Karnataka News Live November 17, 2024 : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 17, 2024 : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

Karnataka News Live November 17, 2024 : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

03:51 PM ISTNov 17, 2024 09:21 PM HT Kannada Desk
  • twitter
  • Share on Facebook
03:51 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 17 Nov 202403:51 PM IST

ಕರ್ನಾಟಕ News Live: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಸಿಡಿಲಾಘಾತಕ್ಕೆ ಕುಸಿದು ಬಿದ್ದು ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಕರಾವಳಿಯಲ್ಲಿ ಇಂದು ಸಂಜೆ ವೇಳೆ ಭಾರಿ ಮಳೆಯಾಗಿದ್ದು, ಹಲವೆಡೆ ದುರಂತಗಳು ಸಂಭವಿಸಿವೆ.
Read the full story here

Sun, 17 Nov 202402:04 PM IST

ಕರ್ನಾಟಕ News Live: ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಸಾವು ಪ್ರಕರಣ; ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ

  • ಮಂಗಳೂರು ಸಮೀಪದ ಸೋಮೇಶ್ವರದ ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್‌ ಪೂಲ್‌​ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಬೆನ್ನಲ್ಲೇ ಬೀಚ್ ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ. ರೆಸಾರ್ಟ್‌ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
Read the full story here

Sun, 17 Nov 202412:28 PM IST

ಕರ್ನಾಟಕ News Live: ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ: ಧಾರವಾಡ ಪೊಲೀಸ್ ಎಚ್ಚರಿಕೆ ಕೂಡ ವೈರಲ್‌

  • ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಬಾಲಕಿಯನ್ನು ಚುಡಾಯಿಸಿದ ಪ್ರಕರಣದ ಬೆನ್ನಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಪುಂಡರಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. “ಲಂಗ ದಾವನ್ಯಾಗ ಮಸ್ತ ಕಾಣತಿ ಲಾವಣ್ಯ.. ಅಂತ ಏನರ ಚುಡಾಯಿಸುದ ಮಾಡಿದ್ರ ಸೀದಾ ಗಡೀಪಾರು ಅಷ್ಟ” ಎಂದು ಧಾರವಾಡ ಪೊಲೀಸ್ ನೀಡಿರುವ ಎಚ್ಚರಿಕೆ ಕೂಡ ವೈರಲ್‌ ಆಗಿದೆ. ಅದರ ವಿವರ ಇಲ್ಲಿದೆ.

Read the full story here

Sun, 17 Nov 202411:57 AM IST

ಕರ್ನಾಟಕ News Live: ಬೆಂಗಳೂರು ರಸ್ತೆ ಧೂಳು ನಿವಾರಿಸಲು 86 ಪುಟ್ಟ ಇವಿ ಸ್ವೀಪರ್‌ ವಾಹನ ಖರೀದಿಸಲು ಬಿಬಿಎಂಪಿ ಚಿಂತನೆ

  • ಬೆಂಗಳೂರು ಮಹಾನಗರದಲ್ಲಿ ರಸ್ತೆ ಧೂಳು ನಿವಾರಿಸುವುದು ದೊಡ್ಡ ಸವಾಲಿನ ಕೆಲಸ. ಇದಕ್ಕಾಗಿ ಬಿಬಿಎಂಪಿ 86 ಪುಟ್ಟ ಇವಿ ಸ್ವೀಪರ್ ವಾಹನಗಳನ್ನು ಖರೀದಿಸಲು ಮುಂದಾಗಿದೆ. ಈಗಾಗಲೇ ಟೆಂಡರ್ ಕರೆದಿರುವ ಪಾಲಿಕೆ ಅದನ್ನು ಅಂತಿಮಗೊಳಿಸಿದ ಬಳಿಕ ನಾಲ್ಕು ತಿಂಗಳಲ್ಲಿ ಅವುಗಳನ್ನು ಒದಿಸಬೇಕು ಎಂಬ ಷರತ್ತು ವಿಧಿಸಿದೆ. ಇದರ ವಿವರ ಇಲ್ಲಿದೆ.

