Karnataka News Live November 19, 2024 : Madikeri Pure Air City: ಭಾರತದಲ್ಲೇ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಡಿಕೇರಿ ಮೊದಲು, ಗದಗಕ್ಕೂ ಸ್ಥಾನ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 19 Nov 202403:46 PM IST
- ಅತ್ಯುತ್ತಮ ಹವಾಮಾನ ಹಾಗೂ ಶುದ್ದಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಪ್ರವಾಸಿ ತಾಣ ಹಾಗೂ ಬೆಟ್ಟಗುಡ್ಡಗಳ ನಗರಿ ಮಡಿಕೇರಿ ಮೊದಲ ಸ್ಥಾನ ಪಡೆದುಕೊಂಡಿದೆ.
Tue, 19 Nov 202402:23 PM IST
- Indian Railways ಬೆಂಗಳೂರು ಹೊರವಲಯದ ನಿಡವಂದ ರೈಲ್ವೆ ಯಾರ್ಡ್‌ನ ಸುರಕ್ಷತಾ ಚಟುವಟಿಕೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
Tue, 19 Nov 202401:51 PM IST
- ಕರ್ನಾಟಕದಲ್ಲಿ ಅಬಕಾರಿ ಇಲಾಖೆ ಸಚಿವರು, ಅಧಿಕಾರಿಗಳ ಕಿರುಕುಳ, ಭ್ರಷ್ಟಾಚಾರದ ವಿರುದ್ದ ಆಕ್ರೋಶಗೊಂಡ ಮುಷ್ಕರಕ್ಕೆ ಮುಂದಾಗಿದ್ದ ಮದ್ಯ ವ್ಯಾಪಾರಸ್ಥರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
- ವರದಿ: ಎಚ್.ಮಾರುತಿ.ಬೆಂಗಳೂರು
Tue, 19 Nov 202412:44 PM IST
- ಕರ್ನಾಟಕದಲ್ಲಿ ಎರಡು ದಶಕದ ಅವಧಿಯಲ್ಲಿ ನಕ್ಸಲ್ ಚಟುವಟಿಕೆ ಹಿಂಸೆಯ ಮಾರ್ಗ ಹಿಡಿದ ನಂತರ ಹಲವರು ಪೊಲೀಸರ ದಾಳಿಗೆ ಬಲಿಯಾಗಿದ್ದಾರೆ. ಜನರೂ ಜೀವ ಕಳೆದುಕೊಂಡಿದ್ದಾರೆ. ಸೇವಾ ನಿತರ ಪೊಲೀಸರೂ ಕೂಡ. ಈ ಕುರಿತು ಮಾಹಿತಿ ಇಲ್ಲಿದೆ.
Tue, 19 Nov 202412:44 PM IST
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ನಡೆದ ನಕ್ಸಲ್ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಹತನಾಗಿರುವುದನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಖಚಿತಪಡಿಸಿದ್ದಾರೆ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಅವರು ವಿವರಿಸಿದ್ದಾರೆ.
Tue, 19 Nov 202411:46 AM IST
ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮಂಗಳವಾರ (ನವೆಂಬರ್ 19) ಕಬ್ಬಿನಾಲೆ ಸಮೀಪ ನಕ್ಸಲ್ ಎನ್‌ಕೌಂಟರ್ ನಡೆದು ನಕ್ಸಲ್ ನಾಯಕ ವಿಕ್ರಂ ಗೌಡ ಹತನಾದ ಜಾಗಕ್ಕೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರ, "ವಿಕ್ರಂ ಗೌಡ ಎನ್‌ಕೌಂಟರ್ ನಡೆದ ನಿಖರ ಸ್ಥಳ ಯಾವುದು? ಪೋಸ್ಟ್ ಮಾರ್ಟಂ ಎಲ್ಲಿ ಮಾಡ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದಿಷ್ಟು.
