ ನಾನಾ ಭಾಗಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
Tue, 12 Nov 202405:06 AM IST
ಕರ್ನಾಟಕ News Live: Kodagu Tourism: ಕೊಡಗಿನಲ್ಲಿವೆ 4 ಸಾವಿರ ಹೋಂಸ್ಟೇ, 44 ಲಕ್ಷ ಪ್ರವಾಸಿಗರ ಭೇಟಿ; ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದ ಕೊಡಗು ಜಿಲ್ಲೆ
- Kodagu Tourism Updates: ಕೊಡಗು ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು ಪ್ರತಿ ವರ್ಷ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ವಲಯವೂ ಕೊಡಗಿನಲ್ಲಿ ಗಟ್ಟಿಯಾಗಿ ನೆಲೆಯೂರಿದೆ.
Tue, 12 Nov 202404:30 AM IST
ಕರ್ನಾಟಕ News Live: Bangalore News: ಬೆಂಗಳೂರು ವಿಶ್ವವಿದ್ಯಾನಿಲಯ ಕಟ್ಟಿದ ನಿವೃತ್ತ ಕುಲಪತಿ ಎಂಎಸ್ ತಿಮ್ಮಪ್ಪ ನಿಧನ, ಶಿಕ್ಷಣ ತಜ್ಞರಾಗಿಯೂ ಸೇವೆ
- ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಶಿಕ್ಷಣ ತಜ್ಞ ಪ್ರೊ.ಎಂ.ಎಸ್.ತಿಮ್ಮಪ್ಪ ಅವರು ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು.
Tue, 12 Nov 202403:19 AM IST
ಕರ್ನಾಟಕ News Live: ಎಚ್ಎಂಟಿ ಅರಣ್ಯ ಭೂಮಿ ವಿವಾದ; ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್, ಆರ್.ಗೋಕುಲ್ ಗೆ ನೋಟಿಸ್ ಜಾರಿಗೊಳಿಸಿದ ಅರಣ್ಯ ಇಲಾಖೆ
- ಬೆಂಗಳೂರಿನ ಕೋಟ್ಯಂತರ ರೂ. ಬೆಲೆ ಬಾಳುವ ಎಚ್‌ಎಂಟಿ ಭೂಮಿ ವಿಚಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ನಿವೃತ್ತ ಐಎಎಸ್ ಅಧಿಕಾರಿ, ಈಗಿನ ಐಎಫ್ಎಸ್ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದೆ.
Tue, 12 Nov 202402:36 AM IST
ಕರ್ನಾಟಕ News Live: Garlic high Rate:ಬೆಳ್ಳುಳ್ಳಿ ದರದಲ್ಲೀ ಭಾರೀ ಏರಿಕೆ, ಕೆಜಿ ದರ ಎಷ್ಟು ಹೆಚ್ಚಿದೆ; ಇನ್ನೂ 3 ತಿಂಗಳು ಬೆಲೆ ಇಳಿಕೆ ಲಕ್ಷಣ ಕಡಿಮೆ
- Garlic rates jumped: ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು. ಕೆಜಿ ದರ ಅತ್ಯಧಿಕ 500 ರೂ. ತಲುಪಿದೆ. ಇನ್ನೂ ಮೂರು ತಿಂಗಳ ಕಾಲ ಇದೇ ರೀತಿಯಲ್ಲೇ ದರ ಇರಲಿದೆ.
Tue, 12 Nov 202402:28 AM IST
ಕರ್ನಾಟಕ News Live: ಬೆಂಗಳೂರು: ಬಟ್ಟೆ ಖರೀದಿಸಿ ಹಣ ಪಾವತಿಸದೆ ವಂಚಿಸಿದ ಯುವತಿ ಬಂಧನ; ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿದ ಆರೋಪಿಗಳು ಅಂದರ್
- ಬಟ್ಟೆ ಖರೀದಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಯಾಗಿದೆ ಎಂದು ನಂಬಿಸಿ ವಂಚಿಸಿದ್ದ ಯುವತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿ ವಂಚಿಸುತ್ತಿದ್ದ 6 ಮಂದಿ ಕೂಡಾ ಪೊಲೀಸ್ ಬಲೆಗೆ ಬಿದ್ದಿದ್ದಾರೆ. (ವರದಿ: ಎಚ್.ಮಾರುತಿ)
Tue, 12 Nov 202402:15 AM IST
ಕರ್ನಾಟಕ News Live: ಭತ್ತ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಎಷ್ಟು ದರ ಸಿಗಲಿದೆ; ರೈತರ ನೋಂದಣಿಗೆ ಏನೇನು ಪ್ರಕ್ರಿಯೆಗಳಿವೆ
- ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಹಾಗೂ ರಾಗಿ ಖರೀದಿಗೆ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಸದ್ಯವೇ ಪ್ರಕ್ರಿಯೆ ಶುರುವಾಗಲಿದೆ.