Read the full story here

Sun, 17 Nov 202411:19 AM IST

ಕರ್ನಾಟಕ News Live: ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಉಡುಗೊರೆ ಕೊಟ್ಟ ಯುವಕ, ಇದರಲ್ಲೊಂದು ಟ್ವಿಸ್ಟ್‌ ಇದೆ, ಏನದು- ಇಲ್ಲಿದೆ ವಿವರ

  • ಕಿವಿ ಕೇಳ್ತಿಲ್ಲ ಮಗಾ ಎಂದ ಅಜ್ಜಿಗೆ ಆಪಲ್‌ ಏರ್‌ಪಾಡ್ಸ್ ಪ್ರೊ 2 ಅನ್ನು ಯುವಕ ಉಡುಗೊರೆಯಾಗಿ ಕೊಟ್ಟ. ಆದರೆ, ಅದರಲ್ಲಿರುವ ಶ್ರವಣ ಸಾಧನ ಫೀಚರ್ ಭಾರತದಲ್ಲಿ ಕೆಲಸ ಮಾಡ್ತಾ ಇರಲಿಲ್ಲ. ಇದು ಸವಾಲಾಗಿ ಪರಿಣಮಿಸಿತು. ಯುವಕನ ಇಬ್ಬರು ಗೆಳೆಯರು ಕೈಜೋಡಿಸಿದರು. ಹಾಗೆ ಇದರಲ್ಲೊಂದು ಟ್ವಿಸ್ಟ್‌ ಸಿಕ್ಕಿತು, ಏನದು- ಇಲ್ಲಿದೆ ಆ ವಿವರ.

Read the full story here

Sun, 17 Nov 202409:54 AM IST

ಕರ್ನಾಟಕ News Live: ವಿದ್ಯಾನಗರ - ಟೆಲಿಕಾಂ ಲೇ ಔಟ್‌ ರಸ್ತೆ ಮೂರು ವಾರ ಬಂದ್‌; ಬೆಂಗಳೂರು ಸಂಚಾರ ಸಲಹೆ ವಿವರ ಹೀಗಿದೆ

  • ಬೆಂಗಳೂರು ಸಂಚಾರ ಸಲಹೆ: ವಿದ್ಯಾನಗರ - ಟೆಲಿಕಾಂ ಲೇ ಔಟ್‌ ರಸ್ತೆ ಮೂರು ವಾರ ಬಂದ್‌ ಆಗಿರಲಿದೆ. ಈ ದಾರಿಯಲ್ಲಿ ಹೋಗುವವರು ಮೂರು ಪರ್ಯಾಯ ಮಾರ್ಗವನ್ನು ಬಳಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ.

Read the full story here

Sun, 17 Nov 202408:38 AM IST

ಕರ್ನಾಟಕ News Live: Mangaluru Crime: ಮಂಗಳೂರು ಸಮೀಪದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

  • ಮಂಗಳೂರು ಸಮೀಪ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಈ ಘಟನೆ ಉಳ್ಳಾಲ ಬಳಿಯ ಸೋಮೆಶ್ವರ ರೆಸಾರ್ಟ್​​ನಲ್ಲಿ ನಡೆದಿದೆ.
Read the full story here

Sun, 17 Nov 202407:14 AM IST

ಕರ್ನಾಟಕ News Live: ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣ; ಎನ್‌ಎಚ್‌ಎಐ ಪ್ರಸ್ತಾವನೆ

  • ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರದಟ್ಟಣೆ ಹೊಸದಲ್ಲ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈಗ ಎನ್‌ಎಚ್‌ಎಐ ಪ್ರಸ್ತಾವನೆ ಮುಂದಿಟ್ಟಿದ್ದು, ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣ ಮಾಡುವ ಚಿಂತನೆಯಲ್ಲಿದೆ. ವಿವರ ವರದಿ ಇಲ್ಲಿದೆ.