Tue, 19 Nov 202411:17 AM IST
- ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ಹರಡಿರುವ ಪಶ್ಚಿಮಘಟ್ಟಗಳ ಸುಂದರ ಪ್ರಕೃತಿಯನ್ನು ಉಳಿಸುವ ಉದ್ದೇಶವನ್ನು ಹೊಂದಿರುವ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಮೊದಲಿನಿಂದಲೂ ಹಲವು ಆಕ್ಷೇಪಗಳು ಕೇಳಿಬರುತ್ತಿವೆ. ಈ ವರದಿಯ ಬಗ್ಗೆ ಪರ–ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದು, ಈ ಕುರಿತು ಇರುವ ಪ್ರಮುಖ ಅಕ್ಷೇಪಗಳೇನು ಎಂಬ ವಿವರ ಇಲ್ಲಿದೆ.
Tue, 19 Nov 202410:59 AM IST
- Karnataka Naxal Movement: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ರೂಪುಗೊಂಡ ಬಗೆ, ಏರಿಳಿತಗಳ ನಡುವೆ ಚಳವಳಿ ಈಗಿನ ಸ್ಥಿತಿಗತಿಗಳ ಒಳನೋಟ ಇಲ್ಲಿದೆ.
Tue, 19 Nov 202410:40 AM IST
ಕಬ್ಬಿನಾಲೆ ಎನ್‌ಕೌಂಟರ್: ಕರ್ನಾಟಕದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ಭಾರಿ ಹಿನ್ನಡೆಯಾಗುವ ವಿದ್ಯಮಾನ ಸೋಮವಾರ ತಡರಾತ್ರಿ ನಡೆಯಿತು. ಉಡುಪಿ ಜಿಲ್ಲೆ ಕಬ್ಬಿನಾಲೆ ಸಮೀಪ ಎನ್‌ಕೌಂಟರ್‌ನಲ್ಲಿ ಪ್ರಮುಖ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ಧಾನೆ. ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬ ವಿವರ ಇಲ್ಲಿದೆ.
Tue, 19 Nov 202410:04 AM IST
- Gold Price fall Today: ಕಳೆದ ಒಂದು ವಾರದಲ್ಲಿ ಚಿನ್ನದ ದರ ಗಮನಾರ್ಹವಾಗಿ ಇಳಿಕೆ ಕಂಡಿದೆ. ಆದರೆ, ನವೆಂಬರ್ 19ರಂದು ಚಿನ್ನ ಬೆಳ್ಳಿ ರೇಟ್ ತುಸು ಏರಿಕೆ ಕಂಡಿದೆ. ಹಳದಿ ಲೋಹದ ಮೇಲಿನ ಹೂಡಿಕೆಗೆ ಇದು ಸಕಾಲವೇ? ಆಭರಣ, ಚಿನ್ನದ ನಾಣ್ಯ, ಡಿಜಿಟಲ್ ಚಿನ್ನ ಖರೀದಿಸುವವರು ಗಮನಿಸಿ.
Tue, 19 Nov 202409:38 AM IST
ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳ ಶುಲ್ಕ ಶೇಕಡ 10 ಹೆಚ್ಚಳವಾಗಿದ್ದು, ಸರ್ಕಾರಿ, ಖಾಸಗಿ ಕೋಟಾದ ಸೀಟುಗಳಿಗೆ ಅನ್ವಯವಾಗಲಿದೆ. ಅದರ ಪೂರ್ಣ ವಿವರ ಇಲ್ಲಿದೆ.
Tue, 19 Nov 202409:06 AM IST
- ಭಾರತದ ಅಡುಗೆ ಮನೆಯ ಸಾಂಬಾರ ಪದಾರ್ಥ ಏಲಕ್ಕಿ ದರದಲ್ಲಿ ಏರಿಕೆಯಾಗಿದೆ. ಗ್ವಾಟೆಮಾಲ(Guatemala)ದಲ್ಲಿನ ವೈಪರಿತ್ಯಗಳಿಂದ ನಮ್ಮಲ್ಲಿನ ಏಲಕ್ಕಿ(Cardamom)ಗೆ ಬೆಲೆ ಬಂದಿದೆ.