Tue, 12 Nov 202401:56 AM IST
ಕರ್ನಾಟಕ News Live: ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್ ಪ್ರಶ್ನೆ
- ಜೈಲಿನ ಅಧಿಕಾರಿಗಳ ಸಹಕಾರ ಇಲ್ಲದೆ ಯಾವುದೇ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಇದೇ ವೇಳೆ ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ಜನ ಎಂದು ಗರಂ ಆಗಿರುವ ಹೈಕೋರ್ಟ್, ಅವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. (ಎಚ್.ಮಾರುತಿ)
Tue, 12 Nov 202401:30 AM IST
ಕರ್ನಾಟಕ News Live: ಕೆಲವೇ ದಿನಗಳಲ್ಲಿ ಶತಕ ಬಾರಿಸಲಿದೆ ಈರುಳ್ಳಿ, ಆಲೂಗಡ್ಡೆಯದ್ದೂ ಇದೆ ಕಥೆ! ಕಡಿಮೆ ಬೆಲೆಗೆ ಸಿಗ್ತಿರುವ ಟೊಮೆಟೊಗೆ ಧನ್ಯವಾದಗಳು
- Onion Price: ಕರ್ನಾಟಕದಲ್ಲಿ ಈರುಳ್ಳಿ ಬಡವರು, ಮಧ್ಯಮವರ್ಗದವರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 20-30 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಕೆಜಿ ಈರುಳ್ಳಿ ಬೆಲೆ 80 ರೂಪಾಯಿ ಆಗಿದೆ. ಶೀಘ್ರದಲ್ಲೇ ಶತಕ ಬಾರಿಸುವ ಸಾಧ್ಯತೆ ಇದೆ.
Tue, 12 Nov 202401:18 AM IST
ಕರ್ನಾಟಕ News Live: Karnataka Weather: ಬೆಂಗಳೂರು, ಮೈಸೂರು ಸೇರಿ 11 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆ; ವಿಜಯಪುರ, ಚಿಕ್ಕಮಗಳೂರಲ್ಲಿ ಭಾರೀ ಚಳಿ
- Karnataka Weather: ಕರ್ನಾಟಕದ 11 ಜಿಲ್ಲೆಗಳಲ್ಲಿ ಮಂಗಳವಾರದಂದು ಸಾಧಾರಣ ಮಳೆ ಗುಡುಗು ಸಹಿತ ಆಗಬಹುದು ಎನ್ನುವ ಸೂಚನೆಯಿದೆ. ಹಲವು ಜಿಲ್ಲೆಗಳಲ್ಲಿ ಬೆಳಗಿನ ಚಳಿ ಅಧಿಕವಾಗಿದೆ.
Tue, 12 Nov 202412:30 AM IST
ಕರ್ನಾಟಕ News Live: ಬಯಲು ಶೌಚಾಲಯಕ್ಕೆ ಹೆದರಿ ಕನ್ನಡ ಶಾಲೆ ತೊರೆಯಲು ಮುಂದಾದ ವಿದ್ಯಾರ್ಥಿಗಳು; ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇದೆಂಥಾ ಅವಸ್ಥೆ!
- Toilet Facilities: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಮೈಸೂರಿನ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿನಿಯರು ಬಯಲು ಶೌಚಾಲಯಕ್ಕೆ ಹೆದರಿ ಶಾಲೆ ತೊರೆಯಲು ನಿರ್ಧರಿಸಿದ್ದಾರೆ.