Karnataka News Live November 20, 2024 : ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ: ಎರಡನೇ ಅಭಿಪ್ರಾಯ ಪಡೆಯಲು ಚಿಂತಿಸಬೇಡಿ, ಕರ್ನಾಟಕ ಸರ್ಕಾರದ ಸಹಾಯವಾಣಿಗೆ ಕರೆಮಾಡಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 20 Nov 202412:25 PM IST
Joint Replacement Surgery Helpline: ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ (ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜರಿ) ಕುರಿತು ಎರಡನೇ ಅಭಿಪ್ರಾಯ (ಸೆಕೆಂಡ್ ಒಪೀನಿಯನ್) ಪಡೆಯಲು ಚಿಂತಿಸಬೇಡಿ. ಕರ್ನಾಟಕ ಸರ್ಕಾರದ ಸಹಾಯವಾಣಿಗೆ ಕರೆಮಾಡಿ. ತಜ್ಞರ ಜತೆಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ. ಈ ಕುರಿತ ವಿವರ ಇಲ್ಲಿದೆ.
Wed, 20 Nov 202412:16 PM IST
ನವೆಂಬರ್ 17 ರಂದು ಹೆಬ್ರಿ ಕಾಡಂಚಿನ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲ್ ಗೌಡ ವಿಕ್ರಂ ಗೌಡ ಅಂತ್ಯಕ್ರಿಯೆ ಸೋಮವಾರ ನಡೆಯಿತು. ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಭಾಗವಹಿಸಿದ್ದರು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Wed, 20 Nov 202411:42 AM IST
- ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲ್ಲೂಕಿನ ಹಲವು ಭಾಗಗಳಲ್ಲಿ 2024ರ ನವೆಂಬರ್ 20 ಹಾಗೂ 21ರ ಎರಡು ದಿನ ವಿದ್ಯುತ್ ಕಡಿತವಾಗಲಿದೆ.
Wed, 20 Nov 202411:14 AM IST
- ಕರ್ನಾಟಕವು ಭಾರತದಲ್ಲಿಯೇ ಉತ್ತಮ ಕೈಗಾರಿಕಾ ರಾಜ್ಯವಾಗಿ ಬೆಳವಣಿಗೆ ಕಂಡಿದ್ದು, ಇನ್ನಷ್ಟು ಪ್ರಗತಿ ಕಾಣುವ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
Wed, 20 Nov 202411:14 AM IST
ಧಾರವಾಡ: ಮಕ್ಕಳನ್ನು ಅಪಹರಿಸಿದ ಆರೋಪದ ಮೇಲೆ ಧಾರವಾಡದ ವಿದ್ಯಾಗಿರಿ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಿಡ್ನಾಪ್‌ನಲ್ಲಿ ಮಕ್ಕಳ ತಾಯಂದಿರು ಕೂಡಾ ಶಾಮೀಲಾಗಿದ್ದು, ಅಪಹರಣಾಕಾರದಿಂದ ಪೊಲೀಸರು 6 ಮಕ್ಕಳನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ.
Wed, 20 Nov 202410:31 AM IST
- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಮರ್ಥವಾಗಿ ಕನ್ನಡದ ಕೆಲಸ ಮಾಡಿ ಜನಪದ, ಶರಣಸಾಹಿತ್ಯ, ಸಂಘಟನೆಯಲ್ಲೂ ಗಟ್ಟಿಯಾಗಿ ತೊಡಗಿಸಿಕೊಂಡ ಗೊರುಚ ಅವರನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಪರಿಚಯ ಇಲ್ಲಿದೆ.
Wed, 20 Nov 202410:22 AM IST
ಬೆಂಗಳೂರು ಚರ್ಚ್ ಸ್ಟ್ರೀಟ್ ದುರಸ್ತಿ ಕಾರ್ಯ ಆರಂಭವಾಗಿದ್ದು ಒಂದು ವಾರದ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ಖಾಸಗಿ ಸಂಸ್ಥೆಯೊಂದು 2 ವರ್ಷಗಳಿಂದ ಚರ್ಚ್ ರಸ್ತೆ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದ್ದು ಒಂದು ವಾರದ ಕಾಲ ಬಂದ್ ಮಾಡಿದರೆ ವ್ಯಾಪಾರಕ್ಕೆ ಸಮಸ್ಯೆಯಾಗುತ್ತದೆ ಎಂದು ವ್ಯಾಪಾರಿಗಳು ಆತಂಕ ಹೊರ ಹಾಕಿದ್ದಾರೆ.
Wed, 20 Nov 202410:04 AM IST
ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ ರು ಚನ್ನಬಸಪ್ಪ ಅವರು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Wed, 20 Nov 202407:11 AM IST
- ಕರ್ನಾಟಕದಲ್ಲಿ ಪಡಿತರ ಕಾರ್ಡ್‌ಗಳ ಬದಲಾವಣೆ ಚಟುವಟಿಕೆ ಬಿರುಸಾಗಿದೆ. ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಲಾಗುತ್ತಿದೆ. ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ ಸಿಗುತ್ತಿದ್ದ ಹಲವಾರು ಸೌಲಭ್ಯಗಳು ಬಂದ್ ಆಗಲಿವೆ.
Wed, 20 Nov 202406:36 AM IST
ಬೆಂಗಳೂರು ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ, ಉದ್ಯೋಗಿ ಪ್ರಿಯಾ ಪೋಷಕರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಬುಧವಾರ ಪ್ರಿಯಾ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಬರ್ತ್‌ಡೇ ಆಚರಿಸಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
Wed, 20 Nov 202405:21 AM IST
ಬೆಂಗಳೂರು ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಮಂಗಳವಾರ ಸಂಜೆ ಅಗ್ನಿ ಅನಾಹುತ ಸಂಭವಿಸಿದ್ದು ಘಟನೆಯಲ್ಲಿ ಪ್ರಿಯಾ ಎಂಬ 20 ವರ್ಷದ ಯುವತಿ ಸಾವನಪ್ಪಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Wed, 20 Nov 202402:13 AM IST
ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ವಿಕ್ರಂ ಗೌಡ ಹತನಾಗಿದ್ದು, ಆತನ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಎನ್‌ಕೌಂಟರ್ ಅಲ್ಲ, ಹತ್ಯೆ ಎಂದು ಹೇಳಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
Wed, 20 Nov 202401:20 AM IST
- ಚಳಿಗಾಲ ಪ್ರಾರಂಭವಾದರೂ ಈಗಲೂ ಅಲ್ಲಲ್ಲಿ ಮಳೆ ಬೀಳುತ್ತಿದ್ದು, ಕಳೆದೊಂದು ವಾರದಿಂದ ಮಳೆರಾಯ ಸಂಪೂರ್ಣವಾಗಿ ಬಿಡುವು ನೀಡಿದ್ದಾನೆ. ನವೆಂಬರ್ 18ರಿಂದ ಭಾರಿ ಮಳೆಯ ಮುನ್ಸೂಚನೆ ಇದ್ದರೂ ವರುಣಾಗಮನ ಆಗಿರಲಿಲ್ಲ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಯ ಜೊತೆ ಮಂಜು ಮಸುಕಿದ ವಾತಾವರಣ ಇರಲಿದೆ. ನವೆಂಬರ್ 20ರ ಕರ್ನಾಟಕ ಹವಾಮಾನ ಹೇಗಿದೆ ನೋಡಿ.