Tue, 19 Nov 202408:37 AM IST
- ಕನ್ನಡ ಚಿತ್ರರಂಗದಲ್ಲಿ ಸಿನಿ ಸಾಹಿತಿಯಾಗಿ ಜನ ನೆನಪಿನಲ್ಲಿ ಉಳಿಯುವಂತಹ ಗೀತೆಗಳನ್ನು ನೀಡಿದ ಶ್ಯಾಮಸುಂದರ ಕುಲಕರ್ಣಿ ನಿಧನರಾಗಿದ್ದಾರೆ. ಅವರು ನೀಡಿದ ಹಾಡುಗಳು, ಅವರ ಬದುಕಿನ ಕ್ಷಣಗಳನ್ನು ಹಿರಿಯ ಪತ್ರಕರ್ತ ಎನ್.ಎಸ್.ಶ್ರೀಧರಮೂರ್ತಿ ಕಟ್ಟಿಕೊಟ್ಟಿದ್ದಾರೆ.
Tue, 19 Nov 202408:29 AM IST
- ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ2024 ರ ನವೆಂಬರ್ 19 ರಿಂದ 20ರ ಮಂಗಳವಾರ ಹಾಗೂ ಬುಧವಾರದಂದು ವಿದ್ಯುತ್ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ
- ವರದಿ: ಎಚ್.ಮಾರುತಿ. ಬೆಂಗಳೂರು
Tue, 19 Nov 202407:56 AM IST
ಬೆಂಗಳೂರು ವರ್ಲ್ಡ್ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರವಾಗಲಿದೆ. ಈ ಸ್ಥಳಾಂತರ ಪ್ರಕ್ರಿಯೆ ಮುಂದಿನ ವರ್ಷ ನಡೆಯಲಿದ್ದು, 5000ಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಈ ಬೆಳವಣಿಗೆ ಅಸಮಾಧಾನ ಉಂಟುಮಾಡಿದೆ. ಇದರ ವಿವರ ಇಲ್ಲಿದೆ.
Tue, 19 Nov 202407:03 AM IST
ವಾವ್! ಬೆಂಗಳೂರ ಆಟೋ ಚಾಲಕರು ಬಹಳ ಸೃಜನಶೀಲರು. ಇತ್ತೀಚಿನ ಸುದ್ದಿ ಇದು. “ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ” ಎಂದು ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ತನ್ನ ಆಟೋದಲ್ಲಿ ಹಾಕಿಕೊಂಡಿದ್ದ ಪೋಸ್ಟರ್ ವೈರಲ್ ಆಗಿದೆ. ಅದರ ವಿವರ ಇಲ್ಲಿದೆ.
Tue, 19 Nov 202402:48 AM IST
ಕಾಲೇಜು ಕ್ರಿಕೆಟ್ ಟೀಂಗೆ ಆಯ್ಕೆಯಾಗಲಿಲ್ಲ ಎಂದು ಪಿಯು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಡ್ರಗ್ಸ್ ಸಾಗಾಣೆ ಮಾಡುತ್ತಿದ್ದೀರಿ ಎಂದು ಬೆದರಿಸಿ ಯುವತಿಯಿಂದ 40 ಲಕ್ಷ ರೂ. ಸುಲಿಗೆ ಮಾಡಿದ ಖತರ್‌ನಾಕ್ ಆರೋಪಿ ವಿರುದ್ಧ ದೂರು ದಾಖಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Tue, 19 Nov 202401:39 AM IST
ನಕ್ಸಲ್ ಮುಖಂಡ ವಿಕ್ರಂ ಗೌಡ ಸೋಮವಾರ ತಡರಾತ್ರಿ ಎಎನ್‌ಎಸ್ ಎನೌಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್ ನಡೆದಿತ್ತು.
Tue, 19 Nov 202401:23 AM IST
ಕರ್ನಾಟಕದಲ್ಲಿ ಬಹುತೇಕ ಮಳೆ ಮರೆಯಾಗಿದೆ. ವಿವಿಧೆಡೆ ಚಳಿ ಶುರುವಾಗಿದೆ. ಬೆಂಗಳೂರು ನಗರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂಜಾನೆ ಮಂಜು ಆವರಿಸತೊಡಗಿದ್ದು, ಚಳಿಯೂ ಹೆಚ್ಚಾಗತೊಡಗಿದೆ. ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ಕರ್ನಾಟಕ ಹವಾಮಾನ ಇಂದು (ನವೆಂಬರ್ 19) ಹೀಗಿದೆ.