Karnataka News Live November 16, 2024 : ಹಳೇ ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಚುಡಾಯಿಸಿದ ಐವರ ತಂಡ ಪೊಲೀಸರ ಬಲೆಗೆ; ಭಯ ಹುಟ್ಟಿಸುವ ಆ ಸಿಸಿಟಿವಿ ವಿಡಿಯೋ ನೋಡಿದ್ರಾ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 16 Nov 202404:37 PM IST
ಹಳೇ ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಚುಡಾಯಿಸಿದ ಐವರ ತಂಡ ಪೊಲೀಸರ ಬಲೆಗೆ ಬಿದ್ದಿದೆ. ಬಾಲಕಿಯ ಪಾಲಕರು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಗಮನಸೆಳೆದಿದ್ದಾರೆ. ಭಯ ಹುಟ್ಟಿಸುವ ಆ ಸಿಸಿಟಿವಿ ವಿಡಿಯೋ ನೋಡಿದ್ರಾ? ಇಲ್ಲಿದೆ ಆ ವಿಡಿಯೋ ಮತ್ತು ಕೇಸ್‌ನ ವಿವರ.
Sat, 16 Nov 202403:54 PM IST
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್ 25, 26ಕ್ಕೆ ನಿಗದಿಯಾಗಿದೆ. ಈ ಬಾರಿ ರೈತರು ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ. ಅದೇ ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ. ವಿವರ ಇಲ್ಲಿದೆ ಓದಿ.
Sat, 16 Nov 202402:41 PM IST
ಕರ್ನಾಟಕದ ಮುಖ್ಯಮಂತ್ರಿಯಾಗುವುದು ಹೇಗೆ?; ಇದೊಂದು ರೀತಿ ಬಿಲಿಯನ್ ಡಾಲರ್ ಪ್ರಶ್ನೆ. ಬಿಬಿಎಂಪಿ ಶಾಲಾ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರ ಹೇಳಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಅವರ ಉತ್ತರದ ವಿಡಿಯೋ ವೈರಲ್ ಆಗಿದೆ. ನೀವಿನ್ನೂ ನೋಡಿಲ್ವ.. ಇಲ್ಲಿದೆ ಆ ವಿಡಿಯೋ ಮತ್ತು ವಿವರ.
Sat, 16 Nov 202401:42 PM IST
ಬೆಂಗಳೂರಿನ ಜಯನಗರದಲ್ಲಿ ಈಗ ಪುಸ್ತಕ ಸಂತೆ 2 ನಡೆಯುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜೊತೆಯಾಗಿರುವ ಈ ಪುಸ್ತಕ ಸಂತೆಯಲ್ಲಿ ಪುಸ್ತಕ ಖರೀದಿಸುವುದು ಹೇಗೆ? ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ ಎಂದು ಲೇಖಕ ಮಧು ವೈಎನ್ ಸಲಹೆ ನೀಡಿದ್ದಾರೆ.
Sat, 16 Nov 202401:07 PM IST
ಬೆಂಗಳೂರು ಟ್ಯಾಕ್ಸಿ/ ಕ್ಯಾಬ್ ಸೇವೆಗಳಲ್ಲಿ ಈಗ ಸದ್ದಿಲ್ಲದೇ ಬದಲಾವಣೆ ಸಾಗಿದೆ. ಆಪ್ ಆಧಾರಿತ ಸೇವೆಗಳಿಗೆ ಪೈಪೋಟಿ ನೀಡುವಂತೆ ಚಾಲಕರು ಮೀಟರ್ ಆಧಾರಿತ ಸೇವೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ ಕಾಣತೊಡಗಿದೆ. ಅಗ್ರಿಗೇಟರ್‌ಗಳ ಕಮಿಷನ್ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಬದಲಾವಣೆಗೆ ಮುನ್ನುಡಿ ಬರೆಯತೊಡಗಿದ್ದಾರೆ.
Sat, 16 Nov 202411:47 AM IST
ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಮೊಬೈಲ್ ಬೇಕಪ್ಪಾ, ಹಳೆಯದನ್ನು ರಿಪೇರಿ ಮಾಡಿಸಿ ಕೊಡಪ್ಪಾ ಎಂದ ಮಗನನ್ನು ಸಿಟ್ಟಿಗೆದ್ದ ಅಪ್ಪ ಕೊಂದೇ ಬಿಟ್ಟ ಕಳವಳಕಾರಿ ಘಟನೆ ವರದಿಯಾಗಿದೆ.
