Karnataka News Live November 2, 2024 : ಸ್ಟಿಕ್ಕರ್ ನೋಡಿ ಮರುಳಾಗಬೇಡಿ, ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ, ವೈರಲ್ ವಿಡಿಯೋ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 02 Nov 202403:02 PM IST
ಉತ್ತಮ ಆರೋಗ್ಯಕ್ಕಾಗಿ ದಿನಕ್ಕೊಂದು ಸೇಬುಹಣ್ಣು ತಿನ್ನಿ ಎಂದು ವೈದ್ಯರು ಹೇಳೋದನ್ನು ಕೇಳಿರಬಹುದು. ಆದರೆ, ಆಪಲ್ ಮೇಲಿನ ಸ್ಟಿಕ್ಕರ್ ನೋಡಿ ಮರುಳಾಗಬೇಡಿ. ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ. ಮರೆತರೆ ಮೋಸ ಹೋಗುವುದು ಗ್ಯಾರೆಂಟಿ. ಹೇಗೆ ಅನ್ನೋದು ಗೊತ್ತಾಗಬೇಕಾದರೆ ಇಲ್ಲಿರುವ ವೈರಲ್ ವಿಡಿಯೋ ಗಮನಿಸಿ.
Sat, 02 Nov 202412:38 PM IST
ಬೆಂಗಳೂರು ಕಸ್ತೂರಿ ನಗರ ಆರ್‌ಟಿಒ ಕಚೇರಿಯಲ್ಲಿ ಚಾಲನಾ ಪರೀಕ್ಷೆ ಉತ್ತೀರ್ಣರಾದರೂ ಪರವಾನಗಿ ಪಡೆಯಲು ಲಂಚ ಕೊಡಬೇಕಾದ ಅನಿವಾರ್ಯತೆ ಕಡೆಗೆ ರೆಡ್ಡಿಟ್ ಪೋಸ್ಟ್ ಗಮನಸೆಳೆದಿದೆ. ಚಾಲನಾ ಪರೀಕ್ಷೆ ಪಾಸ್, ಆದರೂ ಪರವಾನಗಿ ಕೊಡುವುದಿಲ್ಲ ಅಂದ್ರು ಆರ್‌ಟಿಒ ಅಧಿಕಾರಿಗಳು ಎಂಬ ಅಂಶ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.
Sat, 02 Nov 202411:52 AM IST
ಬೆಂಗಳೂರು ಆಶಾ ಸ್ವೀಟ್ ಸೆಂಟರ್‌ನ ಡಾಬಸ್ ಪೇಟೆ ಸಮೀಪದ ಸೋಂಪುರ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ. ಈ ದುರಂತಕ್ಕೆ ಸಂಬಂಧಿಸಿ ಇಬ್ಬರ ಬಂಧನವಾಗಿದೆ. ಮತ್ತೊಬ್ಬರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
Sat, 02 Nov 202410:28 AM IST
ಬೆಂಗಳೂರು ಮದೀನಾ ನಗರದಲ್ಲಿ ಸರಣಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬರ್ತ್‌ಡೇ ಪಾರ್ಟಿಯಲ್ಲಿ ಕುಟುಂಬ ಮೈಮರೆತ ಸಂದರ್ಭದಲ್ಲಿ 30 ಗ್ರಾಂ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಪ್ರಕರಣ ಗಮನಸೆಳೆದಿದೆ. ಕಳ್ಳತನ ಮಾಡುವ ಕ್ರಮವೂ ಬಹಿರಂಗವಾಗಿದೆ. ಈ ಘಟನೆಯ ವಿವರ ಇಲ್ಲಿದೆ.
Sat, 02 Nov 202409:30 AM IST
- ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ನಗರ ಮೀಟರ್ ಆಟೋರಿಕ್ಷಾ ಆ್ಯಪ್ ಮೂಲಕ ಆ್ಯಪ್ ಮೂಲಕ ನಮ್ಮ ಕೋಡ್ ವೈಶಿಷ್ಟ್ಯ ಪರಿಚಯಿಸಲಾಗಿದ್ದು, ಬಳಕೆದಾರರು ಒಂದೇ ದಿನ ಹಲವು ಟ್ರಿಪ್ ಮಾಡಲು ಒಂದೇ ಕೋಡ್ ಬಳಸಬಹುದಾಗಿದೆ.
Sat, 02 Nov 202407:41 AM IST
- ಚನ್ನಪಟ್ಟಣ ಉಪಚುನಾವಣೆ ಪ್ರಚಾರ ಬಿರುಸುನಿಂದ ಸಾಗಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಈ ಬಾರಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ. ಚನ್ನಪಟ್ಟಣದಲ್ಲಿ ಚಕ್ರವ್ಯೂಹ ರಚಿಸಲು ಕಾಂಗ್ರೆಸ್‌ನಿಂದ ಸಾಧ್ಯವಾಗಲಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಿಖಿಲ್ ಸ್ಪರ್ಧೆ ಅನಿವಾರ್ಯವಾಯಿತು ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
Sat, 02 Nov 202406:45 AM IST
- ಕರ್ನಾಟಕದಲ್ಲಿ ಒಂದೇ ವರ್ಷ ಒಟ್ಟು 39,762 ರಸ್ತೆ ಅಪಘಾತ ಪ್ರಕಾರಣ ವರದಿಯಾಗಿವೆ. ಇದೇ ವೇಳೆ ಒಟ್ಟು 11,702 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಭಾರತದಲ್ಲಿಯೇ ಐದನೇ ಅತಿ ಹೆಚ್ಚು ಪ್ರಮಾಣ.
Sat, 02 Nov 202404:23 AM IST
- ಮಂಗಳೂರು ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಕಟೀಲು ಸಮೀಪದ ವ್ಯಕ್ತಿಯದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
Sat, 02 Nov 202403:33 AM IST
- ಬೆಂಗಳೂರು ನಗರದಲ್ಲಿ ಇರುವ ತಮಿಳು ಕನ್ನಡಿಗರು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಈ ವೇಳೆ ನಗರದ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚಿ ಮನಗೆದ್ದಿದ್ದಾರೆ. ಭಾಷೆ ಬೇರೆಯಾಗದ್ದರೂ ನಾವೆಲ್ಲಾ ಒಂದೇ ಎಂದು ತಮಿಳು ಕನ್ನಡಿಗರು ಹೇಳಿಕೊಂಡಿದ್ದಾರೆ.
Sat, 02 Nov 202403:01 AM IST
- ಕನ್ನಡ ರಾಜ್ಯೋತ್ಸವ ನಿಮಿತ್ತ ಬೆಂಗಳೂರು ಸಂಚಾರ ಪೊಲೀಸರು ಹಾಗೂ ನಮ್ಮ ಮೆಟ್ರೋ ವಿನೂತನ ಕ್ರಮ ಕೈಗೊಂಡಿದೆ. ಉದ್ಯಾನ ನಗರಿಯಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಸರಳವಾಗಿ ಕನ್ನಡ ಭಾಷೆ ಕಲಿಸುವ ಪ್ರಯ್ನ ಮಾಡಿದೆ.
Sat, 02 Nov 202401:36 AM IST
- Karnataka Weather: ನವೆಂಬರ್ 02ರಂದು ದೀಪಾವಳಿ ಸಂಭ್ರಮಕ್ಕೆ ರಾಜ್ಯದ ಹಲವೆಡೆ ಮಳೆ ಅಡ್ಡಿಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದ್ದು, ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.