Karnataka News Live November 21, 2024 : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ನಾಯಕರೇ ವಿಜೃಂಭಿಸುತ್ತಾರೆ; ಡಾ ನರಹಳ್ಳಿ ಬಾಲಸುಬ್ರಮಣ್ಯ ಬೇಸರ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 21 Nov 202404:57 PM IST
Mandya Kannada Sahitya sammelana: ಡಿಸೆಂಬರ್ 20, 21, 22 ರಂದು 3 ದಿನಗಳ ಕಾಲ ನಡೆಯಲಿರುವ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸುಮಾರು 58 ಎಕರೆ ಜಾಗವನ್ನು ಗುರುತಿಸಿದೆ. ಈಗಿನ ಸಮ್ಮೇಳನಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಮಣ್ಯ ಸಮ್ಮೇಳನಗಳ ಸ್ವರೂಪ ಬದಲಾಗಬೇಕು ಎಂದಿದ್ದಾರೆ.
Thu, 21 Nov 202402:49 PM IST
ತುಮಕೂರು: 2010 ರಲ್ಲಿ ಗೋಪಾಲಪುರದಲ್ಲಿ ನಡೆದಿದ್ದ ಹೊನ್ನಮ್ಮ ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ 13.500 ರೂ ದಂಡ ವಿಧಿಸಿ ತೀರ್ಪು ನೀಡಿದೆ.
Thu, 21 Nov 202402:17 PM IST
ಮೈಸೂರು: ದರ್ಶನ್ ತೂಗುದೀಪ್ ಅನಾರೋಗ್ಯದ ಕಾರಣ ಬೇಲ್ ಪಡೆದು ಹೊರ ಬಂದಿದ್ದಾರೆ. ಜಾಮೀನು ಅವಧಿ ಮುಗಿದ ನಂತರ ಅವರು ಮತ್ತೆ ವಾಪಸ್ ಜೈಲಿಗೆ ಹೋಗಬೇಕು. ಆದರೆ ಅವರಿಗೆ ಮತ್ತೆ ಬೇಲ್ ಕೊಡದಿರುವಂತೆ ನಾವು ಸುಪ್ರೀಂ ಕೋರ್ಟ್‌ಗೆ ಅಪೀಲು ಮಾಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
Thu, 21 Nov 202412:22 PM IST
ಕರ್ನಾಟಕದ ರಾಜಧಾನಿ ಬೆಂಗಳೂರು ಟೆಕ್ ಹಬ್ ಆಗಿ, ಸ್ಟಾರ್ಟಪ್ ನಗರವಾಗಿ, ಸಿಲಿಕಾನ್ ಸಿಟಿಯಾಗಿ, ಉದ್ಯಾನ ನಗರಿಯಾಗಿ ಗುರುತಿಸಿಕೊಂಡಿದೆ. ಇವೆಲ್ಲದರ ನಡುವೆ, ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ ಎಂಬ ಪ್ರಶ್ನೆ ಕಾಡುವುದು ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದ ಬಗ್ಗೆ ಗಮನಿಸಬೇಕಾದ 10 ಅಂಶಗಳು ಹೀಗಿವೆ.
Thu, 21 Nov 202411:38 AM IST
- Gold prices falling: ಒಂದು ವಾರದ ಹಿಂದೆ ಚಿನ್ನದ ದರ ಇಳಿಕೆ ಕಂಡಿತ್ತು. ಈಗ ಮತ್ತೆ ತುಸುತುಸುವೇ ಏರಿಕೆ ಕಾಣುತ್ತಿದೆ. ಈ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮವೇ? ಹೆಚ್ಚಿನ ವಿವರ ಇಲ್ಲಿದೆ.
Thu, 21 Nov 202411:30 AM IST
ಬೆಂಗಳೂರು: 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಲಿಕಾನ್ ಸಿಟಿಯ ಶಾಲೆಯೊಂದು ತಯಾರಿಸಿರುವ ಎಐ ಪ್ರಶ್ನೆ ಪತ್ರಿಕೆಯನ್ನು ನೋಡಿ ಪ್ರೊಫೆಸರ್ ಒಬ್ಬರು ಶಾಕ್ ಆಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಆ ಮಕ್ಕಳಿಗೆ ಪೈಥಾನ್ ಪ್ರೋಗಾಮಿಂಗ್ ಬಗ್ಗೆ ಕಲಿಸುವುದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ?
Thu, 21 Nov 202410:41 AM IST
ಕರ್ನಾಟಕದಲ್ಲಿ ಸದ್ಯ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ವಿಚಾರ ಗಮನಸೆಳೆದಿದೆ. ಈ ನೀತಿ ಪ್ರಕಾರ ಶರಣಾದ ನಕ್ಸಲರು, ವಿಕ್ರಂ ಗೌಡ ಎನ್‌ಕೌಂಟರನ್ನು ಖಂಡಿಸುತ್ತ, ಸರ್ಕಾರದ ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ನಕ್ಸಲ್ ಶರಣಾಗತಿ ಪ್ಯಾಕೇಜ್ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ.
Thu, 21 Nov 202409:31 AM IST
ನಕ್ಸಲ್ ವಿಕ್ರಂ ಗೌಡ ಬಳಿ 9 ಎಂಎಂ ಕಾರ್ಬೈನ್ ಗನ್ ಇತ್ತು, ಗುಂಡಿನ ಚಕಮಕಿಯಲ್ಲೇ ಮೃತಪಟ್ಟಿದ್ದು. ಯೋಜನೆ ರೂಪಿಸಿ ಎನ್‌ಕೌಂಟರ್ ಮಾಡಿದ್ದಲ್ಲ. ನಮ್ಮ ಗಮನ ಏನಿದ್ದರೂ ನಕ್ಸಲರ ಶರಣಾಗತಿ ಕಡೆಗೇ ಇದೆ ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದ್ಧಾರೆ. ಆ ವಿವರ ಇಲ್ಲಿದೆ.
Thu, 21 Nov 202409:04 AM IST
ನಕ್ಸಲ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಕ್ಸಲ್ ಚಳವಳಿಗೆ ಹಿನ್ನಡೆ ಉಂಟುಮಾಡಿರುವುದಲ್ಲದೆ, ಶರಣಾದ ನಕ್ಸಲರ ಬದುಕಿನ ಕಡೆಗೆ ಗಮನ ಸೆಳೆಯುವಂತೆ ಮಾಡಿದೆ. ಎನ್‌ಕೌಂಟರ್ ಖಂಡಿಸಿದ ಮಾಜಿ ನಕ್ಸಲರು, ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಸುಲಭಕ್ಕೆ ಸಿಗಲ್ಲ, ನೀತಿಯಲ್ಲಿ ದೋಷಗಳಿವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಅದರ ಕಡೆಗೊಂದು ನೋಟ ಇಲ್ಲಿದೆ.
Thu, 21 Nov 202409:03 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 20ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಗಂಡನ ಮೇಲಿದ್ದ ನಂಬಿಕೆ ಚೂರು ಚೂರಾಗಿದೆ. ದೇವಸ್ಥಾನಕ್ಕೆ ಹೋಗುವ ಭಾಗ್ಯಾ, ನನಗೆ ಈ ರೀತಿ ಏಕೆ ನೋವು ಕೊಡುತ್ತಿದ್ದೀಯ? ಅಗ್ನಿಸಾಕ್ಷಿಯಾಗಿ ಬೆಸೆದ ಬಂಧವನ್ನು ಏಕೆ ಅಳಿಸುತ್ತಿದ್ದೀಯ ಎಂದು ಕೇಳುತ್ತಾಳೆ.
Thu, 21 Nov 202407:21 AM IST
- ಕರ್ನಾಟಕದಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ವಿಚಾರ ಸುದ್ದಿಯಲ್ಲಿದೆ. ಬಿಪಿಎಲ್ ಕಾರ್ಡ್ ಅನರ್ಹತೆಗೊಂಡಿದ್ದರೆ ಇದನ್ನು ಮರುಪರಿಶೀಲನೆ ಮಾಡುವಂತೆ ವಿನಂತಿಸಬಹುದು. ಇದಕ್ಕಾಗಿ ನಿಮ್ಮ ಊರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು.
Thu, 21 Nov 202406:57 AM IST
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತವಾಗಲಿದೆ. ಹೊಸೂರು ವಿಮಾನ ನಿಲ್ಧಾಣಕ್ಕೆ ಠಕ್ಕರ್ ನೀಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದ್ದು ಒಂದೆರಡು ವಾರಗಳಲ್ಲಿ ನಿರ್ಧಾರ ಅಂತಿಮವಾಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Thu, 21 Nov 202406:17 AM IST
ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್: ಬಂದೂಕು ಹಿಡಿದು ಓಡಾಡುತ್ತಿದ್ದರೆಂದು ಕೊಂದು ಹಾಕಬಹುದೇ ಎಂದು ಪ್ರಶ್ನಿಸಿರುವ ಮಾಜಿ ನಕ್ಸಲ್ ನಾಯಕರಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್, ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
Thu, 21 Nov 202404:52 AM IST
ಕರ್ನಾಟಕದಲ್ಲಿ ಈ ವರ್ಷ ಮಳೆಯಷ್ಟೇ ಅಲ್ಲ, ಚಳಿಯೂ ಹೆಚ್ಚು ಅನುಭವಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ಕೆಲವು ಕಡೆಗೆ ಉಷ್ಣಾಂಶ 15 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕೆಳಗೆ ಇಳಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೀದರ್‌ಗಳಲ್ಲಿ ಮೈ ನಡುಕದ ಚಳಿ ಶುರುವಾಗಿದೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ.
Thu, 21 Nov 202402:55 AM IST
ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಟೀಂಗೆ ಕಡಿವಾಣ ಹಾಕಲು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ನಿಷ್ಠರು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ (ನವೆಂಬರ್ 20) 17 ಕ್ಕೂ ಹೆಚ್ಚು ಹಾಲಿ ಮಾಜಿ ಶಾಸಕರು ಸಭೆ ಸೇರಿ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)
Thu, 21 Nov 202402:50 AM IST
- Dakshina Kannada: ಮಕ್ಕಳಿಗೆ ಸುದೀರ್ಘ ರಜೆ ಇದ್ದಾಗ ಪ್ರವಾಸ ಕರೆದುಕೊಂಡು ಹೋಗುವುದು ಸಾಮಾನ್ಯ. ಶಾಲೆಗಳಲ್ಲೂ ನವೆಂಬರ್ ಬಂತೆಂದರೆ ಶೈಕ್ಷಣಿಕ ಪ್ರವಾಸ ಯೋಜನೆ ಶುರುವಾಗುತ್ತದೆ. ಈ ಬಾರಿ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಯೋಜನೆ ನಿಮ್ಮದಾಗಿದ್ದರೆ, 2 ದಿನಗಳ ಪ್ರವಾಸದಲ್ಲಿ ಮಕ್ಕಳು ನೋಡಲೇಬೇಕಾದ ಸ್ಥಳಗಳ ಪಟ್ಟಿ ಇಲ್ಲಿದೆ.
Thu, 21 Nov 202401:33 AM IST
Karnataka Weather: ಬೆಂಗಳೂರು ಸುತ್ತಮುತ್ತ, ಕರ್ನಾಟಕದ ಉತ್ತರ ಒಳನಾಡಲ್ಲಿ ಮುಂಜಾನೆ ಮಂಜು, ಮೈ ನಡುಕದ ಚಳಿಯ ಅನುಭವ ಶುರುವಾಗಿದ್ದು, ಅದು ಇಂದು ಕೂಡ ಮುಂದುವರಿದಿದೆ. ಕರ್ನಾಟಕ ಹವಾಮಾನ ಇಂದು ಯಾವ ರೀತಿ ಇರಲಿದೆ, ಇನ್ನು ಮಳೆ ಯಾವಾಗ ಎಂಬುದರ ವಿವರ ಇಲ್ಲಿದೆ.