Sat, 16 Nov 202411:04 AM IST
ಬೆಂಗಳೂರು ಬಾಡಿಗೆ ಮನೆ, ಬಾಡಿಗೆ ಕಟ್ಟಡ ವಾಸಿಗಳ ಸಮಸ್ಯೆ ಒಂದಲ್ಲ, ಎರಡಲ್ಲ. ವಿಶೇಷವಾಗಿ ಬಾಡಿಗೆ ಮುಂಗಡ ಅಥವಾ ಭದ್ರತಾ ಠೇವಣಿ ವಿಚಾರದಲ್ಲಿ ನಷ್ಟವೇ. ಬೆಂಗಳೂರು ಬಾಡಿಗೆ ಮನೆ ನಿವಾಸಿಗಳಾ ನೀವು, ಹಾಗಿದ್ದರೆ ಇದು ನಿಮ್ಮ ಸಮಸ್ಯೆಯೂ ಹೌದು, ವರುಣ್ ಮಯ್ಯ ಅವರ ಟ್ವೀಟ್ ಗಮನಿಸಿದ್ರಾ? ಇಲ್ಲಾಂದ್ರೆ ಈ ವರದಿ ಓದಿ.. ನಿಮ್ಮ ಅನಿಸಿಕೆ, ಅಭಿಪ್ರಾಯವನ್ನೂ ಹಂಚಿಕೊಳ್ಳಿ.
Sat, 16 Nov 202410:48 AM IST
- Kasturirangan Report: ಕಸ್ತೂರಿ ರಂಗನ್ ವರದಿ ವಿರುದ್ಧ ದಕ್ಷಿಣ ಕನ್ನಡದಲ್ಲಿ ಹೋರಾಟ ತೀವ್ರಗೊಂಡಿದೆ. ಆದರೆ, ಪ್ರತಿಭಟನೆ ನಡೆಸಿದ ಸುಳ್ಯ, ಬೈಂದೂರು ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.
Sat, 16 Nov 202409:25 AM IST
ಚನ್ನಪಟ್ಟಣ ಚುನಾವಣಾ ಕಣದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಾಲಿಯಾ ಎಂದು ಸಂಬೋಧಿಸಿ ವಿವಾದ ಎಬ್ಬಿಸಿದ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿಯಾಗಿದೆ. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದು, ವಿವರ ಇಲ್ಲಿದೆ.
Sat, 16 Nov 202408:39 AM IST
ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ವ್ಯಾವಹಾರಿಕ ಬಳಕೆ ವಿಚಾರ ಸದಾ ಚರ್ಚೆಗೆ ಒಳಗಾಗುವಂಥದ್ದು. ಈ ಬಾರಿ ವಿಚಾರ ಪ್ರಸ್ತಾಪಿಸಿದ್ದು ಝೊಹೊ ಕಂಪನಿಯ ಸಿಇಒ ಶ್ರೀಧರ ವೆಂಬು. “ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು” ಎಂಬ ಅವರ ಅಬಿಪ್ರಾಯಕ್ಕೆ ಕಾರಣ ಇಲ್ಲಿದೆ.
Sat, 16 Nov 202404:24 AM IST
- Maharashtra election campaign: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಸಹಿಸದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ಬಿಜೆಪಿ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ತಿಳಿಸಿದ್ದಾರೆ.
Sat, 16 Nov 202404:23 AM IST
- ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈಬಿಡಲು ಹೆಚ್ಚಿದ ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಮಾಜಿಯಾಗೋ ಕಾಲ ಸನ್ನಿಹಿತವಾಗಿದೆ? (ವರದಿ-ಎಚ್.ಮಾರುತಿ)
Sat, 16 Nov 202403:49 AM IST
- Power Cut in Bengaluru: ಬೆಂಗಳೂರು ನಗರದ ಹೆಬ್ಬಾಳ ಮತ್ತು ಹೆಚ್ಎಸ್ಆರ್ ಲೇಔಟ್ನ ಈ ಪ್ರದೇಶಗಳಲ್ಲಿ ನವೆಂಬರ್ 16ರ ಶನಿವಾರ ಕ್ರಮವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 1.30, ಬೆಳಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
Sat, 16 Nov 202402:11 AM IST
- Heavy Rainfall in Karnataka: ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ 13 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 18ರ ನಂತರ ಒಣ ಹವಾಮಾನ ಇರಲಿದೆ ಎಂದು ತಿಳಿಸಿದೆ.