Read the full story here

Sun, 17 Nov 202406:33 AM IST

ಕರ್ನಾಟಕ News Live: ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ, ಮಮ್ಮಲ ಮರುಗಿದರು ಉಪ ಲೋಕಾಯುಕ್ತ, ಏನಿದು ಪ್ರಕರಣ

  • ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮಮ್ಮಲ ಮರುಗಿದರು. ಏನಿದು ಪ್ರಕರಣ- ಇಲ್ಲಿದೆ ವಿವರ.

Read the full story here

Sun, 17 Nov 202405:52 AM IST

ಕರ್ನಾಟಕ News Live: ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು; ಹೊತ್ತಿ ಉರಿದ ಕಾರಿನೊಳಗಿದ್ದ ಯುವಕ; ಆತ್ಮಹತ್ಯೆ ಶಂಕೆ

  • ಬೆಂಗಳೂರಿನಲ್ಲಿ ಶನಿವಾರ ಅಪರಾಹ್ನ ಕಳವಳಕಾರಿ ಘಟನೆಯೊಂದು ನಡೆದಿದ್ದು, ಹೋಟೆಲ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು ಸಂಭವಿಸಿದೆ. ಹೊತ್ತಿ ಉರಿದ ಕಾರಿನೊಳಗಿದ್ದ ಯುವಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. 

Read the full story here

Sun, 17 Nov 202404:49 AM IST

ಕರ್ನಾಟಕ News Live: ನವೆಂಬರ್ 19ರಿಂದ ಜನವರಿ 15ರ ತನಕ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು; ಸಮಯ, ವೇಳಾಪಟ್ಟಿ, ನಿಲ್ದಾಣಗಳ ವಿವರ ಇಲ್ಲಿದೆ

  • Special Trains for Sabarimala: ಶಬರಿಮಲೆ ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕದ ಹುಬ್ಬಳ್ಳಿಯಿಂದ ಕೇರಳದ ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.
Read the full story here

Sun, 17 Nov 202404:10 AM IST

ಕರ್ನಾಟಕ News Live: ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಎಷ್ಟು ರಜೆ ದೊರಕುತ್ತದೆ? ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿ, ಸಂಬಳಸಹಿತ, ಸಂಬಳರಹಿತ ರಜೆಗಳ ವಿವರ

  • Karnataka government employees leave rules: ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿ, ಪಿಎಲ್‌ ಸೇರಿದಂತೆ ಲಭ್ಯವಿರುವ ರಜೆಗಳ ವಿವರ, ರಜೆ ನಿಯಮಗಳ ಮಾಹಿತಿ ಇಲ್ಲಿದೆ.
Read the full story here

Sun, 17 Nov 202401:41 AM IST

ಕರ್ನಾಟಕ News Live: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ; ಕರ್ನಾಟಕ ಹವಾಮಾನದ ಪೂರ್ತಿ ವಿವರ ಇಲ್ಲಿದೆ

  • Bengaluru Weather Alert: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದೆಡೆ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಕರ್ನಾಟಕ ಹವಾಮಾನದ ಪೂರ್ತಿ ವಿವರ ಇಲ್ಲಿದೆ. 

Read the full story here

Sun, 17 Nov 202401:07 AM IST

ಕರ್ನಾಟಕ News Live: ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ; ಕಾರಣ ಇದು

  • ಬೆಂಗಳೂರು ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1916ಗೆ ಇಂದು (ನವೆಂಬರ್ 17) ಸಮಸ್ಯೆ ಹೇಳ್ಕೊಂಡು ಅಪ್ಪಿ ತಪ್ಪಿಯೂ ಇಂದು ಬೆಂಗಳೂರು ಜಲಮಂಡಳಿ ಸಹಾಯವಾಣಿಗೆ ಕರೆ ಮಾಡಬೇಡಿ. ಕರೆ ಮಾಡಿದರೆ ನಿರಾಸೆ ಖಚಿತ. ಕಾರಣ ಹೀಗಿದೆ ನೋಡಿ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter